ಹೈದರಾಬಾದ್: ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ (RRR Movie) ಜಪಾನ್‌ನಲ್ಲಿ ಕಳೆದ ವರ್ಷ ಅಕ್ಟೋಬರ್ 21ರಂದು ಬಿಡುಗಡೆಯಾಗಿತ್ತು. ಇದೀಗ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿರುವ ಸಿನಿಮಾ ಜಪಾನ್‌ನಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಮೊನ್ನೆಯಷ್ಟೇ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ.
ಇದನ್ನೂ ಓದಿ: MM Keeravani : ಆಸ್ಕರ್ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆರ್‌ಆರ್‌ಆರ್ ಸಿನಿಮಾ ಜಪಾನ್‌ನ 44 ನಗರಗಳ 209 ಸಿನಿಮಾ ಮಂದಿರಗಳಲ್ಲಿ, 31 ಐಮ್ಯಾಕ್ಸ್ ತೆರೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ 80 ಕೋಟಿಗೂ ಅಧಿಕ ರೂ. ಸಂಪಾದನೆ ಮಾಡಿದ್ದು, ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೊದಲ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿಮಾದ ಅಧಿಕೃತ ಖಾತೆಯಾದ ʼಆರ್‌ಆರ್‌ಆರ್ʼನಿಂದ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ. “ಆರ್‌ಆರ್‌ಆರ್ ಸಿನಿಮಾ ಕ್ರಮೇಣವಾಗಿ ಜಪಾನ್‌ನ ಬೇರುಗಳಲ್ಲಿ ತೂರಿಕೊಳ್ಳುತ್ತಿದೆ. ಚಿತ್ರವು ಅಸಾಧಾರಣ ಹೆಜ್ಜೆಗಳನ್ನು ಇಡುತ್ತಿದೆ. 20ನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾ 202 ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿದೆ” ಎಂದು ಸಿನಿತಂಡ ಹೇಳಿದೆ.
ಇದನ್ನೂ ಓದಿ: Oscars 2023: ದಿ ಎಲಿಫೆಂಟ್ ವಿಸ್ಪರರ್ಸ್, ಆರ್‌ಆರ್‌ಆರ್ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಜಪಾನ್‌ನಲ್ಲಿ ಈಗಾಗಲೇ 80 ಕೋಟಿ ರೂ. ಗಳಿಸಿಕೊಂಡಿರುವ ಆರ್‌ಆರ್‌ಆರ್ ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ವಿಶ್ವಾದ್ಯಂತ ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ.