Site icon Vistara News

Rashmika Mandanna | ರೆಡ್‌ ಡಿಸೈನರ್‌ ಲೆಹೆಂಗಾದಲ್ಲಿ ಕಂಗೊಳಿಸಿದ ರಶ್ಮಿಕಾ

Rashmika Mandanna

ಶೀಲಾ ಸಿ. ಶೆಟ್ಟಿ ,ಬೆಂಗಳೂರು
ಮೊದಲ ಬಾರಿಗೆ ದಿಲ್ಲಿಯಲ್ಲಿ ನಡೆದ ಪ್ರತಿಷ್ಠಿತ ಫ್ಯಾಷನ್‌ ಡಿಸೈನ್‌ ಆಫ್‌ ಇಂಡಿಯಾ ಫ್ಯಾಷನ್‌ ವೀಕ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ್ದು ನನ್ನ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಪ್ರೊಫೆಷನಲ್‌ ಮಾಡೆಲ್‌ನಂತೆ ರ್ಯಾಂಪ್‌ ವಾಕ್‌ ಮಾಡಲು ಪ್ರಯತ್ನಿಸಿದೆ. ಅದು ಇಲ್ಲಿ ವರ್ಕ್ ಆಯಿತೋ ಇಲ್ಲವೋ ಗೊತ್ತಿಲ್ಲ! ಆದರೆ ಎಂದಿನಂತೆ ನನ್ನ ಸುಂದರ ನಗುವೇ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದುವಾಯಿತು. ರ‍್ಯಾಂಪ್‌ನ ರಂಗೇರಿಸಿತು ಎಂದು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ರ‍್ಯಾಂಪ್‌ನಲ್ಲಿ ವಾಕ್‌ ಮಾಡಿರುವ ಖುಷಿಯನ್ನು ಹಂಚಿಕೊಂಡಿರುವ ನ್ಯಾಷನಲ್‌ ಕ್ರಶ್‌ ಎಂದೇ ಹೆಸರು ಮಾಡಿರುವ ನಟಿ ರಶ್ಮಿಕಾ ಫ್ಯಾಷನ್‌ ವೀಕ್‌ನಲ್ಲಿ ಇದು ನನ್ನ ಮೊದಲ ವಾಕ್‌ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಡ್ರೆಸ್ ಕಾರಣಕ್ಕೆ ಮತ್ತೆ ಸುದ್ದಿಯಾದ ನಟಿ ರಶ್ಮಿಕಾ ಮಂದಣ್ಣ; ಹಾಟ್‌ ಫೋಟೊ ವೈರಲ್‌

ಅಂದ ಹಾಗೆ, ನವದೆಹಲಿಯಲ್ಲಿ ನಡೆದ ಫ್ಯಾಷನ್‌ ಡಿಸೈನ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಎಫ್‌ಡಿಸಿಐ)ದ ಫ್ಯಾಷನ್‌ ವೀಕ್‌ನಲ್ಲಿ ಖ್ಯಾತ ಸೆಲೆಬ್ರಿಟಿ ಫ್ಯಾಷನ್‌ ಡಿಸೈನರ್‌ ವರುಣ್‌ ಬಹ್ಲ್‌ ಅವರ ಡಿಸೈನರ್‌ವೇರ್‌ ರೆಡ್‌ ಲೆಹೆಂಗಾ ಧರಿಸಿ, ಶೋ ಸ್ಟಾಪರ್‌ ಆಗಿ ರಶ್ಮಿಕಾ ರ‍್ಯಾಂಪ್‌ ವಾಕ್‌ ಮಾಡಿ, ಫ್ಯಾಷನ್‌ ಪ್ರಿಯರ ಮನ ಗೆದ್ದರು.

ವರುಣ್‌ ಬಹ್ಲ್‌ ವಿನ್ಯಾಸ

ಧರಿಸಿದ್ದ ಡಿಸೈನರ್‌ ರೆಡ್‌ ಲೆಹೆಂಗಾವನ್ನು ಕಲಾತ್ಮಕವಾಗಿ ರೂಪಿಸಿರುವ ಸೆಲೆಬ್ರಿಟಿ ಡಿಸೈನರ್‌ ವರುಣ್‌ ಕ್ರಿಯೆಟಿವಿಟಿಗೆ ರಶ್ಮಿಕಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಮತ್ತೊಮ್ಮೆ ಇಂತಹ ಕ್ರಿಯೆಟಿವಿಟಿ ಡಿಸೈನ್‌ ಪ್ರದರ್ಶನಕ್ಕೆ ಸಾಥ್‌ ಆಗೋಣಾ ಎಂದಿದ್ದಾರೆ. ಇವರ ಡಿಸೈನರ್‌ವೇರ್‌ನಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದೇನೆ. ದಿಲ್ಲಿಯಲ್ಲಿ ಇದು ನನ್ನ ಮೊತ್ತ ಮೊದಲ ರ‍್ಯಾಂಪ್‌ವಾಕ್‌. ಇದಕ್ಕೆ ನಾನು ಅಭಾರಿ ಎಂದು ಕೃತಜ್ಞತೆ ಅರ್ಪಿಸಿದ್ದಾರೆ. ಇನ್ನು ಎಫ್‌ಡಿಸಿಐ ರ‍್ಯಾಂಪ್‌ನಲ್ಲಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿರುವುದು ಪ್ರತಿಷ್ಠೆಯ ವಿಷಯ. ನನಗೆ ಸಂತೋಷ ನೀಡಿದೆ ಎಂದು ಧನ್ಯವಾದ ತಿಳಿಸಿದ್ದಾರೆ.

ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದ ಡಿಸೈನರ್‌ ಲೆಹೆಂಗಾ

ಕಂಟೆಂಪರರಿ ವಿನ್ಯಾಸದೊಂದಿಗೆ ಸಿಕ್ವೀನ್ಸ್‌ ಹಾಗೂ ಮೈಕ್ರೋ ಬೀಡ್ಸ್‌ನಿಂದ ಡಿಸೈನ್‌ ಮಾಡಲಾದ ಫ್ಲೋರಲ್‌ ಲಿಫ್‌ ಡಿಸೈನ್‌ ರೆಡ್‌ ಲೆಹೆಂಗಾದ ಲುಕ್‌ ಹೆಚ್ಚಿಸಿತ್ತು. ಇದು ಲೆಹೆಂಗಾಗೆ ಕಂಪ್ಲೀಟ್‌ ವಿಭಿನ್ನ ಲುಕ್‌ ನೀಡಿತ್ತು. ಇನ್ನು ಮಾನೋಕ್ರೋಮಾಟಿಕ್‌ ಸೇಮ್‌ ಶೇಡ್‌ನ ಬೀಡ್ಸ್‌ ಟಾಸೆಲ್ಸ್‌ ಲೆಹೆಂಗಾದ ಸ್ಟ್ರಾಪ್‌ ಬ್ಲೌಸಿನ ಅಂದ ಇಮ್ಮಡಿಗೊಳಿಸಿತ್ತು. ಕಿವಿ ಹಾಗೂ ಕೈಗಳಿಗೆ ಏನೂ ಧರಿಸದ ರಶ್ಮಿಕಾ ಕತ್ತನ್ನು ಸೆಮಿ ಹಾಗೂ ಪ್ರಿಶೀಯಸ್‌ ಜೆಮ್ಸ್‌ನ ಅಗಲವಾದ ಚೋಕರ್‌ ಆವರಿಸಿತ್ತು. ಇಡೀ ಲೆಹೆಂಗಾ ನಾನಾ ವರ್ಣದ ಸಿಕ್ವೀನ್ಸ್‌ನಿಂದ ಸಿಂಗಾರಗೊಂಡಿದ್ದು ನೋಡಲು ಆಕರ್ಷಕವಾಗಿಸಿತ್ತು.

ಇದನ್ನೂ ಓದಿ | Rashmika Mandanna | ಹೊಸ ಪೋಟೊ ಹಂಚಿಕೊಂಡ ರಶ್ಮಿಕಾ: ಸಖತ್‌ ಹಾಟ್‌ ಅಂದ್ರು ಫ್ಯಾನ್ಸ್‌

Exit mobile version