Site icon Vistara News

Jailer Release Date: ರಜನಿಕಾಂತ್‌ ನಟನೆಯ ʻಜೈಲರ್‌ʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌: ಹೇಗಿದೆ ಪ್ರೊಮೊ?

Jailer Release Date

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ನಟನೆಯ ʻಜೈಲರ್‌ʼ ಸಿನಿಮಾದ (Jailer Release Date) ಬಿಡುಗಡೆಯ ದಿನಾಂಕ ಪ್ರಕಟಿಗೊಂಡಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮೂಡಿ ಬರುತ್ತಿರುವ ಜೈಲರ್ ಸಿನಿಮಾ ವಿಶ್ವಾದ್ಯಂತ ಆಗಸ್ಟ್‌ 10ರಂದು ತೆರೆ ಕಾಣುತ್ತಿದೆ.

ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್‌ ತಮ್ಮ ಟ್ವಿಟರ್‌ನಲ್ಲಿ ಹೊಸ ಪ್ರೋಮೊದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜ್‌ ಕುಮಾರ್‌ ಸೇರಿದಂತೆ ಪ್ರಮುಖ ನಟರನ್ನು ವಿಡಿಯೊದಲ್ಲಿ ನೋಡಬಹುದು. ಮೋಹನ್​ಲಾಲ್ ಪಾತ್ರವೂ ಗಮನ ಸೆಳೆಯುತ್ತಿದ್ದು, ಜಾಕಿ ಶ್ರಾಫ್ ಈ ಸಿನಿಮಾದ ವಿಲನ್ ಆಗಿರಬಹುದಾ ಎಂಬ ಅನುಮಾನವನ್ನು ಅವರ ಲುಕ್​ ಹುಟ್ಟಿಸುತ್ತಿದೆ.

ಜೈಲರ್‌ ಸಿನಿಮಾದ ಪ್ರೊಮೊ

https://twitter.com/sunpictures/status/1654101066034872321?s=20

ಜೈಲರ್ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ʻಪೆಟ್ಟಾʼ, ʻದರ್ಬಾರ್ʼ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್‌ ಗಿಟ್ಟಿಸಿಕೊಂಡಿದ್ದಾರೆ. ರಜನಿಕಾಂತ್ ಮತ್ತು ಶಿವರಾಜಕುಮಾರ್ ಅವರ ಭಾಗವಾಗಿ, ಜೈಲರ್ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ನಟಿಸಲಿದ್ದಾರೆ.

ಇದನ್ನೂ ಓದಿ: Jailer Movie | ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೈಲರ್ ಪೋಸ್ಟರ್ ರಿವೀಲ್; ಶಿವಣ್ಣನ ಲುಕ್‌ಗೆ ಫ್ಯಾನ್ಸ್‌ ಕಾತುರ!

ವಸಂತ ರವಿ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜಿನಿಕಾಂತ್ ಪ್ರಸ್ತುತ, ಜೈಲರ್ ಮತ್ತು ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ಚಿತ್ರ ʻಲಾಲ್ ಸಲಾಮ್ʼ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Exit mobile version