Site icon Vistara News

Ponniyin Selvan: I | ಮಾರುಕಟ್ಟೆಗೆ ಬಂತು ಪೊನ್ನಿಯನ್ ಸೆಲ್ವನ್ ಥೀಮ್ ರೇಷ್ಮೆ ಸೀರೆಗಳು!

Ponniyin Selvan I

ಬೆಂಗಳೂರು: ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan: I) ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 30ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ನಟ-ನಟಿಯರ ಭಾವಚಿತ್ರದ ರೇಷ್ಮೆ ಸೀರೆಗಳು ತಯಾರಾಗುವಷ್ಟು ಕ್ರೇಜ್ ಹೆಚ್ಚಾಗಿದೆ. ಈ ಸೀರೆ ಇದೀಗ ಮಾರುಕಟ್ಟೆಯಲ್ಲೆ ಸಿಗುತ್ತಿದೆ.

ಈ ಪೊನ್ನಿಯಿನ್ ಸೆಲ್ವನ್ ರೇಷ್ಮೆ ಸೀರೆಯ ಬಾರ್ಡರ್‌ನಲ್ಲಿ ತ್ರಿಶಾ-ಐಶ್ವರ್ಯ ಫೋಟೋ ಇದೆ. ವಿಕ್ರಮ್, ಕಾರ್ತಿ, ಜಯಮರವಿ ಸೇರಿದಂತೆ ಪೊನ್ನಿಯನ್ ಸೆಲ್ವನ್ ಚಿತ್ರತಂಡದ ಕೆಲವರ ಫೋಟೋವನ್ನು ಸೀರೆ ಮೇಲೆ ಚಿತ್ರಿಸಲಾಗಿದೆ.

ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿಗೆ ಭಾರೀ ಬೆಲೆಗೆ ಮಾರಾಟ ಮಾಡಲಾಗಿದೆ. ಗ್ರ್ಯಾಂಡ್ ರಿಲೀಸ್‌ಗೂ ಒಂದು ವಾರ ಮೊದಲು ವಾಹಿನಿಯಲ್ಲಿ ಆಡಿಯೊ ಮತ್ತು ಟ್ರೈಲರ್ ಲಾಂಚ್ ಆಗಲಿದೆ.

ವರದಿಗಳ ಪ್ರಕಾರ, ಪೊನ್ನಿಯನ್ ಸೆಲ್ವನ್ ಭಾಗ-1 ಹಾಗೂ ಭಾಗ-2 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳು ಅಮೆಜಾನ್ ಪ್ರೈಮ್ ವಿಡಿಯೊಗೆ ಬರೋಬ್ಬರಿ 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

ಚಿತ್ರದಲ್ಲಿ ನಟ ವಿಕ್ರಮ್ ಆದಿತಾ ಕರಿಕಾಳನ್ ಆಗಿ, ನಟ ಕಾರ್ತಿ ವಂದಿಯಾದೇವನಾಗಿ, ನಟ ಜಯಂ ರವಿ ಅರುಣ್ಮೋಳಿ ವರ್ಮನ್ ಆಗಿ, ನಟಿ ಐಶ್ವರ್ಯ ರೈ ನಂದಿನಿಯಾಗಿ ಮತ್ತು ನಟಿ ತ್ರಿಷಾ ಕುಂದವೈಯಾಗಿ ನಟಿಸಿದ್ದಾರೆ.

ಈ ಸೀರೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರೂ. 2,100 ರೂಪಾಯಿ. 

ಇದನ್ನೂ ಓದಿ | Ponniyin Selvan: I | ಪೊನ್ನಿಯನ್ ಸೆಲ್ವನ್ ಭಾಗ 1ರ ಟ್ರೈಲರ್-ಆಡಿಯೋ ಲಾಂಚ್ : ಪೋಟೋಗಳು ಇಲ್ಲಿವೆ!

ನಾಗಾ ಫ್ಯಾಷನ್ಸ್ ಸಂಸ್ಥಾಪಕರಾದ ನಾಗಾ ಅವರು ಈ ಸೀರೆಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೊಡ್ಡ ತಾರಾ ಬಳಗವೇ ಇದೆ ಚಿತ್ರಕ್ಕೆ
ಪೊನ್ನಿಯನ್ ಸೆಲ್ವನ್ ಭಾಗ-1 ಸಿನಿಮಾ ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಜಯಂ ರವಿ ಮತ್ತು ಕಾರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಸೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ, ಪ್ರಭು, ಜಯರಾಮ್ ಮತ್ತು ಮೋಹನ್‌ಲಾಲ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾ
ಪೊನ್ನಿಯನ್ ಸೆಲ್ವನ್ ಕಲ್ಕಿ ಕೃಷ್ಣಮೂರ್ತಿ ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಐತಿಹಾಸಿಕ ಕಥಾ ಹಂದರವುಳ್ಳ ಈ ಸಿನಿಮಾ ಪ್ರಾಚೀನ ತಮಿಳು ರಾಜಮನೆತನ ಚೋಳರಾಜರ ಕುರಿತಾಗಿನ ಕತೆಯನ್ನು ಹೊಂದಿದೆ. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ.

ಇದನ್ನೂ ಓದಿ | Ponniyin Selvan: I | ಅಮೆಜಾನ್‌ ಪ್ರೈಮ್‌ಗೆ 125 ಕೋಟಿ ರೂ.ಗೆ ಮಾರಾಟವಾದ ಪೊನ್ನಿಯನ್ ಸೆಲ್ವನ್ ಸಿನಿಮಾ: ಸೆ.30ಕ್ಕೆ ತೆರೆಗೆ

Exit mobile version