Site icon Vistara News

Rocking Star Yash: ಜಪಾನ್‌ ಭಾಷೆಯಲ್ಲಿ ಮಾತನಾಡಿದ ʻರಾಕಿ ಭಾಯ್‌ʼ; ಏನಂದ್ರು ಯಶ್‌?

Rocking Star Yash kgf movie

ಬೆಂಗಳೂರು: ಸಲಾರ್‌ ಟೀಸರ್‌ (Salaar teaser) ಬಿಡುಗಡೆಯಾದ ಬಳಿಕ ಯುಟ್ಯೂಬ್‌ನಲ್ಲಿ ಸಲಾರ್‌ದೇ (Salaar Movie) ಹವಾ ಎದ್ದಿದೆ. ಸಲಾರ್ ಟೀಸರ್‌ (Salaar movie teaser) ರಿಲೀಸ್ ಆದ 24 ಗಂಟೆಗಳಲ್ಲಿ 8.3 ಕೋಟಿ ವ್ಯೂಸ್‌ ಪಡೆದುಕೊಂಡಿದೆ. ಇದು ದಾಖಲೆ ಸೃಷ್ಟಿಸಿದ್ದು, ಕೆಜಿಎಫ್-‌2 (KGF- 2) ದಾಖಲೆಯನ್ನೂ ಉಡೀಸ್‌ ಮಾಡಿದೆ. ಇದರ ಬೆನ್ನಲ್ಲೇ ರಾಕಿಂಗ್‌ ಸ್ಟಾರ್‌ ಯಶ್‌ (Rocking Star Yash) ಸಿಹಿ ಸುದ್ದಿ ನೀಡಿದ್ದಾರೆ. ಕೆಜಿಎಫ್‌ 1 ಮತ್ತು ಕೆಜಿಎಫ್‌ 2 ಸಿನಿಮಾ ಜಪಾನ್‌ನಲ್ಲಿ ಜುಲೈ 14ರಂದು ರಿಲೀಸ್‌ ಆಗುತ್ತಿದೆ. ಈ ಬಗ್ಗೆ ಸ್ವತಃ ರಾಕಿಂಗ್‌ ಸ್ಟಾರ್‌ ಯಶ್‌ ಜಪಾನ್‌ ಭಾಷೆಯಲ್ಲಿ ಮಾತನಾಡಿ, ಸಿನಿಮಾ ನೋಡಿ ಎಂದು ವಿಶೇಷ ಮನವಿ ಮಾಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂಬರುವ ಸಿನಿಮಾ ಅಪ್‌ಡೇಟ್‌ಗಾಗಿ ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ರಾಕಿಂಗ್‌ ಸ್ಟಾರ್‌ ಯಶ್‌ ಕೆಜಿಎಫ್‌ 1 ಮತ್ತು ಕೆಜಿಎಫ್‌ 2 ಸಿನಿಮಾವನ್ನು ಜಪಾನ್‌ನಲ್ಲಿ ಬಿಡುಗಡೆಯಾಗುವದ ಬಗ್ಗೆ ವಿಡಿಯೊ ಶೇರ್‌ ಮಾಡಿದ್ದಾರೆ. ಅದು ಕೂಡ ಜಪಾನ್‌ ಭಾಷೆಯಲ್ಲೇ ಮಾತನಾಡಿದ್ದಾರೆ. ಇದೇ ಜುಲೈ 14ರಂದು ಜಪಾನ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ. ಜಪಾನ್ ಭಾಷೆಯಲ್ಲೇ ಸಿನಿಮಾ ನೋಡಿ ಎಂದು ನಟ ಮನವಿ ಮಾಡಿದ್ದಾರೆ.

ತಮ್ಮ ಚಿತ್ರದಲ್ಲಿ ಏನೆಲ್ಲ ಇದೆ ಎಂಬುದನ್ನು ಕೂಡ ಯಶ್‌ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ರಾಕಿಯ ಧೈರ್ಯ ನೋಡಬಹುದು. ಅಷ್ಟೇ ಅಲ್ಲ ರಾಕಿಯ ಹೋರಾಟವನ್ನ ಕಾಣಬಹುದು ಅಂತಲೂ ಯಶ್ ಹೇಳಿದ್ದಾರೆ. ಸಿನಿಮಾ ಕುರಿತು ಹೇಳುತ್ತಾರೆ. ಅದೇ ರೀತಿ ಈಗ ಜಪಾನ್ ಭಾಷೆಯ ಸಿನಿಪ್ರೇಮಿಗಳಿಗೆ ಅವರದೇ ಭಾಷೆಯ ಸಬ್ ಟೈಟಲ್‌ನೊಂದಿಗೆ ಕೆಜಿಎಫ್ ಎರಡೂ ಭಾಗ ರಿಲೀಸ್ ಆಗುತ್ತಿದೆ.

ಯಶ್‌ ಕನ್ನಡ ಚಿತ್ರರಂಗವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಯಶಸ್ವಿ ನಟ. ಕೆಜಿಎಫ್‌ 2 ಸಿನಿಮಾ ಆದನಂತರ ಅವರು ಮತ್ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ಅವರ ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುವುದಂತೂ ಸತ್ಯ.

ಇದನ್ನೂ ಓದಿ: Video: ಮುದ್ದು ಮಕ್ಕಳೊಂದಿಗೆ ನಂಜನಗೂಡಿಗೆ ಭೇಟಿ ಕೊಟ್ಟ ಯಶ್​-ರಾಧಿಕಾ; ಮುಂದಿನ ಸಿನಿಮಾ ಬಗ್ಗೆ ಏನಂದ್ರು ರಾಕಿಂಗ್ ಸ್ಟಾರ್​?

ಇನ್ನೊಂದೆಡೆ ಯಶ್‌ “19ʼ ಸಿನಿಮಾದ ಬಗ್ಗೆಯೂ ಮಾತುಕತೆ ಜೋರಾಗಿಯೇ ನಡೆಯುತ್ತಿದೆ. ಆದರೆ ಈ ಸಿನಿಮಾದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ನಿರ್ದೇಶಕ ನರ್ತನ್‌ ಅವರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ನರ್ತನ್‌ ಅವರು ಶಿವರಾಜ್‌ ಕುಮಾರ್‌ ಅವರೊಂದಿಗೆ ಸಿನಿಮಾವೊಂದರಲ್ಲಿ ಬಿಜಿ ಇದ್ದಾರೆ. “19ʼ ಸಿನಿಮಾದ ಸ್ಕ್ರಿಪ್ಟ್‌ ಕೂಡ ಅಂತಿಮ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿತ್ತು. ಆದರೆ ಅದೇ ಕಥಾಹಂದರವಿರುವ ಮತ್ತೊಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿರುವುದರಿಂದ ಸಿನಿಮಾ ಸ್ಕ್ರಿಪ್ಟ್‌ ಅನ್ನೇ ಬದಲಿಸಲಾಗುತ್ತಿದೆ ಎಂದೂ ಸುದ್ದಿಗಳಿವೆ.‌

Exit mobile version