South Cinema
Kiccha Sudeep: ಸುದೀಪ್ ಅವರ ಕಾಲು ಹಿಡಿದರೂ ಕರುಣೆ ತೋರಿಲ್ಲ; ನಿರ್ಮಾಪಕ ಕುಮಾರ್ ಆರೋಪವೇನು?
Kiccha Sudeep: 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಈಗಾಗಲೇ ಸುದೀಪ್ ಅವರಿಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದೇನೆʼʼಎಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರು; ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ, ರಂಗ SSLC, ಆಟೋಗ್ರಾಫ್, ಸ್ವಾತಿ ಮುತ್ತು ಹೀಗೆ ಹಲವು ಸಿನಿಮಾಗಳಿಗೆ ವಿತರಣೆ ಮಾಡಿರುವ ವಿತರಕ ಎಂ ಎನ್ ಕುಮಾರ್ ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಫಿಲ್ಮ್ ಚೇಂಬರ್‌ನಲ್ಲಿ ನಿರ್ಮಾಪಕ ಎಂ ಎನ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ. ʻʻಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಈಗಾಗಲೇ ಸುದೀಪ್ ಅವರಿಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದೇನೆʼʼ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಆರೋಪಿಸಿದ್ದಾರೆ.
ನಿರ್ಮಾಪಕ ಎಂ ಎನ್ ಕುಮಾರ್ ಆರೋಪವೇನು?
ನಿರ್ಮಾಪಕ ಎಂ ಎನ್ ಕುಮಾರ್ ಮಾಧ್ಯಮದ ಮುಂದೆ ಮಾತನಾಡಿ ʻʻಈಗಾಗಲೇ ಸುದೀಪ್ ಅವರಿಗೆ ಒಂದು ಸಿನಿಮಾದ ಅಡ್ವಾನ್ಸ್ ಕೂಡ ಕೊಟ್ಟಿದ್ದೇವೆ. ಆದರೆ ಸಿನಿಮಾ ಮಾಡಲು ಒಪ್ಪುತ್ತಿಲ್ಲ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ನಾನು ಸುದೀಪ್ ಅವರ ಜತೆ ಹಲವಾರು ಸಿನಿಮಾಗಳನ್ನು ಮಾಡಿದ್ದೇನೆ. ಸುಮಾರು 8 ವರ್ಷದಿಂದ ಒಂದು ಸಿನಿಮಾ ಮಾಡಬೇಕಿತ್ತು. ನಮ್ಮಿಬ್ಬರ ನಡುವೆ ಬಾಂಧವ್ಯವೂ ಚೆನ್ನಾಗಿತ್ತು. ಆದರೀಗ ಸುದೀಪ್ ಅವರು ಕೈಗೆ ಸಿಗುತ್ತಿಲ್ಲ. ಗೊಂದಲ ಮಾಡುತ್ತಿದ್ದಾರೆ. ಸುದೀಪ್ ಅವರ ಮೇಲಿನ ನಂಬಿಕೆ ಮೇಲೆ ಹಣ ಕೊಟ್ಟಿದ್ದೇನೆ. ನಾನು ಯಾಕೆ ವಾಪಸ್ ಹಣ ಕೇಳಬೇಕು? ಅವರು ಹೇಳಿದಂತೆ ಸಿನಿಮಾ ಮಾಡಿಕೊಡಲಿ. ‘ಮುತ್ತತ್ತಿ ಸತ್ಯರಾಜ್’ ಎಂಬ ಟೈಟಲ್ ಫಿಕ್ಸ್ ಆಗಿತ್ತು. ವಾಣಿಜ್ಯ ಮಂಡಳಿಗೆ ಬರಲಿ. ಸುದೀಪ್ ಅವರು ನನ್ನ ಎದುರಿಗೆ ಬಂದು ಮಾತನಾಡಲಿ. ನಾವೇ ದುಡ್ಡು ಕೊಟ್ಟು ನಾವೇ ಬೇಡಬೇಕು. ಸುದೀಪ್ ಅವರು ಮಾಡಿರುವ ಈ ಕೆಲಸದಿಂದ ನನಗೆ 8 ವರ್ಷ ಹಾಳಾಗಿದೆ. ಹಣಕೊಟ್ಟು ಬೇಡುವಂತಹ ಸ್ಥಿತಿ ನನಿಗೆ ಬಂದಿದೆʼʼ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರ್ ಅವರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ.
ಇದನ್ನೂ ಓದಿ: Kiccha Sudeep : ಸುದೀಪ್ ಹೊಸ ಸಿನಿಮಾದ ಟೀಸರ್ ರೆಡಿ! ಬಿಡುಗಡೆಯ ಡೇಟ್ ಗೊತ್ತಾಯ್ತಾ?
ಫ್ರೀ ಆಗಿ ಯಾವ ಸಿನಿಮಾ ಮಾಡಿಕೊಟ್ಟಿಲ್ಲ!
ʻʻಹಣ ವಾಪಸ್ ಕೊಟ್ಟರೂ ಸರಿ , ಸಿನಿಮಾ ಮಾಡಿದ್ದರೂ ಸರಿ. ಆದರೆ ನಮ್ಮ ಸಮಸ್ಯೆ ಬಗೆಹರಿಯಬೇಕು. ಪ್ರಿಯಾ ಸುದೀಪ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಳಿದರೆ ಮೊಬೈಲ್ ನಂಬರ್ ಚೇಂಜ್ ಮಾಡುತ್ತಾರೆ. ಮನೆಗೆ ಹೋದರೆ ಅವರಿಲ್ಲ ಎಂದು ಸುಳ್ಳು ಹೇಳಿ ಕಳುಹಿಸುತ್ತಾರೆ. ಯಾವ ಸಿನಿಮಾದಲ್ಲೂ ಸುದೀಪ್ ಒಂದು ಪೈಸೆಯನ್ನು ಬಿಟ್ಟಿಲ್ಲ. ನಂದಕಿಶೋರ್ ಅವರೇ ಸುದೀಪ್ ಅವರನ್ನು ಭೇಟಿ ಮಾಡಿಸಿದ್ದು,. 46ಸಾವಿರ ರೂ. ಅಡ್ವಾನ್ಸ್ಅನ್ನು ನಂದಕಿಶೋರ್ ಅವರಿಗೆ ಕೊಟ್ಟಿದ್ದೇನೆ. 7-8ವರ್ಷದ ವ್ಯವಹಾರ ನಮ್ಮ ಇಬ್ಬರದ್ದು. ರಂಗ SSLC ಸಿನಿಮಾದ ಪೂರ್ತಿ ಪೇಮೆಂಟ್ ತೆಗೆದುಕೊಂಡಿದ್ದರು. ಫ್ರೀ ಆಗಿ ಯಾವ ಸಿನಿಮಾವನ್ನೂ ಅವರು ಮಾಡಿಕೊಟ್ಟಿಲ್ಲʼʼ ಎಂದು ಹೇಳಿದ್ದಾರೆ.
ಸುದೀಪ್ ಮನೆ ಮುಂದೆ ಧರಣಿ ಮಾಡ್ತೇವೆ!
ʻʻಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಬೇಕು. ಇಲ್ಲವಾದರೆ ಸುದೀಪ್ ಅವರ ಮನೆ ಮುಂದೆ ಧರಣಿ ಮಾಡುತ್ತೇವೆ. ನಾವು ಯಾರನ್ನೂ ಬ್ಯಾನ್ ಮಡುವುದಿಲ್ಲ. ಎಂಟು ವರ್ಷಗಳಿಂದ ನಾನು ಸಿನಿಮಾ ಮಾಡಲೆಂದು ಕಾಯುತ್ತಿದ್ದೇನೆ. ಸುದೀಪ್ ಲೈವ್ ಬಂದರೆ ನಾನು ಪ್ರತಿ ದಾಖಲೆ ಕೊಡುತ್ತೇನೆ. ಸುದೀಪ್ ಅವರ ಕಾಲು ಹಿಡಿದುಕೊಂಡರೂ ಕರುಣೆ ತೋರಿಲ್ಲʼʼ ಎಂದು ಕಣ್ಣೀರು ಹಾಕಿದ್ದಾರೆ ನಿರ್ಮಾಪಕ ಕುಮಾರ್.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್ ಮಾತನಾಡಿ ʻʻವಾಣಿಜ್ಯ ಮಂಡಳಿಯಿಂದ ಪತ್ರ ಕಳಿಸಿದ್ದರೂ ಸುದೀಪ್ ಬಂದಿಲ್ಲ. ಮಾತೃ ಸಂಸ್ಥೆಗೆ ಅಗೌರವ ತೋರಿಸಿದ್ದಾರೆʼʼಎಂದಿದ್ದಾರೆ.
South Cinema
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್‌ಗೆ ಹೃದಯಾಘಾತ?
Heart attack : ಸ್ಯಾಂಡಲ್‌ವುಡ್ ಹಿರಿಯ ಕಲಾವಿದ, ಹಾಸ್ಯ ನಟ ಬ್ಯಾಂಕ್ ಜನಾರ್ದನ್ ಅವರನ್ನು ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೃದಯಾಘಾತ ಆಗಿದೆ ಎಂದು ಹೇಳಲಾಗುತ್ತಿದ್ದರೂ ಅವರ ಪುತ್ರ ಇದನ್ನು ಅಲ್ಲಗಳೆದಿದ್ದಾರೆ.
ಬೆಂಗಳೂರು: ಹಿರಿಯ ನಟ, ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ್ (Bank Janardhan) ಅವರಿಗೆ ಹೃದಯಾಘಾತ (Heart attack) ಆಗಿದೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಆದರೆ, ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಪುತ್ರ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಬ್ಯಾಂಕ್ ಜನಾರ್ದನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಸಿಯುಗೆ ದಾಖಲು ಮಾಡಲಾಗಿದೆ. ಹೃದಯಾಘಾತ ಆಗಿದೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದೆ. ಆದರೆ, ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿದೆ ಅಷ್ಟೇ. ಅವರಿಗೆ ಹಾರ್ಟ್ ಅಟ್ಯಾಕ್ ಆಗಿಲ್ಲ ಎಂದು ಅವರ ಪುತ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾಂಕ್ ಜನಾರ್ದನ್ ಅವರಿಗೆ 74 ವರ್ಷ ವಯಸ್ಸಾಗಿದೆ. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ಈವರೆಗೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಸ್ಯ ಸೇರಿದಂತೆ ಗಂಭೀರ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದು, ನಟನೆಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜನಾರ್ದನ್, ತಮ್ಮದೇ ಆದ ಅಭಿಮಾನಿ ವರ್ಗವನ್ನು ಕಲೆಹಾಕಿದ್ದರು.
ನಾಳೆ ಆಂಜಿಯೋಗ್ರಾಮ್?
ಸದ್ಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಬುಧವಾರ ಅವರಿಗೆ ಆಂಜಿಯೋಗ್ರಾಮ್ (Angiogram test) ಮಾಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜನಾರ್ದನ್ ಅವರನ್ನು ನೋಡಲು ಯಾರಿಗೂ ಅನುಮತಿ ನೀಡುತ್ತಿಲ್ಲ.
ಬಹುತೇಕ ಸ್ಟಾರ್ ನಟರ ಜತೆ ನಟನೆ
ಗೌರಿ ಗಣೇಶ, ಕೌರವ, ರಂಗ ಎಸ್.ಎಸ್.ಎಲ್.ಸಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜತೆ ಇವರು ನಟನೆ ಮಾಡಿದ ಖ್ಯಾತಿಯನ್ನು ಹೊಂದಿದ್ದಾರೆ.
ಉತ್ತಮ ಹಾಸ್ಯ ನಟ
ಬ್ಯಾಂಕ್ ಜನಾರ್ದನ್ ಕನ್ನಡ ಸಿನಿಮಾ ರಂಗದ ಮಟ್ಟಿಗೆ ಒಬ್ಬ ಅತ್ಯುತ್ತಮ ಹಾಸ್ಯ ನಟರಾಗಿದ್ದಾರೆ. ಸಹಜ ನಟನೆ ಮೂಲಕ ಗಮನ ಸೆಳೆಯುವ ಇವರು, ತಮ್ಮ ಹಾವ-ಭಾವ ಹಾಗೂ ಮಾತಿನ ಮೂಲಕ ಹಾಸ್ಯವನ್ನು ಹಂಚುತ್ತಿದ್ದರು. ಉಪೇಂದ್ರ ನಿರ್ದೇಶನದ ಶ್! ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಮಾಡಿದ ಇವರ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದಲ್ಲದೆ ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ , ಗಣೇಶ ಸುಬ್ರಹ್ಮಣ್ಯ, ಕೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ಧಾರಾವಾಹಿಯಲ್ಲೂ ನಟನೆ
ಸಿನಿಮಾಗಳ ಜತೆ ಜತೆಯಲ್ಲಿ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ದನ್ ಅಲ್ಲಿಯೂ ನಗಿಸುವ ಪ್ರಯತ್ನವನ್ನು ಮುಂದುವರಿಸಿದ್ದರು. ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲಿ ನಟಿಸಿ ಮನೆ ಮನೆ ಮಾತಾಗಿದ್ದಾರೆ.
ಇದನ್ನೂ ಓದಿ: Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್ ಸಲಹೆ
ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ
ಈಗ ಬ್ಯಾಂಕ್ ಜನಾರ್ದನ್ ಅವರು ಶೀಘ್ರ ಗುಣಮುಖರಾಗಲಿ ಎಂದು ಕನ್ನಡ ಕಲಾವಿದರು, ಸಿನಿಮಾ ಅಭಿಮಾನಿಗಳು ಕೋರಿಕೊಂಡಿದ್ದಾರೆ.
South Cinema
Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್ ಸಲಹೆ
Cauvery water dispute : ಕಾವೇರಿ ನೀರು ವಿವಾದ ಸಂಬಂಧ ಕಿಚ್ಚ ಸುದೀಪ್ ರೈತರ ಪರ ನಿಂತಿದ್ದಾರೆ. ರೈತರ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಸದ್ಯ ಬಂದಿರುವ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿಕೊಳ್ಳಲು ತಮಿಳುನಾಡು ಸಿಎಂ ಜತೆಗೆ ಮಾತುಕತೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ವಿವಾದ ಭುಗಿಲೇಳುತ್ತಲೇ ಇದೆ. ತಮಿಳುನಾಡಿಗೆ ನೀರು ಬಿಡುತ್ತಿರುವ (Cauvery water to Tamil Nadu) ರಾಜ್ಯ ಸರ್ಕಾರದ (Government of Karnataka) ನಿಲುವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವೇಳೆ ಮಂಗಳವಾರ (ಸೆಪ್ಟೆಂಬರ್ 26) ರಾಜಧಾನಿ ಬೆಂಗಳೂರನ್ನು ಬಂದ್ (Bangalore bandh) ಮಾಡಿ ಆಕ್ರೋಶವನ್ನು ಹೊರಹಾಕಲಾಗಿದೆ. ಅಲ್ಲದೆ, ಚಿತ್ರನಟರು ಕಾವೇರಿ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿರುವ ಈ ಹೊತ್ತಿನಲ್ಲಿ ಒಬ್ಬೊಬ್ಬರಾಗಿಯೇ ಮಾತನಾಡುತ್ತಿದ್ದಾರೆ. ಸೋಮವಾರ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ದರ್ಶನ್ (Actor Darshan) ಭಾಗಿಯಾಗಿ ಕಾವೇರಿ ಪರ ಧ್ವನಿ ಎತ್ತಿದ್ದರು. ಈಗ ನಟ ಕಿಚ್ಚ ಸುದೀಪ್ (Kichcha Sudeep) ಟ್ವೀಟ್ ಮಾಡುವ ಮೂಲಕ ಕಾವೇರಿ ನಮ್ಮ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.
ಕಾವೇರಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಸುದೀಪ್ ಟ್ವೀಟ್ ಮೂಲಕ ಹೇಳಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮಿಳುನಾಡು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: Cauvery water dispute : ನಿರುತ್ತರ ಮುಖ್ಯಮಂತ್ರಿ ಎಂದು ಟೀಕಿಸಿದ ಬಿಜೆಪಿ; ಸಿದ್ದರಾಮಯ್ಯಗೆ 7 ಪ್ರಶ್ನೆ!
ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಬೇಕು ಎಂಬ ಸಲಹೆಯನ್ನು ಸಹ ಕಿಚ್ಚ ಸುದೀಪ್ ಇದೇ ವೇಳೆ ನೀಡಿದ್ದಾರೆ. ಅಲ್ಲದೆ, ಈ ಜಲ ವಿವಾದವನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು ಎಂಬ ಕಳಕಳಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ ಟ್ವೀಟ್‌ನಲ್ಲೇನಿದೆ?
“ಸಮಸ್ತ ಕನ್ನಡ ಜನತೆಗೆ ನಮಸ್ಕಾರ; ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು ರೈತರು ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಕೃಷಿ ಮಾತ್ರವಲ್ಲದೆ, ಜನರ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಮುಂಗಾರಿನ ಹೊರತಾಗಿ ನಮಗೆ ಕುಡಿಯುವ ನೀರಿಗಾಗಿ ಬೇರೆ ಮೂಲಗಳಿಲ್ಲ. ನಾವು ಕಾವೇರಿಯನ್ನೇ ನಂಬಿದ್ದೇವೆ. ನಾನು ತಿಳಿದುಕೊಂಡಂತೆ ಬರ ಅಧ್ಯಯನ ಸಮಿತಿ- ಕಾವೇರಿ ಸಮಿತಿಯ ತಂತ್ರಜ್ಞರು ಕೂಡಲೇ ಟ್ರಿಬ್ಯುನಲ್ ನ್ಯಾಯಾಲಯಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಕರ್ನಾಟಕದ ಬರ ಪರಿಸ್ಥಿತಿಯನ್ನು ತುರ್ತಾಗಿ ಮನವರಿಕೆ ಮಾಡಿಕೊಡಬೇಕಿದೆ.
ಹಿಂದಿನ ಕೆಲವು ಮುಖ್ಯಮಂತ್ರಿಗಳಂತೆಯೇ ನಮ್ಮ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಸೌಹಾರ್ದ ಮಾತುಕತೆಯ ಮೂಲಕ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದೇನೆ. ಸದ್ಯದ ಬರ, ಜಲ ಹಾಹಾಕಾರಕ್ಕೆ ಪರಿಹಾರ ಒದಗಿಸಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.
ಇದನ್ನೂ ಓದಿ: Cauvery water dispute : ಕಾವೇರಿ ಮಾತುಕತೆಗೆ ನಾವು ಸಿದ್ಧ; ಮೋದಿ ಮನಸ್ಸು ಮಾಡಲಿ ಎಂದ ಸಿದ್ದರಾಮಯ್ಯ
— Kichcha Sudeepa (@KicchaSudeep) September 26, 2023
ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಪರಿಸ್ಥಿಯನ್ನು ಅರ್ಥ ಮಾಡಿಸಲು ಎಲ್ಲ ಪಕ್ಷದ ನಾಯಕರು ಒಗ್ಗಟ್ಟಾಗಿ ಮುಂದಾಗಲು ಮನವಿ ಮಾಡುತ್ತೇನೆ. ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ. ಆದರೆ, ನಮ್ಮ ಕುಡಿಯುವ ನೀರಿನ ಅಭಾವ ಮೊದಲು ಬಗೆಹರಿಯಲಿ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿದು ಹೋರಾಟಕ್ಕೆ ಜಯವಾಗಲಿ. ಇದರ ಜತೆಗೆ ಉತ್ತರ ಕರ್ನಾಟಕದ ಕೃಷ್ಣಾ ನದಿ – ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ವಿವಾದಗಳು ಬಗೆಹರಿದು ಜನರ ಸಂಕಷ್ಟ ತೀರಲೆಂದು ಆಶಿಸುವೆ. ನಮ್ಮ ಜಲ ನಮ್ಮ ಹಕ್ಕು” ಎಂದು ಕಿಚ್ಚ ಸುದೀಪ್ ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ.
South Cinema
Pooja Hegde: ಖ್ಯಾತ ಕ್ರಿಕೆಟಿಗನ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪೂಜಾ ಹೆಗ್ಡೆ?
Pooja Hegde: ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ವರದಿಯಾಗಿದೆ.ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ.
ಇದನ್ನೂ ಓದಿ: Pooja Hegde: ಕೆಂಪು ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಂಡ ಪೂಜಾ ಹೆಗ್ಡೆ
South Cinema
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
Darshan Thoogudeepa: ನಟ ದರ್ಶನ್ ಅವರ ಬೇಜವಾಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.
ಮಂಡ್ಯ: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್ ಕಲಾವಿದರೂ ಕೂಡ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಕೂಡ ರೈತರ ಬೆಂಬಲಕ್ಕೆ ನಿಂತಿದ್ದರು. ಈ ವೇಳೆ ಕನ್ನಡ ಸಿನಿಮಾ ಕಲಾವಿದರು ಅದಕ್ಕೆ ಬರಲಿಲ್ಲ, ಇದಕ್ಕೆ ಬರಲಿಲ್ಲ ಎಂದು ಹೇಳುತ್ತೀರಲ್ಲ ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಮಿಳು ನಟರು ಹಾಗೂ ಅವರ ಸಿನಿಮಾಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಇದೀಗ ನಟ ದರ್ಶನ್ ಅವರ ಬೇಜಾವಬ್ದಾರಿತನದ ಹೇಳಿಕೆ ವಿರುದ್ಧ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಆಕ್ರೋಶ ಹೊರ ಹಾಕಿದೆ.
ನಟ ದರ್ಶನ್ ವಿರುದ್ಧ ಭುಗಿಲೆದ್ದ ಆಕ್ರೋಶ
ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಹೋರಾಟ ನಡೆಸಿದೆ. ಕಾವೇರಿ ವಿಚಾರವಾಗಿ ನಟ ದರ್ಶನ್ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ʻʻನಟ ದರ್ಶನ್ ಅವರು ಕೂಡಲೇ ರೈತರಲ್ಲಿ ಕ್ಷಮೆ ಕೇಳಬೇಕು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ದರ್ಶನ್ ಬಂದರೆ ಬಲ ಸಿಗುತ್ತದೆ ಎಂದು ಭಾವಿಸಿದ್ದೇವು. ಅದಕ್ಕಾಗಿಯೇ ನಾವು ಆಹ್ವಾನಿಸಿದ್ದೇವು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿಯುತ ನಟನಾಗಿ ಹೋರಾಟಕ್ಕೆ ದನಿಗೂಡಿಸಿಬೇಕಿತ್ತುʼʼ ಎಂದು ರೈತರು ದರ್ಶನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ: Darshan Thoogudeepa: ತಮಿಳು ಸಿನಿಮಾ ಯಾಕೆ ನೋಡಿದ್ರಿ? ಕಾವೇರಿ ವಿಚಾರದಲ್ಲಿ ದರ್ಶನ್ ಕೆಂಡ
ಚಾಲೆಂಜಿಂಗ್ ಸ್ಟಾರ್ @dasadarshan BOSS
— DBoss Cult (@ItzDBOSSCult) September 25, 2023
with @nagaraj_rachaiya Anna 🥰❤️#DBoss𓃰 #D56 #Kaatera #Darshanthoogudeepa #ChallengingStarDarshan pic.twitter.com/4maJ32Ny3l
ದರ್ಶನ್ ಹೇಳಿದ್ದೇನು?
ಕಾವೇರಿ ಗಲಾಟೆ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ನಟರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಗಳು ಧ್ವನಿ ಎತ್ತುತ್ತಿಲ್ಲ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟ ದರ್ಶನ್ ಖಾರವಾಗಿಯೇ ಮಾತನಾಡಿದ್ದರು. ʻʻಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ?ʼʼ ಎಂದು ಕನ್ನಡ ಕಲಾವಿದರ ಬಗ್ಗೆ ಟೀಕೆ ಮಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದರು.
ದರ್ಶನ್ ವಿಡಿಯೊದಲ್ಲಿ ʻʻನೋಡಿ ಸ್ವಾಮಿ ಮೊನ್ನೆ ಮೊನ್ನೆಯಷ್ಟೇ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಒಬ್ಬ ವಿತರಕ 6 ಕೋಟಿಗೆ ಸಿನಿಮಾ ತಗೊಂಡ. 35, 36 ಕೋಟಿ ರೂ. ಮಾಡಿದ. ಆ ಸಿನಿಮಾವನ್ನು ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ? ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ?.” ಎಂದು ಪ್ರಶ್ನೆ ಮಾಡಿದ್ದರು. ನೀವು ಕನ್ನಡ ಸಿನಿಮಾ ನೋಡೋದಿಲ್ಲ, ನಾವೇಕೆ ಬೆಂಬಲ ನೀಡಬೇಕು ಎಂಬರ್ಥದಲ್ಲಿ ಮಾತನಾಡಿದ್ದರು.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ12 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ4 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್‌ಗೆ ಹೃದಯಾಘಾತ?
-
ಕರ್ನಾಟಕ15 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್11 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ