ಮುಂಬೈ: ಸದ್ಯ ಹಿಂದಿಯಲ್ಲಿ ಮನೆ ಮಾತಾದ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯ ಸೀಸನ್ 2 (Bigg Boss OTT 2) ನಡೆಯುತ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಅಲ್ಲ, ಸ್ಕ್ರಿಪ್ಟೆಡ್ ಕಾರ್ಯಕ್ರಮ ಎನ್ನುವುದು ಬಿಗ್ ಬಾಸ್ ಆರಂಭವಾದಾಗಿನಿಂದಲೂ ಕೇಳಿಬಂದಿರುವ ದೂರು. ಇದೀಗ ಬಿಗ್‌ಬಾಸ್ ಒಟಿಟಿ 2ನಲ್ಲಿ ಸದಸ್ಯೆಯಾಗಿರುವ ಪೂಜಾ ಭಟ್ ಸ್ಕ್ರಿಪ್ಟ್ ಓದುತ್ತಿರುವ ದೃಶ್ಯದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಬಿಗ್‌ಬಾಸ್ ಒಟಿಟಿ 2ನಲ್ಲಿ ಟಾಸ್ಕ್ ಒಂದನ್ನು ಕೊಡಲಾಗಿತ್ತು. ಅದರಲ್ಲಿ ಪೂಜಾ ಭಟ್ ಒಬ್ಬ ನಿರ್ದೇಶಕಿಯಾಗಿ ನಟಿಸಬೇಕಿತ್ತು. ಹಾಗೆಯೇ ಆಕೆ ಮನೆಯಲ್ಲಿನ ಸದಸ್ಯರನ್ನು ವಿವಿಧ ರೋಲ್‌ಗಳಿಗೆ ಆಡಿಶನ್ ಮಾಡಿ ಆಯ್ಕೆ ಮಾಡಬೇಕಿತ್ತು. ಈ ಟಾಸ್ಕ್ ನಡೆಯುವ ವೇಳೆ ಪೂಜಾ ಭಟ್ ಮೊಬೈಲ್ ಫೋನ್ ಬಳಕೆ ಮಾಡಿದ್ದರು ಎನ್ನುವುದು ನೋಡುಗರ ವಾದ.
ಇದನ್ನೂ ಓದಿ: Viral Video : ಕಾವಾಲಯ್ಯ ಎಂದು ಕುಣಿಯುತ್ತಿರುವ ಈ ಬೆಡಗಿಯ ನೋಡಿ!
ಪೂಜಾ ಭಟ್ ಆಡಿಶನ್ ತೀರ್ಪುಗಾರ್ತಿಯಾಗಿ ಕುರ್ಚಿಯ ಮೇಲೆ ಕುಳಿತಿದ್ದಾಗ ಆಕೆ ಕೆಳಗೆ ಏನನ್ನೋ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ ಸೆಕೆಂಡುಗಳ ಕಾಲ ಅವರು ಏನನ್ನೋ ಓದಿಕೊಂಡಂತೆ ಕಂಡಿದೆ. ಅದಕ್ಕೆ ನೋಡುಗರು ಪೂಜಾ ಭಟ್ ಅವರು ಮೊಬೈಲ್ ನೋಡಿದ್ದಾರೆ. ಮೊಬೈಲ್‌ನಲ್ಲಿ ಅವರಿಗೆ ಸ್ಕ್ರಿಪ್ಟ್ ಕೊಡಲಾಗುತ್ತಿದೆ. ಅದನ್ನೇ ಅವರು ಓದಿಕೊಂಡಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.
Ye Pooja ji kya kar rahi hai🤔🤔
— #BiggBoss_Tak👁 (@BiggBoss_Tak) July 27, 2023
Zoom kar zoom kar…. 🧐🧐pic.twitter.com/NqRfkSLRBj
ಪೂಜಾ ಭಟ್ ಅವರ ಈ ದೃಶ್ಯವಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. “ಬಿಗ್‌ಬಾಸ್ ಸ್ಕ್ರಿಪ್ಟೆಡ್ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ” ಎಂದು ನೋಡುಗರು ಹೇಳಲಾರಂಭಿಸಿದ್ದಾರೆ. “ಅಲ್ಲಿ ಪ್ರತಿ ಜಗಳದಿಂದ ಹಿಡಿದು ಪ್ರತಿಯೊಂದು ಘಟನೆಯನ್ನೂ ಸ್ಕ್ರಿಪ್ಟ್ ಮಾಡಿ ಕೊಡಲಾಗಿರುತ್ತದೆ” ಎನ್ನುವುದು ಹಲವರ ವಾದ.
ಇದನ್ನೂ ಓದಿ: Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್ ಮಾಡುತ್ತದೆ ಈ ಬೆಕ್ಕು!
ಬಹಳ ಯಶಸ್ಸು ಕಂಡಿರುವ ಬಿಗ್‌ಬಾಸ್ ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಡೆದಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಹಲವು ಸೀಸನ್‌ಗಳು ಮುಗಿದಿದ್ದು, ಹಲವಾರು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ಇದುವರೆಗು ಬಿಗ್‌ಬಾಸ್ ಸ್ಕ್ರಿಪ್ಟೆಡ್ ಅಲ್ಲ ಎಂದೇ ವಾದ ಮಾಡಿಕೊಂಡು ಬಂದಿದ್ದಾರೆ.