Site icon Vistara News

Kiccha Sudeep: ಸುದೀಪ್ ಅವರ ಕಾಲು ಹಿಡಿದರೂ ಕರುಣೆ ತೋರಿಲ್ಲ; ನಿರ್ಮಾಪಕ ಕುಮಾರ್‌ ಆರೋಪವೇನು?

Producer MN Kumar Press Meet

ಬೆಂಗಳೂರು; ಸ್ಯಾಂಡಲ್‌ವುಡ್‌ ಹಿರಿಯ ನಿರ್ಮಾಪಕ, ರಂಗ SSLC, ಆಟೋಗ್ರಾಫ್, ಸ್ವಾತಿ ಮುತ್ತು ಹೀಗೆ ಹಲವು ಸಿನಿಮಾಗಳಿಗೆ ವಿತರಣೆ ಮಾಡಿರುವ ವಿತರಕ ಎಂ ಎನ್‌ ಕುಮಾರ್‌ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ (Kiccha Sudeep) ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ನಿರ್ಮಾಪಕ ಎಂ ಎನ್‌ ಕುಮಾರ್‌ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ. ʻʻಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್‌ ಅವರು ಕೈಗೆ ಸಿಗುತ್ತಿಲ್ಲ. ‌ಈಗಾಗಲೇ ಸುದೀಪ್‌ ಅವರಿಗೆ ಅಡ್ವಾನ್ಸ್‌ ಕೂಡ ಕೊಟ್ಟಿದ್ದೇನೆʼʼ ಎಂದು ನಿರ್ಮಾಪಕ ಎಂ ಎನ್‌ ಕುಮಾರ್‌ ಆರೋಪಿಸಿದ್ದಾರೆ.

ನಿರ್ಮಾಪಕ ಎಂ ಎನ್‌ ಕುಮಾರ್‌ ಆರೋಪವೇನು?

ನಿರ್ಮಾಪಕ ಎಂ ಎನ್‌ ಕುಮಾರ್‌ ಮಾಧ್ಯಮದ ಮುಂದೆ ಮಾತನಾಡಿ ʻʻಈಗಾಗಲೇ ಸುದೀಪ್‌ ಅವರಿಗೆ ಒಂದು ಸಿನಿಮಾದ ಅಡ್ವಾನ್ಸ್ ಕೂಡ ಕೊಟ್ಟಿದ್ದೇವೆ. ಆದರೆ ಸಿನಿಮಾ ಮಾಡಲು ಒಪ್ಪುತ್ತಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್‌ ಅವರು ಕೈಗೆ ಸಿಗುತ್ತಿಲ್ಲ. ‌ ಗೊಂದಲ ಮಾಡುತ್ತಿದ್ದಾರೆ. ಸುದೀಪ್‌ ಅವರ ಮೇಲಿನ ನಂಬಿಕೆ ಮೇಲೆ ಹಣ ಕೊಟ್ಟಿದ್ದೇನೆ. ನಾನು ಯಾಕೆ ವಾಪಸ್ ಹಣ ಕೇಳಬೇಕು? ಅವರು‌ ಹೇಳಿದಂತೆ ಸಿನಿಮಾ ಮಾಡಿಕೊಡಲಿ‌. ‘ಮುತ್ತತ್ತಿ ಸತ್ಯರಾಜ್’ ಎಂಬ ಟೈಟಲ್ ಫಿಕ್ಸ್ ಆಗಿತ್ತು. ವಾಣಿಜ್ಯ ಮಂಡಳಿಗೆ ಬರಲಿ. ಸುದೀಪ್‌ ಅವರು ನನ್ನ ಎದುರಿಗೆ ಬಂದು ಮಾತನಾಡಲಿ. ನಾವೇ ದುಡ್ಡು ಕೊಟ್ಟು ನಾವೇ ಬೇಡಬೇಕು. ಸುದೀಪ್ ಅವರು ಮಾಡಿರುವ ಈ ಕೆಲಸದಿಂದ ನನಗೆ 8 ವರ್ಷ ಹಾಳಾಗಿದೆ. ಹಣಕೊಟ್ಟು ಬೇಡುವಂತಹ ಸ್ಥಿತಿ ನನಿಗೆ ಬಂದಿದೆʼʼ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರ್‌ ಅವರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ.

ಇದನ್ನೂ ಓದಿ: Kiccha Sudeep : ಸುದೀಪ್ ಹೊಸ ಸಿನಿಮಾದ ಟೀಸರ್ ರೆಡಿ! ಬಿಡುಗಡೆಯ ಡೇಟ್ ಗೊತ್ತಾಯ್ತಾ?

ಫ್ರೀ ಆಗಿ ಯಾವ ಸಿನಿಮಾ ಮಾಡಿಕೊಟ್ಟಿಲ್ಲ!

ʻʻಹಣ ವಾಪಸ್ ಕೊಟ್ಟರೂ ಸರಿ , ಸಿನಿಮಾ ಮಾಡಿದ್ದರೂ ಸರಿ. ಆದರೆ ನಮ್ಮ‌ ಸಮಸ್ಯೆ ಬಗೆಹರಿಯಬೇಕು. ಪ್ರಿಯಾ ಸುದೀಪ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಳಿದರೆ ಮೊಬೈಲ್ ನಂಬರ್ ಚೇಂಜ್ ಮಾಡುತ್ತಾರೆ. ಮನೆಗೆ ಹೋದರೆ ಅವರಿಲ್ಲ ಎಂದು ಸುಳ್ಳು ಹೇಳಿ ಕಳುಹಿಸುತ್ತಾರೆ. ಯಾವ ಸಿನಿಮಾದಲ್ಲೂ ಸುದೀಪ್ ಒಂದು ಪೈಸೆಯನ್ನು ಬಿಟ್ಟಿಲ್ಲ. ನಂದಕಿಶೋರ್ ಅವರೇ ಸುದೀಪ್ ಅವರನ್ನು ಭೇಟಿ ಮಾಡಿಸಿದ್ದು,. 46ಸಾವಿರ ರೂ. ಅಡ್ವಾನ್ಸ್ಅನ್ನು ನಂದಕಿಶೋರ್ ಅವರಿಗೆ ಕೊಟ್ಟಿದ್ದೇನೆ. 7-8ವರ್ಷದ ವ್ಯವಹಾರ ನಮ್ಮ ಇಬ್ಬರದ್ದು. ರಂಗ SSLC ಸಿನಿಮಾದ ಪೂರ್ತಿ ಪೇಮೆಂಟ್ ತೆಗೆದುಕೊಂಡಿದ್ದರು. ಫ್ರೀ ಆಗಿ ಯಾವ ಸಿನಿಮಾವನ್ನೂ ಅವರು ಮಾಡಿಕೊಟ್ಟಿಲ್ಲʼʼ ಎಂದು ಹೇಳಿದ್ದಾರೆ.

ಸುದೀಪ್‌ ಮನೆ ಮುಂದೆ ಧರಣಿ ಮಾಡ್ತೇವೆ!

ʻʻಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಬೇಕು. ಇಲ್ಲವಾದರೆ ಸುದೀಪ್ ಅವರ ಮನೆ ಮುಂದೆ ಧರಣಿ ಮಾಡುತ್ತೇವೆ. ನಾವು ಯಾರನ್ನೂ ಬ್ಯಾನ್ ಮಡುವುದಿಲ್ಲ. ಎಂಟು ವರ್ಷಗಳಿಂದ ನಾನು ಸಿನಿಮಾ ಮಾಡಲೆಂದು ಕಾಯುತ್ತಿದ್ದೇನೆ. ಸುದೀಪ್ ಲೈವ್ ಬಂದರೆ ನಾನು ಪ್ರತಿ ದಾಖಲೆ ಕೊಡುತ್ತೇನೆ. ಸುದೀಪ್ ಅವರ ಕಾಲು ಹಿಡಿದುಕೊಂಡರೂ ಕರುಣೆ ತೋರಿಲ್ಲʼʼ ಎಂದು ಕಣ್ಣೀರು ಹಾಕಿದ್ದಾರೆ ನಿರ್ಮಾಪಕ ಕುಮಾರ್.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿ ʻʻವಾಣಿಜ್ಯ ಮಂಡಳಿಯಿಂದ ಪತ್ರ ಕಳಿಸಿದ್ದರೂ ಸುದೀಪ್ ಬಂದಿಲ್ಲ. ಮಾತೃ ಸಂಸ್ಥೆಗೆ ಅಗೌರವ ತೋರಿಸಿದ್ದಾರೆʼʼಎಂದಿದ್ದಾರೆ.

Exit mobile version