ಬೆಂಗಳೂರು: ದಕ್ಷಿಣದ ಪ್ರಮುಖ ನಟಿಯರಲ್ಲಿ ರಮ್ಯಾ ಕೃಷ್ಣನ್ ಕೂಡ ಒಬ್ಬರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2019 ರಲ್ಲಿ ತಮಿಳಿನ ʼಸೂಪರ್ ಡಿಲಕ್ಸ್ʼ ಚಿತ್ರದಲ್ಲಿ ಕೊನೇ ಬಾರಿ ಕಾಣಿಸಿಕೊಂಡ ಇವರು ವೆಂಕಟ್ ಪ್ರಭು ಅವರ ʼದಿ ಪಾರ್ಟಿʼ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕೂಡ ಬಿಡುಗಡೆ ಆಗಬೇಕಿದೆ.
ಇಷ್ಟು ದಿನ ಚಲನಚಿತ್ರಗಳಲ್ಲಿ ಬ್ಯುಸಿ ಆಗಿರುವ ರಮ್ಯಾ ಕೃಷ್ಣನ್ ಇದೀಗ ವೆಬ್ ಸಿರೀಸ್ ಮಾಡಲು ಮುಂದಾಗಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆ ಆಧಾರಿತ ವೆಬ್ ಸಿರೀಸ್ ಅಲ್ಲಿ ನಟಿಸಲಿದ್ದಾರೆ. ವೆಬ್ ಸಿರೀಸ್ ಹೆಸರು ಕ್ವೀನ್.
ಇದನ್ನೂ ಓದಿ | ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವುದು ಗೊತ್ತೇ?
ಮೊದಲ ಸರಣಿ ಈಗಾಗಲೇ ಬಂದಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸರಣಿಯನ್ನು ರೇಷ್ಮಾ ಫಟಾಲಾ ಬರೆದಿದ್ದು, ಗೌತಮ್ ವಾಸುದೇವ್ ಮೆನನ್ ಮತ್ತು ಪ್ರಸಾದ್ ಮುರುಗೇಶನ್ ನಿರ್ದೇಶಿಸಿದ್ದಾರೆ. ಮೊದಲ ಎಪಿಸೋಡ್ ವೆಬ್ ಸಿರೀಸ್ ಅನ್ನು ಒಟಿಟಿ ಹಾಗೂ MX ಪ್ಲೇಯರ್‌ನಲ್ಲಿ ರಿಲೀಸ್ ಮಾಡಿದ್ದು, ಭಾರಿ ಪ್ರಶಂಸೆಗೆ ಒಳಗಾಗಿದ್ದರು ರಮ್ಯಾ ಕೃಷ್ಣನ್. ಇದೀಗ ನಟಿ ಮುಂಬರುವ ಆವೃತ್ತಿಯ ಕ್ವೀನ್ 2 ನ ಪೋಸ್ಟರ್ ಹಂಚಿಕೊಂಡಿದ್ದು, ಮತ್ತೆ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಲು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಕ್ವೀನ್ 2 ತಮಿಳಿನಲ್ಲಿ ಬರುತ್ತಿದ್ದು, ರಾಜಕೀಯ ಕುರಿತಾಗಿ ಇರಲಿದ್ದು, ಪ್ರಕಟಗೊಳ್ಳುವ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಜನ ಆಕ್ಷನ್ ಮತ್ತು ಕಟೆಂಟ್‌ಗಳನ್ನು ಖಂಡಿತವಾಗಿಯೂ ಕ್ವೀನ್ 2 ಅಲ್ಲಿ ಇಷ್ಟ ಪಡುತ್ತಾರೆ ಎಂದು ಹೇಳುತ್ತಾರೆ ರಮ್ಯಾ ಕೃಷ್ಣನ್ .
ಮೊದಲ ಸೀಸನ್ ಅಲ್ಲಿ 11 ಎಪಿಸೋಡ್ ಹೊಂದಿದ್ದು, ಅನಿಖಾ ಸುರೇಂದ್ರನ್ ಹಾಗೂ ಅಂಜನಾ ಜಯಪ್ರಕಾಶ್ ನಟಿಸಿದ್ದರು. ಇಂದ್ರಜಿತ್ ಸುಕುಮಾರನ್, ವಂಶಿ ಕೃಷ್ಣ, ತುಳಸಿ, ಸೋನಿಯಾ ಅಗರ್ವಾಲ್, ಪೋಷಕ ಪಾತ್ರವರ್ಗದೊಂದಿಗೆ ಬಣ್ಣ ಹಚ್ಚಿದ್ದಾರೆ.
ಕ್ವೀನ್ ಮೊದಲ ವೆಬ್ ಸರಣಿ ಯಶಸ್ಸಿನ ನಂತರ ಕ್ವೀನ್ 2 ಮಾಡಲು ನಿರ್ಧಾರಮಾಡಲಾಗಿದೆ ಎಂದು ಬಹಿರಂಗ ಪಡಿಸಿದೆ. ರಮ್ಯಾ ಕೃಷ್ಣ ಕನ್ನಡದಲ್ಲಿಯೂ ಕ್ರೇಜಿ ಸ್ಟಾರ್ ರವಿಂಚಂದ್ರನ್ ಹಾಗೂ ಸುದೀಪ್ ಅವರ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದರು. ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣನ್ ಮತ್ತು ತಲೈವಿ, ಕಂಗನಾ ರಾಣಾವತ್ ಅವರ ಸಿನಿಮಾ ಕೂಡ ಜಯಲಲಿತಾ ಕಾನ್‌ಸೆಪ್ಟ್ ಹೊಂದಿತ್ತು. ಇವೆರಡು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದವು.
ಇದನ್ನೂ ಓದಿ | Vikrant Rona Movie: ‘ರಾ ರಾ ರಕ್ಕಮ್ಮ’ ಸಾಂಗ್ ರಿಲೀಸ್