Site icon Vistara News

Parineeti Chopra: ಬೆನ್ನತ್ತಿದ ಫೋಟೋಗ್ರಾಫರ್ಸ್‌ ಮೇಲೆ ಸಿಟ್ಟಾದ ಪರಿಣಿತಿ ಚೋಪ್ರಾ

Parineeti Chopra

#image_title

ಮುಂಬೈ: ಬಾಲಿವುಡ್‌ನ ಫೋಟೋಗ್ರಾಫರ್ಸ್‌ ಎಲ್ಲ ಸೆಲೆಬ್ರಿಟಿಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಸೆಲೆಬ್ರಿಟಿಗಳೂ ಕೂಡ ಅವರಿಗೆ ಫೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡು ಮುಂದೆ ಸಾಗುತ್ತಾರೆ. ಆದರೆ ಕೆಲವೊಮ್ಮೆ ಕಿರಿಕಿರಿ ಎನಿಸಿ, ಅವರನ್ನು ದೂರ ತಳ್ಳಿ ನಡೆದು ಹೋಗುತ್ತಾರೆ. ಭಾನುವಾರದಂದು ನಟಿ ಪರಿಣಿತಿ ಚೋಪ್ರಾ (Parineeti Chopra) ಕೂಡ ಅದೇ ರೀತಿ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಪರಿಣಿತಿ ಅವರು ಬೇರೆಲ್ಲೂ ಕಾಣಿಸಿಕೊಂಡಿಲ್ಲ. ಆದರೆ ನಟಿ ಭಾನುವಾರ ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದನ್ನು ಭಾಗವಹಿಸಿ ಅದರಿಂದ ಹೊರಬಂದ ನಂತರ ಬಾಲಿವುಡ್‌ನ ಫೋಟೋಗ್ರಾಫರ್ಸ್‌ಗೆ ಕಾಣಿಸಿಕೊಂಡಿದ್ದಾರೆ. ಫೋಟೋಗ್ರಾಫರ್‌ಗಳು ಅವರ ಫೋಟೋ ತೆಗೆಯುವುದಕ್ಕೆಂದು ನಟಿಯನ್ನು ಕರೆಯಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video : ಹೂಪ್‌ನೊಂದಿಗೆ ಕೋಕ್‌ ಸ್ಟುಡಿಯೊ ಕನ ಯಾರೀ ಹಾಡಿಗೆ ನೃತ್ಯ; ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ
ಆದರೆ ಇದು ಪರಿಣಿತಿ ಅವರಿಗೆ ಕಿರಿಕಿರಿ ಉಂಟು ಮಾಡಿದೆ. “ಅರೆ ಯಾರ್‌, ಬಸ್‌ ಕರೋ” ಎನ್ನುತ್ತಾ ಹೊರನಡೆದಿದ್ದಾರೆ. ಫೋಟೋಗ್ರಾಫರ್ಸ್‌ ಅವರಿಗೆ ಜಾಗ ಬಿಡದ ಹಿನ್ನೆಲೆ ಅವರಿಗೆ ಬೆನ್ನು ಹಾಕಿ ಸುಮ್ಮನೆ ನಿಂತುಬಿಟ್ಟಿದ್ದಾರೆ. ನಟಿಯ ಸಿಬ್ಬಂದಿ ಮತ್ತು ಪೊಲೀಸರು ನಟಿಗೆ ದಾರಿ ಬಿಡಿಸಿಕೊಟ್ಟ ನಂತರ ನಟಿ ಮುಖವನ್ನು ಮುಚ್ಚಿಕೊಂಡೇ ಕಾರ ಬಳಿ ನಡೆದಿದ್ದಾರೆ.


ಈ ದೃಶ್ಯವನ್ನೂ ಬಾಲಿವುಡ್‌ ಫೋಟೋಗ್ರಾಫರ್‌ಗಳು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ವಿಡಿಯೊಗೆ ಹಲವಾರು ಲೈಕ್‌ ಮತ್ತು ಕಾಮೆಂಟ್‌ಗಳು ಬಂದಿವೆ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿಗೆ ಈ ರೀತಿಯಲ್ಲಿ ಅಡ್ಡಿ ಮಾಡಬಾರದು ಎಂದು ಅನೇಕರು ಫೋಟೋಗ್ರಾಫರ್‌ಗಳಿಗೆ ಕಾಮೆಂಟ್‌ಗಳಲ್ಲೇ ಬುದ್ಧಿ ಹೇಳಿದ್ದಾರೆ ಕೂಡ.

Exit mobile version