ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ - Vistara News

Oscars 2023

ಜಪಾನ್‌ನಲ್ಲಿ 80 ಕೋಟಿ ರೂ. ಗಳಿಸಿದ RRR Movie; ದಾಖಲೆಗಳ ಮೇಲೆ ದಾಖಲೆಗಳ ಸೃಷ್ಟಿ

ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಜಪಾನ್‌ ದೇಶವೊಂದರಲ್ಲೇ ಬರೋಬ್ಬರಿ 80 ಕೋಟಿ ರೂ. ಗಳಿಕೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್:‌ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ (RRR Movie) ಜಪಾನ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ 21ರಂದು ಬಿಡುಗಡೆಯಾಗಿತ್ತು. ಇದೀಗ 20ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿರುವ ಸಿನಿಮಾ ಜಪಾನ್‌ನಲ್ಲಿ ಬರೋಬ್ಬರಿ 80 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಮೊನ್ನೆಯಷ್ಟೇ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ.

ಇದನ್ನೂ ಓದಿ: MM Keeravani : ಆಸ್ಕರ್‌ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆರ್‌ಆರ್‌ಆರ್‌ ಸಿನಿಮಾ ಜಪಾನ್‌ನ 44 ನಗರಗಳ 209 ಸಿನಿಮಾ ಮಂದಿರಗಳಲ್ಲಿ, 31 ಐಮ್ಯಾಕ್ಸ್‌ ತೆರೆಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ 80 ಕೋಟಿಗೂ ಅಧಿಕ ರೂ. ಸಂಪಾದನೆ ಮಾಡಿದ್ದು, ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಮೊದಲ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ.


ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿಮಾದ ಅಧಿಕೃತ ಖಾತೆಯಾದ ʼಆರ್‌ಆರ್‌ಆರ್‌ʼನಿಂದ ಟ್ವೀಟ್‌ ಮಾಡಿ ಮಾಹಿತಿ ನೀಡಲಾಗಿದೆ. “ಆರ್‌ಆರ್‌ಆರ್‌ ಸಿನಿಮಾ ಕ್ರಮೇಣವಾಗಿ ಜಪಾನ್‌ನ ಬೇರುಗಳಲ್ಲಿ ತೂರಿಕೊಳ್ಳುತ್ತಿದೆ. ಚಿತ್ರವು ಅಸಾಧಾರಣ ಹೆಜ್ಜೆಗಳನ್ನು ಇಡುತ್ತಿದೆ. 20ನೇ ವಾರಕ್ಕೆ ಕಾಲಿಟ್ಟಿರುವ ಸಿನಿಮಾ 202 ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿದೆ” ಎಂದು ಸಿನಿತಂಡ ಹೇಳಿದೆ.

ಇದನ್ನೂ ಓದಿ: Oscars 2023: ದಿ ಎಲಿಫೆಂಟ್​ ವಿಸ್ಪರರ್ಸ್, ಆರ್‌ಆರ್‌ಆರ್‌ ತಂಡವನ್ನು ಶ್ಲಾಘಿಸಿದ ಪ್ರಿಯಾಂಕ ಚೋಪ್ರಾ
ಜಪಾನ್‌ನಲ್ಲಿ ಈಗಾಗಲೇ 80 ಕೋಟಿ ರೂ. ಗಳಿಸಿಕೊಂಡಿರುವ ಆರ್‌ಆರ್‌ಆರ್‌ ಸಿನಿಮಾ ಶೀಘ್ರವೇ 100 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ವಿಶ್ವಾದ್ಯಂತ ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Oscars 2023

Actor Jr NTR: ಆಸ್ಕರ್‌ ಕಾರ್ಯಕ್ರಮಕ್ಕೆ ದುಬಾರಿ ವಾಚ್ ತೊಟ್ಟಿದ್ದ ಜೂ. ಎನ್‌ಟಿಆರ್‌! ಆ ವಾಚ್ ಬೆಲೆ ಎಷ್ಟು?

ಟಾಲಿವುಡ್‌ ಹೀರೋ ಜೂ. ಎನ್‌ಟಿಆರ್‌ ಅವರು ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಯ ವಾಚ್‌ ಧರಿಸಿದ್ದರು. ಅದರ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Koo

ಹೈದರಾಬಾದ್:‌ ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿನಿಮಾ ರಂಗದ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಸಂತಸದಲ್ಲಿ ಚಿತ್ರತಂಡವಿದೆ. ಅಂದ ಹಾಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜೂನಿಯರ್‌ ಎನ್‌ಟಿಆರ್‌ ಅವರು ತೊಟ್ಟಿದ್ದ ವಾಚ್‌ ಇದೀಗ ಭಾರೀ ಸುದ್ದಿಯಲ್ಲಿದೆ.

ಇದನ್ನೂ ಓದಿ: Jr NTR: ಆಸ್ಕರ್‌ನಿಂದ ಹಿಂತಿರುಗಿದ ಬಳಿಕ ಜ್ಯೂ. ಎನ್‌ಟಿಆರ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ಜೂ .ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಅವರು ಸೆಮಿ ವೆಸ್ಟರ್ನ್‌ ಶೈಲಿಯ ಸೂಟ್‌ಗಳನ್ನು ಧರಿಸಿದ್ದರು. ಹಾಗೆಯೇ ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಕುರ್ತಾ ಹಾಗೂ ಲೇಯರ್ಡ್‌ ಪ್ಯಾಂಟ್‌ ಧರಿಸಿ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರು. ವಿಶೇಷವಾಗಿ ಜೂ. ಎನ್‌ಟಿಆರ್‌ ಅವರು ಪಟೇಕ್‌ ಫಿಲ್ಲಿಪೆ ನೌಟಿಲಸ್‌ ಟ್ರಾವೆಲ್‌ ಟೈಮ್‌ ಕಂಪನಿಯ ವಾಚ್‌ ಅನ್ನು ತೊಟ್ಟಿದ್ದರು. ಈ ವಾಚ್‌ನ ಬೆಲೆ ಬರೋಬ್ಬರಿ 1,90,000 ಡಾಲರ್‌ ಅಂದರೆ 1.56 ಕೋಟಿ ರೂಪಾಯಿ!‌

ಜೂ. ಎನ್‌ಟಿಆರ್‌ ಅವರು ತೊಟ್ಟಿದ್ದ ಈ ವಾಚ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಅಂದ ಹಾಗೆ ಜೂ. ಎನ್‌ಟಿಆರ್‌ ಅವರು ಬ್ರಾಂಡೆಡ್‌ ವಾಚ್‌ಗಳನ್ನು ಇಷ್ಟಪಡುವ ವ್ಯಕ್ತಿ. ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳಿಗೆ ಅವರು ಭಾರೀ ಬೆಲೆ ಬಾಳುವ ವಾಚ್‌ಗಳನ್ನು ತೊಟ್ಟು ಬಂದಿದ್ದರು. ಅವರ ವಾಚ್‌ ಕಲೆಕ್ಷನ್‌ ಬಗ್ಗೆಯೂ ಹಲವು ಬಾರಿ ಚರ್ಚೆಗಳು ನಡೆದಿವೆ.

Continue Reading

Oscars 2023

Oscars 2023: ಎಲ್ಲೇ ಹೋದರೂ ಸಣ್ಣ ದೇವಾಲಯ ಸ್ಥಾಪಿಸುವ ರಾಮ್ ಮತ್ತು ಪತ್ನಿ ಉಪಾಸನಾ!

Oscars 2023: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್‌ ಗೆದ್ದ ಆರ್‌ಆರ್‌ಆರ್‌ (RRR Movie)ಚಿತ್ರದ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರ ಧಾರ್ಮಿಕ ಮನೋಭಾವನೆಗೆ ಮತ್ತೊಂದು ಸಾಕ್ಷ್ಯ ದೊರೆತಿದೆ.

VISTARANEWS.COM


on

Oscars 2023: Ram and his wife set up a small temple Whenever the go
Koo

ನವದೆಹಲಿ: ಸೋಮವಾರ ಆಸ್ಕರ್ ಘೋಷಣೆಯಾಗುವ ಸ್ಥಳಕ್ಕೆ ಹೋಗುವ ಮುನ್ನ ರಾಮ್ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಅವರು ತಮ್ಮ ಮನೆಯಲ್ಲಿರುವ ಚಿಕ್ಕ ದೇಗುಲದಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದರಂತೆ. ಈ ಜೋಡಿ ಎಲ್ಲೇ ಹೋದರೂ, ತಾವಿರುವಲ್ಲೇ ಚಿಕ್ಕ ದೇವಾಲಯವನ್ನು ರೆಡಿ ಮಾಡಿ, ಪೂಜಿಸುತ್ತಾರಂತೆ. ಇದು ಅವರಿಗೆ ಭಾರತದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದಂತೆ. ಈ ಮಾಹಿತಿಯನ್ನು ರಾಮ್ ಚರಣ್ ಅವರು ಹಂಚಿಕೊಂಡಿದ್ದು, ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ಮನೆಯಲ್ಲಿ ರೂಪಿಸಿದ ಚಿಕ್ಕ ದೇಗುಲದ ಫೋಟೋ ತೆಗೆಯಲು ಮಾಧ್ಯಮದವರಿಗೆ ಅವಕಾಶ ಮಾಡಿಕೊಟ್ಟರೆನ್ನಲಾಗಿದೆ(Oscars 2023:).

ಆಸ್ಕರ್‌ಗಾಗಿ ಡಾಲ್ಬಿ ಥಿಯೇಟರ್‌ಗೆ ಹೊರಡುವ ಮೊದಲು ದಂಪತಿಗಳು ಹೇಗೆ ತಯಾರಿ ನಡೆಸಿದ್ದಾರೆ ಎಂಬುದನ್ನು ನೋಡಲು ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ತಂಡವು ರಾಮ್ ಅವರ ಇರುವ ಮನೆಗೆ ಆಗಮಿಸಿತ್ತು. ಈ ತಂಡವನ್ನು ರಾಮ್ ಅವರು ಸ್ವಾಗತಿಸಿದರು. ಕ್ಯಾಮೆರಾಗಳಿಗೆ ತಮ್ಮ ಬಟ್ಟೆಗಳನ್ನು ತೋರಿಸುವುದರ ಜೊತೆಗೆ, ಅವರು ಪ್ರಪಂಚದ ಎಲ್ಲೇ ಇದ್ದರೂ ಅವರು ಅನುಸರಿಸುವ ಆಚರಣೆಯ ಮಾಹಿತಿಯನ್ನು ರಾಮ್ ಅವರು ಹಂಚಿಕೊಂಡರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಆಸ್ಕರ್‌ ಗೆಲುವು ಆರೋಗ್ಯಕರ ಸ್ಪರ್ಧೆಗೆ ನಾಂದಿಯಾಗಲಿ

ಈ ವೇಳೆ ವ್ಯಾನಿಟಿ ಫೇರ್ ಮ್ಯಾಗ್‌ಜಿನ್ ಜತೆ ಮಾತನಾಡಿದ ರಾಮ್ ಚರಣ್ ಅವರು, ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಇಲ್ಲಿರಲು ನಮಗೆ ಸಹಾಯ ಮಾಡಿದ ಎಲ್ಲದಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುವುದು ಮುಖ್ಯ ಎಂದು ಹೇಳಿದರು. ರಾಮ್ ಮತ್ತು ಉಪಾಸನಾ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡಿದರು ಎಂದು ವರದಿಯಾಗಿದೆ.

Continue Reading

Oscars 2023

Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ

Budget Session 2023: ಪ್ರಧಾನಿ ನರೇಂದ್ರ ಮೋದಿ ಅವರೇ, ಆರ್ ಆರ್ ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದ್ದಿದ್ದು, ಅವುಗಳ ಕ್ರೆಡಿಟ್ ತೆಗೆದುಕೊಳ್ಳಲು ಹೋಗಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

VISTARANEWS.COM


on

Don't take credit oscar winning films, Kharge requested to Modi at Budget Session 2023
Koo

ನವದೆಹಲಿ: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023).

ಆರ್‌ಆರ್‌ಆರ್ ಸಿನಿಮಾ ತೆಲುಗು ಸಿನಿಮಾವಾದ್ರೆ, ಎಲಿಫೆಂಟ್ ವಿಸ್ಪರರ್ಸ್ ತಮಿಳು ಸಾಕ್ಷ್ಯ ಚಿತ್ರವಾಗಿದ್ದು, ಎರಡೂ ದೇಶದ ಸಿನಿಮಾ ಕ್ಷೇತ್ರಕ್ಕೆ ಕಾಣಿಕೆ ನೀಡಿವೆ ಎಂದು ಖರ್ಗೆ ಅವರು ಹೇಳಿದರು. ನಾವು (ಬಿಜೆಪಿ) ನಿರ್ದೇಶನ ಮಾಡಿದ್ದೇವೆ, ನಾವು (ಬಿಜೆಪಿ) ಹಾಡು ಬರೆದಿದ್ದೇವೆ ಎಂದೋ ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು. ಇದು ನನ್ನ ವಿನಂತಿ ಮಾತ್ರ. ಇವು ದೇಶದ ಕೊಡುಗೆಯಾಗಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಹೇಳಿದರು.

ಇದನ್ನೂ ಓದಿ: Oscars 2023 : ಆರ್‌ಆರ್‌ಆರ್, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳಿಗೆ ಪಿಎಂ ಮೋದಿ, ರಾಹುಲ್ ಶುಭಾಶಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಆರ್ ಆರ್ ಆರ್ ಚಿತ್ರದ ಕತೆ ಬರೆದವರು ವಿ ವಿಜಯೇಂದ್ರ ಪ್ರಸಾದರು. ಅವರನ್ನು ಮೋದಿ ನೇತೃತ್ವದ ಸರ್ಕಾರವೇ ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂಬುದು ವಾಸ್ತವಾಂಶ ಎಂದರು. ಗೋಯಲ್ ಅವರು ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಆಸ್ಕರ್ ವಿಜೇತ ಆರ್ ಆರ್ ಆರ್ ಹಾಗೂ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶಭಾಶಯ ಕೋರಿದ್ದಾರೆ.

Continue Reading

Oscars 2023

Oscars 2023: ಆಂಧ್ರ ಸಿಎಂಗೆ ಬಾವಿಯಲ್ಲಿರುವ ಪ್ರಾದೇಶಿಕ ಕಪ್ಪೆ ಎಂದು ಗಾಯಕ ಅದ್ನಾನ್ ಸಾಮಿ ಹೇಳಿದ್ದೇಕೆ?

Oscars 2023: ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ ಅವರು ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಬಾವಿಯೊಳಗೆ ಇರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಕರೆದಿದ್ದಾರೆ. ಸಾಮಿ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

VISTARANEWS.COM


on

Oscars 2023, Adnan Sami calls Andhra CM frog in a pond
Koo

ನವದೆಹಲಿ: ಎಸ್‌ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌‌ಆರ್ ಚಿತ್ರವು (RRR Movie) ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್ (Oscars 2023) ಗೆಲ್ಲುತ್ತಿದ್ದಂತೆ, ಶುಭಾಶಯಗಳ ಸುರಿಮಳೆ ಸುರಿದಿದೆ. ಅದರಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ (Andhra Pradesh chief minister YS Jagan Mohan Reddy) ಅವರು ತೆಲುಗು ಧ್ವಜ ಎತ್ತರದಲ್ಲಿ ಹಾರಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೂಲತಃ ಪಾಕಿಸ್ತಾನದವರಾದ ಮತ್ತು ಈಗ ಭಾರತೀಯ ಪ್ರಜೆಯಾಗಿರುವ ಗಾಯಕ ಅದ್ನಾನ್ ಸಾಮಿ (Adnan Sami) ಕೊಂಕು ತೆಗೆದಿದ್ದಾರೆ. ಅಲ್ಲದೇ, ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಬಾವಿಯೊಳಗಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಎಂದು ಜರಿದಿದ್ದಾರೆ. ಸಾಮಿಯ ಟ್ವೀಟ್‌ಗೆ ನೆಟ್ಟಿಗರು ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಂಧ್ರ ಸಿಎಂ ಏನೆಂದು ಟ್ವೀಟ್ ಮಾಡಿದ್ದರು?

ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದ ಆರ್‌‌ಆರ್‌ಆರ್ ತಂಡಕ್ಕೆ ಆಂಧ್ರ ಸಿಎಂ ವೈ ಎಸ್ ಜಗನ್‌ಮೋಹನ್ ರೆಡ್ಡಿ ಶುಭಾಶಯ ಕೋರಿದ್ದರು. ಟ್ವೀಟ್ ಮಾಡಿ, ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ. @ssrajamouli, @tarak9999, @AlwaysRamCharan ಮತ್ತು @mmkeeravaani ಅವರು ನಿಜವಾಗಿಯೂ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದ್ದರು.

ಅದ್ನಾನಿ ಸಾಮಿ ಹೇಳಿದ್ದೇನು?

ತೆಲುಗು ಬಾವುಟ ಎತ್ತರದಲ್ಲಿ ಹಾರಾಟ ನಡೆಸುತ್ತಿದೆ ಎಂದು ಟ್ವೀಟ್ ಮಾಡಿದ್ದಕ್ಕೆ ಕೊಂಕು ತೆಗೆದಿರುವ ಮೂಲತಃ ಪಾಕಿಸ್ತಾನದವರಾದ ಹಾಗೂ ಈಗ ಭಾರತೀಯ ಪ್ರಜೆಯಾಗಿರುವ ಅದ್ನಾನ್ ಸಾಮಿ, ಆಂಧ್ರ ಸಿಎಂ ಟ್ವೀಟ್ ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುತ್ತಿದೆ. ಅವರಿಗೆ ರಾಷ್ಟ್ರೀಯ ಹೆಮ್ಮೆಯನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು. ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸ್ವೀಕರಿಸಲು ಅಥವಾ ಬೋಧಿಸಲು ಸಾಧ್ಯವಾಗದಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ಎಂದು ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.

ಸಾಮಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಅದ್ನಾನ್ ಸಾಮಿ ಟ್ವೀಟ್‌ಗೆ ನೆಟ್ಟಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರು(ವೈ ಎಸ್ ಜಗನ್ ಮೋಹನ್ ರೆಡ್ಡಿ) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿ. ತಮ್ಮ ಭಾಷೆಯ ಬಗ್ಗೆ ಅವರು ಅಭಿಮಾನ ವ್ಯಕ್ತಪಡಿಸುವುದು ನ್ಯಾಯಸಮ್ಮತ. ನೀನು ಅಸುರಕ್ಷತೆಯನ್ನು ಅನುಭವಿಸಬೇಡ. ಕಾಳಜಿ ಮಾಡಬೇಡ, ಐಡೆಟಿಂಟಿಯಲ್ಲಿ ಭಾರತ ಬಹಳ ಗಟ್ಟಿಯಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಆಸ್ಕರ್ ಪ್ರಶಸ್ತಿಯನ್ನು ಗೆದ್ದ ತೆಲುಗು ಹಾಡು. ಹೌದು, ರಾಷ್ಟ್ರವು ಎಂದಿಗೂ ಮೊದಲಾಗಿರುತ್ತದೆ. ಎಲ್ಲಾ ಸೆಲ್ಯೂಟ್‌ಗಳು ರಾಷ್ಟ್ರದ ಕಡೆಗೆ ಇರುತ್ತವೆ. ಆದರೆ, ತೆಲುಗು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Oscars 2023: ಬೆಸ್ಟ್‌ ಫಿಲಂ Everything Everywhere All At Onceಗೆ 7 ಪ್ರಶಸ್ತಿ, ಭಾರತಕ್ಕೆ 2; ಆಸ್ಕರ್‌ನ ಸಮಗ್ರ ಪಟ್ಟಿ ಇಲ್ಲಿದೆ

ವೈಎಸ್ಆರ್ ಕಾಂಗ್ರೆಸ್ ವಕ್ತಾರ ಎಸ್ ರಾಜೀವ್ ಕೃಷ್ಣ ಅವರು ಟ್ವೀಟ ಮಾಡಿ, ನೀವು ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಉದ್ದೇಶಿಸಿ ಮಾತನಾಡುತ್ತಿರುವುದರಿಂದ ಮೊದಲು ಸೌಜನ್ಯದಿಂದ ಮಾತನಾಡಿ. ಎರಡನೆಯದು – ಹಾಡು ತೆಲುಗಿನಲ್ಲಿದೆ. ಈ ಹಾಡಿನ ಭಾಗವಾಗಿರುವ ಎಲ್ಲರೂ ತೆಲುಗಿನವರು. ಆದ್ದರಿಂದ ತೆಲುಗು ಎಂದು ಹೆಮ್ಮೆಪಡುತ್ತೇವೆ ಮತ್ತು ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಪರಸ್ಪರರು ಪ್ರತ್ಯೇಕವಲ್ಲ. ವಿವಾದ ಸೃಷ್ಟಿಸುವುದನ್ನು ಮೊದಲು ನಿಲ್ಲಿಸಿ ಎಂದು ಅದ್ನಾನ್ ಸಾಮಿಗೆ ಹೇಳಿದ್ದಾರೆ.

Continue Reading
Advertisement
Phalodi Satta Bazar
ದೇಶ15 mins ago

Phalodi Satta Bazar: ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಖಚಿತ; ಸಟ್ಟಾ ಬಜಾರ್‌ ಸಮೀಕ್ಷಾ ವರದಿ ಇಲ್ಲಿದೆ

Sara Tendulkar
ಕ್ರಿಕೆಟ್22 mins ago

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Liquor ban
ಕರ್ನಾಟಕ47 mins ago

Liquor ban: ಜೂ. 1ರಿಂದ ಐದು ದಿನ ಮದ್ಯ ಮಾರಾಟ ನಿಷೇಧ; ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು!

Narendra Modi
ದೇಶ49 mins ago

Narendra Modi: 2047ರವರೆಗೆ ದೇಶಕ್ಕಾಗಿ ನನ್ನ ಸೇವೆ; ಇದು ದೇವರ ಆದೇಶ ಎಂದ ಮೋದಿ

HD Kumaraswamy slams CM Siddaramaiah about devegowda statement
ರಾಜಕೀಯ55 mins ago

HD Kumaraswamy: ರಾಕೇಶ್‌ನನ್ನು ವಿದೇಶಿ ಪಾರ್ಟಿಗೆ ನೀವೇ ಕಳಿಸಿ ಸಾವಿಗೆ ಕಾರಣರಾದಿರಿ ಎಂದರೆ ಹೇಗೆ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

Former DGP Arrested
ಕ್ರೈಂ1 hour ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ1 hour ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ1 hour ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ1 hour ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ1 hour ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌