Golden Globe 2023
RRR Film | ಆರ್‌ಆರ್‌ಆರ್ ಚಿತ್ರಕ್ಕೆ ಒಲಿದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ʼಅತ್ಯುತ್ತಮ ಹಾಡುʼ ಪ್ರಶಸ್ತಿ
ರಾಜಮೌಳಿ ನಿರ್ದೇಶನದ RRR ಸಿನಿಮಾ, ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ.
ಕ್ಯಾಲಿಫೋರ್ನಿಯಾ: ರಾಜಮೌಳಿ ನಿರ್ದೇಶನದ RRR ಸಿನಿಮಾ, ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ.
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಇದೀಗ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ.
ಕ್ಯಾಲಿಫೋರ್ನಿಯಾದ ಬವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜೊತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ʼ
ಇದನ್ನೂ ಓದಿ | RRR Film | ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಿಂದ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
ಆಂಗ್ಲೇತರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಲ್ಯಾಟಿನ್ ಅಮೆರಿಕನ್ ಚಿತ್ರ ಸ್ಯಾಮ್ ಮಿತ್ರೆ ನಿರ್ದೇಶನದ “ಅರ್ಜೆಂಟೀನಾ, 1985′ ಗೆದ್ದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ʼದಿ ಫೇಬಲ್‌ಮನ್ʼ ಚಿತ್ರಕ್ಕಾಗಿ ಸ್ಟೀವನ್ ಸ್ಪೀಲ್‌ಬರ್ಗ್ ಗೆದ್ದುಕೊಂಡಿದ್ದಾರೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 2023ರ ಬೇರೆಬೇರೆ ವಿಭಾಗಗಳಲ್ಲಿ ಕೂಡ ಆರ್‌ಆರ್‌ಆರ್ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಚಿತ್ರಕ್ಕೆ ಈಗಾಗಲೇ ಮನ್ನಣೆ ಪ್ರಾಪ್ತವಾಗಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅಟ್ಲಾಂಟ ಫಿಲ್ಮ್ ಕ್ರಿಟಿಕ್ ಅವಾರ್ಡ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಆರ್‌ಆರ್‌ಆರ್ ಮುಡಿಗೇರಿಸಿಕೊಂಡಿದೆ. ಗಳಿಕೆಯ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಈವರೆಗೆ 1200 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ | RRR Film | ಏಷ್ಯನ್ ಫಿಲ್ಮ್ ಅವಾರ್ಡ್ಸ್ ರೇಸಿನಲ್ಲಿ ಪೊನ್ನಿಯನ್ ಸೆಲ್ವನ್, ಆರ್‌ಆರ್‌ಆರ್!
Golden Globe 2023
RRR Movie | ʼತೆಲುಗು ಧ್ವಜʼಕ್ಕೆ ಕ್ಯಾತೆ ತೆಗೆದ ಅದ್ನಾನ್ ಸಾಮಿಗೆ ʼವಿವಿಧತೆಯಲ್ಲಿ ಏಕತೆʼಯ ಪಾಠ ಮಾಡಿದ ನಟಿ ರಮ್ಯಾ
ಸಂಗೀತ ನಿರ್ದೇಶಕ, ಗಾಯಕ ಅದ್ನಾನ್ ಸಾಮಿ ಅವರು ತೆಲುಗು ಧ್ವಜವನ್ನು ಪ್ರಶ್ನಿಸಿದ್ದಕ್ಕೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಪಾಠ ಮಾಡಿದ್ದಾರೆ.
ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ರಾಜಮೌಳಿ ನಿರ್ದೇಶನದ RRR ಸಿನಿಮಾದ (RRR Movie) ನಾಟು… ನಾಟು… “ಅತ್ಯುತ್ತಮ ಒರಿಜಿನಲ್ ಹಾಡು” ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ಸಿನಿಮಾ ತಂಡಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಸಂಗೀತ ನಿರ್ದೇಶಕ, ಗಾಯಕ ಅದ್ನಾನ್ ಸಾಮಿ ಮಾಡಿದ ಟ್ವೀಟ್‌ಗೆ ಆಕ್ಷೇಪ ವ್ಯಕ್ತವಾಗಿದೆ. ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರಂತೂ ಅದ್ನಾನ್ ಸಾಮಿ ಅವರಿಗೆ ‘ವಿವಿಧತೆಯಲ್ಲಿ ಏಕತೆ’ಯ ಪಾಠ ಮಾಡಿದ್ದಾರೆ.
ಆರ್‌ಆರ್‌ಆರ್ ಚಿತ್ರವು ಜಾಗತಿಕ ಪ್ರಶಸ್ತಿಗೆ ಪುರಸ್ಕೃತವಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. “ತೆಲುಗು ಧ್ವಜ ಅತಿ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರಪ್ರದೇಶದ ಪರವಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು. ಆದರೆ, ಇದಕ್ಕೆ ಅದ್ನಾನ್ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
“ತೆಲುಗು ಧ್ವಜವೇ? ನಾವು ಮೊದಲು ಭಾರತೀಯರು. ದೇಶದಿಂದ ಪ್ರತ್ಯೇಕವಾಗಿ ಇರುವ ನಿಮ್ಮ ಮನಸ್ಥಿತಿಯನ್ನು ದಯಮಾಡಿ ಬದಲಾಯಿಸಿಕೊಳ್ಳಿ. ಅದರಲ್ಲೂ, ಜಾಗತಿಕ ಮಟ್ಟದಲ್ಲಾದರೂ ನಾವು ಭಾರತೀಯರು ಎಂಬ ಭಾವನೆ ಇರಲಿ” ಎಂದು ಅದ್ನಾನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ತಿರುಗೇಟು ನೀಡಿದ ರಮ್ಯಾ
ಅದ್ನಾನ್ ಸಾಮಿ ಟ್ವೀಟ್‌ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. “ಹೌದು, ನಾವು ಭಾರತೀಯರು. ಆದರೆ, ನಾವು ಕನ್ನಡಿಗರು, ತಮಿಳಿಗರು, ತೆಲುಗು, ಬೆಂಗಾಲಿಗಳು. ನಮಗೆ ನಮ್ಮ ಧ್ವಜ ಇದೆ. ನಾವು ಭಾರತೀಯರು ಎಂಬುದಕ್ಕೆ ಹೆಮ್ಮೆ ಇದೆ ಹಾಗೂ ನಮ್ಮ ಮೂಲ ಸಂಸ್ಕೃತಿ, ಭಾಷೆ, ಧ್ವಜಗಳನ್ನು ಹೊಂದಿದ್ದೇವೆ. ವಿವಿಧತೆಯಲ್ಲಿ ಏಕತೆ ಎಂಬುದು ಸರಿಯಲ್ಲವೇ?” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | RRR Movie | ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಆ ಜಾಗ ಈಗ ಯುದ್ಧದ ಸ್ಥಳ! ಯಾವುದು ಆ ಜಾಗ?
Golden Globe 2023
RRR Movie | RRR ತಂಡವನ್ನು ಅಭಿನಂದಿಸಲು ಟೈಗರ್ ಶ್ರಾಫ್ ವಿಶೇಷ ವಿಡಿಯೊ: ಇದು ವಿಜಯದ ನೃತ್ಯ!
RR ಸಿನಿಮಾ (RRR Movie ) ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ‘RRR’ ತಂಡವನ್ನು ಅಭಿನಂದಿಸಲು ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು : ರಾಜಮೌಳಿ ನಿರ್ದೇಶನದ RRR ಸಿನಿಮಾ (RRR Movie ) ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ಇದೀಗ ಬಾಲಿವುಡ್ ನಟ ಟೈಗರ್ ಶ್ರಾಫ್ ‘RRR’ ತಂಡವನ್ನು ಅಭಿನಂದಿಸಲು ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ನಾಟು ನಾಟು’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ʻನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಿದ ಟೈಗರ್ ಶ್ರಾಫ್ ʻʻಭಾರತೀಯ ಚಿತ್ರರಂಗಕ್ಕೆ ದೊಡ್ಡ ಗೆಲುವು. ಆರ್‌ಆರ್‌ಆರ್ ಇಡೀ ತಂಡಕ್ಕೆ ಅಭಿನಂದನೆಗಳು. ಇದು ವಿಜಯದ ನೃತ್ಯವಾಗಬೇಕುʼʼ ಎಂದು ಪೋಸ್ಟ್ ಮಾಡಿದ್ದಾರೆ. 80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.
ಇದನ್ನೂ ಓದಿ | RRR Movie | ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಆ ಜಾಗ ಈಗ ಯುದ್ಧದ ಸ್ಥಳ! ಯಾವುದು ಆ ಜಾಗ?
ಸಮಾರಂಭದಲ್ಲಿ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಭಾವನಾತ್ಮಕ ಮಾತುಗಳನ್ನಾಡಿ ʻʻನಾನು ಇದೀಗ ಪಡೆದ ಈ ಶ್ರೇಷ್ಠ ಪ್ರಶಸ್ತಿಯ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ. RRR ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯದ ಬಗ್ಗೆ ಹೇಳುತ್ತದೆ. ಇದು ದೇಶಭಕ್ತಿಯ ಬಗ್ಗೆ, ಭಾವನೆಗಳು, ಸಾಹಸ ದೃಶ್ಯಗಳು ಮತ್ತು ಸಂಗೀತದಿಂದ ತುಂಬಿರುತ್ತದೆ. ಮೊದಲ ಬಾರಿಗೆ, ಇದು ಅಂತಾರಾಷ್ಟ್ರೀಯ ಪ್ರೇಕ್ಷಕರ ಗಮನ ಮತ್ತು ಚಪ್ಪಾಳೆಗಳನ್ನು ಗಳಿಸಿದೆ. ಅದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ನನ್ನ ಸಹೋದರ ಎಸ್‌ಎಸ್ ರಾಜಮೌಳಿ ಅವರ ಜತೆ ಒಡನಾಟವಿರುವುದು ಖುಷಿ ತಂದಿದೆ. ವಿಶ್ವಾದ್ಯಂತ ಅಂತಹ ಉತ್ತಮ ಅವಕಾಶಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ.” ಎಂದಿದ್ದಾರೆ.
ಇದನ್ನೂ ಓದಿ | RRR Movie | ರೆಡ್ ಕಾರ್ಪೆಟ್‌ನಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಮಿಂಚಿದ ಆರ್‌ಆರ್‌ಆರ್ ಚಿತ್ರತಂಡ
Golden Globe 2023
RRR Movie | ರೆಡ್ ಕಾರ್ಪೆಟ್‌ನಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಮಿಂಚಿದ ಆರ್‌ಆರ್‌ಆರ್ ಚಿತ್ರತಂಡ
ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜತೆಗೆ ನಿರ್ದೇಶಕ ಎಸ್‌ಎಸ್ ರಾಜಮೌಳಿ (RRR Movie) ಸಾಂಪ್ರಾದಾಯಿಕ ಉಡುಗೆಗಳಿಂದ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಸಮಾರಂಭದಲ್ಲಿ ಗಮನ ಸೆಳೆದಿದ್ದಾರೆ.
ಬೆಂಗಳೂರು : ರಾಜಮೌಳಿ ನಿರ್ದೇಶನದ RRR ಸಿನಿಮಾ (RRR Movie ) ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜತೆಗೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಸಾಂಪ್ರಾದಾಯಿಕ ಉಡುಗೆಗಳಿಂದ ಗಮನ ಸೆಳೆದಿದ್ದಾರೆ.
ರೆಡ್ ಕಾರ್ಪೆಟ್ ಮೇಲೆ ಸಾಂಪ್ರದಾಯಿಕ ಧೋತಿ-ಕುರ್ತಾವನ್ನು ಧರಿಸುವ ಮೂಲಕ ಎಸ್ಎಸ್ ರಾಜಮೌಳಿ ಸಮಾರಂಭದಲ್ಲಿ ಗಮನ ಸೆಳೆದರು. ಕೆಂಪು ಮತ್ತು ಕಪ್ಪು ಧೋತಿ-ಕುರ್ತಾ ಜತೆಗೆ ಕಡುಗೆಂಪು ಬಣ್ಣದ ಸ್ಟೋಲ್ ಅನ್ನು ಧರಿಸಿದ್ದರು. ಪ್ರತಿಭಾವಂತ ಚಲನಚಿತ್ರ ನಿರ್ದೇಶಕ ಪ್ರಮುಖ ಹಾಲಿವುಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯನ್ನು ಪಡೆಯುತ್ತಿದ್ದಾರೆ.
ರಾಮ್ ಚರಣ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಪ್ಪು ಶೆರ್ವಾನಿ ಧರಿಸಿದ್ದರು. ಬ್ರೂಚ್‌ನೊಂದಿಗೆ ಬಂದ್ ಗಾಲಾ ಕುರ್ತಾವನ್ನು ಧರಿಸಿದ್ದರು. ಕಪ್ಪು ಪ್ಯಾಂಟ್, ಹೊಂದುವಂತಹ ಬೂಟುಗಳು, ಉಂಗುರ, ಇಯರ್ ಸ್ಟಡ್‌ಗಳು, ಟ್ರಿಮ್ ಮಾಡಿದ ಗಡ್ಡ , ಹೆರ್‌ಸ್ಟೈಲ್ ಹೊಂದಿಕೆಯಾಗುವಂತೆ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ | RRR Movie | ನಾಟು ನಾಟು ಸಾಂಗ್‌ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಇದೊಂದು ವಿಶೇಷ ಸಾಧನೆ ಎಂದ ಮೋದಿ
ಜೂನಿಯರ್ ಎನ್‌ಟಿಆರ್ ನಾಚ್-ಲ್ಯಾಪಲ್ ಜಾಕೆಟ್, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಕೀರವಾಣಿ ಕಪ್ಪು ಕುರ್ತಾದೊಂದಿಗೆ ಕಾಣಿಸಿಕೊಂಡರೆ ರಾಮಚರಣ್ ಪತ್ನಿ ಸೀರೆಯನ್ನುಟ್ಟಿದ್ದರು. 80ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಸಮಾರಂಭದಲ್ಲಿ ಸಾಂಪ್ರದಾಯಿಕ ಸೀರೆಯೊಂದಿಗೆ, ಬಿಂದಿಯಲ್ಲಿ ಮಿಂಚಿದ್ದಾರೆ ಉಪಾಸನಾ ಕಾಮಿನೇನಿ. ಅವರ ಉಡುಗೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಅವರೊಂದಿಗಿನ ಸೆಲ್ಫಿಯನ್ನು ಉಪಾಸನಾ ಹಂಚಿಕೊಂಡಿದ್ದಾರೆ.
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಇದೀಗ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ.
ಕ್ಯಾಲಿಫೋರ್ನಿಯಾದ ಬವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜೊತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.
ಇದನ್ನೂ ಓದಿ | RRR Movie | ಆರ್‌ಆರ್‌ಆರ್ ಚಿತ್ರಕ್ಕೆ ಸೆಲೆಬ್ರಿಟಿಗಳಿಂದ ಶುಭ ಹಾರೈಕೆಯ ಸುರಿಮಳೆ!
Golden Globe 2023
RRR Golden Globe Award | ʼಆರ್‌ಆರ್‌ಆರ್ʼಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ (RRR Golden Globe Award) ಲಭಿಸಿದೆ. ಈ ಹಾಡಿನ ಸಂಗೀತ ನಿರ್ದೇಶಕರಾಗಿರುವ ಎಂ.ಎಂ.ಕೀರವಾಣಿ ಅವರ ಕಿರು ಪರಿಚಯ ಇಲ್ಲಿದೆ.
ಹೈದರಾಬಾದ್: ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ ಸಿನಿಮಾದ ʼನಾಟು ನಾಟುʼ ಹಾಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಸಾಮಾಜಿಕ ಜಾಲತಾಣದಲ್ಲೂ ಇದೇ ಹಾಡು, ಸಾರ್ವಜನಿಕ ಕಾರ್ಯಕ್ರಮಗಳ ವೇದಿಕೆಯಲ್ಲೂ ಇದೇ ಹಾಡು. ಕೊನೆಗೆ ಮದುವೆ ಮನೆಗಳಲ್ಲಿ ವಧು-ವರರ ಎದುರು ಕುಣಿಯುವವರ ಆಯ್ಕೆಯೂ ಇದೇ ಹಾಡು. ಭಾರತದಾದ್ಯಂತ ಟ್ರೆಂಡ್ ಆಗಿದ್ದ ಈ ಹಾಡು ಇದಿಗ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು (RRR Golden Globe Award) ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಮೂಲಗೀತೆ ಎನ್ನುವ ವಿಭಾಗದಲ್ಲಿ ಈ ಹಾಡಿಗೆ ಪ್ರಶಸ್ತಿ ಲಭಿಸಿದೆ. ಹಾಡಿನ ಮಾಂತ್ರಿಕ, ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ(61) ಕೈಗೆ ಪ್ರಶಸ್ತಿ ತಲುಪಿದೆ. ಹಾಗಾದರೆ ಯಾರು ಈ ಕೀರವಾಣಿ, ಅವರ ಹಿನ್ನೆಲೆಯೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ: RRR Film | ಏಷ್ಯನ್ ಫಿಲ್ಮ್ ಅವಾರ್ಡ್ಸ್ ರೇಸಿನಲ್ಲಿ ಪೊನ್ನಿಯನ್ ಸೆಲ್ವನ್, ಆರ್‌ಆರ್‌ಆರ್!
ಕೀರವಾಣಿ ಅವರ ಪೂರ್ತಿ ಹೆಸರು ಕೊಡುರಿ ಮರಾಕಥಮಣಿ ಕೀರವಾಣಿ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರಿನಲ್ಲಿ ಜನಿಸಿದವರು. ಇವರ ತಾಯಿ ಭಾನುಮತಿ ಅವರು ನಿರ್ದೇಶಕ ರಾಜಮೌಳಿ ಅವರ ಚಿಕ್ಕಮ್ಮ. ಕೀರವಾಣಿ ಅವರು 1980ರಲ್ಲಿಯೇ ಸಂಗೀತ ನಿರ್ದೇಶನ ಆರಂಭಿಸಿದವರು. ಇವರ ವೃತ್ತಿ ಬದುಕಿನಲ್ಲಿ ಒಳ್ಳೆಯ ತಿರುವು ತಂದುಕೊಟ್ಟದ್ದು 1990ರ ʼಮನಸು ಮಮಥಾʼ ಸಿನಿಮಾ. ರಾಮ್‌ಗೋಪಾಲ್ ವರ್ಮಾ ಅವರ ʼಕ್ಷಣ ಕ್ಷಣಂʼ ಮತ್ತು ʼಅನ್ನಮಯ್ಯʼ ಸಿನಿಮಾಗಳಲ್ಲೂ ಇವರ ಸಂಗೀತ ಕಮಾಲ್ ಮಾಡಿತ್ತು. ಅನ್ನಮಯ್ಯ ಸಿನಿಮಾದ ಸಂಗೀತಕ್ಕಾಗಿ ಕೀರವಾಣಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತು. ಅಂದ ಹಾಗೆ ಕೀರವಾಣಿ ಅವರು ಸಂಗೀತ ನಿರ್ದೇಶನದ ಜತೆಯಲ್ಲಿ ಗಾಯಕರಾಗಿಯೂ ಕೆಲಸ ಮಾಡಿರುವುದು ವಿಶೇಷ.
ಇದನ್ನೂ ಓದಿ: RRR Film | ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಿಂದ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
2015ರಲ್ಲಿ ಕೀರವಾಣಿ ಅವರು ತಮ್ಮ ಸೋದರ ಸಂಬಂಧಿ ರಾಜಮೌಳಿ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. ನಂತರ ಅವರ ʼಬಾಹುಬಲಿ: ದಿ ಬಿಗಿನಿಂಗ್ʼ ಮತ್ತು ʼಬಾಹುಬಲಿ 2′ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದರು. ಅದರ ಬೆನ್ನಲ್ಲಿ ಆರ್‌ಆರ್‌ಆರ್ ಸಿನಿಮಾಕ್ಕೂ ಸಂಗೀತ ಸಂಯೋಜಿಸಿ ಕೊಟ್ಟರು. ಕೀರವಾಣಿ ಅವರು ಸಂಯೋಜಿಸಿದ್ದ ನಾಟು ನಾಟು ಹಾಡಿಗೆ ಕಾಲಭೈರವ್ ಮತ್ತು ರಾಹುಲ್ ಸಿಪ್ಲಿಗುಂಜ್ ಅವರು ಧ್ವನಿ ನೀಡಿದ್ದಾರೆ.
ಜಮೀನ್ದಾರ್ರು ಸಿನಿಮಾದ ಸರದಾರ:
ಎಂ.ಎಂ.ಕೀರವಾಣಿ ಅವರು ತೆಲುಗು ಮಾತ್ರವಲ್ಲದೆ ಹಲವಾರು ಭಾಷೆಗಳ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಂ ಮತ್ತು ಹಿಂದಿ ಸಿನಿಮಾಗಳಲ್ಲೂ ಇವರ ಛಾಪನ್ನು ಕಾಣಬಹುದು. ಕನ್ನಡದ ಪ್ರಸಿದ್ಧ ʼಜಮೀನ್ದಾರ್ರುʼ, ʼವೀರ ಮದಕರಿʼ, ʼದೀಪಾವಳಿʼ ಸೇರಿ ಅನೇಕ ಸಿನಿಮಾಗಳಿಗೆ ಕೀರವಾಣಿ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಿಂದಿಯ ಈಸ್ ರಾತ್ ಕಿ ಸುಬಾಹ್ ನಹಿನ್ (1996), ಸುರ್ – ದಿ ಮೆಲೊಡಿ ಆಫ್ ಲೈಫ್, ಝಖ್ಮ್, ಸಾಯಾ, ಜಿಸ್ಮ್, ಕ್ರಿಮಿನಲ್, ರೋಗ್ ಮತ್ತು ಪಹೇಲಿ ಸಿನಿಮಾಗಳಲ್ಲಿ ಕೀರವಾಣಿ ಸಂಗೀತವಿದೆ. ಒಟ್ಟಾರೆಯಾಗಿ 220ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿಕೊಟ್ಟಿರುವ ಹೆಮ್ಮೆ ಕೀರವಾಣಿ ಅವರದ್ದು.
ಕುಟುಂಬದ ತುಂಬೆಲ್ಲ ಕಲಾವಿದರು
ವಿಶೇಷವೆಂದರೆ ಕೀರವಾಣಿ ಅವರ ಕುಟುಂಬವೇ ಕಲಾವಿದರ ಕುಟುಂಬ ಎನ್ನಬಹುದು. ಅವರ ಸಹೋದರ ಕಲ್ಯಾಣಿ ಮಲಿಕ್ ಕೂಡ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಗಾಯಕರು. ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕಿ ಹಾಗೂ ಗಾಯಕಿ ಎಂ.ಎಂ.ಶ್ರೀಲೇಖಾ ಅವರ ಸೋದರ ಸಂಬಂಧಿಗಳು. ಬಾಲಿವುಡ್‌ನ ಚಲನಚಿತ್ರ ಚಿತ್ರಕಥೆಗಾರ ಹಾಗೂ ನಿರ್ದೇಶಕ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕೀರವಾಣಿ ಅವರ ಸೋದರಳಿಯ. ಕೀರವಾಣಿ ಅವರ ಪತ್ನಿ ಶ್ರೀವಲ್ಲಿ ತೆಲುಗು ಸಿನಿಮಾಗಳ ಲೈನ್ ಪ್ರೊಡ್ಯುಸರ್. ಇನ್ನು ಅವರ ಮಗ ಕಾಲಭೈರವ್ ಗಾಯಕ. ಅವರೇ ನಾಟು ನಾಟು ಹಾಗೂ ಬಾಹುಬಲಿ 2 ಸಿನಿಮಾದ ʼದಂಡಾಲಯ್ಯʼ ಹಾಡಿಗೆ ಧ್ವನಿಯಾದವರು!
-
ದೇಶ15 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್22 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್19 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್