Site icon Vistara News

Radhika Pandit | ಮಗ ಯಥರ್ವ್‌ ಫೋಟೊ ಹಾಕಿ ಎಲ್ಲೋ ನೋಡಿದ ಹಾಗಿದೆ ಅಲ್ವಾ ಅಂದಿದ್ಯಾಕೆ?

radhika Pandit

ಬೆಂಗಳೂರು : ಸ್ಯಾಂಡಲ್‌ವುಡ್‌ ಮೊಗ್ಗಿನ ಮನಸಿನ ಬೆಡಗಿ ರಾಧಿಕಾ ಪಂಡಿತ್ (Radhika Pandit) ಮದುವೆ ನಂತರ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟಿದ್ದಾರೆ. ಕೇವಲ ಕುಟುಂಬಕ್ಕೆ ಹಾಗೂ ತಮ್ಮ ಮಕ್ಕಳಿಗೆ ಹೆಚ್ಚು ಸಮಯ ನೀಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ನಟಿ ಇದೀಗ ಮಗ ಯಥರ್ವ್‌ ಬೀಚ್‌ನಲ್ಲಿ ಸಮುದ್ರದತ್ತ ಮುಖ ಮಾಡಿ ನಿಂತಿರುವ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯ ಸ್ಟೋರಿ ಲಿಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

ಇದಕ್ಕೆ ರಾಧಿಕಾ, ಎಲ್ಲೋ ನೋಡಿದ ಹಾಗಿದೆ ಅಲ್ಲವಾ? ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಈ ಫೋಟೊ ವಿಶೇಷತೆ ಏನಂದರೆ ಯಥರ್ವ್, ಯಶ್​ ರೀತಿಯಲ್ಲಿ ಪೋಸ್​ ಕೊಟ್ಟಿರುವುದು.

ಈ ಫೋಟೊ ನೋಡಿದರೆ ನಮಗೆ ಕೆಜಿಎಫ್​-೨ ಸಿನಿಮಾ ನೆನಪಾಗುತ್ತದೆ ಎಂದು ಅಭಿಮಾನಿಗಳು ಕಮೆಂಟ್‌ ಮೂಲಕ ಉತ್ತರ ನೀಡುತ್ತಿದ್ದಾರೆ. ಕೆಜಿಎಫ್​ ಅಭಿಮಾನಿಗಳಿಗೆ ತಕ್ಷಣ ರಾಕಿಭಾಯ್‌​ ಕಣ್ಮುಂದೆ ಬರುವಂತಿದೆ. ರಾಕಿ ಭಾಯ್‌ ಯಶ್‌ ತರ ಯಥರ್ವ್ ಕೊಟ್ಟಿರುವ ಫೋಟೊ ಈಗ ವೈರಲ್‌ ಆಗುತ್ತಿದೆ.

ರಾಧಿಕಾ ಹಾಗೂ ಯಶ್‌ ಯಾವಾಗಲೂ ತಮ್ಮ ಮಕ್ಕಳ ಪೋಟೊ ಹಾಗೂ ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ. ಐರಾ ಹಾಗೂ ಯಥರ್ವ್‌ ತುಂಟಾಟಗಳನ್ನು ನೋಡಿ ಯಶ್‌ ಮತ್ತು ರಾಧಿಕಾ ಫ್ಯಾನ್ಸ್‌ ಶೇರ್‌ ಮಾಡಿ ಸಂತಸವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ | Vikram Trailer: ಯಶ್‌ ಕೈಲಿದ್ದ ʼದೊಡ್ಡಮ್ಮʼ ಇದೀಗ ಕಮಲ್‌ ಹಾಸನ್‌ ಕೈಯಲ್ಲಿ!

Exit mobile version