ಕ್ಯಾಲಿಫೋರ್ನಿಯಾ: ರಾಜಮೌಳಿ ನಿರ್ದೇಶನದ RRR ಸಿನಿಮಾ, ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ.
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಇದೀಗ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ.
ಕ್ಯಾಲಿಫೋರ್ನಿಯಾದ ಬವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜೊತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ʼ
ಇದನ್ನೂ ಓದಿ | RRR Film | ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಿಂದ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
ಆಂಗ್ಲೇತರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಲ್ಯಾಟಿನ್ ಅಮೆರಿಕನ್ ಚಿತ್ರ ಸ್ಯಾಮ್ ಮಿತ್ರೆ ನಿರ್ದೇಶನದ “ಅರ್ಜೆಂಟೀನಾ, 1985′ ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ʼದಿ ಫೇಬಲ್‌ಮನ್ʼ ಚಿತ್ರಕ್ಕಾಗಿ ಸ್ಟೀವನ್ ಸ್ಪೀಲ್‌ಬರ್ಗ್ ಗೆದ್ದುಕೊಂಡಿದ್ದಾರೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 2023ರ ಬೇರೆಬೇರೆ ವಿಭಾಗಗಳಲ್ಲಿ ಕೂಡ ಆರ್‌ಆರ್‌ಆರ್ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಚಿತ್ರಕ್ಕೆ ಈಗಾಗಲೇ ಮನ್ನಣೆ ಪ್ರಾಪ್ತವಾಗಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅಟ್ಲಾಂಟ ಫಿಲ್ಮ್ ಕ್ರಿಟಿಕ್ ಅವಾರ್ಡ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಆರ್‌ಆರ್‌ಆರ್ ಮುಡಿಗೇರಿಸಿಕೊಂಡಿದೆ. ಗಳಿಕೆಯ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಈವರೆಗೆ 1200 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ | RRR Film | ಏಷ್ಯನ್ ಫಿಲ್ಮ್ ಅವಾರ್ಡ್ಸ್ ರೇಸಿನಲ್ಲಿ ಪೊನ್ನಿಯನ್ ಸೆಲ್ವನ್, ಆರ್‌ಆರ್‌ಆರ್!