MM Keeravani : ಆಸ್ಕರ್‌ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ Vistara News
Connect with us

ಸಿನಿಮಾ

MM Keeravani : ಆಸ್ಕರ್‌ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ

ಆಸ್ಕರ್‌ ಪ್ರಶಸ್ತಿ ಪಡೆದಿರುವ ನಾಟು ನಾಟು ಹಾಡಿನ ಸಂಗೀತ ನಿರ್ದೇಶಕ ಕೀರವಾಣಿ (MM Keeravani) ಅವರಿಗೆ ರಿಚರ್ಡ್‌ ಕಾರ್ಪೆಂಟರ್‌ ಅವರು ವಿಶೇಷವಾಗಿ ಶುಭ ಹಾರೈಸಿದ್ದಾರೆ. ಅದನ್ನು ಕಂಡೊಡನೆ ಕಣ್ಣೀರು ಬಂದಿದ್ದಾಗಿ ಕೀರವಾಣಿ ಹೇಳಿಕೊಂಡಿದ್ದಾರೆ.

VISTARANEWS.COM


on

Koo

ಹೈದರಾಬಾದ್‌: ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. ಹಾಡಿನ ಸಂಗೀತ ನಿರ್ದೇಶಕರಾಗಿರುವ ಎಂ.ಎಂ.ಕೀರವಾಣಿ (MM Keeravani) ಮತ್ತು ಹಾಡಿಗೆ ಸಾಹಿತ್ಯ ಬರೆದಿರುವ ಚಂದ್ರ ಬೋಸ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವರಿಗೆ ಇಡೀ ದೇಶವೇ ಶುಭ ಹಾರೈಸುತ್ತಿದೆ. ಹಾಗೆಯೇ ಕಾರ್ಪೆಂಟರ್ ಖ್ಯಾತಿಯ ರಿಚರ್ಡ್‌ ಕಾರ್ಪೆಂಟರ್‌ ಅವರೂ ಈ ಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾಟು ನಾಟು ಹಾಡು ಮತ್ತು ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು!
ʼಟಾಪ್‌ ಆಫ್‌ ದಿ ವರ್ಲ್ಡ್‌ʼ ಹಾಡಿನ ತುಣಕನ್ನು ಹಾಡಿ ರಿಚರ್ಡ್‌ ಅವರ ಕುಟುಂಬ ಕೀರವಾಣಿ ಅವರಿಗೆ ಶುಭ ಹಾರೈಸಿದೆ. ರಿಚರ್ಡ್‌ ಅವರು ಪಿಯಾನೋ ನುಡಿಸಿದ್ದರೆ, ಅವರ ಕುಟುಂಬದ ಇನ್ನಿಬ್ಬರು ಹೆಣ್ಣು ಮಕ್ಕಳು ಹಾಡನ್ನು ಹಾಡಿದ್ದಾರೆ. ಈ ವಿಡಿಯೊವನ್ನು ರಿಚರ್ಡ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕೀರವಾಣಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.


ಈ ವಿಡಿಯೊ ಕಂಡೊಡನೆ ಕೀರವಾಣಿ ಅವರು ಭಾವುಕರಾಗಿದ್ದಾರೆ. ವಿಡಿಯೊವನ್ನು ಹಂಚಿಕೊಂಡಿರುವ ಅವರು, “ಇದು ನಾನು ಸ್ವಲ್ಪವೂ ನಿರೀಕ್ಷಿಸದ ವಿಷಯ. ಸಂತೋಷದಿಂದ ಕಣ್ಣೀರು ಹರಿಯುತ್ತದೆ. ಇದು ನನಗೆ ಈ ಜಗತ್ತಲ್ಲಿ ಸಿಕ್ಕ ಅತ್ಯಮೂಲ್ಯ ಉಡುಗೊರೆ” ಎಂದು ಬರೆದುಕೊಂಡಿದ್ದಾರೆ.


ಹಾಗೆಯೇ ಈ ವಿಡಿಯೊ ಬಗ್ಗೆ ಆರ್‌ಆರ್‌ಆರ್‌ ನಿರ್ದೇಶಕ ಹಾಗೂ ಕೀರವಾಣಿ ಅವರ ಸೋದರ ಸಂಬಂಧಿ ರಾಜಮೌಳಿ ಅವರೂ ಮಾತನಾಡಿದ್ದಾರೆ. “ರಿಚರ್ಡ್‌ ಸರ್‌, ಈ ಆಸ್ಕರ್ ಅಭಿಯಾನದ ಉದ್ದಕ್ಕೂ, ಆಸ್ಕರ್ ಗೆಲ್ಲುವ ಮೊದಲು ಅಥವಾ ನಂತರ ನನ್ನ ಸಹೋದರ ತನ್ನ ಭಾವನೆಗಳನ್ನು ಹೊರಹಾಕದೆ ಶಾಂತವಾಗಿದ್ದ. ಆದರೆ ಇದನ್ನು ನೋಡಿದ ಕ್ಷಣದಲ್ಲಿ ಅವನ ಕೆನ್ನೆಯ ಮೇಲೆ ಹರಿಯುವ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬಕ್ಕೆ ಇದು ಸ್ಮರಣೀಯ ಕ್ಷಣ. ತುಂಬಾ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

K. Manju: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ನಿರ್ಮಾಪಕ ಕೆ ಮಂಜು? ರಾಜಕೀಯ ಅಖಾಡಕ್ಕೆ ಎಂಟ್ರಿ?

ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಬಗ್ಗೆ ಇದೀಗ ನಿರ್ಮಾಪಕ ಕೆ.ಮಂಜು (K. Manju) ಮಾತನಾಡಿದ್ದಾರೆ. ಪದ್ಮನಾಭ ನಗರ (Padmanabha Nagar) ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಅವರು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

VISTARANEWS.COM


on

Edited by

Producer K Manju from Padmanabha Nagar assembly constituency Entry into the political arena
Koo

ಬೆಂಗಳೂರು: ರಾಜ್ಯದ ರಾಜಕಾರಣಕ್ಕೆ ನಿರ್ಮಾಪಕ ಕೆ ಮಂಜು (K. Manju) ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಬಗ್ಗೆ ಇದೀಗ ನಿರ್ಮಾಪಕ ಕೆ.ಮಂಜು ಮಾತನಾಡಿದ್ದಾರೆ. ಪದ್ಮನಾಭ ನಗರ (Padmanabha Nagar) ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಅವರು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ರಾಜಕೀಯಕ್ಕೆ ಬರುತ್ತಿರುವ ಬಗ್ಗೆ ಕೆ.ಮಂಜು ಮಾತನಾಡಿ ʻʻರಾಜ್ಯ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ನನಗೆ ಜನಸೇವೆ ಮಾಡುವುದಕ್ಕೆ ಒಂದು ಅವಕಾಶ ಕೊಡಿ. ಪಕ್ಷದ ಬಗ್ಗೆ ನಾಯಕ ತೀರ್ಮಾನ ಮಾಡಿಕೊಂಡು, ಅವರ ಸಲಹೆ ಸೂಚನೆ ಮೇರೆಗೆ ಅನೌನ್ಸ್ ಮಾಡುತ್ತೇನೆ. ಒಕ್ಕಲಿಗ ಜನಾಂಗದಲ್ಲಿ ಜನರ ಸೇವೆ ಮಾಡಲು ಅವಕಾಶ ಕೊಡಬೇಕು. ಟಿಕೆಟ್ ತೆಗೆದುಕೊಳ್ಳುವುದು ಮುಖ್ಯವಲ್ಲ ಜನರ ಆಶೀರ್ವಾದ ನನ್ನ ಮೇಲೆ ಇರಬೇಕು. ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷದಲ್ಲಿ ನಿಂತು ಸ್ಪರ್ಧಿಸ್ತೇನೆ. ಜೆಡಿಎಸ್, ಕಾಂಗ್ರೆಸ್ ಎರಡು ಪಕ್ಷಗಳಲ್ಲಿ ಒಂದು ಪಕ್ಷ ನನ್ನ ಕೈ ಹಿಡಿಯುತ್ತದೆ. ಪದ್ಮನಾಭನಗರ ನಾಯಕರ ಜತೆ ಸಂಪರ್ಕದಲ್ಲಿ ಇದ್ದೀನೆʼʼಎಂದು ಹೇಳಿದರು.

K Manju

ಇದನ್ನೂ ಓದಿ: JDS Hassan: ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್‌: ಭವಾನಿ-ಸ್ವರೂಪ್‌ ವಿವಾದದ ನಡುವೆ ಕೆ.ಎಂ. ರಾಜೇಗೌಡ ಅಭ್ಯರ್ಥಿ?

ಬಿಜೆಪಿಯ ಆರ್​. ಅಶೋಕ್​ ಅವರ ಪ್ರಾಬಲ್ಯ ಇರುವಂತಹ ಕ್ಷೇತ್ರ ಇದಾಗಿದ್ದು, ಒಂದು ವೇಳೆ ಕೆ. ಮಂಜು ಅವರು ಪದ್ಮನಾಭ ನಗರದಿಂದ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ಪೈಫೋಟಿ ಬಲವಾಗಲಿದೆ. ಅಶೋಕ್​ ವಿರುದ್ಧ ಕಾಂಗ್ರೆಸ್​ನಿಂದ ಪಿಜಿಆರ್ ಸಿಂಧ್ಯಾ ಅವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್​ನಿಂದ ಕೆ. ಮಂಜು ಸ್ಪರ್ಧಿಸಿದರೆ ಮೂರೂ ಪಕ್ಷಗಳ ನಡುವೆ ಹಣಾಹಣಿ ಜೋರಾಗಲಿದೆ. ರಾಜಕೀಯ ಅಖಾಡಟಕ್ಕೆ ಕೆ. ಮಂಜು ಬರಲಿದ್ದಾರಾ ಎಂಬುದು ಕಾದು ನೋಡಬೇಕಿದೆ.

Continue Reading

South Cinema

Bhola Movie: ಅಜಯ್‌ ದೇವಗನ್‌ ಅಭಿನಯದ ʻಭೋಲಾʼ ಚಿತ್ರ ಮೊದಲ ದಿನದ ಗಳಿಕೆ ಎಷ್ಟು?

ಭೋಲಾ (Bhola Movie) ಸಿನಿಮಾ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಗ್ರಹಣೆ ಮಾಡಬಹುದು ಎಂತಲೂ ವರದಿಯಾಗಿದೆ. ಐಪಿಎಲ್‌ ಪ್ರಾರಂಭವಾಗುವುದರಿಂದ ಸಿನಿಮಾ ಗಳಿಕೆಗೆ ತೊಂದರೆಯಾಗಬಹುದೆಂಬುದೂ ಸಹ ಹೇಳಲಾಗುತ್ತಿದೆ.

VISTARANEWS.COM


on

Edited by

Bhola Movie First Day collection
Koo

ಬೆಂಗಳೂರು: ಬಾಲಿವುಡ್‌ ನಟ ಅಜಯ್ ದೇವಗನ್ ಮತ್ತು ಟಬು ಅಭಿನಯದ ʻಭೋಲಾʼ ಸಿನಿಮಾ (Bhola Movie) ಮಾರ್ಚ್‌ 30ರಂದು ರಾಮ ನವಮಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆ್ಯಕ್ಷನ್-ಥ್ರಿಲ್ಲರ್ ಭೋಲಾ ಸಿನಿಮಾವನ್ನು ಅಜಯ್ ದೇವಗನ್ ನಿರ್ದೇಶಿಸಿದ್ದಾರೆ. ಇದು 2019ರ ತಮಿಳು ಚಿತ್ರ ಕೈದಿಯ ರಿಮೇಕ್ ಆಗಿದೆ. ಮೊದಲ ದಿನ ಭೋಲಾ ಸಿನಿಮಾ 11.20 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ವರದಿಯಾಗಿದೆ.

ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೀಗೆ ಬರೆದಿದ್ದಾರೆ, “ಭೋಲಾ ಮೊದಲನೇ ದಿನದಂದು 11.20 ಕೋಟಿ ರೂ. ಕಲೆಕ್ಷನ್‌ ಮಾಡಿದೆʼʼಎಂದು ಬರೆದುಕೊಂಡಿದ್ದಾರೆ. ಭೋಲಾ ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡಿದ್ದರೂ ಸಹ ದೃಶ್ಯಂ ಸಿನಿಮಾದಷ್ಟು ಕಲೆಕ್ಷನ್‌ ಮಾಡಿಲ್ಲ.ಆದರೆ ಭೋಲಾ ಸಿನಿಮಾ ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಗ್ರಹಣೆ ಮಾಡಬಹುದು ಎಂತಲೂ ವರದಿಯಾಗಿದೆ. ಐಪಿಎಲ್‌ ಪ್ರಾರಂಭವಾಗುವುದರಿಂದ ಸಿನಿಮಾ ಗಳಿಕೆಗೆ ತೊಂದರೆಯಾಗಬಹುದೆಂಬುದೂ ಸಹ ಹೇಳಲಾಗುತ್ತಿದೆ.

ಬಾಲಿವುಡ್ ಹಂಗಾಮಾ ಪ್ರಕಾರ, ಮೊದಲ ದಿನದಲ್ಲಿ ಪಠಾಣ್‌ 57 ಕೋಟಿ ರೂ. ಗಳಿಕೆ ಕಂಡಿತ್ತು. ಜೂಥಿ ಮೈನ್ ಮಕ್ಕರ್ 15.73 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇವೆರಡು ಸಿನಿಮಾಗಳ ಬಳಿಕ ಭೋಲಾ ಈ ವರ್ಷದ ಮೊದಲನೇ ದಿನ ಮೂರನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ. ಅಜಯ್‌ ದೇವಗನ್‌ ಅವರ ದೃಶ್ಯಂ-2 ಸಿನಿಮಾ 15.38 ಕೋಟಿ ರೂ. ಮೂಲಕ ಪ್ರಬಲ ಓಪನಿಂಗ್ ಹೊಂದಿತ್ತು. ಅಂತಿಮವಾಗಿ 240.54 ಕೋಟಿ ರೂ. ಬಾಚಿಕೊಂಡಿತು. ದೃಶ್ಯಂ 2 ಮತ್ತು ಭೋಲಾ ಎರಡೂ ಮಲಯಾಳಂ ಮತ್ತು ತಮಿಳು ಚಿತ್ರಗಳ ರಿಮೇಕ್‌ಗಳಾಗಿವೆ. ಭೋಲಾ 2019ರಲ್ಲಿ ಬಿಡುಗಡೆಯಾದ ಲೋಕೇಶ್ ಕನಕರಾಜ್ ಅವರ ಕೈದಿಯ ರಿಮೇಕ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಶೆಹಜಾದಾ ಮತ್ತು ಸೆಲ್ಫಿ ಕೂಡ ರೀಮೇಕ್ ಆಗಿದ್ದರೂ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆ.

ಇದನ್ನೂ ಓದಿ: Bholaa trailer: ಅಜಯ್ ದೇವಗನ್ ನಟನೆ, ನಿರ್ದೇಶನದ ʻಭೋಲಾʼ ಟ್ರೈಲರ್‌ ಔಟ್‌

ʻಭೋಲಾʼ ಸಿನಿಮಾ 2019ರಲ್ಲಿ ಬಿಡುಗಡೆಯಾದ ತಮಿಳಿನ ʻಕೈದಿʼ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಬು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೋಲಾ ಚಿತ್ರವು ಅಜಯ್ ದೇವಗನ್ ಮತ್ತು ನಟಿ ಟಬು ಅವರ ಒಂಬತ್ತನೇ ಚಿತ್ರವಾಗಿದೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ 2ದಲ್ಲಿ ಕಾಣಿಸಿಕೊಂಡಿದ್ದಾರೆ .ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ.

Continue Reading

South Cinema

Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ?

ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ (Kajal Aggarwal) ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್‌ ಆಗಿ ಹೇಳಿಕೆ ನೀಡಿದ್ದಾರೆ.

VISTARANEWS.COM


on

Edited by

Hindi cinema lacks ethics values discipline statement By Kajal Aggarwal
Koo

ಬೆಂಗಳೂರು: ನಟಿ ಕಾಜಲ್ ಅಗರ್ವಾಲ್ (Kajal Aggarwal) ಕೆಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಹೆಚ್ಚಾಗಿ ಸಕ್ಸೆಸ್‌ ಕಂಡದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್‌ ಆಗಿ ಹೇಳಿಕೆ ನೀಡಿದ್ದಾರೆ.

ರೈಸಿಂಗ್ ಇಂಡಿಯಾ ಶೋನಲ್ಲಿ ಮಾತನಾಡಿದ ಕಾಜಲ್, “ಹಿಂದಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಬಹಳಷ್ಟು ಜನರಿದ್ದಾರೆ. ಏಕೆಂದರೆ ಅದು ಹೆಚ್ಚು ರಾಷ್ಟ್ರವ್ಯಾಪಿ ಮಾನ್ಯತೆ ಪಡೆದ ಭಾಷೆಯಾಗಿದೆ. ಆದರೆ ದಕ್ಷಿಣ ಭಾರತ ಸಿನಿರಂಗ ತುಂಬ ಸ್ನೇಹಪರ ಉದ್ಯಮವಾಗಿದೆ. ಸ್ವೀಕಾರಾರ್ಹಯುತವಾದಂತಹ ಉದ್ಯಮ ಕೂಡ. ದಕ್ಷಿಣ ಭಾರತದ ಸಿನಿರಂಗದಲ್ಲಿ ಉನ್ನತ ಮಟ್ಟದ ತಂತ್ರಜ್ಞರು, ಅದ್ಭುತ ನಿರ್ದೇಶಕರು ಇದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ನಾಲ್ಕು ಭಾಷೆಗಳಲ್ಲಿಯೂ ಸೇರಿʼʼಎಂದಿದ್ದಾರೆ.

“ಹಿಂದಿ ನನ್ನ ಮಾತೃಭಾಷೆಯಾಗಿದೆ. ನಾವೆಲ್ಲ ಹಿಂದಿ ಸಿನಿಮಾ ನೋಡುತ್ತ ಬೆಳೆದಿದ್ದೇವೆ. ಆದರೆ ನಾನು ಇಕೋ ಸಿಸ್ಟಮ್‌ಗೆ ಆದ್ಯತೆ ನೀಡುತ್ತೇನೆ., ನೈತಿಕತೆ, ಮೌಲ್ಯಗಳು, ಶಿಸ್ತು ಇರುವುದು ದಕ್ಷಿಣ ಭಾರತದ ನಿನಿರಂಗದಲ್ಲಿ ಆದರೆ ಹಿಂದಿ ಚಿತ್ರರಂಗದಲ್ಲಿ ಇದೆಲ್ಲದರ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆʼʼಎಂದರು.

ʻʻನಾನು ಮುಂಬೈನಲ್ಲಿ ಹಿಂದಿ ಮಾತನಾಡುತ್ತ ಬೆಳೆದೆ. ಆದರೆ ನನಗೆ ಮನೆಯ ಭಾವನೆ ಬಂದಿದ್ದು ಹೈದರಾಬಾದ್ ಮತ್ತು ಚೆನ್ನೈನಲ್ಲಿ. ನಾನು ಬಾಂಬೆ ಹುಡುಗಿ. ಅಲ್ಲೆ ಹುಟಿ, ಬೆಳೆದೆ. ನಾನು ಹೈದರಾಬಾದ್ (ತೆಲುಗು) ಚಲನಚಿತ್ರೋದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನನ್ನ ಕೆಲಸದ ಮುಖ್ಯ ಭಾಗವೆಂದರೆ ತಮಿಳು ಮತ್ತು ತೆಲುಗು ಚಲನಚಿತ್ರಗಳು. ನಾನು ಕೆಲವು ಹಿಂದಿ ಚಿತ್ರಗಳನ್ನು ಮಾಡಿದ್ದೇನೆ ಆದರೆ ನನಗೆ, ಹೈದರಾಬಾದ್ ಮತ್ತು ಚೆನ್ನೈ ನನ್ನ ಮನೆ ಎಂಬ ಭಾವನೆ. ಅದು ಎಂದಿಗೂ ಹೋಗುವುದಿಲ್ಲʼʼ ಎಂದರು.

ಇದನ್ನೂ ಓದಿ: Kajal Aggarwal: ಇಲ್ಲಿವೆ ಕಾಜಲ್ ಅಗರ್ವಾಲ್ ಲೇಟೆಸ್ಟ್‌ ಔಟ್‌ಫಿಟ್‌ಗಳು

ಕಾಜಲ್‌ ಮಾತನಾಡಿದ ಸಂದರ್ಶನದ ವಿಡಿಯೊ

ಕಾಜಲ್ 2007ರ ʻಲಕ್ಷ್ಮಿ ಕಲ್ಯಾಣಂʼ ಚಿತ್ರದ ಮೂಲಕ ತೆಲುಗು ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಮಗಧೀರ, ಆರ್ಯ-2 ನಂತಹ ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಳು. ಹಿಂದಿಯಲ್ಲಿ, ಅಜಯ್ ದೇವಗನ್ ಜತೆಗೆ ರೋಹಿತ್ ಶೆಟ್ಟಿ ಅವರ ಸಿಂಗಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಖ್ಯಾತಿ ಗಳಿಸಿದರು. ಕಾಜಲ್ ಮುಂದೆ ಕಮಲ್‌ ಹಾಸನ್‌ ಜತೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

South Cinema

Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ

ಕಾರ್ಯಕ್ರಮದಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ನಟಿ ಕಾರ್ಯಕ್ರಮಕ್ಕೆ ಆಗಮಿಸಿದ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Edited by

Ananya Panday Requests Not Call Her ACP
Koo

ಬೆಂಗಳೂರು: ಬ್ರ್ಯಾಂಡ್‌ವೊಂದರ ಕಾರ್ಯಕ್ರಮದಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ನಟಿ ಕಾರ್ಯಕ್ರಮಕ್ಕೆ ಆಗಮಿಸಿದ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅನನ್ಯಾ ತನ್ನ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಫೋಟೊಶೂಟ್‌ ಸಮಯದಲ್ಲಿ ಕೆಲವು ಮಾಧ್ಯಮಗಳು ಅವರನ್ನು ‘ಎಸಿಪಿʼ (ಅನನ್ಯಾ ಚಂಕಿ ಪಾಂಡೆ)’ ಎಂದು ಕರೆದಾಗ, ನಟಿ ಮುದ್ದಾಗಿ ದಯವಿಟ್ಟು ನನ್ನನ್ನು ಎಸಿಪಿ ಎಂದು ಕರೆಯಬೇಡಿʼʼ ಎಂದು ಧನ್ಯವಾದ ಸೂಚಿಸಿದ್ದಾರೆ.

ವಿಡಿಯೊ ನೋಡಿದ ಅಭಿಮಾನಿಗಳು ನಟಿಯ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು “ಅನನ್ಯಾ ಅವರ ಶೈಲಿಯು ಯಾವಾಗಲೂ ತಾಜಾ ಮತ್ತು ವಿಶಿಷ್ಟವಾಗಿರುತ್ತದೆ” ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು “ಈ ಬಣ್ಣ ಅವರಿಗೆ ತುಂಬ ಸೂಕ್ತವಾಗಿದೆ,” ಎಂದಿದ್ದಾರೆ. ಮತ್ತೊಬ್ಬರು ʻʻಗೊಂಬೆಯ ರೀತಿ ಕಾಣುತ್ತಿದ್ದಾರೆ,” ಎಂದು ಕಮೆಂಟ್‌ ಮಾಡಿದ್ದಾರೆ.

ಅನನ್ಯಾ ಹೊರತುಪಡಿಸಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಅಥಿಯಾ ಶೆಟ್ಟಿ, ಶ್ವೇತಾ ಬಚ್ಚನ್ ನಂದಾ, ಸೋನಮ್ ಕಪೂರ್, ರೇಖಾ, ಖುಷಿ ಕಪೂರ್ ಮತ್ತು ಅಂಬಾನಿಗಳಂತಹ ಹಲವಾರು ಸೆಲೆಬ್ರಿಟಿಗಳು ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಅನುಷ್ಕಾ ಹಳದಿ ಡ್ರೆಸ್ ಧರಿಸಿ ಲೇಡಿ ಡಿಯೊರ್ ಮಿನಿ ಬ್ಯಾಗ್ ಹಿಡಿದುಕೊಂಡಿದ್ದರು. ವಿರಾಟ್ ಖಾಕಿ ಸೂಟ್, ಬಿಳಿ ಶರ್ಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ; Ananya Panday: ಸಿಗರೇಟ್ ಸೇದುತ್ತಿರುವ ಅನನ್ಯಾ ಪಾಂಡೆ: ಸ್ಮೋಕರ್ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ

ವೃತ್ತಿಪರ ಮುಂಭಾಗದಲ್ಲಿ, ಅನನ್ಯಾ ಮುಂದೆ ರಾಜ್ ಶಾಂಡಿಲ್ಯ ಅವರ ನಿರ್ದೇಶನದ ʻಡ್ರೀಮ್ ಗರ್ಲ್ 2ʼ ನಲ್ಲಿ ಪರೇಶ್ ರಾವಲ್ ಮತ್ತು ಆಯುಷ್ಮಾನ್ ಖುರಾನಾ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿದ್ದು, ಪ್ರಸ್ತುತ ಅದರ ನಿರ್ಮಾಣ ಹಂತದಲ್ಲಿದೆ. ಈ ವರ್ಷ ಜುಲೈ 7ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದಲ್ಲದೆ, ಅವರು ಅರ್ಜುನ್ ವರೈನ್ ಸಿಂಗ್ ಅವರ ʻಖೋ ಗಯೇ ಹಮ್ ಕಹಾನ್ʼ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆದರ್ಶ್ ಗೌರವ್ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading
Advertisement
Gujarat high court imposes rs 25,000 penalty on delhi CM Kejriwal
ದೇಶ6 mins ago

Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!

Ram Navami Violence erupted in West Bengal and Gujarat, 24 detained
ದೇಶ7 mins ago

Ram Navami Violence: ಗುಜರಾತ್‌, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ

Dog Tries to eat Food Shown On TV Screen Viral Video
ವೈರಲ್ ನ್ಯೂಸ್9 mins ago

Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!

siddaramaiah may contest in kolar along with varuna
ಕರ್ನಾಟಕ9 mins ago

Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್‌ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?

Two riders killed on the spot after bike collides with truck
ಕರ್ನಾಟಕ16 mins ago

Bengaluru Murder Case: ಬೆಂಗಳೂರಲ್ಲಿ ನೇಪಾಳಿ ಯುವಕನ ಕೊಲೆಗೆ ಕಾರಣವಾಯ್ತು ಗಾಂಜಾ ನಶೆ; ಹಂತಕರ ಸೆರೆ

Suicide Case updates 21 year old woman commits suicide by hanging herself
ಕರ್ನಾಟಕ22 mins ago

Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

IPL 2023: IPL fan park after three years; Opportunity in Karnataka too
ಕ್ರಿಕೆಟ್33 mins ago

IPL 2023: ಮೂರು ವರ್ಷಗಳ ಬಳಿಕ ಐಪಿಎಲ್​ ಫ್ಯಾನ್​ ಪಾರ್ಕ್​; ಕರ್ನಾಟಕದಲ್ಲಿಯೂ ಇರಲಿದೆ ಜೋಶ್​

Mallikarjun khuba joins JDS
ಕರ್ನಾಟಕ36 mins ago

JDS Karnataka: ಬಿಜೆಪಿಯಿಂದ ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

Navjot Sidhu to be released from Jail
ದೇಶ41 mins ago

ಏ.1ರಂದು ಜೈಲಿಂದ ಬಿಡುಗಡೆಯಾಗಲಿದ್ದಾರೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು; ಪತ್ನಿ ಟ್ವೀಟ್ ಬೆನ್ನಲ್ಲೇ ಸಿಧು ಟ್ವೀಟ್​

Release Rs 17.42 crore dues to MySugar factory says Dinesh Gooligowda
ಕರ್ನಾಟಕ42 mins ago

MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ11 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ21 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!