Site icon Vistara News

Real star Upendra | ರಿಯಲ್‌ ಸ್ಟಾರ್‌ ಉಪೇಂದ್ರ 54ನೇ ಹುಟ್ಟು ಹಬ್ಬ ಆಚರಣೆ

upendra

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ 54 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಅಭಿಮಾನಿಗಳ ಜೊತೆ ಉಪೇಂದ್ರ ಹುಟ್ಟು ಹಬ್ಬ (Real star Upendra) ಆಚರಿಸಿಕೊಂಡಿದ್ದಾರೆ.

ರಾತ್ರಿಯೇ ಅಭಿಮಾನಿಗಳು ಉಪೇಂದ್ರ ನಿವಾಸಕ್ಕೆ ಆಗಮಿಸಿ ಉಪ್ಪಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಅಭಿಮಾನಿಗಳಿಗೆ ಉಪೇಂದ್ರ ಅವರು ಲಾಡು ಹಾಗೂ ಬಾದುಷಾ ಸಿಹಿ ಹಂಚಿದರು. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಅಭಿಮಾನಿಗಳ ಜೊತೆ ಉಪೇಂದ್ರ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ.

ಬೆಳಗ್ಗೆ ವಿಶೇಷವಾಗಿ ಅಭಿಮಾನಿಗಳ ಜೊತೆ ಉಪೇಂದ್ರ ಸೆಲ್ಪಿ ಪೋಟೋ ತೆಗೆಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: Kabza Movie | ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಕಬ್ಜ ಚಿತ್ರದ ಟೀಸರ್‌ ಔಟ್‌: ಭೂಗತ ಲೋಕ ಅನಾವರಣ!

Exit mobile version