Site icon Vistara News

Raj B. Shetty Birthday | ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿಗೆ ಜನುಮ ದಿನದ ಸಂಭ್ರಮ

Raj B. Shetty

ಬೆಂಗಳೂರು : ʻಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಕರಾವಳಿಯ ಪ್ರತಿಭೆ ನಟ ರಾಜ್‌ ಬಿ ಶೆಟ್ಟಿಗೆ (Raj B. Shetty Birthday ) 35ರ ಜನುಮದಿನದ ಸಂಭ್ರಮ. ಮಂಗಳೂರಿನ ಎಫ್​ಎಂ ಒಂದರಲ್ಲಿ ರೇಡಿಯೋ ಜಾಕಿಯಾಗಿದ್ದ ಈ ಪ್ರತಿಭಾನ್ವಿತ ನಟ, ನಾಟಕ ತಂಡದ ಮೂಲಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದರು. ಅವರೀಗ ಕನ್ನಡ ಚಿತ್ರರಗಂದ ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕರಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸದ್ದು ಮಾಡಿದ ರಾಜ್‌

ರಾಜ್‌ ಬಿ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅಮ್ಮಚ್ಚಿಯೆಂಬ ನೆನಪು’, ‘ಮಹಿರಾ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಕಥಾ ಸಂಗಮ’ ಸಿನಿಮಾದಲ್ಲಿ ನಟಿಸಿದ್ದಾರೆ.

ಒಂದು ಮೊಟ್ಟೆಯ ಕಥೆಯನ್ನು ಆರಂಭದಲ್ಲಿ ಕಿರು ಚಿತ್ರವನ್ನಾಗಿ ಮಾಡಲು ಹೊರಟಿದ್ದರು ರಾಜ್‌ ಬಿ ಶೆಟ್ಟಿ . ಆದರೆ ಗೆಳೆಯರೊಬ್ಬರ ಸಲಹೆ ಮೇರೆಗೆ ಸಿನಿಮಾ ಮಾಡಿ ಯಶಸ್ಸು ಗಳಿಸಿದ್ದಾರೆ. 777 ಚಾರ್ಲಿಯಲ್ಲಿ ಡಾಕ್ಟರ್‌ ಪಾತ್ರದ ಮೂಲಕ ಜನರನ್ನು ರಂಜಿಸಿದ್ದಾರೆ. ಅವರ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ದೇಶಾದ್ಯಂತ ಸಖತ್‌ ಸದ್ದು ಮಾಡಿತ್ತು.

ಇದನ್ನೂ ಓದಿ | ಹುಟ್ಟು ಹಬ್ಬದ ಸಂಭ್ರಮದಲ್ಲಿ ಸೃಜನ್‌ ಲೋಕೇಶ್‌

ಅವರ ʻತುರ್ತು ನಿರ್ಗಮನ, ರಾಮನ ಅವತಾರʼ ಸಿನಿಮಾಗಳು ತೆರೆಗೆ ಬರಲಿರುವ ಚಿತ್ರಗಳಾಗಿವೆ. ಕೇವಲ ನಟನಲ್ಲದೇ ಬರಹಗಾರರೂ ಆಗಿರುವರಾಜ್‌ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಚಿತ್ರಗಳಿಗೆ ಚಿತ್ರಕಥೆಯನ್ನು ಬರೆದು, ನಟನೆ ಜತೆ ನಿರ್ದೇಶನವನ್ನೂ ಮಾಡಿದ್ದಾರೆ.

ರಾಜ್‌ ಬಿ ಶೆಟ್ಟಿ ಮಾಡಿರುವ ಸಿನಿಮಾಗಳ ಪ್ರತಿ ಪಾತ್ರಗಳೂ ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ಒಂದು ಮೊಟ್ಟೆಯ ಕಥೆ ಸಿನಿಮಾಗೆ 65ನೆಯ ಫಿಲ್ಮ್‌ಫೇರ್‌ನಲ್ಲಿ ಒಳ್ಳೆಯ ನಿರ್ದೇಶಕ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಿನಿಮಾ ಮೂಲಕ ಜನ ಮನ್ನಣೆ ಪಡೆದ ರಾಜ್‌

2008ರಲ್ಲಿ ಬಿಡುಗಡೆಗೊಂಡ ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ , ಖ್ಯಾತ ಲೇಖಕಿ ವೈದೇಹಿ ಅವರ ಸಣ್ಣ ಕಥೆ ಆಧಾರಿತ ʻಅಮ್ಮಚ್ಚಿಯೆಂಬ ನೆನಪುʼ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಪಾತ್ರ ಅಭಿಮಾನಿಗಳನ್ನು ರಂಜಿಸಿತ್ತು. ʻವೆಂಕಪ್ಪಯ್ಯʼ ಪಾತ್ರದ ಮೂಲಕ ರಾಜ್‌ ಬಿ ಶೆಟ್ಟಿ ಮಿಂಚಿದ್ದರು. ಈ ಸಿನಿಮಾ ಜನರಿಂದ ಉತ್ಸಾಹಭರಿತ ವಿಮರ್ಶೆಗಳನ್ನು ಪಡೆಯಿತು. ಮತ್ತು ಒಂದು ಮೊಟ್ಟೆಯ ಕಥೆಯಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಕಾಣಿಸಿಕೊಂಡ ರಾಜ್‌ ತಮ್ಮ ನಿರ್ದೇಶನದ ʻಗರುಡ ಗಮನ ವೃಷಭ ವಾಹನʼ ಸಿನಿಮಾದಲ್ಲಿ ಶಿವ ಎಂಬ ಪಾತ್ರದ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದರು.

ಇದನ್ನೂ ಓದಿ | Golden Star Ganesh Birthday| ನಾವಾಡದ ಮಾತೆಲ್ಲವ ಮಳೆಯಾಗಿ ಸುರಿಸಿದ ಹುಡುಗ!

2021 ರಲ್ಲಿ ತೆರೆಕಂಡ ʻಗರುಡ ಗಮನ ವೃಷಭ ವಾಹನʼ ಸಿನಿಮಾ, ಶಿವ ಪಾತ್ರದಾರಿಯಾಗಿ ರಾಜ್‌ ಬಿ ಶೆಟ್ಟಿ ಬಣ್ಣ ಹಚ್ಚಿದರೆ, ಹರಿ ಪಾತ್ರದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದರು. ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ರಾಜ್‌ ಬಿ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಸೆಲೆಬ್ರಿಟಿಗಳಿಂದ ಹಾಗೂ ಅಭಿಮಾನಿಗಳಿಂದ ಶುಭಾಶಯಗಳು ಬರುತ್ತಿವೆ. ಇನ್ನೂ ರಾಜ್‌ ಬಿ ಶೆಟ್ಟಿ ಹೊಸ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರಾ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ | Golden Star | ಜನುಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದೇಕೆ ಗಣೇಶ್‌?

Exit mobile version