Site icon Vistara News

ಸಕುಟುಂಬ ಸಮೇತ ಸಿನಿಮಾಗೆ ಬನ್ನಿ! ರಕ್ಷಿತ್‌ ಸಿನಿಮಾ ಮೇ 20ರಂದು ಬಿಡುಗಡೆ

ಬೆಂಗಳೂರು: ರಕ್ಷಿತ್‌ ಶೆಟ್ಟಿ ನಿರ್ಮಾಣದ ಸಕುಟುಂಬ ಸಮೇತ ಚಿತ್ರ ಟ್ರೈಲರ್‌ ಬಿಡುಗಡೆಯಾಗಿದ್ದು, ಸಿನಿಮಾ ಕೂಡಾ ಮೇ 20ರಂದು ತೆರೆಗೇರಲು ಅಣಿಯಾಗಿದೆ. ರಕ್ಷಿತ್‌ ನಾಯಕ ನಟನಾಗಿರುವ 777 ಚಾರ್ಲಿ ರಿಲೀಸ್‌ ಡೇಟ್‌ ಇತ್ತೀಚೆಗೆ ಅನೌನ್ಸ್‌ ಆಗಿತ್ತು. ಅದರ ನಡುವೆಯೇ ಅವರು ಹೊಸಬರನ್ನು ಬೆಂಬಲಿಸಲು ನಿರ್ಮಾಣದ ಹೊಣೆ ಹೊತ್ತಿರುವ ಚಿತ್ರದ ಬಿಡುಗಡೆಯ ಸಂಭ್ರಮ.

ರಕ್ಷಿತ್ ಶೆಟ್ಟಿ ಅವರ ಪರಮ್‌ವಾ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ‘ ಸಕುಟುಂಬ ಸಮೇತ’ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ ರಾಹುಲ್. ಈ ಚಿತ್ರದಲ್ಲಿ ನಾಯಕಿಯಾಗಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ‘ಸಕುಟುಂಬ ಸಮೇತ’ ಸಿನಿಮಾದ ಮೂಲಕ ಭರತ್ ಜಿ.ಬಿ. ಹೀರೋ ಆಗಿದ್ದಾರೆ. ಉಳಿದಂತೆ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ಕರಮ್ ಚಾವ್ಲಾ ಕೆಲಸ ಮಾಡಿದ್ದು, ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ : 777 Charlie | ರಕ್ಷಿತ್‌ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್‌ ಬಿಡುಗಡೆ

Exit mobile version