ಬೆಂಗಳೂರು: ಒಟಿಟಿ ವೇದಿಕೆಯಾಗಿರುವ ನೆಟ್‌ಫ್ಲಿಕ್ಸ್ 100 ದೇಶಗಳಲ್ಲಿ ಸಬ್ಸ್ಕ್ರಿಪ್ಷನ್ (Netflix Subscription) ದರವರನ್ನು ಶೇಕಡಾ 50ರಷ್ಟು ಇಳಿಕೆ ಮಾಡಿದೆ. ಕಡಿಮೆ ಗ್ರಾಹಕರನ್ನು ಹೊಂದಿರುವ ದೇಶಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಆದರೆ, ಭಾರತದಲ್ಲಿ ಹೊಸ ಸಬ್ಸ್ಕ್ರಿಪ್ಷನ್ ರೇಟ್ ಲಭ್ಯವೇ ಎಂಬ ಮಾಹಿತಿ ಇಲ್ಲ. Netflix Inc ಈ ಕುರಿತು ಮಾಹಿತಿ ನೀಡಿದ್ದು, ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ದರ ಇಳಿಸಲಾಗಿದೆ ಎಂದು ಹೇಳದೆ.
Netflixನ ಬೇಸಿಕ್ ಸಬ್ಸ್ಕ್ರಿಪ್ಷನ್ ರೇಟ್ ಅನ್ನು Netflix Inc ಶೇಕಡಾ 50ರಷ್ಟು ಇಳಿಕೆ ಮಾಡಿದರೆ ಉಳಿದ ಟ್ಯಾರಿಫ್ಗಳನ್ನು ಶೇಕಡಾ 17ರಿಂದ 25ರವರೆಗೆ ಇಳಿಕೆ ಮಾಡಲಾಗಿದೆ. ವಿಯೆಟ್ನಾಮ್, ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ 10 ಲಕ್ಷ ಗ್ರಾಹಕರು ಹೊಸ ಟ್ಯಾರಿಫ್ನ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ : Netflix Password Sharing : ನೆಟ್‌ಫ್ಲಿಕ್ಸ್ ಪಾಸ್ ವರ್ಡ್ ಶೇರ್ ಮಾಡುವ ಪದ್ಧತಿ ಶೀಘ್ರ ಅಂತ್ಯ
Netflix Inc ನೀಡಿದ ಮಾಹಿತಿ ಪ್ರಕಾರ ಭಾರತ ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಈಗಾಗಲೇ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇಲ್ಲೆಲ್ಲ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದ್ದ ಕಾರಣ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. Netflix ಸ್ಟ್ರೀಮಿಂಗ್ ಸರ್ವಿಸ್ ಹಿಂದೆ ದುಬಾರಿಯಾಗಿತ್ತು. ಆದರೆ, ವರ್ಷ ಕಳೆಯುತ್ತಿದ್ದಂತೆ ಬೇರೆ ಕಂಪನಿಗಳ ಸ್ಪರ್ಧೆಯಿಂದಾ Netflixಗೆ ಗ್ರಾಹಕರ ಸಂಖ್ಯೆ ಕುಸಿತವಾಯಿತು. ಹೀಗಾಗಿ ನಿಧಾನವಾಗಿ ಬೆಲೆ ಇಳಿಕೆ ಮಾಡಲು ಮುಂದಾಗುತ್ತಿದೆ. ಅಂತೆಯೇ ಆರಂಭಿಕ ಸಬ್ಸ್ಕ್ರಿಪ್ಷನ್ ರೇಟ್ ಗಣನೀಯವಾಗಿ ಇಳಿಕೆಯಾಯಿತು.