ಬೆಂಗಳೂರು : ಕೆಜಿಎಫ್ ಸಿನಿಮಾ ಯಶಸ್ಸಿನ (Rocking Star Yash) ಮೂಲಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಯಶ್‌ಗೆ ಹೊರರಾಜ್ಯ ಸೇರಿದಂತೆ ದೇಶ ವಿದೇಶಗಳಲ್ಲಿ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಅವರದ್ದೇ ಫ್ಯಾನ್ಸ್ ಸಂಘಗಳು ಹುಟ್ಟಿಕೊಂಡಿವೆ. ಇದೀಗ ಯಶ್ ನಟನೆಯ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ʻರಾರಾಜುʼ ಹೆಸರಿನಲ್ಲಿ ಡಬ್ ಆಗಿ ತೆಲುಗಿನಲ್ಲಿ ಅಕ್ಟೋಬರ್ 14ರಂದು ಬಿಡುಗಡೆಗೊಂಡಿದೆ.
ಮಹೇಶ್ ರಾವ್ ನಿರ್ದೇಶನದ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ 2016ರಲ್ಲಿ ತೆರೆ ಕಂಡಿತ್ತು. ಜೋಡಿಯಾಗಿ ರಾಧಿಕಾ ಪಂಡಿತ್ ಬಣ್ಣ ಹಚ್ಚಿದ್ದರು. ಈ ಚಿತ್ರದಿಂದ 10 ಕೋಟಿ ರೂ. ನಷ್ಟವಾಗಿತ್ತು ಎಂದು ಇತ್ತೀಚೆಗೆ ಕೆ. ಮಂಜು ಹೇಳಿಕೊಂಡಿದ್ದರು. ‘ಸಂತು ಸ್ಟ್ರೈಟ್ ಫಾರ್ವರ್ಡ್’ ಜತೆಗೆ ಸುದೀಪ್- ಉಪೇಂದ್ರ ನಟನೆಯ ‘ಮುಕುಂದ ಮುರಾರಿ’ ಸಿನಿಮಾ ರಿಲೀಸ್ ಆಗಿ ಸಕ್ಸೆಸ್ ಕಂಡಿತ್ತು.
ಇದನ್ನೂ ಓದಿ | Rocking Star Yash | ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನಂ 1 ಸ್ಟಾರ್ ಎಂದ ಶಾಹಿದ್ ಕಪೂರ್!
ನಿರ್ಮಾಪಕ ವಿ. ಎಸ್ ಸುಬ್ಬಾರಾವು ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ‘ಕಿಂಗ್ ಆಫ್ ಕಿಂಗ್ಸ್’ ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಹೈದರಾಬಾದ್‌ನಲ್ಲಿ 26ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಸ್ಯಾಂಡಲ್‌ವುಡ್‌ನಲ್ಲಿ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ಸೋಲುಂಡಿತ್ತು. 2016ರಲ್ಲಿಯೇ ತೆಲುಗಿನಲ್ಲಿ ರಿಲೀಸ್ ಮಾಡಬೇಕೆಂದು ನಿರ್ಧಾರವೂ ಕೂಡ ಆಗಿತ್ತು. ಆದರೆ ಇದೀಗ ರಿಲೀಸ್ ಆಗಿದೆ. ಟಾಲಿವುಡ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Rocking Star Yash | ರಾಕಿ ಬಾಯ್ ಯಶ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ!