ಬೆಂಗಳೂರು: ಕಮಲ್ ಹಾಸನ್ (Kamal Haasan) ಅವರ ಆಪ್ತ ಹಾಗೂ ತಮಿಳಿನ ಖ್ಯಾತ ಹಾಸ್ಯನಟ ಆರ್ ಎಸ್ ಶಿವಾಜಿ (RS Shivaji ) ಅವರು ಸೆ. 2ರಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 66 ವರ್ಷ ವಯಸ್ಸಾಗಿತ್ತು. ತಮಿಳು ಚಿತ್ರರಂಗದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ನಟನ ನಿಧನದ ಸುದ್ದಿಯನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ ʻಜನಪ್ರಿಯ ತಮಿಳು ಹಾಸ್ಯ ನಟ ಆರ್ ಎಸ್ ಶಿವಾಜಿ ಸೆ. 2ರಂದು ಬೆಳಗ್ಗೆ ಚೆನ್ನೈನಲ್ಲಿ ನಿಧನರಾದರು. ಸೆ. 1ರಂದು ಬಿಡುಗಡೆಯಾದ ಲಕ್ಕಿಮ್ಯಾನ್‌ನಲ್ಲಿ ನಟಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿʼʼಎಂದು ಬರೆದುಕೊಂಡಿದ್ದಾರೆ.
ಆರ್‌ಎಸ್ ಶಿವಾಜಿ ನಟ-ನಿರ್ಮಾಪಕ. ಎಂಆರ್ ಸಂತಾನಂ ಅವರ ಮಗ. 1980ರ ದಶಕದಲ್ಲಿ ಸಿನಿಮಾಗೆ ಎಂಟ್ರಿ ಕೊಟ್ಟರು.ಚಿರಂಜೀವಿ ಅವರ ಜಗದೇಕವೀರು ಅತಿಲೋಕ ಸುಂದರಿ ಚಿತ್ರದ ಮೂಲಕ ತೆಲುಗು ಪದಾರ್ಪಣೆ ಮಾಡಿದರು.
“ನನ್ನ ಸ್ನೇಹಿತ ಆರ್.ಎಸ್. ಶಿವಾಜಿಯವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ನಮ್ಮ ರಾಜಕಮಲ್ ಫಿಲ್ಮ್ಸ್ ಕುಟುಂಬದ ಸದಸ್ಯರಾಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪʼʼಎಂದು ಕಮಲದದ ಹಾಸನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Kamal Haasan : ಶೋಲೆ ಸಿನಿಮಾ ಇಷ್ಟವಾಗಿರಲಿಲ್ಲ, ಆ ಸಿನ್ಮಾ ನೋಡಿದ ರಾತ್ರಿ ನಿದ್ದೆ ಮಾಡಲಿಲ್ಲ ಎಂದ ಕಮಲ ಹಾಸನ್
ಕಮಲ್ ಹಾಸನ್ ಪೋಸ್ಟ್
ಈ ಚಿತ್ರದಲ್ಲಿ ಆರ್ ಎಸ್ ಶಿವಾಜಿ ಕಾನ್ಸ್ ಟೇಬಲ್ ಪಾತ್ರದಲ್ಲಿ ನಟಿಸಿದ್ದರು. ಇದಲ್ಲದೆ, ಅವರು ತೇಜಾ ನಿರ್ದೇಶನದ 1000 ಅಬದ್ದಾಲು ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿಯವರ ʻಗಾರ್ಗಿʼ ಮತ್ತು ʻವಟ್ಟಕಾರʼ ಅವರ ಕೊನೆಯ ಸಿನಿಮಾಗಳು. ಶಿವಾಜಿ ಅವರು ಟಿವಿ ಶೋಗಳಲ್ಲಿ ಸಕ್ರೀಯರಾಗಿದದ್ದರು.