Site icon Vistara News

Rocketry: The Nambi Effect | ಮಾಧವನ್ ನಿರ್ದೇಶಿಸಿ ನಟಿಸಿರುವ ʼರಾಕೆಟ್ರಿʼಯ 7 ದಿನದ ಕಲೆಕ್ಷನ್‌?

Rocketry The Nambi Effect

ಬೆಂಗಳೂರು : ಆರ್‌ ಮಾಧವನ್‌ ನಿರ್ದೇಶಿಸಿ ನಟಿಸಿರುವ ರಾಕೆಟ್ರಿ ದಿ ನಂಬಿ ಎಫೆಕ್ಟ್ (Rocketry: The Nambi Effect) ಕಳೆದ ಶುಕ್ರವಾರ (ಜು.1) ಬಿಡುಗಡೆಯಾಗಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಮತ್ತು ಚಿತ್ರರಂಗದ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಾಕೆಟ್ರಿ ಬಾಕ್ಸ್‌ ಆಫೀಸ್‌ನಲ್ಲಿ ಸಹ ಉತ್ತಮ ಗಳಿಕೆ ಮಾಡುತ್ತಿದೆ. ರಾಷ್ಟ್ರ ಕವಚ ಓಂ, ಜಗ್ ಜಗ್ ಜಿಯೋ (Jug Jug Jiyo) ಹಾಗೂ ವಿಕ್ರಮ್ ಈ ಎಲ್ಲ ಸಿನಿಮಾಗಳು ಒಂದೇ ವಾರದಲ್ಲಿ ಬಿಡುಗಡೆಯಾಗಿವೆ. ಈ ಎಲ್ಲ ಚಿತ್ರಗಳ ಪೈಕಿ ರಾಕೆಟ್ರಿ ಗರಿಷ್ಠ ಕಲೆಕ್ಷನ್ ಮಾಡಿದೆ. ರಾಕೆಟ್ರಿ ಜತೆಗೆ ಬಿಡುಗಡೆಯಾದ ಕಪಿಲ್ ವರ್ಮಾ ಅವರ ‘ರಾಷ್ಟ್ರ ಕವಚ ಓಂ’ ಆರು ದಿನದಲ್ಲಿ ಚಿತ್ರ ಕೇವಲ 7.28 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅಭಿನಯದ ವಿಕ್ರಮ್ 34ನೇ ದಿನಕ್ಕೆ ಒಟ್ಟು 5 ಲಕ್ಷ ರೂ. ಗಳಿಸಿದೆ. ಇದರೊಂದಿಗೆ ಈ ಚಿತ್ರದ ಒಟ್ಟು ಗಳಿಕೆ 442.45 ಕೋಟಿ ರೂ. ಏರಿಕೆಯಾಗಿದೆ. ಆದರೆ, ರಾಕೆಟ್ರಿ 7ನೇ ದಿನಕ್ಕೆ 15 ಕೋಟಿ ರೂ.ಗೂ ಅಧಿಕ ಮೊತ್ತ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ.

ಇದನ್ನೂ ಓದಿ | Upcoming Kannada Movie | ಒಂದೇ ದಿನ ತೆರೆಗೆ ಅಪ್ಪಳಿಸಲಿವೆ ಆರು ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

ಚಲನಚಿತ್ರವು 1 ಜುಲೈ 2022 ರಂದು ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಪ್ರಪಂಚದಾದ್ಯಂತ ಆರು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ರಾಕೆಟ್ರಿಯು ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ ಹೀಗೆ ಅಂತಾರಾಷ್ಟ್ರೀಯ ಮಟ್ಟದ ನಟರನ್ನು ಒಳಗೊಂಡಿದೆ. ರಾನ್ ಡೊನಾಚಿ ಮತ್ತು ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರಗಳೊಂದಿಗೆ ಮಿಂಚಿದ್ದಾರೆ.

ತಮಿಳು ಚಿತ್ರ Alai Payuthey ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಧವನ್‌ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 2001ರಲ್ಲಿ ‘ತೇರೆ ದಿಲ್ ಮೇ’ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ ಅವರ ಜೀವನದ ಕಥೆ ಆಧಾರಿತ ಈ ಸಿನಿಮಾದಲ್ಲಿ ಮಾಧವನ್‌ ನಟಿಸಿದ್ದಾರೆ.

ಇದನ್ನೂ ಓದಿ | Brahmastra trailer ಔಟ್‌, ಕೊನೆಗಾದರೂ ಬಾಲಿವುಡ್‌ನಿಂದ ಒಂದು ಪ್ಯಾನ್‌ ಇಂಡಿಯಾ ಚಿತ್ರ ಬರಲಿದೆಯಾ?

Exit mobile version