Viral Video : ಹೂಪ್‌ನೊಂದಿಗೆ ಕೋಕ್‌ ಸ್ಟುಡಿಯೊ ಕನ ಯಾರೀ ಹಾಡಿಗೆ ನೃತ್ಯ; ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ Vistara News
Connect with us

ವೈರಲ್ ನ್ಯೂಸ್

Viral Video : ಹೂಪ್‌ನೊಂದಿಗೆ ಕೋಕ್‌ ಸ್ಟುಡಿಯೊ ಕನ ಯಾರೀ ಹಾಡಿಗೆ ನೃತ್ಯ; ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ

ಕೋಕ್‌ ಸ್ಟುಡಿಯೋದ ಕನ ಯಾರಿ ಹಾಡಿಗೆ ಯುವತಿಯೊಬ್ಬಳು ಹೂಪ್‌ ನೃತ್ಯ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral Video) ಆಗಿದೆ.

VISTARANEWS.COM


on

viral dance
Koo

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯಗಳ ವಿಡಿಯೊಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಇದೀಗ ಮತ್ತೊಂದು ಹಾಡಿನ ನೃತ್ಯ ಇನ್‌ಸ್ಟಾಗ್ರಾಂನಲ್ಲಿ ಹರಿದಾಡಿದ್ದು, ಭಾರೀ ವೈರಲ್‌ (Viral Video) ಆಗುತ್ತಿದೆ. ಜನರು ಕಣ್ಣು ಮಿಟುಕಿಸದಂತೆ ವಿಡಿಯೊ ನೋಡಲಾರಂಭಿಸಿದ್ದಾರೆ.

ಕೋಕ್‌ ಸ್ಟುಡಿಯೊದ ಕನ ಯಾರೀ ಹಾಡನ್ನು ನೀವು ಕೇಳಿರಬಹುದು. ಸಕತ್‌ ಹಿಟ್‌ ಆಗಿ ಅನೇಕರ ಫೇವರಿಟ್‌ ಲಿಸ್ಟ್‌ ಸೇರಿಕೊಂಡ ಹಾಡದು. ಆ ಹಾಡಿಗೆ ಅನೇಕರು ರೀಲ್ಸ್‌ಗಳನ್ನೂ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಹಾಗೆಯೇ ಯೂಟ್ಯೂಬ್‌ ಶಾರ್ಟ್ಸ್‌ನಲ್ಲೂ ಈ ಹಾಡು ಭಾರೀ ಸದ್ದು ಮಾಡಿದೆ. ಇದೀಗ ಇದೇ ಹಾಡಿಗೆ ಯುವತಿಯೊಬ್ಬಳು ಹೂಪ್‌ ಡ್ಯಾನ್ಸ್‌ ಮಾಡಿದ್ದಾಳೆ.

ಇದನ್ನೂ ಓದಿ: Viral Video: ‘ಕ್ಯಾಂಡಿ’ ಮೇಲೆ ಧೋನಿಗೆ ‘ಕ್ರಷ್’‌, ಇವರು ಆಡುವ ಗೇಮ್‌ ‌ಮೂರೇ ಗಂಟೆಯಲ್ಲಿ 36 ಲಕ್ಷ ಡೌನ್‌ಲೋಡ್‌!
ಈಶ್ನಾ ಕುಟ್ಟಿ ಹೆಸರಿನ ಯುವತಿ ಕನ ಯಾರೀ ಹಾಡಿಗೆ ಹೂಪ್‌ ನೃತ್ಯ ಮಾಡಿದ್ದಾಳೆ. ಹಾಡಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದಷ್ಟೇ ಅಲ್ಲದೆ ಅದಕ್ಕೆ ತಕ್ಕಂತೆ ಹೂಪ್‌ ಅನ್ನೂ ಕುಣಿಸಿದ್ದಾಳೆ ಈ ಬೆಡಗಿ. ಈ ರೀಲ್ಸ್‌ನಲ್ಲಿ ಆಕೆ ಏಪ್ರಿಲ್‌ನಲ್ಲೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ವಿಡಿಯೊ ಈಗಾಗಲೇ 8.8 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಹಾಗೆಯೇ 72 ಸಾವಿರಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.


ಈ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳು ಕೂಡ ಸಾಗರೋಪಾದಿಯಾಗಿ ಹರಿದುಬಂದಿವೆ. “ಅಬ್ಬಬಾ, ಎಂತಹ ಒಳ್ಳೆಯ ಹಾಡು ಮತ್ತು ಒಳ್ಳೆಯ ನೃತ್ಯ”, “ನನ್ನ ಫೇವರಿಟ್‌ ಹಾಡು ಇದು. ಈಗ ಈ ನೃತ್ಯ ನೋಡಿದ ಮೇಲೆ ಹಾಡು ಇನ್ನಷ್ಟು ಇಷ್ಟವಾಗಲಾರಂಭಿಸಿದೆ”, “ಅಬ್ಬಬ್ಬಾ, ಕಣ್ಣು ಮಿಟುಕಿಸಲೂ ಸಾಧ್ಯವಾಗದ ವಿಡಿಯೊ ಇದು” ಎನ್ನುವಂತಹ ಹಲವಾರು ಮೆಚ್ಚುಗೆಯ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಈ ಈಶ್ನಾ ಅವರ ಇನ್ನೂ ಹಲವಾರು ವಿಡಿಯೊಗಳು ಈಗಾಗಲೇ ವೈರಲ್‌ ಆಗಿದ್ದಾವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದ ಇಶ್ ಸೋಧಿ ಅಂಪೈರ್ ಜತೆ ಮಾತನಾಡಿ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ ಬಾಂಗ್ಲಾ ನಾಯಕ ಲಿಟನ್‌ ದಾಸ್‌‌ ಅವರ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

VISTARANEWS.COM


on

Edited by

Hasan Mahmud running out Ish Sodhi at the non-striker's end
Koo

ಢಾಕಾ: ನ್ಯೂಜಿಲ್ಯಾಂಡ್​(NZ vs BAN) ವಿರುದ್ಧದ ತವರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಹೀನಾಯ ಸೋಲು ಕಂಡಿದೆ. ಆದರೆ ಪಂದ್ಯದಲ್ಲಿ ಹಂಗಾಮಿ ನಾಯಕ ಲಿಟನ್‌ ದಾಸ್‌‌(Litton Das) ಅವರು ತೋರಿದ ಕ್ರೀಡಾಸ್ಫೂರ್ತಿಗೆ ಎದುರಾಳಿ ತಂಡದ ಆಟಗಾರರು ಮಾತ್ರವಲ್ಲದೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿವೀಸ್​ ಬ್ಯಾಟಿಂಗ್​ ಸರದಿಯಲ್ಲಿ ಬಾಂಗ್ಲಾ ಬೌಲರ್‌ ಹಸನ್(Hasan Mahmud) 46ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ನಾನ್ ಸ್ಟ್ರೈಕ್​ನಲ್ಲಿದ್ದ ಇಶ್ ಸೋಧಿ(Ish Sodhi) ಬೌಲಿಂಗ್​ ನಡೆಸುವ ಮುನ್ನವೇ ಕ್ರೀಸ್ ತೊರೆದು ಮಂಕಡಿಂಗ್ ರೂಪದಲ್ಲಿ ರನೌಟ್(mankading out) ಆದರು. ಆದರೆ ಅಂಪೈರ್ ಜತೆ ಮಾತನಾಡಿ ಲಿಟ್ಟನ್ ದಾಸ್ ಅವರು ಇಶ್ ಸೋಧಿಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅವರ ಈ ನಡೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಕಡಿಂಗ್ ವೇಳೆ ಸೋಧಿ 17 ರನ್ ಗಳಿಸಿದರು. ಬಳಿಕ 35 ರನ್ ಬಾರಿಸಿದರು. ಇದರಲ್ಲಿ ಮೂರು ಸೊಗಸಾದ ಸಿಕ್ಸರ್​ ಕೂಡ ಸಿಡಿಯಿತು.

ಸೋಲು ಕಂಡ ಬಾಂಗ್ಲಾ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ತಂಡ 49.2 ಓವರ್​ಗಳಲ್ಲಿ 254ರನ್​ಗೆ ಆಲೌಟ್​ ಆಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ಸತತ ವಿಕೆಟ್​ ಕಳೆದುಕೊಂಡು 41.1 ಓವರ್​ಗಳಲ್ಲಿ ಕೇವಲ 168 ರನ್​ಗೆ ಸರ್ವಪತನ ಕಂಡಿತು. ಕಿವೀಸ್​ 86 ರನ್​ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಕಿವೀಸ್​ ತಂಡ 1-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಸೆಪ್ಟೆಂಬರ್​ 26ರಂದು ನಡೆಯಲಿದೆ.

ಏನಿದು ಮಂಕಡಿಂಗ್​ ಔಟ್​

ಕ್ರಿಕೆಟ್‌ ಆಟದಲ್ಲಿ ಬೌಲರ್‌ ಒಬ್ಬ ಚೆಂಡನ್ನು ಬ್ಯಾಟರ್​ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟರ್​ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್‌ ಸ್ಟ್ರೈಕ್​ನಲ್ಲಿರುವ ಬ್ಯಾಟರ್​ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್‌ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್‌ ಬೌಲಿಂಗ್‌ ಮಾಡುತ್ತಿರುವ ಬೌಲರ್​ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.

ಇದನ್ನೂ ಓದಿ Litton Das: ಬಾಂಗ್ಲಾ ತಂಡಕ್ಕೆ ಲಿಟ್ಟನ್​ ದಾಸ್​ ನಾಯಕ

ಮಂಕಡಿಂಗ್ ಹೆಸರು ಬರಲು ಕಾರಣವೇನು?

1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್‌ ವೀನೂ ಮಂಕಡ್‌ ಅವರು ಬಿಲ್‌ ಬ್ರೌನ್‌ ಅವರನ್ನು ನಾನ್‌ ಸ್ಟ್ರೈಕ್‌ ಭಾಗದಲ್ಲಿ ರನೌಟ್‌ ಮಾಡಿದ್ದರು. ಆ ಬಳಿಕ ಕ್ರಿಕೆಟ್‌ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್‌’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.

Continue Reading

ಕ್ರಿಕೆಟ್

‘ಎಂದಿಗೂ ಬದಲಾಗಬೇಡ’ ನವೀನ್ ಉಲ್ ಹಕ್​ಗೆ ಜನ್ಮದಿನದ ಶುಭಾಶಯ ಕೋರಿದ ಗಂಭೀರ್; ಹಾರೈಕೆ ಹಿಂದಿದೆ ನರಿ ಬುದ್ಧಿ

ಐಪಿಎಲ್​ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್​ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಗೌತಮ್​ ಗಂಭೀರ್ ಬರೆದುಕೊಂಡಿದ್ದಾರೆ.

VISTARANEWS.COM


on

Edited by

naveen ul haq and gautam gambhir
Koo

ಮುಂಬಯಿ: ವಿರಾಟ್​ ಕೊಹ್ಲಿಯ(virat kohli) ಬದ್ಧ ಎದುರಾಳಿ ಅಫಘಾನಿಸ್ತಾನ ತಂಡದ ವೇಗಿ ನವೀನ್ ಉಲ್ ಹಕ್ (Naveen-ul-Haq) 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅನೇಕರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಗೌತಮ್​ ಗಂಭೀರ್(Gautam Gambhir)​ ಅವರ ಹಾರೈಕೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.

ವಿರಾಟ್​ ಕೊಹ್ಲಿ ಅವರನ್ನು ಒಂದಲ್ಲ ಒಂದು ವಿಚಾರವಾಗಿ ಕೆಣಕುವ ಮತ್ತು ಅಪಹಾಸ್ಯ ಮಾಡುವ ಗಂಭೀರ್​ ಈ ಬಾರಿಯೂ ಇದೇ ಕೀಳುಮಟ್ಟದ ಪ್ರವೃತ್ತಿಯನ್ನು ತೋರಿದ್ದಾರೆ. ಐಪಿಎಲ್​ನ ಲಕ್ನೋ ತಂಡದ ಜೆರ್ಸಿಯಲ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ನವೀನ್ ಉಲ್ ಹಕ್​ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ನೀನು ಯಾವುದೇ ಕಾರಣಕ್ಕೂ, ಬದಲಾಗಬೇಡ, ನಿನ್ನಂತಹ ವ್ಯಕ್ತಿಗಳು ಸಿಗುವುದು ತುಂಬಾ ಕಡಿಮೆ” ಎಂದು ಹರಸಿ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ನವೀನ್ ಉಲ್ ಹಕ್ ವಿಚಾರದಲ್ಲಿ ಕೊಹ್ಲಿ ಜತೆ ಕಿರಿಕ್​

ಈ ಬಾರಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಮೆಂಟರ್​ ಆಗಿ ಕಾರ್ಯನಿರ್ವಹಿಸಿದ್ದ ಗೌತಮ್​ ಗಂಭಿರ್​ ಅವರು ನವೀನ್​ ಉಲ್​ ಹಕ್​ ವಿಚಾರದಲ್ಲಿ ಕೊಹ್ಲಿ(virat kohli and naveen ul haq) ಜತೆ ಮೈದಾನದಲ್ಲೇ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತದದ ವರೆಗೂ ಹೋಗಿದ್ದರು. ಅತ್ತ ನವೀನ್​ ಕೂಡ ಕೊಹ್ಲಿಯನ್ನು ಪದೇಪದೆ ಕೆಣಕಿ ಅಗೌರವದಿಂದ ನಡೆದುಕೊಂಡಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಗಂಭೀರ್​ ಮತ್ತು ನವೀನ್​ ಅವರನ್ನು ಕಂಡಾಗಲೆಲ್ಲಾ ಕೊಹ್ಲಿಯ ಹೆಸರನ್ನು ಜೋರಾಗಿ ಕರೆದು ಕೆಣಕುತ್ತಿದ್ದಾರೆ.

ಏಷ್ಯಾಕಪ್​ನಲ್ಲಿಯೂ ಕೊಹ್ಲಿಯನ್ನು ಕೆಣಕಿದ್ದ ಗಂಭೀರ್​

ಕಳೆದ ವಾರ ಮುಕ್ತಾಯ ಕಂಡ ಏಷ್ಯಾಕಪ್​ ಟೂರ್ನಿಯಲ್ಲಿಯೂ ಕೊಹ್ಲಿಯನ್ನು ಗಂಭೀರ್​ ಅಪಹಾಸ್ಯ ಮಾಡಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಕೊಹ್ಲಿ, ಶಾಹೀನ್​ ಅಫ್ರಿದಿ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆದ ವೇಳೆ ಲೈವ್​ ಕಾಮೆಂಟ್ರಿಯಲ್ಲೇ ಟೀಕಿಸಿದ್ದರು. ವಿರಾಟ್​ ಕೊಹ್ಲಿ ಔಟಾಗುತ್ತಿದ್ದಂತೆ “ಈ ಎಸೆತಕ್ಕೆ ಬ್ಯಾಟ್​ ಬೀಸುವ ಅಗತ್ಯವೇ ಇರಲಿಲ್ಲ. ವಿಕೆಟ್​ನ ಮುಂದೆ ಕೂಡ ಈ ಚೆಂಡು ಇರಲಿಲ್ಲ. ಸಂಪೂರ್ಣವಾಗಿ ವಿಕೆಟ್​ ನಿಂದ ಚೆಂಡು ಹೊರ ಭಾಗದಲ್ಲಿತ್ತು. ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಶಾಹೀನ್ ಅಫ್ರಿದಿ ಅವರಂತ ಬೌಲರ್​ಗಳ ಮುಂದೆ ಶ್ರೇಷ್ಠ ಬ್ಯಾಟರ್​ ಈ ಎಸೆತಕ್ಕೆ ಮುಂದೆ ಹೋಗಬೇಕೋ ಅಥವಾ ಹಿಂದೆ ಹೋಗಬೇಕೋ ಎಂಬುದನ್ನು ತಿಳಿದಿರಬೇಕು” ಎಂದು ಹೇಳುವ ಮೂಲಕ ಗಂಭೀರ್​ ಅವರು ಕೊಹ್ಲಿಯನ್ನು ಟೀಕಿಸಿ ವ್ಯಂಗ್ಯವಾಡಿದ್ದರು.

ಇದನ್ನೂ ಓದಿ IND vs PAK : ಭಾರತದ ಕ್ರಿಕೆಟಿಗರು ಪಾಕಿಸ್ತಾನದವರ ಕೈ ಕುಲುಕುವುದು ಸರಿಯಲ್ಲ; ಗಂಭೀರ್​ ಹೀಗೆ ಹೇಳಿದ್ಯಾಕೆ?

ಇದಾದ ಬಳಿಕ ಪಾಕ್​ ವಿರುದ್ಧದ ಸೂಪರ್​ 4 ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದನ್ನು ಗಂಭೀರ್​ ಟೀಕಿಸಿದ್ದರು. 94 ಎಸೆತದಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅಜೇಯ 122 ರನ್​ ಗಳಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್​ ಪೂರ್ತಿಗೊಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಈ ಎಲ್ಲ ಕಾರಣದಿಂದ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಆದರೆ ಗಂಭೀರ್​ ಈ ಪ್ರಶಸ್ತಿಗೆ ಕೊಹ್ಲಿ ಅರ್ಹನಲ್ಲ ಎಂದು ಹೇಳಿದ್ದರು.

Continue Reading

ಕ್ರಿಕೆಟ್

Sara vs Gill: ಶುಭಮನ್​ ಗಿಲ್​ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್

ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ‘ವೆಲ್‌ ಪ್ಲೇ​​ ಶುಭಮನ್​ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ.

VISTARANEWS.COM


on

Edited by

Shubman Gill and Sara Tendulkar
Koo

ಮುಂಬಯಿ: ಸಚಿನ್​ ತೆಂಡೂಲ್ಕರ್​(sachin tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಟೀಮ್​ ಇಂಡಿಯಾದ ಸ್ಟಾರ್​ ಯುವ ಆಟಗಾರ ಶುಭಮನ್​ ಗಿಲ್​ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship)​ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೇ ಕಾರಣಕ್ಕೆ ಇವರಿಬ್ಬರನ್ನು ನೆಟ್ಟಿಗರು ಹಲವು ಬಾರಿ ಟ್ರೋಲ್​ ಕೂಡ ಮಾಡಿದ್ದಾರೆ. ಆದರೆ ಗಿಲ್​ ಮತ್ತು ಸಾರಾ ತಮ್ಮ ಪ್ರೀತಿ ಮತ್ತು ಡೇಟಿಂಗ್​ ವಿಚಾರವಾಗಿ ಇದುವರೆಗೂ ಎಲ್ಲಯೂ ತುಟಿಬಿಚ್ಚಿಲ್ಲ. ಎಷ್ಟೇ ರೂಮರ್ಸ್​ ಹಬ್ಬಿದರೂ ತಮ್ಮ ಪಾಡಿಗೆ ತಾವು ಸುಮ್ಮನಿದ್ದರು. ಇದೀಗ ಸಾರಾ ಅವರು ಮಾಡಿರುವ ಟ್ವೀಟ್​ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ.

“ವೆಲ್‌ ಪ್ಲೇ​ ಶುಭಮನ್​ ಗಿಲ್”

ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಶುಭಮನ್​ ಗಿಲ್​ 63 ಎಸೆತ ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 74 ರನ್​ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಪ್ರದರ್ಶನಕ್ಕೆ ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ‘ವೆಲ್‌ ಪ್ಲೇ​​ ಶುಭಮನ್​ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದಾರೆ. ಇದು ನೆಟ್ಟಿಗರಿಗೆ ಆಹಾರವಾಗಿದೆ. ಇಬರಿಬ್ಬರ ಮಧ್ಯೆ ಪ್ರೇಮಾಂಕುರ ಇರುವುದು ಪಕ್ಕಾ ಎಂದಿದ್ದಾರೆ.

ಶುಭ​ಮನ್​ ಗಿಲ್ ಅವರು ಆಡುವ ವೇಳೆ​ ಹಲವು ಬಾರಿ ಪ್ರೇಕ್ಷಕರು ಸಾರಾ, ಸಾರಾ… ಎಂದು ಕೂಗಿದ್ದರು. ಈ ಸಾರಾ ಯಾರೆಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದರೂ ಇದಕ್ಕೆ ಯಾವುದೇ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಕೆಲವರು ಗಿಲ್ ಸಚಿನ್​ ತೆಂಡೂಲ್ಕರ್​ ಪುತ್ರಿ ಜತೆ ಅಂದುಕೊಂಡಿದ್ದರೆ, ಇನ್ನೂ ಕೆಲವರು ನಟಿ ಸಾರಾ ಅಲಿ ಖಾನ್​ ಎಂದುಕೊಂಡಿದ್ದರು. ಆದರೆ ಈಗ ನೆಟ್ಟಿಗರಿಗೆ ಒಂದು ಹಂತದ ಕ್ಲ್ಯಾರಿಟಿ ಸಿಕ್ಕಿದ್ದು ಸಚಿನ್​ ಪುತ್ರಿ ಸಾರಾ ಅವರರೇ ಗಿಲ್​ ಪ್ರೇಯಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರ

ಭಾರತಕ್ಕೆ 5 ವಿಕೆಟ್​ ಜಯ

ಇಲ್ಲಿನ ಐಎಸ್​ ಬಿಂದ್ರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್​ಗಳಲ್ಲಿ 276 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ. 48.4 ಓವರ್​ಗಳಲ್ಲಿ. 5 ವಿಕೆಟ್​ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್​ನಲ್ಲಿ 51 ರನ್​ಗಳಿಗೆ 5 ವಿಕೆಟ್​ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್​ಮನ್​ ಗಿಲ್​ (74) ಹಾಗೂ ಋತುರಾಜ್​ ಗಾಯಕ್ವಾಡ್​ (71), ಸೂರ್ಯಕುಮಾರ್​ ಯಾದವ್​ (50), ಮತ್ತು ಕೆ. ಎಲ್​ ರಾಹುಲ್​ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.

Continue Reading

ದೇಶ

Viral Video: ಗಣೇಶ ಪೆಂಡಾಲ್​​ನಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಂತೆ ಹಾರಿ ಹೋಯ್ತು ಯುವಕನ ಪ್ರಾಣ

Viral Video: ಎಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಈ ಸಡಗರದ ಮಧ್ಯೆಯೂ ಅಲ್ಲಲ್ಲಿ ದುರಂತಗಳೂ ನಡೆದಿವೆ. ಗಣೇಶ ಚಪ್ಪರದಲ್ಲಿ ನೃತ್ಯ ಮಾಡುತ್ತಿದ್ದ 26ರ ಹರೆಯದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಸದ್ಯ ವೈರಲ್‌ ಆಗುತ್ತಿದೆ.

VISTARANEWS.COM


on

Edited by

heart attack
Koo

ಹೈದರಾಬಾದ್‌: ಎಲ್ಲೆಡೆ ಅದ್ಧೂರಿ ಗಣೇಶ ಚತುರ್ಥಿ ಆಚರಿಸಲಾಗಿದೆ. ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ನೆರವೇರಿಸಲಾಗಿದೆ. ಹಲವೆಡೆ ವಿಜೃಂಭಣೆಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯ ವಿಸರ್ಜನೆಯೂ ಆಗಿದೆ. ಈ ಮಧ್ಯೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಮಂಟಪದಲ್ಲಿ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟಿದ್ದು, ವಿಡಿಯೊ ವೈರಲ್‌ ಆಗಿದೆ. ಈ ಘಟನೆ ಆಂಧ್ರಪ್ರದೇಶದ ಧರ್ಮಾವರಂನಲ್ಲಿ ನಡೆದಿದೆ.

ಮಾರುತಿ ನಗರದಲ್ಲಿ ಸೆಪ್ಟಂಬರ್‌ 20ರಂದು ಈ ಘಟನೆ ನಡೆದಿದ್ದು, ಪ್ರಸಾದ್‌ ಎನ್ನುವ ಯುವಕ ಗಣೇಶನ ಮೂರ್ತಿ ಮುಂದೆ ನೃತ್ಯ ಮಾಡುತ್ತಿದ್ದಂತೆ ಕುಸಿದು ಬಿದ್ದಿದ್ದ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲೇ ಅವನು ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಸಾಲು ಸಾಲು ದುರಂತ

ಇದೇ ರೀತಿಯ ದುರಂತ ಒಡಿಶಾದಲ್ಲೂ ವರದಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್‌ ಶಾಕ್‌ನಿಂದ ಇಬ್ಬರು ಅಸುನೀಗಿದ್ದಾರೆ. ಗಣಪತಿ ಮೂರ್ತಿ ವಿಸರ್ಜನೆಯ ಮೆರವಣಿಗೆಯಲ್ಲಿ ಅವರು ಭಾಗವಹಿಸಿದ್ದರು. ಕಟಕ್‌ನ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಲಾರಿಯಲ್ಲಿ ಗಣೇಶ ಮೂರ್ತಿಯನ್ನು ತರುವ ವೇಳೆ ವಿದ್ಯುತ್‌ ಆಘಾತದಿಂದ ಜೀವ ಕಳೆದುಕೊಂಡಿದ್ದಾನೆ. ಈ ವೇಳೆ ಇತರ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

11 ಕೆವಿ ವಿದ್ಯುತ್‌ ಪ್ರವಹಿಸುತ್ತಿರುವ ವೈರ್‌ ಸ್ಪರ್ಶಿಸಿ ನಾರಜ್‌ ಪ್ರದೇಶದ 3 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಮೂವರ ಪೈಕಿ ರಿಹಾನ್‌ ಭಗ್ವಾನ್‌ ಸಾವೆಲ್‌ ಎನ್ನುವ ವಿದ್ಯಾರ್ಥಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್​ನ ಚಕ್ರದ​ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !

ವೈರಲ್‌ ಆದ ವಿಡಿಯೊದಲ್ಲೇನಿದೆ?

ಆಂಧ್ರ ಪ್ರದೇಶದ ಮಾರುತಿ ನಗರದ ಗಣೇಶ ಚಪ್ಪರದಲ್ಲಿ ಇಬ್ಬರು ಯುವಕರು ನೃತ್ಯ ಮಾಡುತ್ತಿದ್ದರು. ಆ ಪೈಕಿ ಒಬ್ಬಾತ ಕೈಯಲ್ಲಿ ಎಲೆಗಳ ಗೊಂಚಲನ್ನು ಹಿಡಿದು ಹೆಜ್ಜೆ ಹಾಕುತ್ತಿದ್ದ. ಹಾಡಿನ ತಾಳಕ್ಕೆ ತಕ್ಕಂತೆ ಮೈ ಕುಣಿಸುತ್ತಿದ್ದ ಆತ ಚಪ್ಪರದ ಕಂಬದ ಬಳಿಗೆ ಬಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ. ಕೂಡಲೇ ಅಲ್ಲಿದ್ದವರು ಆತನಿಗೆ ಉಪಚಾರ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು 1 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಯುವ ಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ

ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ದಿನೇ ದಿನೇ ಯುವ ಜನರು ಹೃದಯದ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ. ಇದಕ್ಕೆ ಸೂಕ್ತ ಕಾರಣ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಅದರಲ್ಲೂ ಆರೋಗ್ಯವಂತರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಹಲವರ ನಿದ್ದೆಗೆಡಿಸಿದೆ. ಸ್ಯಾಂಡಲ್‌ವುಡ್‌ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ನಟ ಚಿರಂಜೀವಿ ಸರ್ಜಾ, ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Continue Reading
Advertisement
Narendra Modi
ದೇಶ37 mins ago

Narendra Modi : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭದ್ರತೆ ಉಲ್ಲಂಘನೆಗೆ ಯತ್ನಿಸಿದ ವ್ಯಕ್ತಿ ಬಂಧನ

cyclothon in Bangalore
ಬೆಂಗಳೂರು52 mins ago

World Heart Day: ಹೃದಯ ಆರೋಗ್ಯ ಜಾಗೃತಿಗಾಗಿ ಸಾಗರ್ ಆಸ್ಪತ್ರೆಯಿಂದ ‌ಸೈಕ್ಲೋಥಾನ್; 500 ಮಂದಿ ಭಾಗಿ

Hasan Mahmud running out Ish Sodhi at the non-striker's end
ಕ್ರಿಕೆಟ್1 hour ago

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

Narendra modi image
ಕಲೆ/ಸಾಹಿತ್ಯ1 hour ago

Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ

Vistara Top 10 News 2309
ಕರ್ನಾಟಕ1 hour ago

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

Anegondi Vrindavana
ಕರ್ನಾಟಕ1 hour ago

Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Modi Reservation
ದೇಶ2 hours ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್2 hours ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ2 hours ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ2 hours ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ20 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌