Site icon Vistara News

Raksha Bandhan | ಟ್ವೀಟ್‌ನಲ್ಲಿ ಟ್ರೆಂಡ್‌ ಆಯ್ತು ರಕ್ಷಾಬಂಧನ್‌ ಸಿನಿಮಾ: ಅಕ್ಷಯ್‌ ಕುಮಾರ್‌ ನಟನೆಗೆ ಮೆಚ್ಚುಗೆ

Raksha Bandhan

ಬೆಂಗಳೂರು: ಅಕ್ಷಯ್ ಕುಮಾರ್ ಅಭಿನಯದ ಮಾಸ್ ಎಂಟರ್‌ಟೈನರ್‌ ಚಿತ್ರ ʻರಕ್ಷಾ ಬಂಧನ್ʼ (Raksha Bandhan) ಗುರುವಾರ (ಆ.11) ಬಿಡುಗಡೆಗೊಂಡಿದೆ. ಇದರ ಜತೆ ಆಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ʻಲಾಲ್ ಸಿಂಗ್ ಚಡ್ಡಾʼ ಕೂಡ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಆನಂದ್ ಎಲ್ ರೈ ನಿರ್ದೇಶನದ ʻರಕ್ಷಾ ಬಂಧನ್ʼ ಸಿನಿಮಾ ಇದೀಗ ಟ್ವಿಟರ್‌ನಲ್ಲಿ ಸಖತ್‌ ಟ್ರೆಂಡ್‌ ಆಗುತ್ತಿದೆ.

ರಕ್ಷಾ ಬಂಧನ ದಿನವೇ ಈ ಎರಡು ಚಿತ್ರಗಳು ಬಿಡುಗಡೆಗೊಂಡಿದ್ದು, ʻರಕ್ಷಾ ಬಂಧನ್‌ʼ ಚಿತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿರಸಿಕರು ಟ್ವೀಟ್‌ ಮೂಲಕ ಇದು ಒಳ್ಳೆಯ ಸಿನಿಮಾ ಎಂದು ಹೇಳುತ್ತಿದ್ದಾರೆ. ʻರಕ್ಷಾ ಬಂಧನ್‌ʼ ಸಿನಿಮಾ ಒಡಹುಟ್ಟಿದವರ ಬಾಂಧವ್ಯದ ಕುರಿತಾದ ಕಥಾ ಹಂದರ ಹೊಂದಿದೆ. ಭೂಮಿ ಪೆಡ್ನೇಕರ್, ಸಾದಿಯಾ ಖತೀಬ್, ಸಾಹೇಜ್ಮೀನ್ ಕೌರ್, ಸ್ಮೃತಿ ಶ್ರೀಕಾಂತ್ ಮತ್ತು ದೀಪಿಕಾ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರದ ಕುರಿತು ಹಲವಾರು ವಿಮರ್ಶೆಗಳು ಟ್ವೀಟರ್‌ನಲ್ಲಿ ಹರಿದಾಡುತ್ತಿದೆ. ಅಕ್ಷಯ್‌ ಕುಮಾರ್‌ ಅವರ ʻಬಚ್ಚನ್ ಪಾಂಡೆʼ ಮತ್ತು ʻಸಾಮ್ರಾಟ್ ಪೃಥ್ವಿರಾಜ್ʼ ಸಿನಿಮಾ ನಂತರ ಈ ಚಿತ್ರ ಸಖತ್‌ ಆಗಿ ಮೂಡಿ ಬಂದಿದೆ ಎಂದು ಸಿನಿರಸಿಕರು ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Akshay Kumar | ಅತಿ ಹೆಚ್ಚು ತೆರಿಗೆ ಪಾವತಿಗಾಗಿ ಸಮ್ಮಾನ್‌ ಪ್ರಮಾಣ ಪತ್ರ ಪಡೆದ ನಟ

ʻರಕ್ಷಾ ಬಂಧನ್ʼ ಚಿತ್ರ ಅಕ್ಷಯ್‌ ಕುಮಾರ್‌ ಅವರ ಈ ವರ್ಷದ ಅತ್ಯುತ್ತಮ ಚಿತ್ರವಾಗಿದೆ. ಈ ಸಿನಿಮಾವನ್ನು ನಿಮ್ಮ ಅಕ್ಕ, ತಂಗಿಯರ ಜತೆಗೂಡಿ ನೋಡಿ ಎಂದು ಟ್ವೀಟ್‌ನಲ್ಲಿ ಪ್ರೇಕ್ಷಕರು ಬರೆದುಕೊಂಡಿದ್ದಾರೆ.

ಸಹೋದರ, ಸಹೋದರಿಯರ ಶುದ್ಧ ಪ್ರೀತಿಯ ಪರಿಪೂರ್ಣ ಕಥೆ ಈ ಸಿನಿಮಾದಲ್ಲಿದೆ. ಎಂತಹ ಸೊಗಸಾದ ಚಿತ್ರಕಥೆ! ಅಕ್ಷಯ್ ಕುಮಾರ್‌ ನಟನೆ ಅತ್ಯುತ್ತಮ. ಆನಂದ್ ಎಲ್ ರೈ ನಿರ್ದೇಶನ ಅದ್ಭುತವಾಗಿದೆ. ಮಿಸ್ ಮಾಡಿಕೊಳ್ಳಬೇಡಿ!ʼ ಎಂದು ಅಕ್ಷಯ್‌ ಅಭಿಮಾನಿಗಳು ಬರೆದುಕೊಂಡಿದ್ದಾರೆ. ʻʻಭೂಮಿ ಪೆಡ್ನೇಕರ್ ಅವರ ಎಮೋಷನ್‌ ಹಾಗೂ ಕಾಮಿಡಿ ಅದ್ಭುತವಾಗಿ ಮೂಡಿಬಂದಿದೆʼʼ ಎಂದು ಸಿನಿ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ʻರಕ್ಷಾ ಬಂಧನ್ʼ ಸಿನಿಮಾ ವರದಕ್ಷಿಣೆ ಸಮಸ್ಯೆಯನ್ನೂ ಬಿಂಬಿಸುತ್ತಿದೆ. ಅಕ್ಷಯ್‌ ಕುಮಾರ್‌ ಈ ಹಿಂದೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಹಲವಾರು ಸಿನಿಮಾಗಳನ್ನು ನೀಡಿದ್ದರು. ಅದರಲ್ಲಿ ʻಪ್ಯಾಡ್‌ಮ್ಯಾನ್ʼ ಮತ್ತು ʻಟಾಯ್ಲೆಟ್: ಏಕ್ ಪ್ರೇಮ್ ಕಥಾʼ ಚಿತ್ರಗಳು ಸೂಪರ್‌ ಹಿಟ್‌ ಆಗಿತ್ತು. ಇದೀಗ ʻರಕ್ಷಾ ಬಂಧನ್ʼ ಕೂಡ ಸಾಮಾಜಿಕ ಕಳಕಳಿ ಸಿನಿಮಾ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ | Laal Singh Chaddha | ನಟ ಚಿರಂಜೀವಿ ಮನೆಯಲ್ಲಿ ಸ್ಪೆಷಲ್‌ ಶೋ: ಕಣ್ಣೀರಿಟ್ಟ ಆಮಿರ್‌ ಖಾನ್

Exit mobile version