Prajwal devaraj invites his fans to attend his birthday with special appeal Prajwal Devaraj: ಕೇಕ್‌, ಹಾರ ತರಬೇಡಿ: ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಮನವಿ Vistara News
Connect with us

South Cinema

Prajwal Devaraj: ಕೇಕ್‌, ಹಾರ ತರಬೇಡಿ: ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಮನವಿ

Prajwal Devaraj: ಜನುಮದಿನಕ್ಕೆ 11 ದಿನಗಳು ಬಾಕಿ ಇದ್ದು, ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ ಪ್ರಜ್ವಲ್ ದೇವರಾಜ್.

VISTARANEWS.COM


on

Prajwal devaraj invites his fans to his Birthday Video
Koo

ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಜುಲೈ 4ಕ್ಕೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜನುಮದಿನಕ್ಕೆ 11 ದಿನಗಳು ಬಾಕಿ ಇದ್ದು, ಅವರ ಅಭಿಮಾನಿಗಳು ನಟನ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಅವರ ಫ್ಯಾನ್ಸ್‌ಗೆ ವಿಶೇಷ ಮನವಿಯೊಂದು ಮಾಡಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರಜ್ವಲ್ ದೇವರಾಜ್ ವಿಶೇಷ ಸಲಹೆ ನೀಡಿದ್ದೇನು?

“ಎಲ್ಲರಿಗೂ ನನ್ನ ನಮಸ್ಕಾರ. ನಾನು ನಿಮ್ಮ ಪ್ರಜ್ವಲ್ ದೇವರಾಜ್. ನಾನು ಈ ವಿಡಿಯೊ ಮಾಡುತ್ತಿರುವ ಕಾರಣ ಏನು ಎಂದರೆ ಕಳೆದ ಐದು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ಯಾರನ್ನೂ ಭೇಟಿ ಸಹ ಆಗಿರಲಿಲ್ಲ. ಕಾರಣ ಏನು ಎಂಬುದು ನಿಮಗೂ ಸಹ ಗೊತ್ತು. ಈ ವರ್ಷ ಜುಲೈ ನಾಲ್ಕನೇ ತಾರೀಖು ನಿಮ್ಮನ್ನೆಲ್ಲರನ್ನೂ ಸಹ ಭೇಟಿಯಾಗುತ್ತೇನೆ. ಮನೆಯ ಹತ್ತಿರ ಎಲ್ಲರೂ ಬನ್ನಿ. ಎಲ್ಲರೂ ಊಟ ಮಾಡಿಕೊಂಡು ಹೋಗಿ. ನಿಮ್ಮ ಜತೆ ಸಾಕಷ್ಟು ಸಮಯ ಕಳೆಯಬೇಕು ಎಂದು ನನಗೂ ಸಹ ಆಸೆ ಇದೆ. ಆದರೆ ಒಂದು ಮನವಿ ನನ್ನ ಕಡೆಯಿಂದ. ಹಾರ, ಕೇಕ್‌ ಇವೆಲ್ಲವೂ ತರದೇ ಶಾಲಾ ಮಕ್ಕಳಿಗಾಗಿ, ಶಾಲೆಗಳಿಗಾಗಲಿ ಅಥವಾ ಕಷ್ಟದಲ್ಲಿರುವ ಮಕ್ಕಳ ಫೀಸ್‌ಗಾಗಿಯಾದರೂ ಉಪಯೋಗಿಸಿ. ಇದೇ ನೀವು ನನಗೆ ಕೊಡುವ ಉಡುಗೊರೆ” ಎಂದು ಪ್ರಜ್ವಲ್ ದೇವರಾಜ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Prajwal Devaraj and Ragini Chandran: ಇಲ್ಲಿವೆ ಪ್ರಜ್ವಲ್ ದೇವರಾಜ್‌ ಮತ್ತು ರಾಗಿಣಿ ಚಂದ್ರನ್ ಲೇಟೆಸ್ಟ್‌ ಫೋಟೊಗಳು

ಪ್ರಜ್ವಲ್‌ ದೇವರಾಜ್‌ ವಿಡಿಯೊ

ಉತ್ತರ ಕರ್ನಾಟಕದ ಶಾಲೆಯೊಂದನ್ನು ನಟ ದತ್ತು ಪಡೆದಿದ್ದಾರೆ. ಪ್ರಜ್ವಲ್ ದೇವರಾಜ್ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಇದೇ ಮೊದಲ ಬಾರಿಗೆ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು “ಜಾತರೆ”. ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದಲ್ಲದೇ ʻಮಾಫಿಯಾʼ ಹಾಗೂ ʻಗಣʼ ಚಿತ್ರಗಳೂ ಇವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

South Cinema

Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

Oscars 2024: ನಿರ್ದೇಶಕ ಗಿರೀಶ್‌ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿತ್ತು.

VISTARANEWS.COM


on

Edited by

Malayalam Film 2018
Koo

ಬೆಂಗಳೂರು: ಟೊವಿನೋ ಥಾಮಸ್ ನಟಿಸಿರುವ 2018 ಮಲಯಾಳಂ ಸಿನಿಮಾ (Malayalam Film 2018) 2024ರ 96ನೇ ಆಸ್ಕರ್‌ ಅವಾರ್ಡ್ಸ್‌ಗೆ (Oscars 2024:) ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿದೆ. ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ ತೀರ್ಪುಗಾರರು ಸೆ.27ರಂದು ಅನೌನ್ಸ್‌ ಮಾಡಿದ್ದಾರೆ. ನಿರ್ದೇಶಕ ಗಿರೀಶ್‌ ಕಾಸರವಳ್ಳಿ ನೇತೃತ್ವದ 17 ಸದಸ್ಯರ ತೀರ್ಪುಗಾರರನ್ನು ಒಳಗೊಂಡಿರುವ ಆಯ್ಕೆ ಸಮಿತಿಗೆ ಭಾರತದಾದ್ಯಂತ ತೆರೆಕಂಡ 22 ಸಿನಿಮಾಗಳು ಅಧಿಕೃತ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದವು.

96ನೇ ಆಸ್ಕರ್‌ ಅವಾರ್ಡ್‌ ಎಬಿಸಿಯಲ್ಲಿ 2024ರ ಮಾರ್ಚ್ 10ರ ಭಾನುವಾರ ಓವೇಶನ್ ಹಾಲಿವುಡ್‌ನಲ್ಲಿರುವ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಿಂದ ವಿಶ್ವಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.

ಇದರಲ್ಲಿ “ಬಾಲಗಮ್‌”, “ದಿ ಕೇರಳ ಸ್ಟೋರಿ”, “ಜ್ವಿಗಾಟೊ” “ರಾಖಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ”ಅನಂತ್‌ ಮಹದೇವನ್‌ ಅವರ ಸ್ಟೋರಿ ಟೇಲರ್‌ (ಹಿಂದಿ), ಮ್ಯೂಸಿಕ್‌ ಸ್ಕೂಲ್‌ (ಹಿಂದಿ), ಮಿಸಸ್‌ ಚಟರ್ಜಿ ವರ್ಸಸ್‌ ನಾರ್ವೆ (ಹಿಂದಿ), 12th ಫೇಲ್‌ (ಹಿಂದಿ) ವಿದುತಲೈ ಭಾಗ 1 (ತಮಿಳು), ಘೂಮರ್‌ (ಹಿಂದಿ), ಮತ್ತು ದಸರಾ (ತೆಲುಗು) ಸಿನಿಮಾಗಳು ಆಸ್ಕರ್‌ನ ಅಧಿಕೃತ ಪ್ರವೇಶ ಪಡೆಯವ ಸ್ಥಾನದಲ್ಲಿದ್ದವು. ಅಂತಿಮವಾಗಿ ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ಈ ಸಿನಿಮಾ ಆಸ್ಕರ್‌ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾಗಿದೆ.

ಇದನ್ನೂ ಓದಿ: Oscars 2024: ಮುಂದಿನ ʻಆಸ್ಕರ್‌ʼ ರೇಸ್‌ನಲ್ಲಿ ಯಾವೆಲ್ಲ ಸಿನಿಮಾಗಳು ಇರಲಿವೆ?

ಜೂಡ್​ ಆಂಥೊನಿ ಜೋಸೆಫ್​ ನಿರ್ದೇಶನದ ನೈಜ ಘಟನೆ ಆಧಾರಿತ ಮಲಯಾಳಂ `2018′ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಕೇರಳ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತ್ತು.

ಟೊವಿನೋ ಥಾಮಸ್​ ಜತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

2018 ಸಿನಿಮಾ ಕಥೆ ಏನು?

‘2018’ ಸಿನಿಮಾ 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನು ಆಧರಿಸಿ ಮಾಡಿದ ಸಿನಿಮಾ ಇದಾಗಿದೆ. ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟದ ಘಟನೆಗಳು ಇವೆ. ಅತೀ ಕಷ್ಟದ ಸಮಯದಲ್ಲೂ ಕೇರಳದ ಪ್ರತಿಯೊಬ್ಬರು ಹೇಗೆ ನಡೆದುಕೊಂಡರು ಎಂಬ ವಿವರ ಈ ಸಿನಿಮಾದಲ್ಲಿ. ‘ಪ್ರತಿಯೊಬ್ಬರೂ ಹೀರೊ’ ಎಂಬ ಟ್ಯಾಗ್​ಲೈನ್​ ಗಮನ ಸೆಳೆದಿತ್ತು. 2018ರ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾದರು. 1924ರ ಬಳಿಕ ಕೇರಳದಲ್ಲಿ ಉಂಟಾಗಿದ್ದ ಅತಿ ಭೀಕರ ಪ್ರವಾಹ ಅದಾಗಿತ್ತು.

Continue Reading

South Cinema

Actress Nayanthara: ನಯನತಾರಾ -ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ಬರ್ತ್‌ಡೇ; ಕ್ಯೂಟ್‌ ಫೋಟೊಸ್ ಔಟ್‌!

Actress Nayanthara: ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಒಂದು ವರ್ಷವಾಗಿದೆ.

VISTARANEWS.COM


on

Edited by

Nayanthara Vignesh Shivan twin
Koo
Actress Nayanthara
ನಯನತಾರಾ Actress Nayanthara ಮತ್ತು ವಿಘ್ನೇಶ್ ಶಿವನ್ ಅವರ ಅವಳಿ ಮಕ್ಕಳಿಗೆ ಮೊದಲ ವರ್ಷದ ಬರ್ತ್ ಡೇ ಮುದ್ದಾದ ಅವಳಿ ಮಕ್ಕಳ ಚೆಂದದ ಫೋಟೊಗಳನ್ನು ದಂಪತಿ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದೆ ಸೆಪ್ಟೆಂಬರ್ 26ರಂದು ದಂಪತಿ ತನ್ನ ಇಬ್ಬರು ಮಕ್ಕಳಾದ ಉಯಿರ್ ಹಾಗೂ ಉಳಗ ಜತೆ ಬರ್ತಡೇ ಆಚರಿಸಿಕೊಂಡಿದ್ದಾರೆ
Actress Nayanthara
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಒಂದು ವರ್ಷವಾಗಿದೆ
Actress Nayanthara
ಮಕ್ಕಳ ಬಗ್ಗೆ ಹಲವು ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ದಂಪತಿ ಹಾಕುತ್ತ ಇರುತ್ತಾರೆ

ಇದನ್ನೂ ಓದಿ: Actress Nayanthara: ಯೂಟ್ಯೂಬರ್ ಸಿನಿಮಾಗೆ ನಯನತಾರಾ ನಾಯಕಿ; ಅಚ್ಚರಿಗೊಂಡ ಫ್ಯಾನ್ಸ್‌!

Actress Nayanthara
ಇದೀಗ ದಂಪತಿ ಅವಳಿ ಮಕ್ಕಳ ಫೋಟೊಗಳನ್ನು ಹಂಚಿಕೊಂಡು ʻʻಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಮಕ್ಕಳೇ ನೀವು ನಮ್ಮ ಜಗತ್ತುʼʼಎಂದು ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ
Actress Nayanthara

ನಯನತಾರಾ ಸದ್ಯ ‘ಜವಾನ್’ ಚಿತ್ರದ ಯಶಸ್ಸಿನಲ್ಲಿದ್ದಾರೆ. ನಟಿಯ ಕೈಯಲ್ಲಿ ಹಲವು ಸಿನಿಮಾಗಳು ಇವೆ.

Continue Reading

South Cinema

Nithya Menen: ʻಮೈನಾʼ ನಟಿ ನಿತ್ಯಾ ಮೆನನ್‌ಗೆ ತಮಿಳು ಹೀರೊನಿಂದ ಕಿರುಕುಳ; ಸ್ಪಷನೆ ಕೊಟ್ಟ ನಟಿ!

Nithya Menen: ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ ನಿತ್ಯಾ ಮೆನನ್‌. ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

VISTARANEWS.COM


on

Edited by

Nithya Menen
Koo

ಬೆಂಗಳೂರು: ‘ಮೈನಾ’ (Mynaa) ನಾಯಕಿ ನಿತ್ಯಾ ಮೆನನ್ (Nithya Menen) ಹಲವು ದಿನಗಳಿಂದ ಸಖತ್‌ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತ ನಟಿ ವೈಯಕ್ತಿಕ ವಿಚಾರಗಳಿಗೆ ಆಗಾಗ ಮುನ್ನಲ್ಲೆಗೆ ಬರುತ್ತಲೇ ಇರುತ್ತಾರೆ. ʻʻತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼ ಎಂದು ನಟಿ ಹೇಳಿರುವುದಾಗಿ ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಇದೆಲ್ಲ ಸುಳ್ಳು ಸುದ್ದಿ ಎಂದು ನಟಿ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.

ʻʻತೆಲುಗು ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ, ಆದರೆ ತಮಿಳು ಚಿತ್ರರಂಗದಲ್ಲಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ತಮಿಳು ಚಲನಚಿತ್ರ ನಟರೊಬ್ಬರು ಚಿತ್ರೀಕರಣದ ವೇಳೆ ನನಗೆ ಕಿರುಕುಳ ನೀಡಿದ್ದಾರೆʼʼಎಂದು ನಿತ್ಯಾ ಮೆನನ್‌ ಹೇಳಿದ್ದರು ಎಂಬ ಸುದ್ದಿ ವೈರಲ್‌ ಆಗಿತ್ತು. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಲ್ಲಿತ್ತು.

ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ವದಂತಿಗಳು ಸಂಪೂರ್ಣವಾಗಿ ಸುಳ್ಳು, ನಾನು ಯಾವುದೇ ಸಂದರ್ಶನವನ್ನು ನೀಡಿಲ್ಲ. ಈ ರೀತಿ ಹೇಳಿಕೆ ಎಲ್ಲಿಯೂ ಹೇಳಿಕೊಂಡಿಲ್ಲ. ಕೇವಲ ಕ್ಲಿಕ್‌ಗಳನ್ನು ಪಡೆಯಲು ಈ ರೀತಿಯ ಸುಳ್ಳು ಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ. ಯಾರೂ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ʼʼಎಂದು ನಟಿ ಹೇಳಿದ್ದಾರೆ. ಇಂತಹ ವದಂತಿಗಳ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾ ಅವರ ಈ ಸ್ಪಷ್ಟೀಕರಣ ಎಲ್ಲಾ ಉಹಾಪೋಹಗಳಿಗೆ ಅಂತ್ಯ ಹಾಡಿವೆ.

ಇದನ್ನೂ ಓದಿ: Nithya Menen: ನಿತ್ಯಾ ಮೆನನ್ ಅಜ್ಜಿ ನಿಧನ; ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ!

ಟ್ವಟರ್‌ನಲ್ಲಿ ನಿತ್ಯಾ ಮೆನನ್ ಸಖತ್‌ ಟ್ರೆಂಡ್‌!

ಈ ಬಗ್ಗೆ ನಟಿ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ʻʻಸುದ್ದಿಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ಪತ್ತೆ ಹೆಚ್ಚಬೇಕಿದೆ’ ಎಂದು ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ. ‘ಇಷ್ಟು ಕೆಳಮಟ್ಟಕ್ಕೆ ಇಳಿಯಬೇಡಿ. ಉತ್ತಮರಾಗಿ’ ಎಂದು ಅವರು ಮನವಿ ಮಾಡಿದ್ದಾರೆ.

ನಿತ್ಯಾ ಮೆನನ್‌ ಅವರು ಧನುಷ್ ನಟನೆಯ 50ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಧನುಷ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಡಿ50 ಸಿನಿಮಾ ದೊಡ್ಡ ಬಜೆಟ್ ಚಿತ್ರವಾಗಿದೆ.ಹಾಗೇ ಅವರೇ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಎಆರ್ ರೆಹಮಾನ್ ಅವರ ಸಂಗೀತವಿದೆ ಎಂತಲೂ ವರದಿಯಾಗಿದೆ. ಎಸ್​ಜೆ ಸೂರ್ಯ, ಸಂದೀಪ್ ಕಿಶನ್ ಮೊದಲಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Continue Reading

South Cinema

Rekha Vedavyas: ನನ್ನನ್ನು ಚೆನ್ನಾಗಿ ನಗಿಸಿ, ಬೇಗ ಚೇತರಿಸಿಕೊಳ್ತೀನಿ ಎಂದ ನಟಿ ರೇಖಾ

Rekha Vedavyas: ನಟಿ ರೇಖಾ ಅವರ ಈಗಿನ ಸ್ಥಿತಿ ಕಂಡು ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ರೇಖಾ ಈಗ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅವರು ತಮ್ಮ ಆರೋಗ್ಯದ ಕುರಿತು ಮಾತನಾಡಿದ್ದಾರೆ.

VISTARANEWS.COM


on

Edited by

rekha vedavyas
Koo

ಬೆಂಗಳೂರು: `ಹುಚ್ಚ’ ‘ಚಿತ್ರ’, ‘ತುಂಟಾಟ’, ‘ಮೋನಲಿಸಾ’, ‘ಚೆಲ್ಲಾಟ’ ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ವೇದವ್ಯಾಸ್‌ (Rekha Vedavyas) ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಸೈ ಎನಿಸಿಕೊಂಡವರು. ಹಲವು ವರ್ಷಗಳಾದ ಮೇಲೆ ನಟಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಈಗಿನ ಸ್ಥಿತಿ ಕಂಡು ಅವರ ಫ್ಯಾನ್ಸ್‌ ಬಹಳ ಆತಂಕ ವ್ಯಕ್ತಪಡಿಸಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ನಟಿ ರಿವೀಲ್‌ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ರೇಖಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ನಟಿ ಇದ್ದಕ್ಕಿಂದ್ದಂತೆ ತೆಲುಗು ಕಿರುತೆರೆ ‘ಶ್ರೀದೇವಿ ಡ್ರಾಮಾ ಕಂಪನಿ’ ಶೋಗೆ ಅತಿಥಿಯಾಗಿ ಬಂದಿದ್ದರು. ನಟಿಯನ್ನು ನೋಡಿದ ಕೆಲವರು ಅಚ್ಚರಿಗೊಂಡಿದ್ದರು. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದರು ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಆರೋಗ್ಯದ ಕುರಿತು ಮಾತನಾಡಿ ʻʻನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದೆಲ್ಲ ಸಡನ್‌ ಆಗಿ ಆಯಿತು. ಸಾಕಷ್ಟು ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದು ಸಣ್ಣ ತಲೆನೋವು ಇರಬಹುದು, ಅಥವಾ ದೊಡ್ಡ ಸಮಸ್ಯೆಯೇ ಆಗಿರಬಹುದು. ಯಾವುದಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು. ಒತ್ತಡದಿಂದ ಆರೋಗ್ಯ ಇನ್ನಷ್ಟು ಹದೆಗೆಡುತ್ತದೆ. ಎಲ್ಲಕ್ಕಿಂತ ದೇವರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಯಾವುದೇ ದೇವರು ಆಗಿರಲಿ. ನಿಮ್ಮ ಮೆಡಿಸಿನ್ ಕೆಲಸ ಮಾಡಿದ್ದಿದ್ದರೂ ನಿಮ್ಮ ನಂಬಿಕೆ ಕೆಲಸ ಮಾಡುತ್ತದೆ. ನನ್ನನ್ನು ಚೆನ್ನಾಗಿ ನಗಿಸಿ, ನಾನು ಬೇಗ ಚೇತರಿಸಿಕೊಳ್ತೀನಿ” ಎಂದು ರೇಖಾ ಹೇಳಿದ್ದಾರೆ.

ಇದನ್ನೂ ಓದಿ: Rekha Vedavyas: ಗುರುತೇ ಸಿಗದಷ್ಟು ಬದಲಾದ ʻಹುಚ್ಚʼ ಸಿನಿಮಾ ನಾಯಕಿ ರೇಖಾ; ನಟಿಗೆ ಏನಾಯ್ತು?

ರೇಖಾ ಅವರ ಮಾತುಗಳನ್ನು ಕೇಳಿ ಅವರ ಫ್ಯಾನ್ಸ್‌ ʻʻಬೇಗ ಚೇತರಿಸಿಕೊಳ್ಳಿʼʼ ಎಂದು ಪ್ರಾರ್ಥಿಸುತ್ತಿದ್ದಾರೆ. ಗಣೇಶ್ ಜೋಡಿಯಾಗಿ ‘ಹುಡುಗಾಟ’ ಚಿತ್ರದಲ್ಲಿ ಮಿಂಚಿದರು. ಆ ಬಳಿಕ ಮತ್ತೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಈ ಬೆಂಗಳೂರು ಬೆಡಗಿ ನಟಿಸಿದರು. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ರೇಖಾ ವೇದವ್ಯಾಸ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಹುಚ್ಚ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿ ನಟಿಸಿರುವ ರೇಖಾ, ಇಂದಿಗೂ ಫೇಮಸ್ಸು. 2014ರಲ್ಲಿ ಕೊನೆಯದಾಗಿ ‘ತುಳಸಿ’ ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು.

ಮೂರು ವರ್ಷಗಳ ಹಿಂದೆಯಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಬಗ್ಗೆ ವ್ಯಕ್ತಪಡಿಸಿದ್ದರು. ‘ಪರಿಚಯ’, ‘ಬಾಸ್’, ‘ಬೆಂಕಿ ಬಿರುಗಾಳಿ’, ‘ಲೂಸ್‌ಗಳು’, ‘ಪರಮಶಿವ’ ಸೇರಿದಂತೆ ರೇಖಾ ನಟಿಸಿದ್ದರು.

Continue Reading
Advertisement
Malayalam Film 2018
South Cinema4 mins ago

Oscars 2024: ‘ಆಸ್ಕರ್‌’ಗೆ ಪ್ರವೇಶ ಪಡೆದ ಮಲಯಾಳಂ ಸಿನಿಮಾ; ನೀವೂ ಇದನ್ನು ನೋಡಿರುತ್ತೀರಿ!

Mulayam Singh Yadav Statue
ದೇಶ10 mins ago

Mulayam Singh Yadav: ಮುಲಾಯಂ ಸಿಂಗ್‌ ಮೂರ್ತಿ ತೆರವು; ಯೋಗಿ ನಾಡಲ್ಲಿ ರೂಲ್ಸ್‌ ಎಂದರೆ ರೂಲ್ಸ್!

Parineeti Chopra with Raghav
ಬಾಲಿವುಡ್12 mins ago

Parineeti Chopra: ‘ಓ ಪ್ರಿಯಾ’; ಪತಿಗಾಗಿ ವಿಶೇಷ ಹಾಡು ರೆಕಾರ್ಡ್‌ ಮಾಡಿದ ಪರಿಣಿತಿ ಚೋಪ್ರಾ!

demat account
ಮನಿ ಗೈಡ್12 mins ago

Demat Account: ಡಿಮ್ಯಾಟ್ ಖಾತೆದಾರರಿಗೆ ಗುಡ್‌ ನ್ಯೂಸ್:‌ ನಾಮಿನಿ ಘೋಷಣೆಗೆ ಸಮಯ ವಿಸ್ತರಣೆ

HD Kumaraswamy Press meet vs congress government
ಕರ್ನಾಟಕ19 mins ago

BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ODI AUS
Live News37 mins ago

ind vs Aus : ಮೂರನೇ ಏಕ ದಿನ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದಿಂದ ಬ್ಯಾಟಿಂಗ್ ಆಯ್ಕೆ

Madhya Pradesh Rape News
ಕ್ರೈಂ50 mins ago

ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!

CM siddaramaiah at Chamarajanagar
ಕರ್ನಾಟಕ1 hour ago

CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ

Google
EXPLAINER1 hour ago

ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ

HD DeveGowda HD Kumaraswamy and PM Narendra Modi on BJP JDS alliance
ಕರ್ನಾಟಕ1 hour ago

BJP JDS alliance : ವಿಜಯದಶಮಿ ನಂತರ ಜೆಡಿಎಸ್‌ ಸೀಟು ಹಂಚಿಕೆ ಅಂತಿಮ ಮಾತುಕತೆ!

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

bangalore bandh
ಕರ್ನಾಟಕ1 day ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

dina bhavishya
ಪ್ರಮುಖ ಸುದ್ದಿ9 hours ago

Dina Bhavishya : ನಿಮಗೆ ಆಗದವರು ಪಿತೂರಿ ಮಾಡ್ಬಹುದು ಎಚ್ಚರ!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ2 days ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ2 days ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ2 days ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ2 days ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ3 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

ಟ್ರೆಂಡಿಂಗ್‌