Kamal Haasan : ಶೋಲೆ ಸಿನಿಮಾ ಇಷ್ಟವಾಗಿರಲಿಲ್ಲ, ಆ ಸಿನ್ಮಾ ನೋಡಿದ ರಾತ್ರಿ ನಿದ್ದೆ ಮಾಡಲಿಲ್ಲ ಎಂದ ಕಮಲ ಹಾಸನ್‌ - Vistara News

ಸಿನಿಮಾ

Kamal Haasan : ಶೋಲೆ ಸಿನಿಮಾ ಇಷ್ಟವಾಗಿರಲಿಲ್ಲ, ಆ ಸಿನ್ಮಾ ನೋಡಿದ ರಾತ್ರಿ ನಿದ್ದೆ ಮಾಡಲಿಲ್ಲ ಎಂದ ಕಮಲ ಹಾಸನ್‌

ಅಮಿತಾಭ್‌ ಬಚ್ಚನ್‌ ಅವರ ಶೋಲೆ ಸಿನಿಮಾದಲ್ಲಿ ನಟ ಕಮಲ ಹಾಸನ್‌ (Kamal Haasan) ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಆ ಸಿನಿಮಾವನ್ನು ಇಷ್ಟಪಟ್ಟಿರಲಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

kamal hassan talk about sholay
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಅಮಿತಾಭ್‌ ಬಚ್ಚನ್‌ ನಟನೆಯ ಶೋಲೆ ಸಿನಿಮಾ ಪೂರ್ತಿ ಭಾರತದಲ್ಲಿ ದೊಡ್ಡ ಹೆಸರು ಮಾಡಿದಂತಹ ಸಿನಿಮಾ. ಇಂದಿಗೂ ಅನೇಕರಿಗೆ ಫೇವರಿಟ್‌ ಸಿನಿಮಾಗಳ ಪಟ್ಟಿಯಲ್ಲಿ ಶೋಲೆ ಸಿನಿಮಾವಿದೆ. ಆದರೆ ನಟ ಕಮಲ ಹಾಸನ್‌ (Kamal Haasan) ಅವರಿಗೆ ಆ ಸಿನಿಮಾ ಇಷ್ಟವಾಗಿರಲಿಲ್ಲವಂತೆ. ಅವರು ಸಿನಿಮಾ ನೋಡಿದ ದಿನ ರಾತ್ರಿ ನಿದ್ರೆಯನ್ನೇ ಮಾಡಿರಲಿಲ್ಲವಂತೆ.

ಹೌದು. ಈ ಮಾತನ್ನು ಸ್ವತಃ ಕಮಲ ಹಾಸನ್‌ ಅವರೇ ಹೇಳಿಕೊಂಡಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಶುಕ್ರವಾರದಂದು ಕಮಲ ಹಾಸನ್‌ ಅವರು ನಿರ್ದೇಶಕ ನಾಗ್‌ ಅಶ್ವಿನ್‌ ಅವರೊಂದಿಗೆ ತಾವು ಮಾಡುತ್ತಿರುವ ಹೊಸ ಸಿನಿಮಾ ಕಲ್ಕಿ 2998 ಎಡಿ ಸಿನಿಮಾವನ್ನು ಘೋಷಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಪ್ರಭಾಸ್‌, ರಾಣಾ ದಗ್ಗುಬಾಟಿ ಕೂಡ ನಟಿಸುತ್ತಿದ್ದು, ಅವರು ಕೂಡ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಬಾಲಿವುಡ್‌ನ ಅಮಿತಾಭ್‌ ಮತ್ತು ದೀಪಿಕಾ ಪಡುಕೋಣೆ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿದ್ದಾರಾದರೂ ಅವರು ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ.

ಇದನ್ನೂ ಓದಿ: Viral News : ಮಕ್ಕಳ ಕೈಗೆ ಕಾರಿನ ಕೀ ಕೊಟ್ಟರೆ ಅನಾಹುತ ಖಾತರಿ; ಇಲ್ಲಿದೆ ನೋಡಿ ಒಂದು ಘಟನೆ
ಸಿನಿಮಾ ಬಗ್ಗೆ ಮಾತನಾಡುವಾಗ ಕಮಲ ಹಾಸನ್‌ ಅವರು ಅಮಿತಾಭ್‌ ಅವರನ್ನು ಹೊಗಳಿದ್ದಾರೆ. ಹಾಗೆಯೇ ಅಮಿತಾಭ್‌ ಕೂಡ ವಿಡಿಯೊ ಕಾಲ್‌ ಮೂಲಕ ಸಂಪರ್ಕಕ್ಕೆ ಬಂದಿದ್ದು, “ನೀವು ನಮ್ಮನ್ನು ಹೊಗಳಬೇಡಿ. ನೀವು ನಮ್ಮೆಲ್ಲರಿಗಿಂತ ದೊಡ್ಡವರು. ನೀವು ಮಾಡಿರುವ ಸಾಧನೆಯ ಕೆಲಸವನ್ನು ನಾವು ಮಾಡುವುದು ತುಂಬಾ ಕಷ್ಟ. ನಿಮ್ಮ ಪ್ರತಿಯೊಂದು ಚಿತ್ರವು ನೈಜತೆ ಮತ್ತು ಶ್ರಮದಿಂದ ತುಂಬಿದೆ” ಎಂದು ಹೇಳಿದ್ದಾರೆ.

ಅದಕ್ಕೆ ಪ್ರತಿಯಾಗಿ ಮಾತನಾಡಿದ ನಟ ಕಮಲ ಹಾಸನ್‌, “ಅಮಿತಾಭ್‌ ಅವರ ಪ್ರಸಿದ್ಧ ಶೋಲೆ ಸಿನಿಮಾ ನಿಮಗೆಲ್ಲರಿಗೂ ನೆನಪಿರಬಹುದು. ಆ ಸಿನಿಮಾಕ್ಕೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಸಿನಿಮಾ ಬಿಡುಗಡೆಯಾದಾಗ ನಾನು ಆ ಸಿನಿಮಾವನ್ನು ಇಷ್ಟಪಟ್ಟಿರಲಿಲ್ಲ. ಅದರಲ್ಲೂ ಅದರ ನಿರ್ದೇಶಕರನ್ನಂತೂ ತೀರಾ ದ್ವೇಷಿಸಿದ್ದೆ. ಆದರೆ ಅಂತಹ ಮಹಾನ್‌ ನಿರ್ದೇಶಕರೊಂದಿಗೆ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಒಬ್ಬ ಸಿನಿಮಾ ಕೆಲಸಗಾರನಾಗಿ ಆ ಸಿನಿಮಾವನ್ನು ತೆರೆ ಮೇಲೆ ನೋಡಿದಾಗ ನನಗೆ ಆ ರಾತ್ರಿ ನಿದ್ರೆಯೂ ಬಂದಿರಲಿಲ್ಲ. ಆ ಸಿನಿಮಾ ಅಷ್ಟೊಂದು ಅದ್ಭುತವಾಗಿತ್ತು. ಅಮಿತ್‌ ಜೀ ಅಷ್ಟೊಂದು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಅವರು ನನ್ನ ಸಿನಿಮಾಗಳ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ ಎಂದು ಆಗ ಸಹಾಯಕ ನಿರ್ದೇಶಕನಾಗಿದ್ದ ನಾನು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral news: ಭೂಮಿಗೆ ಇನ್ನೊಂದು ಭಾರೀ ತೂತು ಕೊರೆಯಲಿದೆ ಚೀನಾ!
ಶೋಲೆ ಸಿನಿಮಾ ನಂತರ ಅಮಿತಾಭ್‌ ಮತ್ತು ಕಮಲ ಹಾಸನ್‌ ಅವರು 1985ರ ಗೆರಾಫ್ತಾರ್‌ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕೂಡ ಇದ್ದರು. ಇದೀಗ ನಾಗ್‌ ಅಶ್ವಿನ್‌ ಅವರ ಸಿನಿಮಾ ಮೂಲಕ ಕಮಲ ಹಾಸನ್‌ ಮತ್ತು ಅಮಿತಾಭ್‌ ಮತ್ತೆ ಒಟ್ಟಿಗೆ ಕೆಲಸ ಮಾಡುವಂತಾಗಿದೆ.ಈ ಸಿನಿಮಾವನ್ನು ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಿಸಲಾಗುತ್ತಿದೆ. ಸಿನಿಮಾದಲ್ಲಿ ದಿಶಾ ಪಟಾನಿ ಕೂಡ ನಟಿಸುವ ಸಾಧ್ಯತೆಯಿದೆ. ಈ ಸಿನಿಮಾ 2024ರ ಜನವರಿ 12ರಂದು ಬಿಡುಗಡೆಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Varalaxmi Sarathkumar: ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Varalaxmi Sarathkumar invite PM Narendra Modi for wedding
Koo

ಬೆಂಗಳೂರು: ತಮಿಳು-ತೆಲುಗು ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಅವರು ತಮ್ಮ ಮದುವೆಯ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಭಾವಿ ಪತಿ ನಿಕೋಲಾಯ್ ಜತೆ ವರಲಕ್ಷ್ಮಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ವರಲಕ್ಷ್ಮಿ ಅವರು ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಸೆಲ್ಫಿ ಸೇರಿದಂತೆ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ʻʻನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದೆವು. ಅವರನ್ನು ಆಹ್ವಾನಿಸಿದ್ದು ನಮ್ಮ ಭಾಗ್ಯ. ನಿಮ್ಮ ಬ್ಯುಸಿ ಶೆಡ್ಯೂಲ್‌ನ ಹೊರತಾಗಿಯೂ ನಮ್ಮೊಂದಿಗೆ ಸಮಯ ಕಳೆದಿದ್ದೀರಿ. ನಿಜವಾಗಿಯೂ ಗೌರವ ಇದುʼʼಎಂದು ಬರೆದುಕೊಂಡಿದ್ದಾರೆ. ಈ ಮೊದಲು ರಜನಿಕಾಂತ್, ಅವರ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರನ್ನು ಭೇಟಿಯಾಗಿ ಕರೆಯೋಲೆ ನೀಡಿದ್ದರು.

ವರಲಕ್ಷ್ಮಿ ಶರತ್‌ಕುಮಾರ್ ಜತೆ ತಂದೆ ಶರತ್‌ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜತೆಗೆ ಇತ್ತು. ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ 2ರಂದು ಜೋಡಿ ವಿವಾಹವಾಗಲಿದೆ.

ಇದನ್ನೂ ಓದಿ: Varalaxmi Sarathkumar: ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ನಟ ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದರು.

ನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ಮಾಲಿವುಡ್

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Fahadh Faasil: ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಪೇಯ್ನ್‌ಕಿಲಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

VISTARANEWS.COM


on

Fahadh Faasil in trouble faces Human Rights Commission action
Koo

ಕೇರಳ: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ (Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು) ತಮ್ಮ ಸಿನಿಮಾಗಳ ಮೂಲಕ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ನಟ ಮತ್ತು ನಿರ್ಮಾಪಕರಾಗಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಫಹಾದ್ ನಿರ್ಮಾಣದ ‘ಪೇಯ್ನ್‌ಕಿಲಿ’ ( movie Painkili) ಚಿತ್ರದ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು. ಆದರೆ ಚಿತ್ರತಂಡ ಅಲ್ಲಿದ್ದವರಿಗೆ ತೊಂದರೆ ಕೊಟ್ಟ ಕಾರಣ ಮಾನವ ಹಕ್ಕುಗಳ ಆಯೋಗ ( Human Rights Commission) ಫಹಾದ್ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಪೇಯ್ನ್‌ಕಿಲಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

ವರದಿಗಳ ಆಧಾರದ ಮೇಲೆ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡ ಆಯೋಗದ ಸದಸ್ಯೆ ವಿ ಕೆ ಬೀನಾಕುಮಾರಿ, ಏಳು ದಿನಗಳಲ್ಲಿ ವಿವರಣೆ ವರದಿಯನ್ನು ಸಲ್ಲಿಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಮತ್ತು ಅಂಗಮಾಲಿ ತಾಲೂಕು ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದರು.

ಇದನ್ನೂ ಓದಿ: Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

ಎರ್ನಾಕುಲಂ ಸ್ಥಳೀಯ ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಿತ್ರೀಕರಣದ ವೇಳೆ ನಟರು ಸೇರಿದಂತೆ ಸುಮಾರು 50 ಮಂದಿ ಹಾಜರಿದ್ದು, ತುರ್ತು ಚಿಕಿತ್ಸಾ ಕೊಠಡಿಯನ್ನೂ ನಿರ್ಲಕ್ಷಿಸಿ ಶೂಟಿಂಗ್ ಹೆಸರಲ್ಲಿ ಚಿತ್ರತಂಡ ಗಲಾಟೆ ಮಾಡಿದೆ, ದೊಡ್ಡ ದೊಡ್ಡ ಲೈಟ್‌ಗಳನ್ನು ಹಾಕಿದ್ದಾರೆ. ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿ ಅಲ್ಲಿನ ಸಿಬ್ಬಂದಿ ಹಾಗೂ ರೋಗಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿರುವಾಗಲೇ ಚಿತ್ರದ ಶೂಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ.

ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೂ ಬರಲು ಸಾಧ್ಯವಾಗಲಿಲ್ಲ. ಮುಖ್ಯ ಗೇಟ್‌ನಿಂದ ಯಾರನ್ನೂ ಬಿಡಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಮೌನವಾಗಿರಲು ಸಿಬ್ಬಂದಿಗಳು ರೋಗಿಗಳಿಗೆ ಮತ್ತು ಪಕ್ಕದಲ್ಲಿದ್ದವರಿಗೆ ಚಿತ್ರತಂಡ ಸೂಚಿಸುತ್ತಿದ್ದರು ಎಂದು ವರದಿಯಾಗಿದೆ.

‘ಪೇಯ್ನ್‌ಕಿಲಿ’ ಚಿತ್ರಕ್ಕೆ ಫಹಾದ್ ಫಾಸಿಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಗಾಗಿ ಅವರ ವಿರುದ್ಧವೇ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಫಹಾದ್ ಫಾಸಿಲ್ ಇನ್ನು ಪ್ರತಿಕ್ರಿಯಿಸಿಲ್ಲ. ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

Actor Darshan: ನಕಾರಾತ್ಮಕ ಅಂಶಗಳನ್ನ ನಾಶಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ, ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ‌ಹೋಮ ಮಾಡಲಾಗುತ್ತದೆ. ಹೀಗಾಗಿ ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್‌ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಇಷ್ಟು ಜಾಗ್ರತೆ ವಹಿಸಿದ್ದರೂ ಸಿನಿಮಾ ಮಾಡುವಾಗ ಎಡಗೈಗೆ ಪ್ರ್ಯಾಕ್ಚರ್ ಆಗಿತ್ತು ಎನ್ನಲಾಗಿದೆ.

VISTARANEWS.COM


on

Actor Darshan Suffering From Sade Sati
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ (Actor Darshan) ಅವರು ನ್ಯಾಯಾಗ ಬಂಧನದಲ್ಲಿದ್ದಾರೆ. ಈಗಾಗಲೇ ದರ್ಶನ್‌ ಅವರಿಗೆ ಜಾಮೀನು ಸಿಗುವುದಂತೂ ಕಷ್ಟಕರ ಎನ್ನಲಾಗುತ್ತಿದೆ. ಇದರ ಜತೆಗೆ ಇದೀಗ ಈ ವರ್ಷ ಅಪಾಯ ಇದೆ ಎನ್ನುವುದು ದರ್ಶನ್​ಗೆ ಮೊದಲೇ ಗೊತ್ತಿತ್ತ ಎನ್ನುವ ಪ್ರಶ್ನೆ ಮೂಡಿದೆ. 13 ವರ್ಷಗಳಿಂದ ದಚ್ಚುಗೆ ಸಾಡೇಸಾತಿ ಕಾಟ ಇತ್ತು ಎನ್ನಲಾಹಿದೆ. ಸಾಡೇಸತಿ ಶುರುವಾದಗಲೂ ಸೆರೆವಾಸ ಅನುಭವಿಸಿದ್ದ ದಾಸ ಇದೀಗ ಸಾಡೇಸತಿ ಮುಗಿಯುವ ಸಮಯದಲ್ಲಿ ದರ್ಶನ್ ಜೈಲು ಪಾಲು ಆಗಿದ್ದಾರೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.

ನಕಾರಾತ್ಮಕ ಅಂಶಗಳನ್ನ ನಾಶಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ, ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ‌ ಹೋಮ ಮಾಡಲಾಗುತ್ತದೆ. ಹೀಗಾಗಿ ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್‌ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಇಷ್ಟು ಜಾಗ್ರತೆ ವಹಿಸಿದ್ದರೂ ಸಿನಿಮಾ ಮಾಡುವಾಗ ಎಡಗೈಗೆ ಪ್ರ್ಯಾಕ್ಚರ್ ಆಗಿತ್ತು ಎನ್ನಲಾಗಿದೆ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Continue Reading

Latest

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

Deepika Padukone ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

VISTARANEWS.COM


on

deepika padukone
Koo

ಮುಂಬೈ : ಬಾಲಿವುಡ್ ಖ್ಯಾತ ನಟಿಯರಲ್ಲಿ ದೀಪಿಕಾ ಪಡುಕೋಣೆ (Deepika Padukone )ಕೂಡ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಖ್ಯಾತನಟಿ ದೀಪಿಕಾ ಪಡುಕೋಣೆ ಅವರ ‘ಕಲ್ಕಿ 2898 ಎಡಿ’ ಚಿತ್ರದ ಬೆಂಕಿಯಲ್ಲಿ ನಡೆದು ಬರುವ ಅವರ ನಗ್ನ ಚಿತ್ರ ಸೋರಿಕೆಯಾಗಿದೆ.

Deepika Padukone

ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ಆದರೆ ಈ ಚಿತ್ರದ ಕೆಲವು ದೃಶ್ಯಗಳು, ಹಲವಾರು ಫೋಟೊಗಳು ಮತ್ತು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.

Deepika Padukone

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ ದೀಪಿಕಾ ಬೆಂಕಿಯ ಮೂಲಕ ನಡೆಯುತ್ತಾ ಬರುವಾಗ ಅವರ ಬಟ್ಟೆಗಳು ಬೆಂಕಿಗೆ ಉರಿದುಹೋಗುತ್ತಿದ್ದಂತೆ, ಅವರು ತಮ್ಮ ಎದೆಯನ್ನು ತಮ್ಮ ಕೈಯಿಂದ ಮುಚ್ಚಿಕೊಳ್ಳುತ್ತಾರೆ. ದೀಪಿಕಾ ಅವರ ಈ ಪಾತ್ರವು ಕಥಾಹಂದರಕ್ಕೆ ಪ್ರಮುಖವಾಗಿರುವುದರಿಂದ ಅವರ ಈ ಪಾತ್ರದ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿರಲಿಲ್ಲ.

ಆದರೂ ಈ ವಿಡಿಯೋ ಸೋರಿಕೆಯಾಗಿದೆ. ಆದರೆ ಇದರಲ್ಲಿ ನಟಿಯ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಬಳಕೆದಾರರು ಈ ಬೆಂಕಿಯ ದೃಶ್ಯವನ್ನು ‘ಅಪ್ರತಿಮ’ ಎಂದು ಕರೆದಿದ್ದಾರೆ.

Deepika Padukone

ದೀಪಿಕಾ ಪಡುಕೋಣೆಯವರ ಇಡೀ ವೃತ್ತಿಜೀವನದ ಅತ್ಯಂತ ಅಪ್ರತಿಮ ದೃಶ್ಯ ಇದಾಗಿದೆ ಎಂದು ಒಬ್ಬ ಬಳಕೆದಾರ ತಿಳಿಸಿದರೆ, ಮತ್ತೊಬ್ಬರು “ದೀಪಿಕಾ ಉರಿಯುತ್ತಿರುವ ಬೆಂಕಿಯ ಮೂಲಕ ನಡೆಯುವುದು ಯುಗಾಂತರಗಳ ದೃಶ್ಯವಾಗಿದೆ” ಎಂದು ಬರೆದಿದ್ದಾರೆ.

ಈ ನಡುವೆ ‘ಕಲ್ಕಿ 2898 ಎಡಿ’ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗ ಚಿತ್ರತಂಡ ಚಲನಚಿತ್ರದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಚಿತ್ರ 4 ವರ್ಷಗಳ ಸುದೀರ್ಘ ಪ್ರಯಾಣ ಮತ್ತು ಇದು ನಾಗ್ ಅಶ್ವಿನ್ ಮತ್ತು ತಂಡದ ಅಪಾರ ಪರಿಶ್ರಮದ ಕಥೆಯಾಗಿದೆ.

Deepika Padukone

ಇದನ್ನೂ ಓದಿ: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

ಈ ಕಥೆಯನ್ನು ಜಾಗತಿಕ ಮಟ್ಟಕ್ಕೆ ತರುವಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಇದನ್ನು ಮುಂದೆ ತರಲು ತಂಡವು ರಕ್ತ ಮತ್ತು ಬೆವರು ಹರಿಸಿದೆ. ಹಾಗಾಗಿ ದಯವಿಟ್ಟು ಸಿನಿಮಾವನ್ನು ಗೌರವಿಸೋಣ. ಅದಕ್ಕಾಗಿ ಸಿನಿಮಾ ತುಣುಕುಗಳನ್ನು ಹಂಚಿಕೊಳ್ಳಬೇಡಿ. ನಿಮಿಷದಿಂದ ನಿಮಿಷಕ್ಕೆ ಅಪ್ಡೇಟ್ ನೀಡಬೇಡಿ ಅಥವಾ ಪೈರಸಿಯಲ್ಲಿ ತೊಡಗಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಈ ಚಿತ್ರದ ಪ್ರಮುಖ ದೃಶ್ಯ ಸೋರಿಕೆಯಾಗಿರುವುದು ಬೇಸರವೇ ಸರಿ.

Continue Reading
Advertisement
baby Death
ತುಮಕೂರು21 mins ago

Baby Death : ಶವ ಸಾಗಿಸಲು ಹಣವಿಲ್ಲದೇ ರೈಲಿನಲ್ಲೇ ಶಿಶು ಬಿಟ್ಟು ಹೋದ ಪೋಷಕರು

Viral Video
Latest26 mins ago

Viral Video: ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

Shabbar Zaidi
ವಿದೇಶ30 mins ago

Shabbar Zaidi: ಮಸೀದಿಗಳ ಧ್ವನಿವರ್ಧಕದ ಬಗ್ಗೆ ಪಾಕಿಸ್ತಾನದಲ್ಲೇ ಕೇಳಿ ಬಂತು ಅಪಸ್ವರ; ಮೊಹಮ್ಮದ್ ಶಬ್ಬರ್ ಜೈದಿ ಹೇಳಿದ್ದೇನು?

Satish Jarkiholi
ಕರ್ನಾಟಕ32 mins ago

Satish Jarkiholi: 2028ಕ್ಕೆ ನಾನೇ ರಾಜ್ಯದ ಸಿಎಂ ಎಂದ ಸತೀಶ್‌ ಜಾರಕಿಹೊಳಿ; ಡಿಕೆಶಿಗೆ ಸಚಿವ ಸೆಡ್ಡು!

Baby Death
Latest32 mins ago

Baby Death : ಆಟವಾಡುತ್ತಿದ್ದ ಮಗುವಿನ ಪಾಲಿಗೆ ಯಮದೂತ ಆದ ಟಿವಿ ಸ್ಟ್ಯಾಂಡ್‌!

Kalaburagi News
ಕರ್ನಾಟಕ33 mins ago

Kalaburagi News: ಮೊರಾರ್ಜಿ ವಸತಿ ಶಾಲೆಯಲ್ಲಿ ಉಪಾಹಾರ ಸೇವಿಸಿ 17 ವಿದ್ಯಾರ್ಥಿನಿಯರು ಅಸ್ವಸ್ಥ

Kidnapping Case
ದೇಶ42 mins ago

Kidnapping Case: ಮಿಠಾಯಿ ತರಲೆಂದು ಮಕ್ಕಳನ್ನು ಬಿಟ್ಟು ಹೋದ ತಂದೆ-ತಾಯಿ; ಕಾರು ಸಮೇತ ಮಕ್ಕಳು ಕಿಡ್ನಾಪ್‌!

kalaburagi Murder Case
ಕಲಬುರಗಿ48 mins ago

Kalaburagi murder : ಚಾಕುವಿನಿಂದ ಇರಿದು ಕೊಂದು ಆಟೋ ಚಾಲಕನನ್ನು ಮರಕ್ಕೆ ನೇತು ಹಾಕಿದ ಹಂತಕರು

Battlegrounds Mobile India
ಬೆಂಗಳೂರು49 mins ago

Battlegrounds Mobile India : ಬಿಜಿಎಮ್​ಐ ಜತೆ ಹೊಸ ಪಾಲುದಾರಿಕೆ ಮಾಡಿಕೊಂಡ ಕೆಎಫ್​​ಸಿ

Varalaxmi Sarathkumar invite PM Narendra Modi for wedding
ಸಿನಿಮಾ59 mins ago

Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ4 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ20 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌