Viral Video : ಕಾವಾಲಯ್ಯ ಎಂದು ಕುಣಿಯುತ್ತಿರುವ ಈ ಬೆಡಗಿಯ ನೋಡಿ! - Vistara News

ವೈರಲ್ ನ್ಯೂಸ್

Viral Video : ಕಾವಾಲಯ್ಯ ಎಂದು ಕುಣಿಯುತ್ತಿರುವ ಈ ಬೆಡಗಿಯ ನೋಡಿ!

ಅಂಜನ ಹೆಸರಿನ ಮಹಿಳೆ ಜೈಲರ್‌ ಸಿನಿಮಾದ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral Video) ಆಗಿದೆ.

VISTARANEWS.COM


on

kaavaala viral video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಜನಿಕಾಂತ್‌ ಮತ್ತು ತಮನ್ನಾ ಭಾಟಿಯಾ ನಟನೆಯ ಜೈಲರ್‌ ಸಿನಿಮಾದ ಕಾವಾಲಯ್ಯ ಹಾಡು ಜುಲೈ 6ರಂದು ಬಿಡುಗಡೆಯಾಗಿದೆ. ಅಂದಿನಿಂದ ಇಂದಿನವರೆಗೆ ಯಾರ ಬಾಯಲ್ಲಿ ಕೇಳಿದರೂ ಅದೇ ಹಾಡು. ಇನ್‌ಸ್ಟಾಗ್ರಾಂ ತೆರೆದರೂ ಅದೇ ಹಾಡಿನ ರೀಲ್ಸ್‌. ಅಷ್ಟೊಂದು ಟ್ರೆಂಡ್‌ ಆಗಿರುವ ಹಾಡಿಗೆ ಇಲ್ಲೊಬ್ಬ ಯುವತಿ ಕುಣಿದಿದ್ದಾಳೆ. ಆಕೆಯ ವಿಡಿಯೊ ವೈರಲ್‌ (Viral Video) ಆಗಿದ್ದು, ಜನರು ವಿಡಿಯೊವನ್ನು ಇಷ್ಟಪಡಲಾರಂಭಿಸಿದ್ದಾರೆ.

ಅಂಜನ ಚಂದ್ರನ್‌ ಹೆಸರಿನ ಮಹಿಳೆ ಈ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಮನೆಯ ಲಿವಿಂಗ್‌ ರೂಮ್‌ನ ಮಧ್ಯದಲ್ಲಿ ನೇರಳೆ ಬಣ್ಣದ ಲೆಹೆಂಗಾ ಧರಿಸಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಎಲ್ಲರೂ ತಮನ್ನಾ ಅವರು ಹಾಕಿದ ಹೆಜ್ಜೆಯನ್ನೇ ಹಾಕುತ್ತಿದ್ದರ ಅಂಜನ ಮಾತ್ರ ಸ್ವಲ್ಪ ವಿಭಿನ್ನವಾಗಿ ಹೆಜ್ಜೆ ಹಾಕಿದ್ದಾರೆ. ಅದು ಅನೇಕರಿಗೆ ಇಷ್ಟವಾಗುತ್ತಿದೆ. ಹಾಗಾಗಿಯೇ ಅವರ ವಿಡಿಯೊವನ್ನು ಹೆಚ್ಚು ಜನರು ನೋಡಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video : ಫ್ಲೈಓವರ್‌ ಮೇಲೆ ರಾಜಾರೋಷವಾಗಿ ಓಡಾಡಿದ ಸಿಂಹ!
ಅಂಜನ ಅವರು ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜುಲೈ 16ರಂದು ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಸಾವಿರಾರು ಮಂದಿ ವಿಡಿಯೊವನ್ನು ವೀಕ್ಷಿಸಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಹಲವರು ಈ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ. ಈ ವಿಡಿಯೊಗೆ ಹಲವಾರು ರೀತಿಯ ಕಾಮೆಂಟ್‌ಗಳೂ ಹರಿದುಬಂದಿವೆ.

“ನೀವು ಕೆಲವು ಸ್ಟೆಪ್ಸ್‌ಗಳನ್ನು ಬದಲಾಯಿಸಿರುವುದು ಇಷ್ಟವಾಯಿತು. ನೀವು ತುಂಬಾ ಅದ್ಭುತವಾಗಿ ನೃತ್ಯ ಮಾಡಿದ್ದೀರಿ”, “ಈ ವಿಡಿಯೊವನ್ನು ಅದೆಷ್ಟು ಬಾರಿ ನೋಡಿದೆ ಎಂದು ಮಾತ್ರ ನನ್ನನ್ನು ಕೇಳಬೇಡಿ”, “ಅಬ್ಬಾ, ಇದು ತಮನ್ನಾ ಅವರ ಒರಿಜಿನಲ್‌ ನೃತ್ಯಕ್ಕಿಂತಲೂ ಚೆನ್ನಾಗಿದೆ”, “ಸೀಟಿ ಸದ್ದಿನ ಸಂಗೀತಕ್ಕೆ ನೀವು ಹಾಕಿದ ಹೆಜ್ಜೆಯಂತೂ ಸೂಪರ್‌ ಆಗಿದೆ. ಹಾಗೆಯೇ ನಿಮ್ಮ ನಗು ಇನ್ನೂ ಚೆನ್ನಾಗಿದೆ”, “ಈ ವಿಡಿಯೊ ನೋಡಿದ ಮೇಲೆ ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್‌”, “ಸೂಪರ್‌” ಎನ್ನುವಂತಹ ಹಲವಾರು ಕಾಮೆಂಟ್‌ಗಳನ್ನೂ ಕಾಣಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳು ಸಾಮಾನ್ಯ, ಅಂತೆಯೇ ಜಗಳಗಳು. ಇದು ಕೆಲವೊಮ್ಮೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುವುದಿದೆ. ಇದನ್ನು ತಪ್ಪಿಸಲು ಬೆಂಗಳೂರು ಪೊಲೀಸರು ಕೆಲವೊಂದು ಸಲಹೆಗಳನ್ನು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Viral Video) ಭಾರೀ ವೈರಲ್ ಆಗಿದೆ.

VISTARANEWS.COM


on

By

Viral Video
Koo

ಸಣ್ಣಪುಟ್ಟ ಘಟನೆಗಳು ರಸ್ತೆಯಲ್ಲಿ (road) ಕೆಲವೊಮ್ಮೆ ವಾಹನ (vehicle) ಸವಾರರ ನಡುವೆ ಜಗಳಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಇಂತಹ ಮಾತಿನ ಚಕಮಕಿಯ ಘಟನೆಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ ಇಂತಹ ಘಟನೆಗಳು ಮಾರಾಮಾರಿಗೂ (physical fights) ಕಾರಣವಾಗಿ, ವಾಹನಗಳಿಗೆ ಹಾನಿ, ವ್ಯಕ್ತಿಗಳಿಗೆ ಗಾಯವನ್ನು ಉಂಟು ಮಾಡುತ್ತದೆ. ಕೊಲೆ ನಡೆದಿದ್ದೂ ಇದೆ.

ಹೆಚ್ಚುತ್ತಿರುವ ಇಂತಹ ಪ್ರಕರಣಗಳ ನಡುವೆ ಬೆಂಗಳೂರು ಪೊಲೀಸರು (bengaluru police) ಈ ರೀತಿಯ ಘಟನೆಗಳನ್ನು ಹೇಗೆ ಎದುರಿಸಬೇಕು ಎಂದು ಸಾಮಾಜಿಕ ಜಾಲತಾಣದ (Viral Video) ಮೂಲಕ ಸಾರ್ವಜನಿಕರಿಗೆ ಉಪಯುಕ್ತ ಸಲಹೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸ್ ಇಲಾಖೆ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ರೀತಿಯ ಸಂದರ್ಭಗಳನ್ನು ಎದುರಿಸುವಾಗ ನಾವು ಶಾಂತವಾಗಿರುವುದು ಬಹಳ ಮುಖ್ಯ ಎಂದಿದ್ದಾರೆ. ಈ ವಿಡಿಯೋ ಕ್ಲಿಪ್ ಪ್ರಯಾಣಿಕರ ನಡುವಿನ ಜಗಳದಿಂದ ಪ್ರಾರಂಭವಾಗುತ್ತದೆ. ಇದು ಹಲವಾರು ಅಂಶಗಳನ್ನು ಒಳಗೊಂಡಿದೆ. ಇದೇ ರೀತಿಯ ಸಂದರ್ಭಗಳು ಬಂದರೆ ಪ್ರಯಾಣಿಕರು ಏನು ಮಾಡಬೇಕೆಂಬ ಕುರಿತು ಮಾರ್ಗದರ್ಶನ ನೀಡುತ್ತದೆ.

ರಸ್ತೆಯಲ್ಲಿ ವಾಹನ ಓಡಿಸುವಾಗ ಸುರಕ್ಷತೆ ಮೊದಲನೆಯದು. ಕೆಲವೊಂದು ಘಟನೆಗಳು ನಮಗೆ ಸಿಟ್ಟು ತರಿಸಬಹುದು. ಆದರೆ ಪರಿಸ್ಥಿತಿಗಳನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸುವುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳಿಗಾಗಿ ನಮ್ಮ ಇತ್ತೀಚಿನ ವಿಡಿಯೋವನ್ನು ಪರಿಶೀಲಿಸಿ. ಮಾಹಿತಿಯಲ್ಲಿರಿ, ಸುರಕ್ಷಿತವಾಗಿರಿ ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಬೆಂಗಳೂರು ಪೊಲೀಸರು ಬರೆದಿದ್ದಾರೆ.

ಶಾಂತವಾಗಿರಿ ಜಗಳ ತಪ್ಪಿಸಿ

ಪ್ರಯಾಣಿಕರೇ ಶಾಂತವಾಗಿರಿ, ಇತರ ವ್ಯಕ್ತಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಿ, ಅದನ್ನು ನೀವೇ ಪರಿಹರಿಸಲು ಪ್ರಯತ್ನಿಸಬೇಡಿ. ವಾಹನದ ವಿವರಗಳನ್ನು ಗಮನಿಸಿ, ತುರ್ತು ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮತ್ತು ಘಟನೆಯ ಬಗ್ಗೆ ತಕ್ಷಣ ಮಾಹಿತಿ ನೀಡಿ ಎಂದು ಬೆಂಗಳೂರು ಪೊಲೀಸ್ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಮತ್ತು ಘಟನೆ ಅಥವಾ ವಾಹನದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ವೀಕ್ಷಕರಿಗೆ ಹೇಳಿದ್ದಾರೆ. ಪೊಲೀಸರು ಬಂದಾಗ ಏನಾಯಿತು ಎಂಬುದರ ಕುರಿತು ನಿಮ್ಮ ಸಂಪೂರ್ಣ ಮಾಹಿತಿಯನ್ನು ಒದಗಿಸಿ ಮತ್ತು ಇತರ ವ್ಯಕ್ತಿಗಳಿಗೆ ಅವರ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಕೊನೆಯದಾಗಿ ಪೊಲೀಸರಿಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿ ಎಂದು ಹೇಳಿದ್ದಾರೆ.

4 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ಬೆಂಗಳೂರು ಪೊಲೀಸರು ಕೆಲವೇ ಗಂಟೆಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಪೋಸ್ಟ್ ಇನ್ ಸ್ಟಾಗ್ರಾಮ್ ನಲ್ಲಿ 4,05,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಕ್ಲಿಪ್ ಅನ್ನು ಎಕ್ಸ್ ನಲ್ಲೂ ಹಂಚಿಕೊಳ್ಳಲಾಗಿದೆ. ಹಲವಾರು ಬಳಕೆದಾರರು ಈ ಜಾಗೃತಿ ವಿಡಿಯೋ ಗೆ ಪೊಲೀಸರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ ಇಂತಹ ಘಟನೆಗಳು ಸಂಭವಿಸಿದಾಗ ಇಲಾಖೆಯು ಏನನ್ನೂ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದರು.

ಇದನ್ನೂ ಓದಿ: IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

ರಸ್ತೆ ಸುರಕ್ಷತೆಯ ಕುರಿತು ಬೆಂಗಳೂರು ಪೊಲೀಸರು ನೀಡಿರುವ ಸಾರ್ವಜನಿಕರಿಗೆ ಶಿಕ್ಷಣವನ್ನು ನಾನು ಇಷ್ಟಪಟ್ಟಿದ್ದೇನೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದೊಬ್ಬರು ತಮ್ಮ ಅನಿಸಿಕೆ ಬರೆದಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Viral News: ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ವೈರಲ್‌ ಆಗಿದೆ. ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

VISTARANEWS.COM


on

Viral News
Koo

ನವದೆಹಲಿ: ಪ್ರಾಣಿಗಳ ಪ್ರಪಂಚ ಸದಾ ಕುತೂಹಲಕಾರಿಯಾಗಿರುತ್ತದೆ. ಕೌತುಕ ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ. ಪ್ರಾಣಿಗಳ ಚಲನವಲನ, ಬುದ್ಧಿವಂತಿಕೆ, ಬೇಟೆಯಾಡುವ ರೀತಿ ಇತ್ಯಾದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಲು ಬರುವ ಸಿಂಹಗಳ ಗುಂಪನ್ನು ಬೆದರಿಸಿ ಓಡಿಸುವ ವಿಡಿಯೊ ಇದಾಗಿದ್ದು, ನೆಟ್ಟಿಗರು ನೋಡಿ ರೋಮಾಂಚನಗೊಂಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಗಾದೆಯನ್ನು ಉದ್ಘರಿಸಿದ್ದಾರೆ (Viral News).

ಕೀನ್ಯಾದ ಮಸೈ ಮಾರ ರಾಷ್ಟ್ರೀಯ ಉದ್ಯಾನ (Masai mara national park)ದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕಾಡುಕೋಣಗಳ ಧೈರ್ಯ, ಒಗ್ಗಟ್ಟನ್ನು ಹೊಗಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಹುಲ್ಲುಗಾವಲಿನಲ್ಲಿ ಕಾಡುಕೋಣವೊಂದು ಮೇಯುತ್ತಿರುತ್ತದೆ. ಆಗ ಅಲ್ಲಿಗೆ ಏಳೆಂಟು ಸಿಂಹಗಳ ಗುಂಪು ಲಗ್ಗೆ ಇಡುತ್ತದೆ. ಇಂದು ಭರ್ಜರಿ ಬೇಟೆ ಎಂದು ಲೆಕ್ಕ ಹಾಕುವ ಸಿಂಹಗಳ ಗುಂಪು ಕಾಡುಕೋಣವನ್ನು ಸುತ್ತುವರಿಯುತ್ತದೆ. ಕಾಡುಕೋಣ ಕಡಿಮೆ ಆಸಾಮಿಯೇನಲ್ಲ. ತನ್ನ ಬಳಿಗೆ ಬರುವ ಸಿಂಹಗಳನ್ನು ಬೆದರಿಸುತ್ತದೆ. ಅಲ್ಲಿಂದ ಓಡಿಸಲು ಯತ್ನಿಸುತ್ತದೆ.

ದೈತ್ಯದೇಹಿ ಕಾಡುಕೋಣವನ್ನು ಸುಲಭದಲ್ಲಿ ಸಿಂಹಗಳಿಗೆ ಮಣಿಸಲು ಸಾಧ್ಯವಾಗುವುದಿಲ್ಲ. ಅದು ಗುಟುರು ಹಾಕಿ ಒಂದು ಹೆಜ್ಜೆ ಮುಂದಿಟ್ಟಾಗ ಸಿಂಹಗಳು ಭಯದಿಂದ ಎರಡು ಹೆಜ್ಜೆ ಹಿಂದಿಡುತ್ತವೆ. ಕೊನೆ ಹೊಂಚು ಹಾಕಿ ಸಿಂಹವೊಂದು ಹಿಂದಿನಿಂದ ದಾಳಿ ನಡೆಸುತ್ತದೆ. ತನ್ನ ಮೇಲೆ ಎರಗಿದ ಶತ್ರುವನ್ನು ಕಾಡುಕೋಣ ಕೆಡವಲು ಯತ್ನಿಸುತ್ತದೆ. ಬಳಿಕ ಮೂರು ನಾಲ್ಕು ಸಿಂಹಗಳು ಒಮ್ಮೆಲೆ ದಾಳಿ ನಡೆಸಿದಾಗ ಕಾಡುಕೋಣ ತನ್ನ ಹಿಂಡಿನತ್ತ ಓಡುತ್ತದೆ. ಅಲ್ಲಿ ನೂರಾರು ಸಂಖ್ಯೆಯ ಕಾಡುಕೋಣಗಳು ಮೇಯುತ್ತಿರುತ್ತವೆ. ತಮ್ಮವನೊಬ್ಬ ಸಂಕಷ್ಟಕ್ಕೆ ಸಿಲುಕಿರುವುದನ್ನು ನೋಡಿ ಅವು ಓಡೋಡಿ ಬರುತ್ತವೆ.

ಕಾಡುಕೋಣಗಳ ಹಿಂಡನ್ನು ನೋಡಿ ಸಿಂಹದಂತಹ ಸಿಂಹಗಳಿಗೆ ನಡುಕ ಶುರುವಾಗುತ್ತದೆ. ಭರ್ಜರಿ ಬೇಟೆಯ ನಿರೀಕ್ಷೆಯಲ್ಲಿದ್ದ ಅವುಗಳು ಈಗ ಕಾಡುಕೋಣಗಳ ಸೈನ್ಯವನ್ನು ಕಂಡು ಭಯದಿಂದ ಒಂದೊಂದೆ ಹೆಜ್ಜೆ ಹಿಂದಿಡಲು ಆರಂಭಿಸುತ್ತವೆ. ಬಳಿಕ ಕಾಡುಕೋಣಗಳ ಗುಂಪು ಸಿಂಹಗಳನ್ನು ಅಟ್ಟಿಸಿಕೊಂಡು ಬರುತ್ತವೆ. ಬದುಕಿದ್ದರೆ ಬೇಡಿಯಾದರೂ ತಿನ್ನಬಹುದು ಎನ್ನುವಂತೆ ಜೀವ ಉಳಿಸಿಕೊಳ್ಳಲು ಸಿಂಹಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ನೆಟ್ಟಿಗರಿಂದ ಶಷಬ್ಬಾಸ್‌ಗಿರಿ

ವಿಡಿಯೊ ನೋಡಿದವರೆಲ್ಲ ಕಾಡುಕೋಣಗಳ ಒಗ್ಗಟ್ಟನ್ನು ಕೊಂಡಾಡುತ್ತಿದ್ದಾರೆ. ಈ ಮೂಕ ಪ್ರಾಣಿಗಳಿಂದ ನಾವು ನೋಡಿ ಕಲಿಯಬೇಕಾದದ್ದು ಬೇಕಾದಷ್ಟಿದೆ ಎಂದು ಕಮೆಂಟ್‌ ಮಾಡಿದ್ದಾರೆ. ʼʼಇಂತಹ ಒಗ್ಗಟ್ಟು ಮನುಷ್ಯರಲ್ಲಿ ಯಾಕಿಲ್ಲ?ʼʼ ಎಂದು ಒಬ್ಬರು ಕೇಳಿದ್ದಾರೆ.

ʼʼಅದೃಷ್ಟವಶಾತ್‌ ದಾಳಿಗೊಳಗಾದ ಈ ಎಳೆಯ ಕೋಣ ಹಿಂಡಿನಿಂದ ತುಂಬ ದೂರ ಹೋಗಿರಲಿಲ್ಲ. ಇಲ್ಲದಿದ್ದರೆ ಅದು ಸಿಂಹಗಳಿಗೆ ಆಹಾರವಾಗುತ್ತಿತ್ತುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. “ಸಾವು ಬದುಕಿನ ನಿರ್ಧರಿಸುವ ಈ ನಿರ್ಣಾಯಕ ಘಟ್ಟದಲ್ಲಿ ಕಾಡುಕೋಣ ಉತ್ತಮ ನಡೆ ತೋರಿದೆ. ತನ್ನವರ ಬಳಿಗೆ ಸಾರಿ ಜೀವ ಉಳಿಸಿಕೊಂಡಿದೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಮೂಕ ಪ್ರಾಣಿಗಳ ಸಹಬಾಳ್ವೆ ಹಲವರಲ್ಲಿ ಸಕಾರಾತ್ಮಕ ಭಾವನೆ ಹುಟ್ಟುಹಾಕಿದ್ದಂತೂ ನಿಜ.

ಇದನ್ನೂ ಓದಿ: Viral Video: ಹುಲಿ ಬೆಕ್ಕಿನ ಹಿರಿಯಣ್ಣ ಎನ್ನುವುದು ಇದಕ್ಕೆ; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

Continue Reading

ವೈರಲ್ ನ್ಯೂಸ್

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

CP Yogeshwara: ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

VISTARANEWS.COM


on

nisha cp yogeshwara
Koo

ರಾಮನಗರ: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್‌ (CP Yogeshwara) ಪುತ್ರಿ ನಿಶಾ (Nisha Yogeshwara) ಅವರು ತಮ್ಮ ತಂದೆಯ ವಿರುದ್ಧ ರೊಚ್ಚಿಗೆದ್ದಿದ್ದು, ಹಲವಾರು ವಿಡಿಯೋಗಳ ಮೂಲಕ ಇನ್‌ಸ್ಟಗ್ರಾಂನಲ್ಲಿ (Social media) ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಂದೆ ತಮ್ಮ ಮೇಲೆ ಹಲ್ಲೆ (Assault) ಮಾಡುತ್ತಾರೆ, ತಮ್ಮ ಕುಟುಂಬವನ್ನು, ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಿಶಾ (ಈ ಪೋಸ್ಟ್‌ಗಳಲ್ಲಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್‌ಗಳು ವೈರಲ್‌ (viral video) ಆಗಿವೆ.

ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಯೋಗೇಶ್ವರ್ ಮಕ್ಕಳಾದ ತಮ್ಮನ್ನು ದೂರ ಮಾಡಿದ್ದಾರೆ. ಮನೆಗೆ ಹೋದರೆ ತಮ್ಮ ಮೇಲೆ ಹಲ್ಲೆ ಮಾಡ್ತಾರೆ. ಅವರನ್ನು ಮಾತನಾಡಿಸಲು ಹೋದರೆ ರಪರಪ ಎಂದು ಹೊಡೆಯುತ್ತಾರೆ. ಏನಾರೂ ಕೇಳಿದರೆ, ನಮ್ಮ ಬಳಿ ಬರಬೇಡ, ಬೇಕಾದರೆ ಭಿಕ್ಷೆ ಮಾಡಿಕೊಂಡು ಜೀವನ ಮಾಡು ಎನ್ನುತ್ತಾರೆ. ನಮಗೆ ತಂದೆಯ ಪ್ರೀತಿ ಸಿಗಲಿಲ್ಲ, ಅವರು ಆದರ್ಶ ಅಪ್ಪನಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಮಾಯಣದ ಕಥೆ ಹೇಳಿ, ಕುಟುಂಬದಲ್ಲಿರುವ ಜಗಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ʼನಿಶಾ ಯೋಗೇಶ್ವರ್‌ʼ ಎಂದು ಬಳಸುತ್ತಿರುವ ತನ್ನ ಹೆಸರಿನಲ್ಲಿ ʼಯೋಗೇಶ್ವರ್ʼ ಹೆಸರು ಬಳಸದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧಮಕಿ ಹಾಕುತ್ತಿದ್ದಾರೆ. ತನ್ನ ತಾಯಿ ಯೋಗೇಶ್ವರ್‌ ಅವರ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ಆದರೆ ತಂದೆ, ತಾಯಿಗೆ ಕಪಾಳಮೋಕ್ಷ ಮಾಡಿದರು. ತನ್ನ ತಮ್ಮನಿಗೂ ಥಳಿಸಿದ್ದಾರೆ. ಮೊದಲ ಪತ್ನಿ ಹಾಗೂ ಮಕ್ಕಳನ್ನು ಯೋಗೇಶ್ವರ್‌ ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಅಳಲು ತೋಡಿಕೊಂಡಿದ್ದಾಎ.

20 ವರ್ಷ ಹಿಂದೆ ನಮಗೆ ಹೇಳದೆ ಕೇಳದೆ ತಂದೆ ಬೇರೆ ಸಂಸಾರ ಕಟ್ಟಿಕೊಂಡರು. ಆದರ್ಶ ಮಗಳಾಗು ಎಂದು ನನಗೆ ಹೇಳುತ್ತಾರೆ. ಅವರು ಆದರ್ಶ ತಂದೆಯಾಗಬೇಕಲ್ಲವೇ? ಮೊದಲನೇ ಮದುವೆಯ ಮಕ್ಕಳನ್ನು ಬೆಳೆಸಬೇಕಲ್ಲವೇ? ಇಂಥ ತಂದೆಯ ಜೊತೆಗೆ ಹೇಗಿರಲಿ? ಎಂದು ಯೋಗೇಶ್ವರ್ ಎರಡನೇ ಪತ್ನಿ, ಮಕ್ಕಳ ಬಗ್ಗೆ ಪ್ರಸ್ತಾಪ ಮಾಡಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Continue Reading

ವೈರಲ್ ನ್ಯೂಸ್

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Viral Video:‌ ಚಲಿಸುತ್ತಿರುವ ರೈಲಿಗೆ ಪುರುಷ ಮತ್ತು ಮಹಿಳೆಯ ಲಗೇಜ್‌ ಸಮೇತ ಹತ್ತಲು ಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಆ ವ್ಯಕ್ತಿ ಮಹಿಳೆಗೆ ಹತ್ತಲು ಸಹಾಯ ಮಾಡುತ್ತಾನೆ. ಆನಂತರದಲ್ಲಿ ತಾನೂ ಹೇಗಾದರೂ ಮಾಡಿ ಮೆಟ್ಟಿಲಿಗೆ ಹತ್ತುತ್ತಾನೆ. ಒಂದು ಕೈಯಲ್ಲಿ ರೈಲಿನ ಕಂಬಿ ಮತ್ತೊಂದು ಕೈಯಲ್ಲಿ ಭಾರೀ ಗಾತ್ರದ ಬ್ಯಾಗ್‌ ಹಿಡಿದುಕೊಂಡು ಆತನ ನೇತಾಡುತ್ತಿರುವುದನ್ನು ವಿಡಿಯೋ ಕಾಣಬಹುದಾಗಿದೆ.

VISTARANEWS.COM


on

Viral video
Koo

ನವದೆಹಲಿ: ರೈಲೆಂದರೆ(Indian Railway) ಸಾಕು ಸದಾ ತುಂಬಿ ತುಳುಕುವ ಜನ, ಸೀಟು ಸಿಗೋದು ಬಿಡಿ ಸರಿಯಾಗಿ ನಿಲ್ಲುವುದಕ್ಕೂ ಸ್ಥಳ ಇಲ್ಲದಿರುವಂತಹ ಸ್ಥಿತಿ ಇದೇ ನೆನಪಾಗುತ್ತದೆ. ಇನ್ನು ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಳ್ಳವವರೂ ಇದ್ದಾರೆ. ಇಲ್ಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಜನ ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ರೈಲಿನೊಳಗೆ ನುಗ್ಗಲು ಯತ್ನಿಸುವುದನ್ನು ಆಗಾಗ ಕಾಣುತ್ತೇವೆ. ಇದೀಗ ಅಂತಹದ್ದೇ ಘಟನೆವೋಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ. ತುಂಬಿ ತುಳುಕುತ್ತಿದ್ದ ರೈಲಿಗೆ ಜನ ಹತ್ತಲು ನೂಕು ನುಗ್ಗಲು ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ವಲ್ಪ ಆಯಾ ತಪ್ಪಿದರೂ ಮೆಟ್ಟಿಲಿನಲ್ಲಿ ನಿಂತ್ತಿದ್ದ ಅಷ್ಟೂ ಜನ ಹಳಿಗೆ ಬೀಳುವುದಂತೂ ಗ್ಯಾರಂಟಿ.

ವಿಡಿಯೋದಲ್ಲೇನಿದೆ?

ಚಲಿಸುತ್ತಿರುವ ರೈಲಿಗೆ ಪುರುಷ ಮತ್ತು ಮಹಿಳೆಯ ಲಗೇಜ್‌ ಸಮೇತ ಹತ್ತಲು ಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಆ ವ್ಯಕ್ತಿ ಮಹಿಳೆಗೆ ಹತ್ತಲು ಸಹಾಯ ಮಾಡುತ್ತಾನೆ. ಆನಂತರದಲ್ಲಿ ತಾನೂ ಹೇಗಾದರೂ ಮಾಡಿ ಮೆಟ್ಟಿಲಿಗೆ ಹತ್ತುತ್ತಾನೆ. ಒಂದು ಕೈಯಲ್ಲಿ ರೈಲಿನ ಕಂಬಿ ಮತ್ತೊಂದು ಕೈಯಲ್ಲಿ ಭಾರೀ ಗಾತ್ರದ ಬ್ಯಾಗ್‌ ಹಿಡಿದುಕೊಂಡು ಆತನ ನೇತಾಡುತ್ತಿರುವುದನ್ನು ವಿಡಿಯೋ ಕಾಣಬಹುದಾಗಿದೆ. ಹೇಗಾದರೂ ಮಾಡಿ ರೈಲಿನೊಳಗೆ ಹತ್ತುವುದಷ್ಟೇ ಅವರ ಉದ್ದೇಶ. ಅದಕ್ಕಾಗಿ ಪ್ರಾಣದ ಹಂಗನ್ನೂ ಲೆಕ್ಕಿಸದೇ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ವಿಡಿಯೋ ನೋಡಿದವರು, ಇದು ಅತ್ಯಂತ ಅಪಾಯಕಾರಿ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸವವರೆಗೆ ಇಂತಹ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಜನ ಟಿಕೆಟ್‌ ತೆಗೆದುಕೊಂಡು ರೈಲು ಹತ್ತಬೇಕು. ಟಿಕೆಟ್‌ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರ ಮೇಲೆ ನನಗೆ ಯಾವುದೇ ರೀತಿಯ ಕನಿಕರ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇಂತಹ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳ ಸೇವೆ ಕಲ್ಪಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇದನ್ನು ಓದಿ:HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

ಉತ್ತರಾಖಂಡದ ಲಸ್ಕರ್‌ ರೈಲ್ವೇ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿದ್ದ ವ್ಯಕ್ತಿ ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ, ಆಪದ್ಬಾಂಧವಳಂತೆ ಬಂದು ಆತನನ್ನು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಏ.24ರಂದು ನಡೆದಿದ್ದು, ಆಹಾರ ಮತ್ತು ಜ್ಯೂಸ್‌ ತೆಗೆದು ಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಿದ್ದಾನೆ ಎನ್ನಲಾಗಿದೆ. ಕೈನಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಸುಲಭವಾಗಿ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದ.

Continue Reading
Advertisement
List of Movies Releasing From may 24
ಟಾಲಿವುಡ್13 mins ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ27 mins ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್38 mins ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Diabetes Management Tips
Latest41 mins ago

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

gold rate today beauty
ಚಿನ್ನದ ದರ41 mins ago

Gold Rate Today: ಬಂಗಾರದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ದರಗಳನ್ನು ಇಲ್ಲಿಯೇ ನೋಡಿ

Viral News
ವೈರಲ್ ನ್ಯೂಸ್44 mins ago

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್1 hour ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್1 hour ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ1 hour ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್1 hour ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌