Netflix Subscription : 100 ದೇಶಗಳಲ್ಲಿ ನೆಟ್​ಫ್ಲಿಕ್ಸ್​ ದರ ಶೇಕಡಾ 50 ಇಳಿಕೆ - Vistara News

ಒಟಿಟಿ

Netflix Subscription : 100 ದೇಶಗಳಲ್ಲಿ ನೆಟ್​ಫ್ಲಿಕ್ಸ್​ ದರ ಶೇಕಡಾ 50 ಇಳಿಕೆ

ಕಡಿಮೆ ಚಂದಾದಾರರನ್ನು ಹೊಂದಿರುವ ದೇಶಗಳಲ್ಲಿ ಹೊಸ ದರವನ್ನು ಅಳವಡಿಸಲು (Netflix Subscription) ಮುಂದಾಗಿದೆ.

VISTARANEWS.COM


on

Netflix price reduced by 50 percent in 100 countries
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಒಟಿಟಿ ವೇದಿಕೆಯಾಗಿರುವ ನೆಟ್​ಫ್ಲಿಕ್ಸ್​ 100 ದೇಶಗಳಲ್ಲಿ ಸಬ್​ಸ್ಕ್ರಿಪ್ಷನ್ (Netflix Subscription)​ ದರವರನ್ನು ಶೇಕಡಾ 50ರಷ್ಟು ಇಳಿಕೆ ಮಾಡಿದೆ. ಕಡಿಮೆ ಗ್ರಾಹಕರನ್ನು ಹೊಂದಿರುವ ದೇಶಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಆದರೆ, ಭಾರತದಲ್ಲಿ ಹೊಸ ಸಬ್​ಸ್ಕ್ರಿಪ್ಷನ್​ ರೇಟ್ ಲಭ್ಯವೇ ಎಂಬ ಮಾಹಿತಿ ಇಲ್ಲ. Netflix Inc ಈ ಕುರಿತು ಮಾಹಿತಿ ನೀಡಿದ್ದು, ಹೆಚ್ಚು ಗ್ರಾಹಕರನ್ನು ಹೊಂದುವ ಉದ್ದೇಶದಿಂದ ದರ ಇಳಿಸಲಾಗಿದೆ ಎಂದು ಹೇಳದೆ.

Netflixನ ಬೇಸಿಕ್​ ಸಬ್​ಸ್ಕ್ರಿಪ್ಷನ್​ ರೇಟ್​ ಅನ್ನು Netflix Inc ಶೇಕಡಾ 50ರಷ್ಟು ಇಳಿಕೆ ಮಾಡಿದರೆ ಉಳಿದ ಟ್ಯಾರಿಫ್​ಗಳನ್ನು ಶೇಕಡಾ 17ರಿಂದ 25ರವರೆಗೆ ಇಳಿಕೆ ಮಾಡಲಾಗಿದೆ. ವಿಯೆಟ್ನಾಮ್​, ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ 10 ಲಕ್ಷ ಗ್ರಾಹಕರು ಹೊಸ ಟ್ಯಾರಿಫ್​ನ ಲಾಭ ಪಡೆಯಲಿದ್ದಾರೆ.

ಇದನ್ನೂ ಓದಿ : Netflix Password Sharing : ನೆಟ್‌ಫ್ಲಿಕ್ಸ್‌ ಪಾಸ್‌ ವರ್ಡ್‌ ಶೇರ್‌ ಮಾಡುವ ಪದ್ಧತಿ ಶೀಘ್ರ ಅಂತ್ಯ

Netflix Inc ನೀಡಿದ ಮಾಹಿತಿ ಪ್ರಕಾರ ಭಾರತ ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಈಗಾಗಲೇ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಇಲ್ಲೆಲ್ಲ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದ್ದ ಕಾರಣ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. Netflix ಸ್ಟ್ರೀಮಿಂಗ್ ಸರ್ವಿಸ್ ಹಿಂದೆ ದುಬಾರಿಯಾಗಿತ್ತು. ಆದರೆ, ವರ್ಷ ಕಳೆಯುತ್ತಿದ್ದಂತೆ ಬೇರೆ ಕಂಪನಿಗಳ ಸ್ಪರ್ಧೆಯಿಂದಾ Netflixಗೆ ಗ್ರಾಹಕರ ಸಂಖ್ಯೆ ಕುಸಿತವಾಯಿತು. ಹೀಗಾಗಿ ನಿಧಾನವಾಗಿ ಬೆಲೆ ಇಳಿಕೆ ಮಾಡಲು ಮುಂದಾಗುತ್ತಿದೆ. ಅಂತೆಯೇ ಆರಂಭಿಕ ಸಬ್​ಸ್ಕ್ರಿಪ್ಷನ್​ ರೇಟ್ ಗಣನೀಯವಾಗಿ ಇಳಿಕೆಯಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

12th fail Film: ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆ `12th fail’ ಚಿತ್ರ

12th fail Film ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನದ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸೆ ಅವರು ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.

VISTARANEWS.COM


on

12th fail Film
Koo

ಬೆಂಗಳೂರು: ಭಾರತೀಯ ಸಿನಿಮಾಗಳು ಹೆಚ್ಚಾಗಿ ಭಾರತದಾದ್ಯಂತ ಬಿಡುಗಡೆಯಾಗುತ್ತದೆ. ಆ ವೇಳೆ ಕೆಲವು ಚಿತ್ರಗಳನ್ನು ಯಶಸ್ಸಿನತ್ತ ಮುನುಗ್ಗಿದ್ದರೆ ಕೆಲವು ನೆಲಕಚ್ಚುತ್ತವೆ. ಆದರೆ ಇದೀಗ ಭಾರತೀಯ ಸಿನಿಮಾವೊಂದು (12th fail Film) ವಿದೇಶದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆಯಂತೆ.

ಹೌದು. ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನದ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸೆ ಅವರು ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರ ಅಕ್ಟೋಬರ್ 27ರಂದು 2023ರಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು, ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಗಿದ್ದು, ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕಂಗನಾ ರಾಣವತ್, ಕತ್ರಿನಾ ಕೈಪ್ ಮುಂತಾದವರು ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಇದೀಗ ಚಿತ್ರ ಚೀನಾದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ವಿಕ್ರಾಂತ್ ಅವರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಚಿತ್ರ ಯುಪಿಎಸ್ ಸಿ ಆಕಾಂಕ್ಷಿಗಳ ಸುತ್ತ ಸುತ್ತುತ್ತದೆ. ಇದು ನಿಜ ಜೀವನದ ಅನುಭವಗಳನ್ನು ಆಧರಿಸಿದೆ. ಯುಪಿಎಸ್ ಸಿ ಪ್ರವೇಶ ಪರೀಕ್ಷೆಗೆ ಪ್ರಯತ್ನಿಸುವ ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ. ಬಡತನವನ್ನು ಮೆಟ್ಟಿ ನಿಂತು ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಈ ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಅವರ ಪತ್ನಿ ಶ್ರದ್ಧಾ ಜೋಶಿ ಅವರ ಪಾತ್ರದಲ್ಲಿ ಮೇಧಾ ಶಂಕರ್ ನಟಿಸಿದ್ದಾರೆ.

ಇದನ್ನೂ ಓದಿ: Ram Navami: ಅಯೋಧ್ಯೆ ರಾಮ ಮಂದಿರಲ್ಲಿ ಮೊದಲ ರಾಮ ನವಮಿ; ದೇಶದ ಜನತೆಗೆ ಮೋದಿ ನೀಡಿದ ಸಂದೇಶ ಇದು

ಚೀನಾದಲ್ಲಿ ಭಾರತೀಯ ಸಿನಿಮಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಹಿಂದೆ ಅಮೀರ್ ಖಾನ್ ಅವರ ದಂಗಲ್ ಮತ್ತು 3 ಈಡಿಯಟ್ಸ್ ಚಿತ್ರಕ್ಕೆ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಅದೇ ರೀತಿ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುವುದರ ಮೂಲಕ ಚೀನಾದ ಜನತೆಗೆ ಮನರಂಜನೆಯನ್ನು ನೀಡುತ್ತದೆ ಎಂಬ ನಂಬಿಕೆ ಹುಸಿಯಾಗಲಾರದು ಎನ್ನಲಾಗುತ್ತಿದೆ.

Continue Reading

ಸಿನಿಮಾ

Ott Release This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು, ವೆಬ್‌ ಸಿರೀಸ್‌!

Ott Release This Week: ವೀಕ್ಷಕರಿಗೆ ಅನುಕೂಲವಾಗುವಂತೆ ಒಟಿಟಿ (Ott Release This Week) ಪ್ಲಾಟ್ ಫಾರ್ಮ್‌ಗಳು ವೆಬ್ ಸರಣಿ ಮತ್ತು ಚಲನಚಿತ್ರಗಳನ್ನು ಎಲ್ಲಾ ಸಮಯದಲ್ಲೂ ಎಲ್ಲಿಯಾದರೂ ನಿಂತು ನೋಡಲು ಅನುಕೂಲವಾಗುವಂತೆ ಆನ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ವಾರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಲು ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರ ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

VISTARANEWS.COM


on

OTT
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವೀಕ್ಷಕರಿಗೆ ಧಾರಾವಾಹಿ, ಸಿನಿಮಾ ಕ್ರೇಜ್ ಹೆಚ್ಚಾಗಿದೆ. ಇಡೀ ದಿನ ಟಿವಿ ಮುಂದೆ ಕುಳಿತುಕೊಂಡಿರುತ್ತಾರೆ. ಆದರೆ ಹೊರಗಡೆ ಹೋಗುವಾಗ ಟಿವಿ ನೋಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ವೀಕ್ಷಕರಿಗೆ ಅನುಕೂಲವಾಗುವಂತೆ ಒಟಿಟಿ (Ott Release This Week) ಪ್ಲಾಟ್ ಫಾರ್ಮ್‌ಗಳು ವೆಬ್ ಸರಣಿ ಮತ್ತು ಚಲನಚಿತ್ರಗಳನ್ನು ಎಲ್ಲಾ ಸಮಯದಲ್ಲೂ ಎಲ್ಲಿಯಾದರೂ ನಿಂತು ನೋಡಲು ಅನುಕೂಲವಾಗುವಂತೆ ಆನ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಿದೆ. ಅದರಂತೆ ಈ ವಾರ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗಲಿರುವ ಚಲನಚಿತ್ರ ಮತ್ತು ವೆಬ್ ಸಿರೀಸ್‌ ಪಟ್ಟಿ ಹೀಗಿವೆ.

OTT

Anyone But You

ಇದು ಅಮೆರಿಕನ್ ರೊಮ್ಯಾಂಟಿಕ್ ಹಾಸ್ಯ ಚಿತ್ರವಾಗಿದೆ. ಈ ಚಿತ್ರದ ಕಥೆ ಬೀ ಮತ್ತು ಬೆನ್ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಸಿಡ್ನಿ ಸ್ವೀನಿ ಮತ್ತು ಗ್ಲೆನ್ ಪೊವೆಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಲೆಕ್ಸಾಂಡ್ರಾ ಶಿಪ್, ಗಾಟಾ, ಹ್ಯಾಡ್ಲಿ ರಾಬಿನ್ಸನ್, ಮಿಚೆಲ್ ಹರ್ಡ್ , ಡರ್ಮಟ್ ಮುಲ್ರೋನಿ, ಡ್ಯಾರೆನ್ ಬಾರ್ನೆಟ್, ಬ್ರಿಯಾನ್ ಬ್ರೌನ್ ಮತ್ತು ರಾಚೆಲ್ ಗ್ರಿಫಿತ್ಸ್ ಈ ಚಿತ್ರದಲ್ಲಿ ನಟಿಸಿದ್ದಾರೆ.

OTT

ಡ್ಯೂನ್ ಪಾರ್ಟ್ 2

ಇದು ಫ್ರಾಂಕ್ ಹರ್ಬರ್ಟ್ ಅವರ 1965ರ ಕಾದಂಬರಿಯಾಗಿದ್ದು, ಹಾಗೂ ಇದು 2021ರಲ್ಲಿ ಬಿಡುಗಡೆಯಾದ ಡ್ಯೂನ್ ನ ಮುಂದುವರಿದ ಭಾಗವಾಗಿದೆ. ಹೌಸ್ ಹರ್ಕೋನೆನ್ ನ ದಬ್ಬಾಳಿಕೆಯನ್ನು ಕೊನೆಗೊಳಿಸಲು ಅವರ ವಿರುದ್ಧ ಯುದ್ಧ ಮಾಡಲು ಅರ್ರಾಕಿಸ್ ಗ್ರಹದ ಫ್ರೆಮೆನ್ ಜನರೊಂದಿಗೆ ಸೇರುವ ಪಾಲ್ ಅಟ್ರೀಡ್ಸ್ ಅವರ ಬಗ್ಗೆ ಇಲ್ಲಿ ಅನುಸರಿಲಾಗಿದೆ. ಈ ಚಿತ್ರದಲ್ಲಿ ಟಿಮೊಥಿ ಚಲಾಮೆಟ್, ಝೆಂಡಾಯಾ, ರೆಬೆಕಾ ಫರ್ಗುಸನ್, ಜೋಶ್ ಬ್ರೋಲಿನ್, ಡೇವ್ ಬಟಿಸ್ಟಾ, ಆಸ್ಟಿನ್ ಬಟ್ಲರ್ ಮತ್ತು ಫ್ಲಾರೆನ್ಸ್ ಪಗ್ ನಟಿಸಿದ್ದಾರೆ. ಏಪ್ರಿಲ್ 16ರಂದು ಬುಕ್ ಮೈ ಶೋನಲ್ಲಿ ಚಿತ್ರ ಬಿಡುಗಡೆಯಾಗಿದೆ.

OTT

ಆರ್ಟಿಕಲ್ 370

ಈ ಚಿತ್ರದಲ್ಲಿ ಯಾಮಿ ಗೌತಮಿ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರುಣ್ ಗೋವಿಲ್, ವೈಭವ್ ತತ್ವವಾದಿ, ಸ್ಕಂದ ಠಾಕೂರ್ ಮತ್ತು ಅಶ್ವಿನಿ ಕೌಲ್ ಮುಖ್ಯ ಪಾತ್ರದಲ್ಲಿದ್ದಾರೆ. 2019ರಲ್ಲಿ ಕೈಗೊಳ್ಳಲಾದ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವಿಕೆಯ ಹಿನ್ನಲೆಯಲ್ಲಿ ಈ ಚಿತ್ರವನ್ನು ಮಾಡಲಾಗಿದೆ. ವರದಿಗಳ ಪ್ರಕಾರ ಆರ್ಟಿಕಲ್ 370 ಏಪ್ರಿಲ್ 19ರಂದು ಜಿಯೋ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ.

OTT

ಸೈರನ್

ಇದು ಆಂಬ್ಯುಲೆನ್ಸ್ ಚಾಲಕನ ಸುತ್ತ ಸುತ್ತುತ್ತದೆ. ಅವನಿ ಅಪರಾಧಿ ಸ್ಥಾನದಲ್ಲಿದ್ದು, ಜೈಲಿನಿಂದ ಬಿಡುಗಡೆಯಾಗಲು ಕಾಯುತ್ತಿರುತ್ತಾನೆ. ಆದರೆ ಅವನ ಬಿಡುಗಡೆಗೆ 14 ವರ್ಷಗಳೇ ತೆಗೆದುಕೊಳ್ಳುತ್ತದೆ. ಈ ಚಿತ್ರದಲ್ಲಿ ಜಯಂ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಸೈರನ್ ಏಪ್ರಿಲ್ 19ರಂದು ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ.

OTT

ಮೈ ಡಿಯರ್ ಡೊಂಗಾ

ಈ ಚಿತ್ರದಲ್ಲಿ ಅಭಿನವ್ ಗೌತಮ್ , ಶಾಲಿನಿ ಕೊಂಡೆಪುಡಿ, ದಿವ್ಯಾ ಶ್ರೀಪಾದ, ನಿಖಿಲ್ ಗಾಜುಲಾ ಮತ್ತು ಶಶಾಂಕ್ ಮಂಡೂರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 19ರಂದು ಆಹಾದಲ್ಲಿ ಬಿಡುಗಡೆಯಾಗಲಿದೆ.

OTT

ಡ್ರೀಮ್ ಸ್ಕ್ಯಾನೆರಿಯಾ

ಲಕ್ಷಾಂತರ ಅಪರಿಚಿತರು ಇದ್ದಕ್ಕಿದ್ದಂತೆ ತನ್ನ ಕನಸಿನಲ್ಲಿ ಬಂದು ಅವನನ್ನು ನೋಡಲು ಪ್ರಾರಂಭಿಸುವಾಗ ಅವನ ಜೀವನವನ್ನೇ ತಲೆಕೆಳಗಾಗಿ ನೋಡುವ ಒಬ್ಬ ಅಸಹಾಯಕ ಕುಟುಂಬದ ಮನುಷ್ಯನ ಮೇಲೆ ಡ್ರೀಮ್ ಸ್ಕ್ಯಾನೆರಿಯಾ ಚಿತ್ರ ಕೇಂದ್ರೀಕರಿಸುತ್ತದೆ. ಈ ಚಿತ್ರದಲ್ಲಿ ನಿಕೋಲಸ್ ಕೇಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಏಪ್ರಿಲ್ 19ರಂದು ಈ ಚಿತ್ರ ಲಯನ್ಸ್ ಗೇಟ್ ಪ್ಲೇನಲ್ಲಿ ಬಿಡುಗಡೆಯಾಗಲಿದೆ.

OTT

ದಿ ಟೂರಿಸ್ಟ್ ಸೀಸನ್ 2

ಈ ಚಿತ್ರ ಐರಿಶ್ ಎಂಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅವನು ಆಸ್ಟ್ರೇಲಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾನು ಯಾರು ಎಂಬುದನ್ನು ನೆನಪಿಟ್ಟುಕೊಳ್ಳಲು ತನ್ನ ಭೂತಕಾಲದ ನೆನೆಪನ್ನು ಮರಳಿ ಪಡೆಯಲು ಸೆಣಸಾಡುತ್ತಾನೆ. ಈ ಸರಣಿಯಲ್ಲಿ ಜೇಮೀ ಡೋರ್ನಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 19ರಂದು ಲಯನ್ಸ್ ಗೇಟ್ ಪ್ಲೇನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Mosquito: ಸೆಕೆಯ ಜತೆಗೆ ಸೊಳ್ಳೆಗಳ ಕಾಟ ಎದುರಿಸುತ್ತಿದ್ದೀರಾ? ಹಾಗಿದ್ದರೆ ಈ ಕ್ರಮ ಅನುಸರಿಸಿ

ಅವರ್ ಲಿವಿಂಗ್ ವರ್ಲ್ಡ್

ಈ ಚಿತ್ರ ಭೂಮಿಯ ಮೇಲಿನ ಜೀವವನ್ನು ಉಳಿಸಿಕೊಳ್ಳಲು ಅಗತ್ಯವಾದ ಸಂಪರ್ಕಗಳ ಜಾಲವನ್ನು ಪ್ರದರ್ಶಿಸುವ ಜಾಗತಿಕ ಪ್ರಯಾಣವನ್ನು ತೋರಿಸುತ್ತದೆ. ಇದನ್ನು ಆಸ್ಕರ್ ವಿಜೇತ ಕೇಟ್ ಬ್ಲಾಂಚೆಟ್ ನಿರೂಪಿಸಿದ್ದಾರೆ. ಇದು ಏಪ್ರಿಲ್ 17ರಂದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ.

Continue Reading

ಸಿನಿಮಾ

Movie release: ಹಾರರ್, ಥ್ರಿಲರ್, ಆ್ಯಕ್ಷನ್.. ಒಟಿಟಿಯಲ್ಲಿ ಬರಲಿವೆ ಸೂಪರ್ ಹಿಟ್ ಮೂವಿಗಳು

Movie release: ಸುಮಾರು ಎರಡು ವಾರಗಳ ಬಳಿಕ ಈ ವಾರದಲ್ಲಿ ಹಲವಾರು ಚಿತ್ರಗಳು ಒಟಿಟಿಯಲ್ಲಿ ಬರಲು ಸಜ್ಜಾಗಿದೆ. ಹಾರರ್, ಥ್ರಿಲರ್, ಆಕ್ಷನ್, ರೋಮ್ಯಾಂಟಿಕ್ ಸೇರಿದಂತೆ ಸೂಪರ್ ಹಿಟ್ ಮೂವಿಗಳು ಈ ವಾರ ತೆರೆ ಕಾಣಲಿದೆ.

VISTARANEWS.COM


on

By

Movie release
Koo

ಬೆಂಗಳೂರು: ಹೊರಗೆ ಬಿಸಿಲು ತೀವ್ರವಾಗಿದೆ. ಹೀಗಿರುವಾಗ ಮನೆಯೊಳಗೆ ಕುಳಿತು ತಂಪಾದ ಜ್ಯೂಸು ಕುಡಿಯುತ್ತಾ, ತಿಂಡಿಗಳನ್ನು ಮೆಲ್ಲುತ್ತಾ ಇಷ್ಟವಾದ ಸಿನಿಮಾಗಳನ್ನು ನೋಡುತ್ತಾ ರಜೆ ಕಳೆಯಬಹುದು. ಯಾಕೆಂದರೆ ಈ ವಾರ ಹಲವು ಹೊಸ ಚಿತ್ರಗಳು ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ. ಅತ್ಯಂತ ನಿರೀಕ್ಷಿತ ಚಿತ್ರಗಳಾದ ಯನಿವನ್ ಬಟ್ ಯು (Anyone But You), ಡ್ಯೂನ್: ಪಾರ್ಟ್ 2 (Dune: Part 2), ಡ್ರೀಮ್ ಸಿನಾರಿಯೊ (Dream Scenario) ಮತ್ತು ಝಾಕ್ ಸ್ನೈಡರ್ಸ್ ರೆಬೆಲ್ ಮೂನ್ – ಪಾರ್ಟ್ 2: ದಿ ಸ್ಕಾರ್ಗಿವರ್ (Zack Snyder’s Rebel Moon – Part Two: The Scargiver) ಕೂಡ ಸೇರಿದೆ.

ಇನ್ನು ವಿದ್ಯಾ ಬಾಲನ್ (Vidya Balan) ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ. ದೋ ಔರ್ ದೋ ಪ್ಯಾರ್ (Do Aur Do Pyaar ) ಕೂಡ ಈ ವಾರ ಥಿಯೇಟರ್‌ಗಳಿಗೆ ಆಗಮಿಸಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಹೀಗಾಗಿ ಮನೆಯಿಂದ ಹೊರಬಂದು ದೊಡ್ಡ ಪರದೆಯ ಮೇಲೆ ಈ ಚಿತ್ರ ನೋಡಬಹುದು.

ಇಷ್ಟೇ ಅಲ್ಲದೇ ಸೀ ಯು ಇನ್ ಅನದರ್ ಲೈಫ್, ದಿ ಗ್ರಿಮ್ ವೇರಿಯೇಷನ್ಸ್, ದಿ ಟೂರಿಸ್ಟ್: ಸೀಸನ್ 2 ಮತ್ತು ಚೀಫ್ ಡಿಟೆಕ್ಟಿವ್ 1958 ಸರಣಿಯು ತೆರೆಗೆ ಬರಲು ಕಾಯುತ್ತಿದೆ. ಈ ವಾರ ನೆಟ್ ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಒಟಿಟಿಯಲ್ಲಿ ಬರಲು ಸಿದ್ದವಾಗಿರುವ ಚಿತ್ರಗಳು ಇಂತಿದೆ.

ಇದನ್ನೂ ಓದಿ: Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!

ಡ್ಯೂನ್: ಪಾರ್ಟ್ ಟು

ಬುಕ್ ಮೈ ಶೋ (BookMyShow ) ನಲ್ಲಿ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ತಿಮೋತಿ ಚಲಾಮೆಟ್, ಝೆಂಡಯಾ, ಜೇವಿಯರ್ ಬಾರ್ಡೆಮ್, ರೆಬೆಕಾ ಫರ್ಗುಸನ್, ಜೋಶ್ ಬ್ರೋಲಿನ್, ಫ್ಲಾರೆನ್ಸ್ ಪಗ್, ಆಸ್ಟಿನ್ ಬಟ್ಲರ್, ಲಿಯಾ ಸೆಡೌಕ್ಸ್, ಕ್ರಿಸ್ಟೋಫರ್ ವಾಕೆನ್ ಮೊದಲಾದವರು ಅಭಿನಯಿಸಿರುವ ಚಿತ್ರ ಡ್ಯೂನ್: ಪಾರ್ಟ್ ಟು ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ. ಸಾಹಸಮಯ ದೃಶ್ಯಗಳಿಂದಾಗಿಯೇ ಈ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯ ಗಮನ ಸೆಳೆದಿದೆ.


ಅವರ್ ಲಿವಿಂಗ್ ವರ್ಲ್ಡ್

ಜೇಮ್ಸ್ ಹನಿಬೋರ್ನ್ ನಿರ್ದೇಶನದ ಈ ಚಿತ್ರ ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 17ರಂದು ತೆರೆಗೆ ಬರಲಿದೆ. ಪ್ರಮುಖ ಪಾತ್ರಧಾರಿಯಾಗಿ ಕೇಟ್ ಬ್ಲಾಂಚೆಟ್ ಕಾಣಿಸಿಕೊಂಡಿದ್ದು,ಇದರಲ್ಲಿ ಎಮ್ಮಿ ಪ್ರಶಸ್ತಿ ವಿಜೇತ ತಂಡವು ಜೀವಂತ ಜಗತ್ತನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಿಸುವ ಸಾಹಸಗಾಥೆಯನ್ನು ಒಳಗೊಂಡ ಚಿತ್ರವಿದು. ಅತ್ಯಂತ ರೋಮಾಂಚಕ ದೃಶ್ಯಗಳು ಮನ ಸೆಳೆಯುತ್ತದೆ.


ಸೀ ಯು ಇನ್ ಅನೆದರ್ ಲೈಫ್

ಜಾರ್ಜ್ ಸ್ಯಾಂಚೆಜ್-ಕಾಬೆಜುಡೊ, ಬೋರ್ಜಾ ಸೋಲರ್ ನಿರ್ದೇಶನದ ಈ ಚಿತ್ರದಲ್ಲಿ ರಾಬರ್ಟೊ ಗುಟೈರೆಜ್, ಪೋಲ್ ಲೋಪೆಜ್, ತಮಾರಾ ಕ್ಯಾಸೆಲ್ಲಾಸ್, ಕ್ವಿಮ್ ಅವಿಲಾ, ಮೌರಾದ್ ಔವಾನಿ, ಜೈಮ್ ಜಟಾರಿನ್ ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಈ ಚಿತ್ರ ತೆರೆಗೆ ಬರಲಿದೆ. ಮ್ಯಾನುಯೆಲ್ ಜಬೋಯಿಸ್ ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಿರುವ ಈ ಕಿರುಸರಣಿಯು 11M ರೈಲು ಬಾಂಬ್ ದಾಳಿಯ ಹಿನ್ನೆಲೆಯನ್ನು ಹೊಂದಿದೆ.


ದಿ ಗ್ರಿಮ್ಮ್ ವರಿಯೇಷನ್ಸ್

ಯೊಕೊ ಕನೆಮೊರಿ, ಯಸುಹಿರೊ ಅಕಮಾಟ್ಸು, ಜುನಿಚಿರೊ ಹಶಿಗುಚಿ, ಯುಮಿ ಕಾಮಮುರಾ, ಮಸಾಟೊ ಟಕೆಯುಚಿ, ಶಿಂಟಾರೊ ನಕಾಜವಾ ನಿರ್ದೇಶಿಸರುವ ಅನಿಮೇಷನ್ ಚಿತ್ರ ಏಪ್ರಿಲ್ 17ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ತತ್ಸುಹಿಸಾ ಸುಜುಕಿ, ಕೆಂಜಿ ನೊಜಿಮಾ, ಮಿಸಾಟೊ ಫುಕುಯೆನ್ ಧ್ವನಿ ನೀಡಿರುವ ಚಿತ್ರದಲ್ಲಿ ಜಪಾನೀಸ್ ಮೂಲ ನೆಟ್ ಅನಿಮೇಷನ್ (ONA) ಸಂಕಲನ ಸರಣಿಯು ಸಹೋದರರಾದ ಜಾಕೋಬ್ ಮತ್ತು ವಿಲ್‌ಹೆಲ್ಮ್ ಮತ್ತು ಅವರ ಕಿರಿಯ ಸಹೋದರಿ, ಮುಗ್ಧ ಮತ್ತು ಕುತೂಹಲಕಾರಿ ಚಾರ್ಲೆಟ್ ಸುತ್ತ ಸುತ್ತುತ್ತದೆ.


ದಿ ಸೀಕ್ರೆಟ್ ಸ್ಕೋರ್

ಜುವಾನ್ ಕಾರ್ಲೋಸ್ ಡಿ ಲಾಕಾ ನಿರ್ದೇಶಿಸಿದ ಈ ಚಿತ್ರದಲ್ಲಿ ವಾಲ್ ಡೊರಾಂಟೆಸ್, ಜುವಾನ್ಮಾ ಪಿಯಾನೋ, ಜೋಸ್ ಪೆರಾಲ್ಟಾ, ಡೇನಿಯಲ್ ಅಬ್ರೆಗೊ, ಮೊನಿಕಾ ಪ್ಲೆಹ್ನ್, ಡಿಯಾಗೋ ಸ್ಯಾಂಡೋವಲ್, ಪಾವೊಲಾ ಗೊಮೆಜ್, ಮಿಚೆಲ್ ಅಲ್ಮಾಗುರ್, ಸೀಸರ್ ಅಕೋಸ್ಟಾ, ಡೇವಿಡ್ ಅಂಗುಲೋ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಏಪ್ರಿಲ್ 17ರಂದು ಚಿತ್ರ ತೆರೆಗೆ ಬರಲಿದೆ.


ಸುಗಾ: ಅಗಸ್ಟ್ ಡಿ ಟೂರ್ ಡಿ-ಡೇ ದಿ ಮೂವಿ

ಜುನ್-ಸೂ ಪಾರ್ಕ್ ನಿರ್ದೇಶನದ ಸುಗಾ, ಜಿಮಿನ್, ಜಂಗ್‌ಕುಕ್ ಅಭಿನಯಿಸಿರುವ ಈ ಚಿತ್ರ ಏಪ್ರಿಲ್ 18ರಂದು ಚಿತ್ರ ಮಂದಿರಗಳಲ್ಲಿ ತೆರೆಗೆ ಬರಲಿದೆ. ಎನ್‌ಕೋರ್ ಸಂಗೀತ ಕಛೇರಿಗಾಗಿ ಪ್ರಪಂಚದಾದ್ಯಂತ ಪ್ರಯಾಣಿಸುವ ತಂಡದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.


ಆರ್ಟಿಕಲ್ 370

ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಯಾಮಿ ಗೌತಮ್, ಪ್ರಿಯಾಮಣಿ, ಸ್ಕಂದ ಠಾಕೂರ್, ಅಶ್ವಿನಿ ಕೌಲ್, ವೈಭವ್ ತತ್ವವಾದಿ, ಅರುಣ್ ಗೋವಿಲ್, ಕಿರಣ್ ಕರ್ಮಾರ್ಕರ್ ಅಭಿನಯದ ಚಿತ್ರ ಜಿಯೋ ಸಿನಿಮಾದಲ್ಲಿ ಏಪ್ರಿಲ್ 19ರಂದು ತೆರೆ ಕಾಣಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮೇಲೆ ಚಿತ್ರ ಕೇಂದ್ರೀಕರಿಸಿದೆ. ಈಗಾಗಲೇ ಈ ಚಿತ್ರ ತೆರೆಗೆ ಬಂದಿದ್ದು, ನೋಡಲಾಗದೇ ಇದ್ದರೆ ಈ ವಾರ ಓಟಿಟಿಯಲ್ಲಿ ಕಾಣಬಹುದು.


ಚೀಫ್ ಡಿಟೆಕ್ಟಿವ್ 1958

ಕಿಮ್ ಸಿಯೋಂಗ್-ಹೂನ್ ನಿರ್ದೇಶನದ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಲೀ ಜೆ-ಹೂನ್, ಲೀ ಡಾಂಗ್-ಹ್ವಿ, ಚೋಯ್ ವೂ-ಸಂಗ್, ಯೂನ್ ಹ್ಯುನ್-ಸೂ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಈ ಚಿತ್ರ ಏಪ್ರಿಲ್ 19ರಂದು ತೆರೆ ಕಾಣಲಿದೆ. ಚೀಫ್ ಇನ್ಸ್‌ಪೆಕ್ಟರ್ (1971) ಸರಣಿಯ ಪೂರ್ವಭಾವಿ ಕಥೆಯನ್ನು ಅಂದರೆ 1950 ರಿಂದ 1960 ರ ದಶಕದ ಕಥೆಯನ್ನು ಇದು ಒಳಗೊಂಡಿದೆ.


ಡ್ರೀಮ್ ಸಿನಾರಿಯೋ

ಕ್ರಿಸ್ಟೋಫರ್ ಬೋರ್ಗ್ಲಿ ನಿರ್ದೇಶನದ ಈ ಚಿತ್ರದಲ್ಲಿ ನಿಕೋಲಸ್ ಕೇಜ್, ಜೂಲಿಯಾನ್ನೆ ನಿಕೋಲ್ಸನ್, ಮೈಕೆಲ್ ಸೆರಾ, ಟಿಮ್ ಮೆಡೋಸ್, ಡೈಲನ್ ಗೆಲುಲಾ, ಡೈಲನ್ ಬೇಕರ್ ಮುಖ್ಯ ಭೂಮಿಕಾಯಲ್ಲಿ ಕಾಣಿಸಿಕೊಂಡಿದ್ದಾರೆ. ಲಯನ್ಸ್‌ಗೇಟ್ ಪ್ಲೇ ನಲ್ಲಿ ಏಪ್ರಿಲ್ 19ರಂದು ಪ್ರದರ್ಶನ ಕಾಣಲಿದೆ.


ರೆಬೆಲ್ ಮೂನ್- ಪಾರ್ಟ್ ಟು: ದಿ ಸ್ಕ್ಯಾರ್ಗಿವೆರ್

ಝಾಕ್ ಸ್ನೈಡರ್ ನಿರ್ದೇಶನದ ಈ ಚಿತ್ರದಲ್ಲಿ ಸೋಫಿಯಾ ಬೌಟೆಲ್ಲಾ, ಚಾರ್ಲಿ ಹುನ್ನಮ್, ಮೈಕೆಲ್ ಹುಯಿಸ್ಮನ್, ಜಿಮನ್ ಹೌನ್ಸೌ, ಡೂನಾ ಬೇ, ರೇ ಫಿಶರ್, ಕ್ಲಿಯೋಪಾತ್ರ ಕೋಲ್ಮನ್, ಜೆನಾ ಮ್ಯಾಲೋನ್, ಫ್ರಾ ಫೀ, ಎಡ್ ಸ್ಕ್ರೇನ್, ಆಂಥೋನಿ ಹಾಪ್ಕಿನ್ಸ್ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19 ರಂದು ನೆಟ್‌ಫ್ಲಿಕ್ಸ್ ಚಿತ್ರ ತೆರೆ ಕಾಣಲಿದೆ.


ಸೀರೆನ್

ಆಂಟೋನಿ ಭಾಗ್ಯರ ನಿರ್ದೇಶನದ ಈ ಚಿತ್ರದಲ್ಲಿ ಜಯಂ ರವಿ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್, ಯೋಗಿ ಬಾಬು ಮತ್ತು ಸಮುದ್ರಕನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. Disney+ Hotstar ನಲ್ಲಿ ಏಪ್ರಿಲ್ 19ರಂದು ಚಿತ್ರ ತೆರೆ ಕಾಣಲಿದೆ. ಆಕ್ಷನ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಇದೊಂದು ಒಳ್ಳೆಯ ಸಿನೆಮಾ.


ದಿ ಟೂರಿಸ್ಟ್ : ಸೀಸನ್ 2

ಕ್ರಿಸ್ ಸ್ವೀನಿ ನಿರ್ದೇಶನದ ಈ ಚಿತ್ರದಲ್ಲಿ ಜೇಮೀ ಡೋರ್ನಾನ್, ಡೇನಿಯಲ್ ಮ್ಯಾಕ್ಡೊನಾಲ್ಡ್, ಓಲ್ವೆನ್ ಫೌರೆ, ಗ್ರೆಗ್ ಲಾರ್ಸೆನ್, ವಿಕ್ಟೋರಿಯಾ ಹರಾಲಾಬಿಡೌ, ಕಾನರ್ ಮ್ಯಾಕ್‌ನೀಲ್, ಮಾರ್ಕ್ ಮೆಕೆನ್ನಾ, ನೆಸ್ಸಾ ಮ್ಯಾಥ್ಯೂಸ್, ಡೈರ್ಮೇಡ್ ಮುರ್ತಾಗ್, ಫ್ರಾನ್ಸಿಸ್ ಮ್ಯಾಗೀ ಮುಖ್ಯ ಪಾತ್ರಧಾರಿಗಳು. ಏಪ್ರಿಲ್ 19 ರಂದು ಲಯನ್ಸ್‌ಗೇಟ್ ಪ್ಲೇ ನಲ್ಲಿ ಈ ಚಿತ್ರ ತೆರೆ ಕಾಣಲಿದೆ.


ಎನಿ ಒನ್ ಬಟ್ ಯು

ವಿಲ್ ಗ್ಲುಕ್ ನಿರ್ದೇಶನದ ಈ ಚಿತ್ರದಲ್ಲಿ ಸಿಡ್ನಿ ಸ್ವೀನಿ, ಗ್ಲೆನ್ ಪೊವೆಲ್, ಅಲೆಕ್ಸಾಂಡ್ರಾ ಶಿಪ್, ಗಾಟಾ, ಹ್ಯಾಡ್ಲಿ ರಾಬಿನ್ಸನ್, ಮಿಚೆಲ್ ಹರ್ಡ್, ಡರ್ಮಟ್ ಮುಲ್ರೋನಿ, ಡ್ಯಾರೆನ್ ಬಾರ್ನೆಟ್ ಮತ್ತು ರಾಚೆಲ್ ಗ್ರಿಫಿತ್ಸ್. ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಏಪ್ರಿಲ್ 19ರಂದು ಈ ಚಿತ್ರ ತೆರೆ ಕಾಣಲಿದೆ.


ಲವ್ ಸೆಕ್ಸ್ ಔರ್ ಧೋಖಾ 2

ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರದಲ್ಲಿ ನಿಮೃತ್ ಕೌರ್ ಅಹ್ಲುವಾಲಿಯಾ, ಅನುಪಮ್ ಜೋರ್ದಾರ್, ರೊಸಾನಾ ಎಲ್ಸಾ ಸ್ಕುಗಿಯಾ, ಉರ್ಫಿ ಜಾವೇದ್, ಅನು ಮಲಿಕ್ ಮುಖ್ಯ ಪಾತ್ರಧಾರಿಗಳಾಗಿದ್ದರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಪ್ರೀತಿ ಹೇಗಿರುತ್ತದೆ ಎನ್ನುವುದನ್ನು ಈ ಚಿತ್ರ ವಿವರಿಸುತ್ತದೆ.


ಸಿವಿಲ್ ವಾರ್

ಅಲೆಕ್ಸ್ ಗಾರ್ಲ್ಯಾಂಡ್ ನಿರ್ದೇಶನ ನಿರ್ದೇಶನದ ಕರ್ಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್, ನಿಕ್ ಆಫರ್ಮನ್ ಅವರು ಅಭಿನಯಿಸಿರುವ ಚಿತ್ರ ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಿಲಿಟರಿ-ಎಂಬೆಡೆಡ್ ಪತ್ರಕರ್ತರ ತಂಡವು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವ ಎರಡನೇ ಅಮೇರಿಕನ್ ಅಂತರ್ಯುದ್ಧದ ಸಮಯದಲ್ಲಿ ಪ್ರಯಾಣಿಸುವ ಕಥೆಯನ್ನು ಇದು ಒಳಗೊಂಡಿದೆ.


ದೋ ಔರ್ ದೋ ಪ್ಯಾರ್

ಶಿರ್ಷಾ ಗುಹಾ ಠಾಕುರ್ತಾ ಅವರ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿ’ಕ್ರೂಜ್, ಸೆಂಧಿಲ್ ರಾಮಮೂರ್ತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 19ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 2017 ರ ರೊಮ್ಯಾಂಟಿಕ್ ಕಾಮಿಡಿ ದಿ ಲವರ್ಸ್‌ನ ಅಧಿಕೃತ ರೂಪಾಂತರ ವಾದ ಈ ಚಿತ್ರದಲ್ಲಿ ದಂಪತಿ ದೂರವಾಗಿ ಮತ್ತೆ ತಮ್ಮ ಹೊಸ ಸಂಗಾತಿಗಾಗಿ ಹುಡುಕುವ ಕಥೆಯನ್ನು ಇದು ಒಳಗೊಂಡಿದೆ.

Continue Reading

Latest

Movie web series: ಆ್ಯಕ್ಷನ್‌, ಥ್ರಿಲರ್, ಹಾರರ್: ವಾರಾಂತ್ಯಕ್ಕೆ ಬರಲಿವೆ ಬಹು ನಿರೀಕ್ಷಿತ ಚಿತ್ರಗಳು!

Movie, web series: ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

VISTARANEWS.COM


on

By

Movie, web series
Koo

ಬೆಂಗಳೂರು: ಹಬ್ಬದ ವೇಳೆಗೆ ಹೊಸ ಚಿತ್ರ ತೆರೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿ ಯುಗಾದಿ (yugad), ಈದ್ ಮಿಲಾದ್ (eid-millad) ಹಬ್ಬ ಬೇಸರ ಮೂಡಿಸಿತ್ತು. ಯಾಕೆಂದರೆ ರಜೆಯ ಮೂಡ್ ನಲ್ಲಿದ್ದವರಿಗೆ ಯಾವುದೇ ದೊಡ್ಡ ಸಿನಿಮಾಗಳು (Movie, web series) ತೆರೆ (theater) ಮೇಲೆ ಕಾಣಲಿಲ್ಲ, ಒಟಿಟಿಯಲ್ಲೂ (OTT) ಸಿಗಲಿಲ್ಲ.

ಹಬ್ಬ ಮುಗಿದು ವಾರ ಕೊನೆಯಾಗುವ ಹೊತ್ತಿಗೆ ಮುಂದಿನ ವಾರದಿಂದ ಒಂದೊಂದು ಚಿತ್ರಗಳು ತೆರೆಗೆ ಬರಲು ಕಾತರಿಸುವಂತಿದೆ. ಒಟಿಟಿಯಲ್ಲೂ ಹೊಸಹೊಸ ಸರಣಿಗಳು ಬರುವ ನಿರೀಕ್ಷೆ ಮೂಡಿಸಿದೆ. ಕೆಲವು ವೆಬ್ ಸೀರಿಸ್‌ಗಳು ಈ ವಾರದಲ್ಲೇ ಸರಣಿ ಪ್ರದರ್ಶನಕ್ಕೆ ಚಾಲನೆ ನೀಡಿವೆ. ಗುರುವಾರ, ಶುಕ್ರವಾರ, ಶನಿವಾರ ಒಂದಷ್ಟು ಸಿನಿಮಾ, ಸೀರಿಸ್ ಬಿಡುಗಡೆಯಾಗಲು ಕಾಯುತ್ತಿವೆ.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಎಂದಿನಂತೆ ಕನ್ನಡ ಚಿತ್ರರಂಗದಿಂದ ಯಾವುದೇ ಹೊಸ ಸಿರೀಸ್‌, ಚಿತ್ರಗಳು ತೆರೆಗೆ ಬರುವ ನಿರೀಕ್ಷೆ ಇಲ್ಲ. ಈಗಾಗಲೇ ಥಿಯೇಟರ್‌ಗಳಲ್ಲಿ ‘ಯುವ’, ‘ಬ್ಲಿಂಕ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕೆಲವು ಸಿನಿಮಾಗಳು ಥಿಯೇಟರ್‌ಗೆ ಬಂದಿದ್ದರೂ ಒಟಿಟಿಗೆ ಬಂದಿಲ್ಲ. ಹೀಗಾಗಿ ಮುಂದೆಯಾದರೂ ಒಂದಷ್ಟು ಸಿನಿಮಾಗಳ ಒಟಿಟಿಯಲ್ಲಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕನ್ನಡ ಸಿನಿ ಪ್ರಿಯರು.

ಈ ವಾರದಲ್ಲಿ ಹಲವು ಚಿತ್ರಗಳು ಥಿಯೇಟರ್ ಹಾಗೂ ಓಟಿಟಿಗೆ ಬರಲು ಸಜ್ಜಾಗಿದೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ʻಬಡೇ ಮಿಯಾ ಚೋಟೆ ಮಿಯಾʼ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಜೊತೆಯಾದರೆ ಆ್ಯಕ್ಷನ್ ನೊಂದಿಗೆ ಮನೋರಂಜನೆಗೇನೂ ಕೊರತೆಯಾಗದು. ಇವರಿಬ್ಬರು ಒಟ್ಟಿಗೆ ನಟಿಸಿರುವ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ʻಬಡೇ ಮಿಯಾ ಚೋಟೆ ಮಿಯಾʼ ಈ ವಾರದಲ್ಲಿ ತೆರೆಗೆ ಬರಲಿದೆ. ಮಾನುಷಿ ಚಿಲ್ಲರ್‌, ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʻಮೈದಾನ್’

ಬಹು ನಿರೀಕ್ಷೆ ಮೂಡಿಸಿರುವ ಅಜಯ್ ದೇವಗನ್ ಜತೆಗೆ ಪ್ರಿಯಾಮಣಿ ನಟನೆಯ ‘ಮೈದಾನ್’ ಸಿನಿಮಾ ತೆರೆಗೆ ಬರಲು ಕಾಯುತ್ತಿದೆ. ಬೋನಿ ಕಪೂರ್ ನಿರ್ದೇಶನದ ಈ ಚಿತ್ರ ಖ್ಯಾತ ಭಾರತದ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನು ಆಧರಿಸಿದೆ.

ಪ್ರೇಮಲು

ಹಾಟ್ ಸ್ಟಾರ್ ನಲ್ಲಿ ಸಣ್ಣ ಬಜೆಟ್‌ನ ಮಲಯಾಳಂ ಚಿತ್ರ ಪ್ರೇಮಲು ತೆರೆಗೆ ಬರಲಿದೆ. ಮಲಯಾಳಂ ಹಾಗೂ ತೆಲುಗಿನಲ್ಲಿ ಡಬ್ ಆಗಿ ಹಿಟ್ ಆಗಿದ್ದ ಈ ಚಿತ್ರದ ತೆಲುಗು ಚಿತ್ರ ಈಗಾಗಲೇ ಒಟಿಟಿಯಲ್ಲಿದೆ. ಏಪ್ರಿಲ್ 12ರಂದು ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ನೆಸ್ಲೇನ್ ಕೆ ಗೂಫರ್ ಮತ್ತು ಮಮಿತಾ ಬೈಜು ನಾಯಕಿಯರಾಗಿ ನಟಿಸಿರುವ ಪ್ರೇಮಲು ಚಿತ್ರವನ್ನು ಗಿರೀಶ್ ಎಡಿ ನಿರ್ದೇಶಿಸಿದ್ದಾರೆ.

ಕರುಂಗಾಪಿಯಂ

ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡ ಕಾಜಲ್ ಅಗರ್‌ವಾಲ್ ಹಾಗೂ ರೆಗಿಮಾ ಕಸೆಂದ್ರಾ ನಟನೆಯ ‘ಕರುಂಗಾಪಿಯಂ’ ಸಿನಿಮಾ ತೆಲುಗಿಗೂ ಡಬ್ ಆಗಿ ಒಟಿಟಿಯಲ್ಲಿ ತೆರೆಕಂಡಿದೆ.


ಅಮೇಜಾನ್ ಪ್ರೈಂ

ಈ ಬಾರಿ ಅಮೇಜಾನ್ ಪ್ರೈಂ ನಲ್ಲಿ ಏಪ್ರಿಲ್ 1ರಿಂದ ಹಾಲಿವುಡ್ ಸಿರೀಸ್ ಫಾಲ್ ಔಟ್, ಏಪ್ರಿಲ್ 9ರಿಂದ ಹಾರರ್ ಸಿನೆಮಾ ದಿ ಎಕ್ಸಾರ್ಸಿಸ್ಟ್: ಬಿಲಿವರ್, ಏಪ್ರಿಲ್ 8 ಅನ್‌ಫರ್ಗಟನ್ ಸೀಸನ್-5 ಸರಣಿ, ಏಪ್ರಿಲ್ 12ರಿಂದ ಎನ್‌ಡಬ್ಲೂಎಸ್‌ಎಲ್ -ಒರಿಜಿನಲ್ ಸೀರಿಸ್ ತೆರೆಕಾಣುತ್ತಿದೆ.


ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ನಲ್ಲಿಏಪ್ರಿಲ್ 8ರಿಂದ ಸ್ಪಿರಿಟ್ ರೇಂಜರ್ಸ್-ಸೀಸನ್-3(ಆನಿಮೇಟೆಡ್ ಸೀರಿಸ್), ಏಪ್ರಿಲ್ 10ರಿಂದ ದಿ ಹೈಜಾಕಿಂಗ್ ಆಫ್ ಫ್ಲೈಟ್ 601(ವೆಬ್ ಸೀರಿಸ್), ಅನ್‌ಲಾಕ್ಡ್: ಎ ಜೈಲ್ ಎಕ್ಸ್‌ಪೆರಿಮೆಂಟ್(ಡಾಕ್ಯೂ ಸೀರಿಸ್), ಜೆನ್ನಿಫರ್ ವಾಟ್ ಡಿಡ್(ಕ್ರೈಂ ಡಾಕ್ಯುಮೆಂಟರಿ), ಆಂತ್ರಾಸೈಟ್(ಫ್ರೆಂಚ್ ವೆಬ್ ಸೀರಿಸ್), ಏಪ್ರಿಲ್ 11ರಿಂದ ಮಿಡ್ ಸಮ್ಮರ್ ನೈಟ್- ಸೀಸನ್-1(ನಾರ್ವೆ ಥ್ರಿಲ್ಲರ್ ಸೀರಿಸ್), ಯಾಜ್ ದಿ ಕ್ರೋ ಫೈಲ್ಸ್- ಸೀಸನ್-3(ಟರ್ಕಿಸ್ ವೆಬ್ ಸೀರಿಸ್) , ಹಾರ್ಟ್‌ಬ್ರೇಕ್ ಹೈ- ಸೀಸನ್-2 (ಟೀನ್ ಬೆವ್ ಸೀರಿಸ್), ಏಪ್ರಿಲ್ 12ರಿಂದ ಸ್ಟೋಲೆನ್(ಸ್ವಿಡಿಶ್ ಸಿನಿಮಾ), ಅಮರ್ ಸಿಂಗ್ ಚಮ್ಕಿಲಾ(ಹಿಂದಿ ಸಿನಿಮಾ) ತೆರೆಯಲ್ಲಿ ಕಾಣಿಸಲಿದೆ. ಜೀ-5ನಲ್ಲಿ ಏಪ್ರಿಲ್ 12ರಿಂದ ʻಗಾಮಿʼ (ತೆಲುಗು ಸಿನಿಮಾ) ತೆರೆಗೆ ಬರಲಿದೆ.

Continue Reading
Advertisement
Unblock A Kitchen Sink
ಲೈಫ್‌ಸ್ಟೈಲ್44 seconds ago

Unblock A Kitchen Sink: ನಿಮ್ಮ ಅಡುಗೆ ಮನೆಯ ಸಿಂಕ್‌ ಆಗಾಗ ಬ್ಲಾಕ್ ಆಗುತ್ತದೆಯೆ? ಇಲ್ಲಿದೆ ಸರಳ ಉಪಾಯ

Mahua Moitra
ದೇಶ1 min ago

Mahua Moitra: ‘ಸೆಕ್ಸ್’‌ ನನ್ನ ಸಾಮರ್ಥ್ಯದ ಗುಟ್ಟು ಎಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ!

Best Airport
ಪ್ರಮುಖ ಸುದ್ದಿ2 mins ago

Best Airport: ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ; ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿದ ದೋಹಾದ ಹಮದ್

IPL 2024
ಕ್ರೀಡೆ4 mins ago

IPL 2024: ಕಾನ್ವೆ ಬದಲಿಗೆ ಚೆನ್ನೈ ತಂಡ ಸೇರ್ಪಡೆಗೊಂಡ ರಿಚರ್ಡ್ ಗ್ಲೀಸನ್

Viral News
ವೈರಲ್ ನ್ಯೂಸ್10 mins ago

Viral News: ಬಿಕಿನಿ ಧರಿಸಿ ಬಸ್‌ ಏರಿದ ಮಹಿಳೆಯಿಂದ ಅಸಭ್ಯ ವರ್ತನೆ: ಬೆಚ್ಚಿಬಿದ್ದ ಪ್ರಯಾಣಿಕರು; ಇಲ್ಲಿದೆ ವಿಡಿಯೊ

Lok sabha election 2024
ದೇಶ48 mins ago

Lok sabha election: 2019ರ ಅವಲೋಕನ; ಗರಿಷ್ಠ- ಕನಿಷ್ಠ ಮತಗಳ ಅಂತರದಿಂದ ಗೆದ್ದವರು

Student Death in Bengaluru
ಬೆಂಗಳೂರು52 mins ago

Student Death: ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

LSG vs CSK
ಕ್ರೀಡೆ1 hour ago

LSG vs CSK: ಗೆಲುವಿನ ಹಳಿ ಏರೀತೇ ಲಕ್ನೋ?; ಚೆನ್ನೈ ಎದುರಾಳಿ

Nestle Company
ಲೈಫ್‌ಸ್ಟೈಲ್2 hours ago

Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Lok Sabha Election 20242 hours ago

Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌