Site icon Vistara News

Prajwal Devaraj: ಕೇಕ್‌, ಹಾರ ತರಬೇಡಿ: ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಮನವಿ

Prajwal devaraj invites his fans to his Birthday Video

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಜುಲೈ 4ಕ್ಕೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜನುಮದಿನಕ್ಕೆ 11 ದಿನಗಳು ಬಾಕಿ ಇದ್ದು, ಅವರ ಅಭಿಮಾನಿಗಳು ನಟನ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಅವರ ಫ್ಯಾನ್ಸ್‌ಗೆ ವಿಶೇಷ ಮನವಿಯೊಂದು ಮಾಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರಜ್ವಲ್ ದೇವರಾಜ್ ವಿಶೇಷ ಸಲಹೆ ನೀಡಿದ್ದೇನು?

“ಎಲ್ಲರಿಗೂ ನನ್ನ ನಮಸ್ಕಾರ. ನಾನು ನಿಮ್ಮ ಪ್ರಜ್ವಲ್ ದೇವರಾಜ್. ನಾನು ಈ ವಿಡಿಯೊ ಮಾಡುತ್ತಿರುವ ಕಾರಣ ಏನು ಎಂದರೆ ಕಳೆದ ಐದು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ಯಾರನ್ನೂ ಭೇಟಿ ಸಹ ಆಗಿರಲಿಲ್ಲ. ಕಾರಣ ಏನು ಎಂಬುದು ನಿಮಗೂ ಸಹ ಗೊತ್ತು. ಈ ವರ್ಷ ಜುಲೈ ನಾಲ್ಕನೇ ತಾರೀಖು ನಿಮ್ಮನ್ನೆಲ್ಲರನ್ನೂ ಸಹ ಭೇಟಿಯಾಗುತ್ತೇನೆ. ಮನೆಯ ಹತ್ತಿರ ಎಲ್ಲರೂ ಬನ್ನಿ. ಎಲ್ಲರೂ ಊಟ ಮಾಡಿಕೊಂಡು ಹೋಗಿ. ನಿಮ್ಮ ಜತೆ ಸಾಕಷ್ಟು ಸಮಯ ಕಳೆಯಬೇಕು ಎಂದು ನನಗೂ ಸಹ ಆಸೆ ಇದೆ. ಆದರೆ ಒಂದು ಮನವಿ ನನ್ನ ಕಡೆಯಿಂದ. ಹಾರ, ಕೇಕ್‌ ಇವೆಲ್ಲವೂ ತರದೇ ಶಾಲಾ ಮಕ್ಕಳಿಗಾಗಿ, ಶಾಲೆಗಳಿಗಾಗಲಿ ಅಥವಾ ಕಷ್ಟದಲ್ಲಿರುವ ಮಕ್ಕಳ ಫೀಸ್‌ಗಾಗಿಯಾದರೂ ಉಪಯೋಗಿಸಿ. ಇದೇ ನೀವು ನನಗೆ ಕೊಡುವ ಉಡುಗೊರೆ” ಎಂದು ಪ್ರಜ್ವಲ್ ದೇವರಾಜ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Prajwal Devaraj and Ragini Chandran: ಇಲ್ಲಿವೆ ಪ್ರಜ್ವಲ್ ದೇವರಾಜ್‌ ಮತ್ತು ರಾಗಿಣಿ ಚಂದ್ರನ್ ಲೇಟೆಸ್ಟ್‌ ಫೋಟೊಗಳು

ಪ್ರಜ್ವಲ್‌ ದೇವರಾಜ್‌ ವಿಡಿಯೊ

ಉತ್ತರ ಕರ್ನಾಟಕದ ಶಾಲೆಯೊಂದನ್ನು ನಟ ದತ್ತು ಪಡೆದಿದ್ದಾರೆ. ಪ್ರಜ್ವಲ್ ದೇವರಾಜ್ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಇದೇ ಮೊದಲ ಬಾರಿಗೆ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು “ಜಾತರೆ”. ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೇ ʻಮಾಫಿಯಾʼ ಹಾಗೂ ʻಗಣʼ ಚಿತ್ರಗಳೂ ಇವೆ.

Exit mobile version