Parineeti Chopra: ಬೆನ್ನತ್ತಿದ ಫೋಟೋಗ್ರಾಫರ್ಸ್‌ ಮೇಲೆ ಸಿಟ್ಟಾದ ಪರಿಣಿತಿ ಚೋಪ್ರಾ Vistara News
Connect with us

ಬಾಲಿವುಡ್

Parineeti Chopra: ಬೆನ್ನತ್ತಿದ ಫೋಟೋಗ್ರಾಫರ್ಸ್‌ ಮೇಲೆ ಸಿಟ್ಟಾದ ಪರಿಣಿತಿ ಚೋಪ್ರಾ

ನಟಿ ಪರಿಣಿತಿ ಚೋಪ್ರಾ (Parineeti Chopra) ಅವರು ಬಾಲಿವುಡ್‌ ಫೋಟೋಗ್ರಾಫರ್‌ಗಳಿಗೆ ಫೋಸ್‌ ಕೊಡಲು ಒಪ್ಪದೆಯೇ ಕಾರಿನತ್ತ ನಡೆದಿದ್ದಾರೆ. ಅದರ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

VISTARANEWS.COM


on

Parineeti Chopra
Koo

ಮುಂಬೈ: ಬಾಲಿವುಡ್‌ನ ಫೋಟೋಗ್ರಾಫರ್ಸ್‌ ಎಲ್ಲ ಸೆಲೆಬ್ರಿಟಿಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಸೆಲೆಬ್ರಿಟಿಗಳೂ ಕೂಡ ಅವರಿಗೆ ಫೋಸ್‌ ಕೊಟ್ಟು ಫೋಟೋ ತೆಗೆಸಿಕೊಂಡು ಮುಂದೆ ಸಾಗುತ್ತಾರೆ. ಆದರೆ ಕೆಲವೊಮ್ಮೆ ಕಿರಿಕಿರಿ ಎನಿಸಿ, ಅವರನ್ನು ದೂರ ತಳ್ಳಿ ನಡೆದು ಹೋಗುತ್ತಾರೆ. ಭಾನುವಾರದಂದು ನಟಿ ಪರಿಣಿತಿ ಚೋಪ್ರಾ (Parineeti Chopra) ಕೂಡ ಅದೇ ರೀತಿ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಪರಿಣಿತಿ ಅವರು ಬೇರೆಲ್ಲೂ ಕಾಣಿಸಿಕೊಂಡಿಲ್ಲ. ಆದರೆ ನಟಿ ಭಾನುವಾರ ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದನ್ನು ಭಾಗವಹಿಸಿ ಅದರಿಂದ ಹೊರಬಂದ ನಂತರ ಬಾಲಿವುಡ್‌ನ ಫೋಟೋಗ್ರಾಫರ್ಸ್‌ಗೆ ಕಾಣಿಸಿಕೊಂಡಿದ್ದಾರೆ. ಫೋಟೋಗ್ರಾಫರ್‌ಗಳು ಅವರ ಫೋಟೋ ತೆಗೆಯುವುದಕ್ಕೆಂದು ನಟಿಯನ್ನು ಕರೆಯಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video : ಹೂಪ್‌ನೊಂದಿಗೆ ಕೋಕ್‌ ಸ್ಟುಡಿಯೊ ಕನ ಯಾರೀ ಹಾಡಿಗೆ ನೃತ್ಯ; ಅಬ್ಬಬ್ಬಾ ಎನ್ನುವಂತಿದೆ ಈ ವಿಡಿಯೊ
ಆದರೆ ಇದು ಪರಿಣಿತಿ ಅವರಿಗೆ ಕಿರಿಕಿರಿ ಉಂಟು ಮಾಡಿದೆ. “ಅರೆ ಯಾರ್‌, ಬಸ್‌ ಕರೋ” ಎನ್ನುತ್ತಾ ಹೊರನಡೆದಿದ್ದಾರೆ. ಫೋಟೋಗ್ರಾಫರ್ಸ್‌ ಅವರಿಗೆ ಜಾಗ ಬಿಡದ ಹಿನ್ನೆಲೆ ಅವರಿಗೆ ಬೆನ್ನು ಹಾಕಿ ಸುಮ್ಮನೆ ನಿಂತುಬಿಟ್ಟಿದ್ದಾರೆ. ನಟಿಯ ಸಿಬ್ಬಂದಿ ಮತ್ತು ಪೊಲೀಸರು ನಟಿಗೆ ದಾರಿ ಬಿಡಿಸಿಕೊಟ್ಟ ನಂತರ ನಟಿ ಮುಖವನ್ನು ಮುಚ್ಚಿಕೊಂಡೇ ಕಾರ ಬಳಿ ನಡೆದಿದ್ದಾರೆ.


ಈ ದೃಶ್ಯವನ್ನೂ ಬಾಲಿವುಡ್‌ ಫೋಟೋಗ್ರಾಫರ್‌ಗಳು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ವಿಡಿಯೊಗೆ ಹಲವಾರು ಲೈಕ್‌ ಮತ್ತು ಕಾಮೆಂಟ್‌ಗಳು ಬಂದಿವೆ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿಗೆ ಈ ರೀತಿಯಲ್ಲಿ ಅಡ್ಡಿ ಮಾಡಬಾರದು ಎಂದು ಅನೇಕರು ಫೋಟೋಗ್ರಾಫರ್‌ಗಳಿಗೆ ಕಾಮೆಂಟ್‌ಗಳಲ್ಲೇ ಬುದ್ಧಿ ಹೇಳಿದ್ದಾರೆ ಕೂಡ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Shah Rukh Khan: ನಯನತಾರಾ-ಅಟ್ಲೀ ಮುನಿಸಿನ ರೂಮರ್ಸ್‌ ಬೆನ್ನಲ್ಲೇ ನಟಿಗೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂದ ಶಾರುಖ್‌!

Shah Rukh Khan: ಶಾರುಖ್‌ (Shah Rukh Khan) ಆಸ್ಕ್ ಮಿ ಎನಿಥಿಂಗ್ ಸೆಷನ್ (Ask Me Anything session) ನಡೆಸುವಾಗ ನರ್ಮದಾ (ನಯನತಾರಾ) ಎಂಬ ಪಾತ್ರಕ್ಕೆ ಸೂಕ್ತ ಪ್ರಮಾಣದ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂಬುದನ್ನು ಕೂಡ ಒಪ್ಪಿಕೊಂಡಿದ್ದಾರೆ.

VISTARANEWS.COM


on

Edited by

Nayanthara And Atlee Rumours Shah Rukh
Koo

ಬೆಂಗಳೂರು: ʻಜವಾನ್‌ʼ ಸಿನಿಮಾ ನಿರ್ದೇಶಕ ಅಟ್ಲೀ ಹಾಗೂ ನಟಿ ನಯನತಾರಾ (Nayanthara And Atlee) ನಡುವೆ ಮುನಿಸಿದೆ ಎಂದು ಕೆಲವು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಜವಾನ್‌ ಸಿನಿಮಾದಲ್ಲಿ ದೀಪಿಕಾ ಅವರನ್ನು ಹೈಲೈಟ್‌ ಮಾಡಿ, ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎಂದು ನಯನತಾರಾ ಬೇಸರಗೊಂಡಿದ್ದರು ಎಂದು ಈ ಮುಂಚೆ ವದರಿಯಾಗಿತ್ತು. ಈ ಎಲ್ಲ ವದಂತಿಗಳ ನಡುವೆ ನಯನತಾರಾ ಮತ್ತೆ ಅಟ್ಲೀ ಅವರಿಗೆ ವಿಶ್‌ ಮಾಡುವ ಮೂಲಕ ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಆದರೀಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಶಾರುಖ್‌ (Shah Rukh Khan) ಆಸ್ಕ್ ಮಿ ಎನಿಥಿಂಗ್ ಸೆಷನ್ (Ask Me Anything session) ನಡೆಸುವಾಗ ನರ್ಮದಾ (ನಯನತಾರಾ) ಎಂಬ ಪಾತ್ರಕ್ಕೆ ಸೂಕ್ತ ಪ್ರಮಾಣದ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ ಎಂಬುದನ್ನು ಕೂಡ ಒಪ್ಪಿಕೊಂಡಿದ್ದಾರೆ.

ಶಾರುಖ್ ಖಾನ್ ಸೆ.22ರಂದು ಆಸ್ಕ್ ಮಿ ಎನಿಥಿಂಗ್ ಸೆಷನ್ ಆಯೋಜಿಸಿದ್ದರು. ಜವಾನ್‌ನ ಬಂಪರ್ ಯಶಸ್ಸಿನಲ್ಲಿ ಮುಳುಗಿರುವ ನಟ, ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಒಬ್ಬ ಅಭಿಮಾನಿ ʻʻನರ್ಮದಾ ಪಾತ್ರವನ್ನು ತುಂಬಾ ಇಷ್ಟ ಪಟ್ಟೆ. ಆಜಾದ್ ಅವರ ಬಂಧವನ್ನು ಇಷ್ಟಪಟ್ಟೆ. ಒಂಟಿ ಮಹಿಳೆ ಮಗು ಸಾಕುವ ಈ ಪಾತ್ರ ಮನಮುಟ್ಟಿದೆ. ತುಂಬಾ ಸೂಕ್ಷ್ಮವಾಗಿ ಮಾಡಲಾಗಿದೆ. ಎಲ್ಲಾ ಕ್ಷೇತ್ರದ ಮಹಿಳೆಯರನ್ನು ಪ್ರತಿನಿಧಿಸಿದ್ದಕ್ಕಾಗಿ ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಉತ್ತರಿಸಿದ ಶಾರುಖ್ ಖಾನ್, “ನರ್ಮದಾ ಸಿಂಗಲ್‌ ಮದರ್‌ ಪಾತ್ರದ ಕಥೆ ಅದ್ಭುತವಾಗಿದೆ ಎಂದು ನನಗೂ ಅನಿಸಿತು. ದುರದೃಷ್ಟವಶಾತ್ ಆ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗಲಿಲ್ಲ. ಹಾಗಿದ್ದರೂ ಕೂಡ ಅದು ತುಂಬ ಚೆನ್ನಾಗಿ ಮೂಡಿಬಂದಿದೆ’ ಎಂದು ಶಾರುಖ್​ ಖಾನ್​ ಉತ್ತರ ನೀಡಿದ್ದಾರೆ. ನಯನತಾರಾ ನರ್ಮದಾ ಪಾತ್ರವನ್ನು ನಿರ್ವಹಿಸಿದರೆ, ಶಾರುಖ್ ಖಾನ್ ಆಜಾದ್ ಪಾತ್ರವನ್ನು ನಿರ್ವಹಿಸಿದರು.

ಇದನ್ನೂ ಓದಿ: Shah Rukh Khan: ಗ್ರೂಪ್‌ ಫೋಟೊ ತೆಗೆಯುವ ವೇಳೆ ನೆಲದ ಮೇಲೆ ಮಲಗಿ ಪೋಸ್‌ ಕೊಟ್ಟ ಶಾರುಖ್‌!

ಶಾರುಖ್‌ ಟ್ವೀಟ್‌

ಬಾಲಿವುಡ್‌ ಸಿನಿಮಾ ಮಾಡಲ್ಲ ಅಂದ್ರಾ ನಯನತಾರಾ?

ಇದಕ್ಕೂ ಮೊದಲು ಚಿತ್ರದಲ್ಲಿ ತನ್ನ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲೀಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂತಲೂ ವರದಿಯಾಗಿತ್ತು. ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್‌) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್‌-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್‌-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿತ್ತು. ಇಂತಹ ವರದಿಗಳ ನಡುವೆ, ನಯನತಾರಾ ಅಟ್ಲಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ

Continue Reading

ಬಾಲಿವುಡ್

Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್‌ ಸೀರೆಯುಟ್ಟು ಫಸ್ಟ್‌ ಲುಕ್‌ನಲ್ಲೇ ನಾಚಿ ನೀರಾದ ರಶ್ಮಿಕಾ!

Rashmika Mandanna: ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ʻಗೀತಾಂಜಲಿʼ (Geethanjali animal Cinema) ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

VISTARANEWS.COM


on

Edited by

Rashmika Mandanna
Koo

ಬೆಂಗಳೂರು: ರಣಬೀರ್‌ ಕಪೂರ್‌ (Ranbir Kapoor)) ಅಭಿನಯದ ʻಅನಿಮಲ್ʼ ಸಿನಿಮಾ (Animal first look poster) ದಿನಕ್ಕೊಂದು ಹೊಸ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದೆ. ಇದೀಗ ʻಅನಿಮಲ್ʼ ಸಿನಿಮಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ ಕಂಡು ರಶ್ಮಿಕಾ ಅವರ ಫ್ಯಾನ್ಸ್‌ ಸಂತಸ ಹೊರಹಾಕುತ್ತಿದ್ದಾರೆ. ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ʻಗೀತಾಂಜಲಿʼ (Geethanjali animal Cinema) ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಈಗಾಗಲೇ ಅನಿಮಲ್‌ ಚಿತ್ರತಂಡ ಹಲವು ಪಾತ್ರಗಳನ್ನು ಪರಿಚಯಿಸಿದೆ. ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾ ನಿರ್ದೇಶಿಸಿದ್ದಾರೆ. ರಶ್ಮಿಕಾ ಪೋಸ್ಟರ್‌ನಲ್ಲಿ, ಕೆಂಪು ಮತ್ತು ಬಿಳಿ ಬಣ್ಣದ ಬಾರ್ಡರ್‌ ಸೀರೆಯೊಂದಿಗೆ ಗೃಹಿಣಿಯ ಲುಕ್‌ನಲ್ಲಿ ಸಿಂಪಲ್‌ ಆಗಿ ಕಂಡಿದ್ದಾರೆ.

ರಶ್ಮಿಕಾ ಅಭಿನಿಯೊಬ್ಬರು ʻ ಗೀತಾಂಜಲಿಯ ಲುಕ್‌ ಬಹಳ ವಿಭಿನ್ನವೆಂದು ತೋರುತ್ತದೆʼʼಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು. ‘ಇಡೀ ಚಿತ್ರರಂಗದಲ್ಲಿ ನಿಮಗಿಂತ ಮಿಗಿಲಾದವರು ಯಾರೂ ಇಲ್ಲ, ನೀವೇ ಅತ್ಯಂತ ಸುಂದರಿʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: ಪುಷ್ಪ -2 ಸೆಟ್‌ ಫೋಟೊವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ

ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್

ಇತ್ತೀಚೆಗೆ, ಚಿತ್ರತಂಡ ನಟ ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿತು. ಪೋಸ್ಟರ್‌ನಲ್ಲಿ ಅನಿಲ್ ಕಪೂರ್‌ ಕುರ್ಚಿಯ ಮೇಲೆ ಎದೆಗೆ ಬ್ಯಾಂಡೇಜ್ ಹಾಕಿಕೊಂಡು ಮುಖದಲ್ಲಿ ಗಂಭೀರ ಭಾವದಿಂದ ಕುಳಿತಿದ್ದರು. ಬಲ್ಬೀರ್ ಸಿಂಗ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಹುಟ್ಟುಹಬ್ಬದಂದು ಚಿತ್ರದ ಟೀಸರ್‌ ಚಿತ್ರತಂಡ ಅನಾವರಣಗೊಳಿಸಿತ್ತು. ಇತ್ತೀಚೆಗಷ್ಟೇ ಅನಿಮಲ್ ಚಿತ್ರತಂಡ ರಣಬೀರ್ ಅವರ ಫಸ್ಟ್ ಲುಕ್ ಪೋಸ್ಟರ್ ಕೈಬಿಟ್ಟಿತ್ತು. ಹೊಸ ಪೋಸ್ಟರ್‌ನಲ್ಲಿ ರಣಬೀರ್ ನೀಲಿ ಬಣ್ಣದ ಸೂಟ್‌ನಲ್ಲಿ ಲೈಟರ್ ಹಿಡಿದು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿತ್ತು. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಈ ಹಿಂದೆ ಸಿನಿಮಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ಸಿನಿಮಾ ಮೂಲಕ ರಣಬೀರ್ ಕಪೂರ್ ಪೂರ್ಣ ಪ್ರಮಾಣದ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.

ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದೆ.

Continue Reading

South Cinema

Parineeti Chopra: ಮದುವೆಯಲ್ಲಿ ಫೋನ್‌, ಕ್ಯಾಮೆರಾಗಳಿಗೆ ಟೇಪ್‌, 100 ಭದ್ರತಾ ಸಿಬ್ಬಂದಿ!

Parineeti Chopra: ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್‌ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.

VISTARANEWS.COM


on

Edited by

Parineeti Chopra Wedding
Koo

ಬೆಂಗಳೂರು: ಸೆಪ್ಟೆಂಬರ್ 24ರಂದು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಹಾಗೂ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಚಡ್ಡಾ (Raghav Chadha) ಅವರ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈಗಾಗಲೇ ಜೋಡಿ ಉದಯಪುರಕ್ಕೆ (Parineeti Chopra wedding) ತಲುಪಿದೆ. ಸದ್ಯ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ವಿವಾಹದಲ್ಲಿ 100 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮದುವೆಯಲ್ಲೂ ಕಟ್ಟುನಿಟ್ಟಿನ ಭದ್ರತಾ ನಿಯಮಗಳಿವೆ. ವರದಿಗಳ ಪ್ರಕಾರ, ಮದುವೆಯಲ್ಲಿ ಭಾಗವಹಿಸುವವರಿಗೆ ಮೊಬೈಲ್‌ ಕೂಡ ಬಳಸುವಂತಿಲ್ಲ. ಮೂರು ದಿನಗಳ ಕಾಲ ಯಾವುದೇ ಸಿಬ್ಬಂದಿಗೆ ಆವರಣದಿಂದ ಹೊರಬರಲು ಅವಕಾಶವಿಲ್ಲ ಎಂದು ವರದಿಯಾಗಿದೆ.

ಹೋಟೆಲ್ ಮೂಲಗಳ ಪ್ರಕಾರ, ಮದುವೆಯ ಸಿದ್ಧತೆಗಳ ಜತೆಗೆ ಕಾರ್ಯಕ್ರಮದ ಫೋಟೊಗಳು ಮತ್ತು ವಿಡಿಯೊಗಳು ಲೀಕ್‌ ಆಗದ್ದಂತೆ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಹೋಟೆಲ್‌ಗೆ ಪ್ರವೇಶಿಸುವವರ ಮೊಬೈಲ್ ಕ್ಯಾಮೆರಾಗಳಿಗೆ ನೀಲಿ ಬಣ್ಣದ ಟೇಪ್ ಅನ್ನು ಅಂಟಿಸಲಾಗುತ್ತದೆ. ಇದರಿಂದ ಅವರು ಮದುವೆ ಸಮಾರಂಭದಲ್ಲಿ ಯಾವುದೇ ವೀಡಿಯೊ-ಫೋಟೋಗ್ರಾಫ್ ತೆಗೆದುಕೊಳ್ಳುವಂತಿಲ್ಲ. ಈ ನೀಲಿ ಟೇಪ್‌ನ ವಿಶೇಷತೆ ಏನೆಂದರೆ, ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ಅಳವಡಿಸಿದ ನಂತರ ಯಾರಾದರೂ ಅದನ್ನು ತೆಗೆದರೆ, ಟೇಪ್‌ನಲ್ಲಿ ಬಾಣದ ಚಿಹ್ನೆ ಗೋಚರಿಸುತ್ತದೆ. ಸೆಕ್ಯೂರಿಟಿ ಅವರು ಪರಿಶೀಲಿಸಿದಾಗ ಕ್ಯಾಮೆರಾ ಬಳಸಲು ಟೇಪ್ ತೆಗೆದಿರುವುದು ಗೊತ್ತಾಗಿ ಬಿಡುತ್ತದೆ. ಈ ನಿರ್ಬಂಧವು ವಿಶೇಷವಾಗಿ ಹೋಟೆಲ್ ಸಿಬ್ಬಂದಿಗೆ, ಬಾಣಸಿಗರಿಗೆ ಅನ್ವಯಿಸುತ್ತದೆ. ಕರಣ್ ಜೋಹರ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ ಅವರಂತಹ ಸೆಲೆಬ್ರಿಟಿಗಳು ಇಂದೇ (ಸೆ. 23) ಉದಯಪುರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.

ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ಚಮ್ಕೀಲಾ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.

Continue Reading

ದೇಶ

Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!

Parineeti Chopra; ಅದ್ಧೂರಿ ಮದುವೆಗೆ ರಾಜಸ್ಥಾನ ತಲುಪುವ ಮುನ್ನ ಜೋಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23ರಂದು ಅವರ ಹಳದಿ ಸಮಾರಂಭ, ಮೆಹೆಂದಿ ಇತರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿದೆ. ಸೆ. 24ರಂದು ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ.

VISTARANEWS.COM


on

Edited by

Parineeti Chopra Raghav
Koo

ಬೆಂಗಳೂರು: ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ (Raghav Chadha) ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿ (Parineeti Chopra) ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದೆ. ಲೀಲಾ ಪ್ಯಾಲೆಸ್ (Leela Palace) ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ (The Oberoi Udaivilas.) ವಿವಾಹದ ವಿಧಿವಿಧಾನಗಳು ನಡೆಯಲಿವೆ ಎಂದು ವರದಿಯಾಗಿದೆ. ಅದ್ಧೂರಿ ಮದುವೆಗೆ ರಾಜಸ್ಥಾನ ತಲುಪುವ ಮುನ್ನ ಜೋಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23ರಂದು ಅವರ ಹಳದಿ ಸಮಾರಂಭ, ಮೆಹೆಂದಿ ಇತರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿದೆ. ಸೆ. 24ರಂದು ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ.

ಮೆಹೆಂದಿ ಕಾರ್ಯಕ್ರಮದಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಪರಿಣಿತಿ-ರಾಘವ್ ಅವರ ಮದುವೆಯ ಮೆರವಣಿಗೆ ಸೆಪ್ಟೆಂಬರ್ 24ರಂದು ನಡೆಯಲಿದೆ. ಇದಕ್ಕೂ ಮೊದಲು ರಾಘವ್ ಅವರ ಸೆಹ್ರಾ ಬಂದಿ ಪಿಚೋಲಾ ಸರೋವರದ ಮಧ್ಯದಲ್ಲಿರುವ ಹೋಟೆಲ್ ತಾಜ್‌ನಲ್ಲಿ ನಡೆಯಲಿದೆ. ಶೀಘ್ರದಲ್ಲೇ ತಾಜ್ ಹೋಟೆಲ್‌ನಿಂದ ವಧು ಪರಿಣಿತಿಯನ್ನು ಕರೆದುಕೊಂಡು ಹೋಗಲು ವರನೊಂದಿಗೆ ಮದುವೆ ಮೆರವಣಿಗೆ ಹೊರಡಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದೋಣಿಗಳ ಅಲಂಕಾರದಲ್ಲೂ ಮೇವಾರ ಸಂಪ್ರದಾಯದ ಝಲಕ್ ಕಾಣಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Parineeti Chopra: ಪರಿಣಿತಿ ಚೋಪ್ರಾ-ರಾಘವ್ ಛಡ್ಡಾ ಮದುವೆ ಡೇಟ್‌ ಫಿಕ್ಸ್‌! ಎಲ್ಲಿ ಅದ್ಧೂರಿ ವಿವಾಹ?

ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಕೂಡ ಭಾಗಿಯಾಗಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.

ಲೀಲಾ ಪ್ಯಾಲೆಸ್ ಮತ್ತು ಉದಯವಿಲಾಸ್ ಹೊರತುಪಡಿಸಿ ಹತ್ತಿರದ ಮೂರು ಹೋಟೆಲ್‌ಗಳಲ್ಲಿ ಬುಕ್ಕಿಂಗ್ ಮಾಡಲಾಗಿದೆ. ಎರಡು ತಿಂಗಳ ಹಿಂದೆ, ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ, ಹೋಟೆಲ್‌ಗಳ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಲು ಉದಯಪುರಕ್ಕೆ ಭೇಟಿ ನೀಡಿದ್ದರು.

Continue Reading
Advertisement
cyclothon in Bangalore
ಬೆಂಗಳೂರು10 mins ago

World Heart Day: ಹೃದಯ ಆರೋಗ್ಯ ಜಾಗೃತಿಗಾಗಿ ಸಾಗರ್ ಆಸ್ಪತ್ರೆಯಿಂದ ‌ಸೈಕ್ಲೋಥಾನ್; 500 ಮಂದಿ ಭಾಗಿ

Hasan Mahmud running out Ish Sodhi at the non-striker's end
ಕ್ರಿಕೆಟ್32 mins ago

NZ vs BAN: ಮಂಕಡ್​ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ಲಿಟನ್‌ ದಾಸ್‌‌ಗೆ ನೆಟ್ಟಿಗರ ಮೆಚ್ಚುಗೆ

Narendra modi image
ಕಲೆ/ಸಾಹಿತ್ಯ34 mins ago

Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ

Vistara Top 10 News 2309
ಕರ್ನಾಟಕ43 mins ago

VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್‌ ಪರಪ್ಪನ ಅಗ್ರಹಾರದಲ್ಲಿ ಸೆರೆ

Anegondi Vrindavana
ಕರ್ನಾಟಕ47 mins ago

Gangavathi News: ಆನೆಗೊಂದಿ ಜಯತೀರ್ಥ-ರಘುವರ್ಯರ ವೃಂದಾವನ ವಿವಾದ; ರಾಯರ ಮಠದ ಪರ ಹೈಕೋರ್ಟ್ ತೀರ್ಪು

Modi Reservation
ದೇಶ57 mins ago

Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ

Mohammed Shami finished with 5 for 51
ಕ್ರಿಕೆಟ್1 hour ago

Mohammed Shami: 16 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಮೊಹಮ್ಮದ್​ ಶಮಿ

MK Stalin
ದೇಶ1 hour ago

Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ

Chaitra Kundapura
ಉಡುಪಿ2 hours ago

Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್‌

women arrested
ದೇಶ2 hours ago

Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್​​

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina bhavishya
ಪ್ರಮುಖ ಸುದ್ದಿ19 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ6 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ1 week ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ1 week ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ1 week ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

ಟ್ರೆಂಡಿಂಗ್‌