Site icon Vistara News

UI : ಇಡೀ ಚಿತ್ರತಂಡಕ್ಕೆ ರಿಯಲ್‌ ನಾಮ ಇಟ್ಟ ಉಪ್ಪಿ

ರಿಯಲ್‌ ಸ್ಟಾರ್‌

ಬೆಂಗಳೂರು : ಹಲವು ವರ್ಷಗಳ ನಂತರ ರಿಯಲ್‌ ಸ್ಟಾರ್‌ ಉಪ್ಪಿ ಡೈರೆಕ್ಷನ್‌ಗೆ ಮತ್ತೆ ಬಂದಿದ್ದಾರೆ. ಬುದ್ಧಿವಂತನ ಬಿರುಗಾಳಿಗೆ ಮುಹೂರ್ತ ನಡೆದಿದೆ. ಮತ್ತೆ ಮೆದುಳಿಗೆ ಕೈ ಹಾಕಿದ್ದಾರೆ ಉಪ್ಪಿ. UI ಎಂದು ಪೋಸ್ಟರ್‌ ಮೂಲಕ ಹಿಂಟ್‌ ಕೊಟ್ಟಿದ್ದ ಚಿತ್ರತಂಡ ಇದುವರೆಗೂ ಟೈಟಲ್‌ ಏನು ಎನ್ನುವುದನ್ನು ಕನ್‌ಪಾರ್ಮ್‌ ಆಗಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ ಸಿನಿಮಾಗೆ ಸಂಬಂಧ ಪಟ್ಟಂತೆ ಅನೇಕ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.

ಸಿನಿಮಾ ಕಥೆ

ಕಥೆಯ ವಿಚಾರವಾಗಿ ಮಾತನಾಡಿದ ಉಪೇಂದ್ರ, ಇದು ನಿಮ್ಮದೆ ಕಥೆ. ನನ್ನ ಕಥೆ ಎಂದು ಯಾವುದೂ ಇಲ್ಲ. ಕಲ್ಪನೆ ಮಾಡಿಕೊಂಡು ಕನ್‌ವಿನ್ಸ್‌ ಮಾಡುವುದಕ್ಕೆ ಫಿಲ್ಮ್‌ ಮಾಡುತ್ತಿರುವುದಾಗಿ ಹೇಳಿಕೊಂಡರು. ಹಾಗೇ ತಲೆ ಖಾಲಿ ಇಟ್ಟುಕೊಂಡು ಕೇವಲ ಐಡಿಯಾಸ್‌ ಮೂಲಕ, ಢಿಪೆರೆಂಟ್‌ ಆಗಿ ಯೋಚನೆ ಮಾಡುವುದೇ ಸಿನಿಮಾ ಎಂದು ಹೇಳಿದರು. ಈ ಸಿನಿಮಾಗೆ ಸಂಬಂಧಪಟ್ಟಂತೆ ಬಜೆಟ್‌ ಲಿಮಿಟ್‌ ಇಲ್ಲ, ಹಾಗೇ ಅಂತ ಬಜೆಟ್‌ಗೂ ಮೀರಿ ಸಿನಿಮಾ ಮಾಡುತ್ತಿಲ್ಲ ಎಂದು ನಿರ್ಮಾಪಕರ ಕಾಲೆಳೆದ ಉಪ್ಪಿ, ನಾನು ಏನು ಹೇಳುತ್ತೇನೆ ಅದನ್ನೇ ಸಿನಿಮಾ ಮಾಡುತ್ತೇನೆ ಎಂದು ಉತ್ತರ ನೀಡಿದರು.

ಇದನ್ನೂ ಓದಿ | UI : ಬುದ್ಧಿಯ ಬಿರುಗಾಳಿಯತ್ತ ರಿಯಲ್‌ ಸ್ಟಾರ್‌ ಉಪೇಂದ್ರ

ಸಿನಿಮಾ ಸ್ಕ್ರಿಪ್ಟ್‌

ಸಿನಿಮಾ ಸ್ಕ್ರಿಪ್ಟ್‌ ವಿಚಾರವಾಗಿ ಮಾತನಾಡಿದ ಉಪ್ಪಿ, ಸಾಕಷ್ಟು ಜನ ನಾನು ಸಿನಿಮಾ ಸ್ಕ್ರಿಪ್ಟ್‌ ಯಾರಿಗೂ ನೀಡದೇ ಸಿನಿಮಾ ಮಾಡುತ್ತೇನೆ ಎಂಬ ಮಾತುಗಳು ಇದೆ. ಸಹ ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬ ಟೆಕ್ಸ್‌ನಿಷಿಯನ್‌ಗೂ ನಾನು ಸ್ಕ್ರಿಪ್ಟ್‌ ನೀಡಿ ಕಥೆ ಹೇಳುತ್ತೇನೆ. ಆದರೆ ಅವರಿಗೆ ಆ ಕಥೆ ಅರ್ಥವಾಗದೇ ಇರಬಹುದು. ಅದಕ್ಕೇ, ನಾನು ಸ್ಕ್ರಿಪ್ಟ್‌ ನೀಡಿಲ್ಲ ಎಂದು ಅವರು ಹೇಳಿರಬಹುದು ಎಂದು ಮಜವಾಗಿ ಹೇಳಿದರು.

ಇದಕ್ಕೂ ಮುಂಚೆ ನಾನು ಕಥೆಯನ್ನು ಸಾಕಷ್ಟು ಜನರೊಂದಿಗೆ ಹಂಚಿಕೊಂಡಿದ್ದೆ. ಆದರೆ ನಿನ್ನೆ ಹೇಳಿದ ಕಥೆ ನಾಳೆ ಚೇಂಜ್‌ ಕೂಡ ಆಗಬಹುದು. ಆದ್ದರಿಂದ ನೇರವಾಗಿ ಸಿನಿಮಾ ನೋಡಿಯೇ, ಕಥೆ ಯಾವುದು ಎಂದು ಗೊತ್ತಾಗಬೇಕು ಎಂದರು.

ಪ್ರಜಾಕಿಯ ಕುರಿತಾಗಿ ಮಾತನಾಡಿದ ಉಪೇಂದ್ರ, ʼಸಿಎಂನ ಕಾಮನ್‌ ಮ್ಯಾನ್‌ ಹಾಗೂ ಕಾಮೆನ್‌ ಮ್ಯಾನ್‌ನ ಸಿಎಂ ಮಾಡುವುದೇ ಪ್ರಜಾಕೀಯ ಉದ್ದೇಶ. ನಾನು ಯಾವತ್ತೋ ಸಿಎಂ ಆಗಿಬಿಟ್ಟಿದ್ದೇನೆ ʼ ಎಂದರು.

ಎಲ್ಲರಿಗೂ ಮೂರು ನಾಮ ಇಟ್ಟ ಉಪ್ಪಿ

ಮೂಹರ್ತ ದಿನದಂದು ಹೊಸ ಲುಕ್‌ನಲ್ಲಿ ಬಂದಿದ್ದರು ಉಪ್ಪಿ. ಈಗಾಗಲೆ ಪೋಸ್ಟರ್‌ನಲ್ಲಿ ಬಿಡುಗಡೆ ಮಾಡಿದ್ದ ನಾಮವನ್ನು ತಾವೂ ಇಟ್ಟುಕೊಂಡಿದ್ದರು. ತಾವಷ್ಟೆ ಅಲ್ಲದೆ ಚಿತ್ರದ ನಿರ್ಮಾಪಕರು ಸೇರಿ ಇಡೀ ಚಿತ್ರತಂಡ ನಾಮಧಾರಿಗಳಾಗಿಯೇ ಬಂದಿತ್ತು. ಎಲ್ಲರೂ ಪಂಚೆ ಶಲ್ಯ ಹೊದ್ದು ಶುದ್ಧ ದೇಸಿ ಉಡುಗೆ ತೊಟ್ಟಿದ್ದರು. ಈ ಕುರಿತಂತೆ ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಮಾತನಾಡಿ, UI ಚಿಹ್ನೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಟ್ರೇಡ್‌ ಮಾರ್ಕ್‌. ಅದೇ ರೀತಿ ಇದು ನನ್ನ 3ನೇ ಚಿತ್ರವಾಗಿದ್ದು, ಹಲವು ವರ್ಷಗಳ ನಂತರ ಉಪೇಂದ್ರ ಅವರು ನಿರ್ದೇಶನ ಮಾಡುತ್ತಿರುವುದು ಸಂತಸದ ವಿಚಾರ ಎಂದರು. ಶ್ರೀಕಾಂತ್‌ ಅವರ ಮೂರನೇ ಚಿತ್ರಕ್ಕೂ ಈ ಚಿತ್ರದ ಟೈಟಲ್‌ನಲ್ಲಿರುವ ಮೂರು ನಾಮಕ್ಕೂ ಏನಾದರೂ ಸಂಬಂಧ ಇದೆಯಾ? ಅದನ್ನೂ ಉಪ್ಪಿಯೇ ಹೇಳಬೇಕು.

ಉಪ್ಪಿ ಡೈರಕ್ಷನ್‌

ಆಕ್ಟಿಂಗ್‌ ಮಾಡುವಾಗ ಕೆಲವೊಮ್ಮೆ ಒತ್ತಡಕ್ಕೆ ಒಳಗಾಗುತ್ತೇವೆ. ಕೆಲವೊಮ್ಮೆ ಪ್ರೊಡ್ಯೂಸರ್‌ ಸಲುವಾಗಿ ನುಂಗಿಕೊಂಡು ಕೆಲಸ ಮಾಡುತ್ತೇವೆ. ಆದರೆ ಡೈರೆಕ್ಷನ್‌ ಎಂಬ ವಿಚಾರಕ್ಕೆ ಬಂದಾಗ ಸಕತ್‌ ಸ್ಟ್ರಾಂಗ್‌ ಆಗಿಯೇ ಕೆಲಸ ನಿರ್ವಹಿಸುತ್ತೇನೆ. ಇಲ್ಲಿ ನಂಬಿಕೆ ಬಹಳ ಮುಖ್ಯ. ನಂಬಿಕೆ ಹಾಗೂ ಮಾಡುವ ಕೆಲಸದಲ್ಲಿ ಕ್ಲಿಯರ್‌ ಇದ್ದರೆ ಮತ್ತು ನಮ್ಮಲ್ಲಿ ಪ್ರಾಮಾಣಿಕತೆ ಇತ್ತು ಎಂತಾದರೆ ಸಿನಿಮಾ ಗೆಲ್ಲಲು ಸಾದ್ಯ ಎಂದರು.

ಘಜನಿ, ಅಲೆಕ್ಸಾಂಡರ್‌, ಅಶೋಕದಲ್ಲಿ ಇರುವ ಕುದುರೆ ಬಳಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, ಭೂತಕಾಲದ ಬಗ್ಗೆ ನಾನು ಎಂದು ಯೋಚನೆ ಮಾಡುವುದಿಲ್ಲ. ವರ್ತಮಾನ ಅಷ್ಟೇ ತುಂಬಾ ಮುಖ್ಯ ಎಂದು ಖಡಕ್‌ ಆಗಿ ಉತ್ತರಿಸಿದರು.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಪ್ಯಾನ್‌ ಇಂಡಿಯಾ ಸಿನಿಮಾ

ಈಗೆಲ್ಲ ಸಾಕಷ್ಟು ಸಿನಿಮಾಗಳು ಪ್ಯಾನ್‌ ಇಂಡಿಯಾ ಸಿನಿಮಾ ಎಂದಾಗುತ್ತಿದೆ. ಹಲವು ಭಾಷೆಗಳಲ್ಲಿ ರಿಲೀಸ್‌ ಆದ ಕೂಡಲೇ ಅದು ಪ್ಯಾನ್‌ ಇಂಡಿಯಾ ಎಂದು ಪರಿಗಣನೆ ಆಗುವುದಿಲ್ಲ. ಯಾವ ಸಿನಿಮಾ ಒಳ್ಳೆಯ ಸಬ್‌ಜೆಕ್ಟ್‌ ಹೊಂದಿರುತ್ತದೆಯೋ ಅದು ನನ್ನ ಪ್ರಕಾರ ಪ್ಯಾನ್‌ ಇಂಡಿಯಾ ಸಿನಿಮಾ ಆಗಲು ಸಾದ್ಯ. ಈ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಮಾಡಬೇಕಂಬ ನಿರ್ಧಾರ ನಿರ್ಮಾಪಕರಿಗೆ ಬಿಟ್ಟಿದ್ದು ಎಂದರು.

ನಾಯಕ ನಾಯಕಿರು ಹಾಗೂ ಟೆಕ್‌ನಿಕಲ್‌ ತಂಡದ ಬಗ್ಗೆ ಮಾಹಿತಿಯನ್ನೂ ಉಪ್ಪಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಉಳಿದಂತೆ ನಂತರದ ದಿನಗಳಲ್ಲಿ ಪೋಸ್ಟರ್‌ ಬಿಡುತ್ತಲೇ ಇರುತ್ತೇವೆ. ಆದಷ್ಟು ಬೇಗ ತಿಳಿಸುವುದಾಗಿ ಹೇಳಿದರು.

ಕೆ. ಪಿ. ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ. ಮನೋಹರನ್ ಅವರ ಲಹರಿ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ | ವಿದಾಯದ ವೇಳೆಯಲ್ಲಿ ನೆನಪು; ಗಾಯಕ ಕೆಕೆ ಕಂಠದ ಕನ್ನಡ ಹಾಡು ಕೇಳಿದ್ದೀರಾ?

Exit mobile version