Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್‌ ಮಾಡುತ್ತದೆ ಈ ಬೆಕ್ಕು! - Vistara News

ವೈರಲ್ ನ್ಯೂಸ್

Viral Video : ಕಣ್ಣು ಕಾಣದ ನಾಯಿಗೆ ಪ್ರೀತಿಯಿಂದ ಮಸಾಜ್‌ ಮಾಡುತ್ತದೆ ಈ ಬೆಕ್ಕು!

ಬೆಕ್ಕೊಂದು ಕಣ್ಣು ಕಾಣದ ನಾಯಿಗೆ ಮಸಾಜ್‌ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ (Viral Video) ಆಗಿದೆ.

VISTARANEWS.COM


on

dog and cat video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಯಿಗೂ ಬೆಕ್ಕಿಗೂ ಸಾಮಾನ್ಯವಾಗಿ ಆಗಿಬರುವುದಿಲ್ಲ. ಅವೆರೆಡು ಒಟ್ಟಿಗೆ ಇರುವುದಾಗಲೀ ಅಥವಾ ಆಟವಾಡುವುದಾಗಲೀ ಕಷ್ಟಸಾಧ್ಯ. ಆದರೆ ಇಲ್ಲೊಂದು ನಾಯಿ ಮತ್ತು ಬೆಕ್ಕಿನ ಜೋಡಿಯಿದೆ. ಅವೆರಡರ ಮಧ್ಯೆ ಇರುವ ಪ್ರೀತಿಯನ್ನು ನೋಡಿದರೆ ನಿಮಗೂ ಒಮ್ಮೆ ಕಣ್ಣು ತುಂಬಿ (Viral Video) ಬರುತ್ತದೆ.

ವಯಸ್ಸಾಗಿರುವ ನಾಯಿಯೊಂದು ಸುಮ್ಮನೆ ಕುಳಿತುಕೊಂಡಿದೆ. ಅಲ್ಲೇ ಇರುವ ಬೆಕ್ಕು ಆ ನಾಯಿಯ ಮೈಗೆ ತನ್ನ ಎರಡು ಕಾಲುಗಳಿಂದ ಮಸಾಜ್‌ ಮಾಡುತ್ತಿದೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಎಲ್ಲರಿಗೂ ಭಾರೀ ಇಷ್ಟವಾಗುತ್ತಿದ್ದು, ವೈರಲ್‌ ವಿಡಿಯೊಗಳ ಪಟ್ಟಿ ಸೇರಿಕೊಂಡಿದೆ.

ಇದನ್ನೂ ಓದಿ: Viral Video: ಮಳೆಯಲಿ ಮಿಂದ ಹೂವಿನ ಹಾಗೆ… ಮಳೆ ನೀರಲ್ಲಿ ನೆನೆದು ಮಸ್ತ್‌ ಡಾನ್ಸ್‌ ಮಾಡಿದ ಯುವತಿ
ಇದು ಪ್ರಾಣಿಗಳನ್ನು ರಕ್ಷಣೆ ಮಾಡುವ ತಂಡವೊಂದರಲ್ಲಿರುವ ನಾಯಿ ಮತ್ತು ಬೆಕ್ಕಿನ ವಿಡಿಯೊ. Sara Morocco ಹೆಸರಿನ ತಂಡದಲ್ಲಿ ಟಾಮ್‌ ಹೆಸರಿನ ಈ ನಾಯಿ 9 ವರ್ಷಗಳಿಂದ ಇದೆಯಂತೆ. ಈ ನಾಯಿಗೆ ಯಾವುದೋ ಕಾಯಿಲೆಯಿದ್ದು, ಅದರ ಕಣ್ಣುಗಳು ಕಾಣುವುದಿಲ್ಲ. ಅದಕ್ಕಾಗಿ ತಂಡದಲ್ಲಿರುವ ಎಲ್ಲರೂ ಟಾಮ್‌ಗೆ ಹೆಚ್ಚೇ ಪ್ರೀತಿ ತೋರಿಸುತ್ತಾರಂತೆ. ಅದೇ ರೀತಿಯಲ್ಲಿ ಈ ಬೆಕ್ಕು ಕೂಡ ಟಾಮ್‌ಗೆ ಪ್ರೀತಿಯನ್ನು ತೋರಿಸುತ್ತಿದೆ ಎಂದು ವಿಡಿಯೊದ ಕ್ಯಾಪ್ಶನ್‌ನಲ್ಲಿ ಹೇಳಲಾಗಿದೆ.

Every day we witness beautiful connections between our residents. Tam, a beloved member of Sara Morocco for 9 long years. He is a blind dog with Ehlers-Danlos syndrome. They graciously gift him with moments of gentle care and unwavering affection.
by u/sproggs44 in AnimalsBeingBros

ಈ ವಿಡಿಯೊವನ್ನು ಈ ತಿಂಗಳ ಆರಂಭದಲ್ಲಿ ರೆಡ್ಡಿಟ್‌ ಆಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೊ ಅಂದಿನಿಂದ ಇಂದಿನವರೆಗೆ ಸಾವಿರಾರು ಜನರಿಂದ ವೀಕ್ಷಣೆಗೊಂಡಿದೆ. 14 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಅಪ್‌ವೋಟ್‌ ಮಾಡಿದ್ದಾರೆ. ನೂರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. “ಅಬ್ಬಬ್ಬಾ, ಈ ವಿಡಿಯೊ ನೋಡಿ ನನ್ನ ಕಣ್ಣುಗಳೇ ಒದ್ದೆಯಾದವು”, “ನಾಯಿಗಳನ್ನು ಕಂಡರೆ ಹೆದರಿಕೊಳ್ಳುವ ಬೆಕ್ಕು ಇಲ್ಲಿ ಎಷ್ಟು ಮುದ್ದಾಗಿ ಮಸಾಜ್‌ ಮಾಡುತ್ತಿದೆ” ಎನ್ನುವ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

CP Yogeshwara: ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

VISTARANEWS.COM


on

nisha cp yogeshwara
Koo

ರಾಮನಗರ: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್‌ (CP Yogeshwara) ಪುತ್ರಿ ನಿಶಾ (Nisha Yogeshwara) ಅವರು ತಮ್ಮ ತಂದೆಯ ವಿರುದ್ಧ ರೊಚ್ಚಿಗೆದ್ದಿದ್ದು, ಹಲವಾರು ವಿಡಿಯೋಗಳ ಮೂಲಕ ಇನ್‌ಸ್ಟಗ್ರಾಂನಲ್ಲಿ (Social media) ಸಾರ್ವಜನಿಕವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಂದೆ ತಮ್ಮ ಮೇಲೆ ಹಲ್ಲೆ (Assault) ಮಾಡುತ್ತಾರೆ, ತಮ್ಮ ಕುಟುಂಬವನ್ನು, ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ನಿಶಾ (ಈ ಪೋಸ್ಟ್‌ಗಳಲ್ಲಿ ಆರೋಪಿಸಿದ್ದಾರೆ. ಅವರ ಈ ಪೋಸ್ಟ್‌ಗಳು ವೈರಲ್‌ (viral video) ಆಗಿವೆ.

ನಿಶಾ ಯೋಗೇಶ್ವರ್‌ ತಮ್ಮ ತಂದೆಯಿಂದ ದೂರವಾಗಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ತಂದೆಯೇ ತಮ್ಮನ್ನು ದೂರವಿಟ್ಟಿದ್ದು, ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ಕುಟುಂಬದಿಂದ ತಮ್ಮನ್ನು ತಂದೆಯೇ ದೂರ ಮಾಡಿದ್ದಲ್ಲದೆ, ಕಿರಿಕಿರಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಯೋಗೇಶ್ವರ್ ಮಕ್ಕಳಾದ ತಮ್ಮನ್ನು ದೂರ ಮಾಡಿದ್ದಾರೆ. ಮನೆಗೆ ಹೋದರೆ ತಮ್ಮ ಮೇಲೆ ಹಲ್ಲೆ ಮಾಡ್ತಾರೆ. ಅವರನ್ನು ಮಾತನಾಡಿಸಲು ಹೋದರೆ ರಪರಪ ಎಂದು ಹೊಡೆಯುತ್ತಾರೆ. ಏನಾರೂ ಕೇಳಿದರೆ, ನಮ್ಮ ಬಳಿ ಬರಬೇಡ, ಬೇಕಾದರೆ ಭಿಕ್ಷೆ ಮಾಡಿಕೊಂಡು ಜೀವನ ಮಾಡು ಎನ್ನುತ್ತಾರೆ. ನಮಗೆ ತಂದೆಯ ಪ್ರೀತಿ ಸಿಗಲಿಲ್ಲ, ಅವರು ಆದರ್ಶ ಅಪ್ಪನಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ರಾಮಾಯಣದ ಕಥೆ ಹೇಳಿ, ಕುಟುಂಬದಲ್ಲಿರುವ ಜಗಳವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.

ʼನಿಶಾ ಯೋಗೇಶ್ವರ್‌ʼ ಎಂದು ಬಳಸುತ್ತಿರುವ ತನ್ನ ಹೆಸರಿನಲ್ಲಿ ʼಯೋಗೇಶ್ವರ್ʼ ಹೆಸರು ಬಳಸದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಧಮಕಿ ಹಾಕುತ್ತಿದ್ದಾರೆ. ತನ್ನ ತಾಯಿ ಯೋಗೇಶ್ವರ್‌ ಅವರ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ಆದರೆ ತಂದೆ, ತಾಯಿಗೆ ಕಪಾಳಮೋಕ್ಷ ಮಾಡಿದರು. ತನ್ನ ತಮ್ಮನಿಗೂ ಥಳಿಸಿದ್ದಾರೆ. ಮೊದಲ ಪತ್ನಿ ಹಾಗೂ ಮಕ್ಕಳನ್ನು ಯೋಗೇಶ್ವರ್‌ ಕಡೆಗಣಿಸುತ್ತಿದ್ದಾರೆ ಎಂದು ನಿಶಾ ಅಳಲು ತೋಡಿಕೊಂಡಿದ್ದಾಎ.

20 ವರ್ಷ ಹಿಂದೆ ನಮಗೆ ಹೇಳದೆ ಕೇಳದೆ ತಂದೆ ಬೇರೆ ಸಂಸಾರ ಕಟ್ಟಿಕೊಂಡರು. ಆದರ್ಶ ಮಗಳಾಗು ಎಂದು ನನಗೆ ಹೇಳುತ್ತಾರೆ. ಅವರು ಆದರ್ಶ ತಂದೆಯಾಗಬೇಕಲ್ಲವೇ? ಮೊದಲನೇ ಮದುವೆಯ ಮಕ್ಕಳನ್ನು ಬೆಳೆಸಬೇಕಲ್ಲವೇ? ಇಂಥ ತಂದೆಯ ಜೊತೆಗೆ ಹೇಗಿರಲಿ? ಎಂದು ಯೋಗೇಶ್ವರ್ ಎರಡನೇ ಪತ್ನಿ, ಮಕ್ಕಳ ಬಗ್ಗೆ ಪ್ರಸ್ತಾಪ ಮಾಡಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Continue Reading

ವೈರಲ್ ನ್ಯೂಸ್

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Viral Video:‌ ಚಲಿಸುತ್ತಿರುವ ರೈಲಿಗೆ ಪುರುಷ ಮತ್ತು ಮಹಿಳೆಯ ಲಗೇಜ್‌ ಸಮೇತ ಹತ್ತಲು ಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಆ ವ್ಯಕ್ತಿ ಮಹಿಳೆಗೆ ಹತ್ತಲು ಸಹಾಯ ಮಾಡುತ್ತಾನೆ. ಆನಂತರದಲ್ಲಿ ತಾನೂ ಹೇಗಾದರೂ ಮಾಡಿ ಮೆಟ್ಟಿಲಿಗೆ ಹತ್ತುತ್ತಾನೆ. ಒಂದು ಕೈಯಲ್ಲಿ ರೈಲಿನ ಕಂಬಿ ಮತ್ತೊಂದು ಕೈಯಲ್ಲಿ ಭಾರೀ ಗಾತ್ರದ ಬ್ಯಾಗ್‌ ಹಿಡಿದುಕೊಂಡು ಆತನ ನೇತಾಡುತ್ತಿರುವುದನ್ನು ವಿಡಿಯೋ ಕಾಣಬಹುದಾಗಿದೆ.

VISTARANEWS.COM


on

Viral video
Koo

ನವದೆಹಲಿ: ರೈಲೆಂದರೆ(Indian Railway) ಸಾಕು ಸದಾ ತುಂಬಿ ತುಳುಕುವ ಜನ, ಸೀಟು ಸಿಗೋದು ಬಿಡಿ ಸರಿಯಾಗಿ ನಿಲ್ಲುವುದಕ್ಕೂ ಸ್ಥಳ ಇಲ್ಲದಿರುವಂತಹ ಸ್ಥಿತಿ ಇದೇ ನೆನಪಾಗುತ್ತದೆ. ಇನ್ನು ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಳ್ಳವವರೂ ಇದ್ದಾರೆ. ಇಲ್ಲ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಜನ ಮಾತ್ರ ತಮ್ಮ ಪ್ರಾಣದ ಹಂಗು ತೊರೆದು ರೈಲಿನೊಳಗೆ ನುಗ್ಗಲು ಯತ್ನಿಸುವುದನ್ನು ಆಗಾಗ ಕಾಣುತ್ತೇವೆ. ಇದೀಗ ಅಂತಹದ್ದೇ ಘಟನೆವೋಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ. ತುಂಬಿ ತುಳುಕುತ್ತಿದ್ದ ರೈಲಿಗೆ ಜನ ಹತ್ತಲು ನೂಕು ನುಗ್ಗಲು ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ವಲ್ಪ ಆಯಾ ತಪ್ಪಿದರೂ ಮೆಟ್ಟಿಲಿನಲ್ಲಿ ನಿಂತ್ತಿದ್ದ ಅಷ್ಟೂ ಜನ ಹಳಿಗೆ ಬೀಳುವುದಂತೂ ಗ್ಯಾರಂಟಿ.

ವಿಡಿಯೋದಲ್ಲೇನಿದೆ?

ಚಲಿಸುತ್ತಿರುವ ರೈಲಿಗೆ ಪುರುಷ ಮತ್ತು ಮಹಿಳೆಯ ಲಗೇಜ್‌ ಸಮೇತ ಹತ್ತಲು ಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಆ ವ್ಯಕ್ತಿ ಮಹಿಳೆಗೆ ಹತ್ತಲು ಸಹಾಯ ಮಾಡುತ್ತಾನೆ. ಆನಂತರದಲ್ಲಿ ತಾನೂ ಹೇಗಾದರೂ ಮಾಡಿ ಮೆಟ್ಟಿಲಿಗೆ ಹತ್ತುತ್ತಾನೆ. ಒಂದು ಕೈಯಲ್ಲಿ ರೈಲಿನ ಕಂಬಿ ಮತ್ತೊಂದು ಕೈಯಲ್ಲಿ ಭಾರೀ ಗಾತ್ರದ ಬ್ಯಾಗ್‌ ಹಿಡಿದುಕೊಂಡು ಆತನ ನೇತಾಡುತ್ತಿರುವುದನ್ನು ವಿಡಿಯೋ ಕಾಣಬಹುದಾಗಿದೆ. ಹೇಗಾದರೂ ಮಾಡಿ ರೈಲಿನೊಳಗೆ ಹತ್ತುವುದಷ್ಟೇ ಅವರ ಉದ್ದೇಶ. ಅದಕ್ಕಾಗಿ ಪ್ರಾಣದ ಹಂಗನ್ನೂ ಲೆಕ್ಕಿಸದೇ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ವಿಡಿಯೋ ನೋಡಿದವರು, ಇದು ಅತ್ಯಂತ ಅಪಾಯಕಾರಿ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸವವರೆಗೆ ಇಂತಹ ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಜನ ಟಿಕೆಟ್‌ ತೆಗೆದುಕೊಂಡು ರೈಲು ಹತ್ತಬೇಕು. ಟಿಕೆಟ್‌ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರ ಮೇಲೆ ನನಗೆ ಯಾವುದೇ ರೀತಿಯ ಕನಿಕರ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇಂತಹ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳ ಸೇವೆ ಕಲ್ಪಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇದನ್ನು ಓದಿ:HD Kumaraswamy: ದೇವರಾಜೇಗೌಡರಿಗೆ ಜೈಲಲ್ಲಿ ಜೀವ ಭಯ ಇದೆ; ಕಾರಣ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ

ಉತ್ತರಾಖಂಡದ ಲಸ್ಕರ್‌ ರೈಲ್ವೇ ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿದ್ದ ವ್ಯಕ್ತಿ ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ, ಆಪದ್ಬಾಂಧವಳಂತೆ ಬಂದು ಆತನನ್ನು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಏ.24ರಂದು ನಡೆದಿದ್ದು, ಆಹಾರ ಮತ್ತು ಜ್ಯೂಸ್‌ ತೆಗೆದು ಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಿದ್ದಾನೆ ಎನ್ನಲಾಗಿದೆ. ಕೈನಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಸುಲಭವಾಗಿ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದ.

Continue Reading

ದೇಶ

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

IndiGo Flight: ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

IndiGo Flight
Koo

ಮುಂಬೈ: ಬಸ್‌, ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ನೋಡಿದ್ದೇವೆ. ಹಲವರು ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸುವುದನ್ನು ಗಮನಿಸಿದ್ದೇವೆ. ಇದೀಗ ವಿಮಾನದ ಸರದಿ. ಅಪರೂಪದ ಪ್ರಸಂಗವೊಂದರಲ್ಲಿ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (CSMIA)ದಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೀಟು ಇಲ್ಲದೆ ನಿಂತು ಪ್ರಯಾಣಿಸಲು ಮುಂದಾದ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ವಿಮಾನವನ್ನು ನಿಲ್ಲಿಸಿ ಆತನನ್ನು ಕೆಳಗೆ ಇಳಿಸಿದ್ದಾರೆ. ಮುಂಬೈಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನ (IndiGo Flight)ದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ (ಮೇ 21) ಟೇಕ್ ಆಫ್ ಆಗುವ ಮೊದಲು ಓವರ್ ಬುಕ್ ಮಾಡಿದ್ದ ಪ್ರಯಾಣಿಕನನ್ನು ಸಿಬ್ಬಂದಿ ಗುರುತಿಸಿದ್ದು, ನಂತರ ಆತನನ್ನು ಇಳಿಸಿ ಸ್ವಲ್ಪ ತಡವಾಗಿ ವಿಮಾನ ಹೊರಡಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ವಿವರ

ಮಂಗಳವಾರ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.50ಕ್ಕೆ ಇಂಡಿಗೊ 6ಇ 6543 (6E 6543) ವಿಮಾನ ಹಾರಲು ಸಿದ್ಧತೆ ನಡೆಸಿತ್ತು. ಇನ್ನೇನು ಹಾರಾಟ ನಡೆಸಬೇಕು ಎನ್ನುವಷ್ಟರಲ್ಲಿ ವಿಮಾನದ ಹಿಂಭಾಗದಲ್ಲಿ ಪುರುಷ ಪ್ರಯಾಣಿಕರೊಬ್ಬ ನಿಂತಿರುವ ಬಗ್ಗೆ ಸಿಬ್ಬಂದಿ ಪೈಲಟ್‌ಗೆ ಎಚ್ಚರಿಕೆ ನೀಡಿದ್ದರು. ಬಳಿಕ ವಿಮಾನವನ್ನು ನಿಲ್ದಾಣದಲ್ಲೇ ಲ್ಯಾಂಡ್‌ ಮಾಡಲಾಯಿತು.

ಅಧಿಕಾರಿಗಳು ಹೇಳೋದೇನು?

ಘಟನೆಯ ಬಗ್ಗೆ ಮಾತನಾಡಿದ ಇಂಡಿಗೊ ಏರ್‌ಲೈನ್ಸ್‌ ವಕ್ತಾರರು, “ಮುಂಬೈಯಿಂದ ವಾರಣಾಸಿಗೆ ತೆರಳುವ 6ಇ 6543 ವಿಮಾನದ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ದೋಷ ಸಂಭವಿಸಿದೆ. ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕನಿಗೆ ಮೊದಲೇ ಬೇರೋಬ್ಬರು ಕಾಯ್ದಿರಿಸಿದ ಆಸನವನ್ನು ನಿಗದಿಪಡಿಸಿದ್ದು ಎಡವಟ್ಟಿಗೆ ಕಾರಣ. ವಿಮಾನ ಹೊರಡುವ ಮೊದಲು ದೋಷವನ್ನು ಗಮನಿಸಲಾಯಿತು ಮತ್ತು ನಿಂತಿದ್ದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಇದರಿಂದ ವಿಮಾನದ ನಿರ್ಗಮಕ್ಕೆ ಸ್ವಲ್ಪ ವಿಳಂಬವಾಯಿತು. ಇಂಡಿಗೊ ತನ್ನ ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಬಲಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಘಟನೆಗೆ ವಿಷಾಧ ವ್ಯಕ್ತಪಡಿಸುತ್ತದೆʼʼ ಎಂದು ಹೇಳಿದ್ದಾರೆ.

ಸೀಟು ಖಾಲಿ ಇರುವುದನ್ನು ತಪ್ಪಿಸಲು ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಓವರ್ ಬುಕ್ ಮಾಡುತ್ತವೆ. ಹೀಗೆ ಟಿಕೆಟ್‌ ಓವರ್‌ ಬುಕ್‌ ಮಾಡಿದ್ದರಿಂದ ಈ ಎಡವಟ್ಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊನೆಗೆ ಈ ವಿಮಾನ 8.41ಕ್ಕೆ ನಿಲ್ದಾಣದಿಂದ ಹೊರಟಿದೆ.

ಇದನ್ನೂ ಓದಿ: Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ; ಒಬ್ಬ ಪ್ರಯಾಣಿಕ ಸಾವು, 30 ಮಂದಿಗೆ ಗಾಯ, ಇಲ್ಲಿದೆ ಭೀಕರ ವಿಡಿಯೊ

ನಿಯಮ ಏನು ಹೇಳುತ್ತದೆ?

ಈ ಹಿಂದೆ ಬುಕ್‌ ಮಾಡಲಾದ ಟಿಕೆಟ್‌ನಲ್ಲಿ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಿದ ಘಟನೆಯೂ ನಡೆದಿತ್ತು. ಇನ್ನು 2016ರ ನಿಯಮದ ಪ್ರಕಾರ, ನಿಗದಿತ ವಿಮಾನದ ನಿರ್ಗಮನದ ಒಂದು ಗಂಟೆಯೊಳಗೆ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದರೆ ವಿಮಾನಯಾನ ಸಂಸ್ಥೆ ಪರಿಹಾರ ನೀಡಬೇಕಾಗಿಲ್ಲ. ಆದಾಗ್ಯೂ ವಿಮಾನ ಯಾನವು ಬೋರ್ಡಿಂಗ್ ನಿರಾಕರಿಸಿದ 24 ಗಂಟೆಗಳ ಒಳಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದ್ದರೆ ವಿಮಾನಯಾನ ಇಂಧನ ಶುಲ್ಕದ ಜತೆಗೆ ಕಾಯ್ದಿರಿಸಿದ ಒನ್-ವೇ ಮೂಲ ಶುಲ್ಕದ ಶೇ. 200ರಷ್ಟು ಮೊತ್ತವನ್ನು ಪಾವತಿಸಬೇಕು. ಇದರ ಗರಿಷ್ಠ ಮೊತ್ತ 10,000 ರೂ.

Continue Reading

ವೈರಲ್ ನ್ಯೂಸ್

Viral Video: ಅಬ್ಬಾ ಎಂಥಾ ಭೀಕರ ದೃಶ್ಯ! ಸ್ಕೂಟರ್‌ನಲ್ಲಿದ್ದ ದಂಪತಿ ಮೇಲೆ ಏಕಾಏಕಿ ಬಿದ್ದ ಬೃಹತ್‌ ಮರ-ವಿಡಿಯೋ ನೋಡಿ

Viral Video:ಬೊಲ್ಲಾರಾಮ್‌ ಕಂಟೋನ್ಮೆಂಟ್‌ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್‌ ಮೇಲೆ ಉರುಳಿಬಿದ್ದಿದೆ.

VISTARANEWS.COM


on

Viral Video
Koo

ಹೈದರಾಬಾದ್‌: ಸಾವು ಹೇಗೆ, ಎಲ್ಲಿ ಬೇಕಾದರೂ, ಯಾವ ರೂಪದಲ್ಲೂ ನಮ್ಮ ಹಿಂದೆಯೇ ಇರಬಹುದು. ಕೆಲವೊಮ್ಮೇ ಊಹಿಸಲೂ ಆಗದಂತಹ ರೀತಿಯಲ್ಲಿ ಸಾವು ಸಂಭವಿಸುತ್ತದೆ. ಹೈದರಾಬಾದ್‌ನಲ್ಲೊಂದು ಅಂತಹದ್ದೇ ಒಂದು ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಇದ್ದಕ್ಕಿದ್ದಂತೆ ಮರ(Tree Fallen)ವೊಂದು ಉರುಳಿ ಬಿದ್ದಿದ್ದು, ಸ್ಥಳದಲ್ಲೇ ಪತಿ ಕೊನೆಯುಸಿರೆಳೆದಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮೆರಾ(CCTV)ದಲ್ಲಿ ರೆಕಾರ್ಡ್‌ ಆಗಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆಂದು ದಂಪತಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೊಲ್ಲಾರಾಮ್‌ ಕಂಟೋನ್ಮೆಂಟ್‌ ಆಸ್ಪತ್ರೆಗೆ ಬರುತ್ತಿದ್ದ ಸ್ಕೂಟರ್‌ನಲ್ಲಿ ದಂಪತಿ ಬರುತ್ತಿದ್ದರು. ದಂಪತಿ ಆಸ್ಪತ್ರೆ ಗೇಟ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ದೈತ್ಯ ಮರವೊಂದು ಸ್ಕೂಟರ್‌ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್‌ ಮತ್ತೊಂದು ಬೈಕ್‌ ತಕ್ಷಣ ಬ್ರೇಕ್‌ ಹಾಕಿ ನಿಲ್ಲುತ್ತೆ. ಅದರಲ್ಲಿದ್ದ ಸವಾರ ಅಪಾಯದಿಂದ ಪಾರಾಗುತ್ತಾನೆ. ಇದಾದ ತಕ್ಷಣ ಸೆಕ್ಯೂಟಿ ಗಾರ್ಡ್‌ ಹಾಗೂ ಇತರರು ಓಡಿ ಹೋಗಿ ದಂಪತಿ ರಕ್ಷಣೆಗೆ ಮುಂದಾಗುತ್ತಾರೆ. ಅಷ್ಟರಲ್ಲಿ ಪತಿ ಕೊನೆಯುಸಿರೆಳೆದಿದ್ದರು. ತಲೆಗೆ ಏಟು ಬಿದ್ದು ನರಳುತ್ತಿದ್ದಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದ್ದು, ಕೆಲವು ಜನರು ಉರುಳಿ ಬಿದ್ದ ಮರವನ್ನು ಕತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ದಂಪತಿಯನ್ನು ರವೀಂದರ್‌ ಹಾಗೂ ಸರಳಾ ದೇವಿ ಎಂದು ಗುರುತಿಸಲಾಗಿದೆ. ರವೀಂದರ್‌ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಗವಾರದ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ, ಮಗಳ ಮೇಲೆಯೇ ಉರುಳಿ ಬಿದ್ದಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. 

ಇದನ್ನೂ ಓದಿ:Bangladesh MP Missing: ಕೋಲ್ಕತ್ತಾಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಮಿಸ್ಸಿಂಗ್‌

Continue Reading
Advertisement
Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್15 mins ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್20 mins ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ26 mins ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್36 mins ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

AR Rahman says his mother thought his Oscar statuettes were made of gold
ಬಾಲಿವುಡ್40 mins ago

AR Rahman: ಪ್ರಶಸ್ತಿಗಳೆಲ್ಲ ಚಿನ್ನವೆಂದು ಭಾವಿಸಿ ಎಆರ್ ರೆಹಮಾನ್ ತಾಯಿ ಮಾಡಿದ್ದೇನು?

Phone tapping case Let Ashok file a complaint to Home Minister DK Shivakumar hits back at phone tapping allegations
ರಾಜಕೀಯ50 mins ago

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Cannes 2024 Chidananda S Naik bows in Cannes with Kannada folk tale
ಸಿನಿಮಾ60 mins ago

Cannes 2024: ಕಾನ್‌ ಫಿಲ್ಮ್ಸ್‌ ಫೆಸ್ಟಿವಲ್‌ನಲ್ಲಿ ಕನ್ನಡದ ಕಿರು ಚಿತ್ರ ಪ್ರದರ್ಶನ

Turbulence
ವಿದೇಶ1 hour ago

Singapore Airlines: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

MDH, Everest Spices
ದೇಶ2 hours ago

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

drink and drive RTO check
ಬೆಂಗಳೂರು2 hours ago

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ19 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌