Site icon Vistara News

Samantha Ruth Prabhu | ಸದ್ಯಕ್ಕೆ ನಟನೆಗೆ ಸಮಂತಾ ಬ್ರೇಕ್, ಸ್ವಲ್ಪ ದಿನ ವಿಶ್ರಾಂತಿಗೆ ಮೊರೆ!

Samantha

ನವದೆಹಲಿ: ತೆಲುಗು ಚಿತ್ರರಂಗದ ಕಣ್ಮಣಿ ಸಮಂತಾ ರುತ್‌ ಪ್ರಭು (Samantha Ruth Prabhu) ತಮಗೆ ಮಯೋಸೈಟಿಸ್‌ ಎಂಬ ಆಟೋಇಮ್ಯೂನ್‌ ಕಾಯಿಲೆ ಇದೆ ಎಂದು ತಿಳಿದಾಗಿನಿಂದ ಚಿತ್ರರಂಗದಲ್ಲಿ ಅಷ್ಟೇನೂ ಕ್ರಿಯಾಶೀಲರಾಗಿ ಇರಲಿಲ್ಲ. ಆದರೀಗ ಅವರು ತಮ್ಮ ಆರೋಗ್ಯ ಸುಧಾರಿಸುವವರೆಗೂ ದೀರ್ಘ ರಜೆಯ ಮೇಲೆ ಇರಲಿದ್ದು, ನಟನೆಯಿಂದ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ತಮ್ಮ ʻಯಶೋದಾʼ ಚಿತ್ರದ ಪ್ರಚಾರದಿಂದಲೂ ಅವರು ದೂರವೇ ಉಳಿದಿದ್ದರು. ಬಾಲಿವುಡ್‌ನ ಎರಡು ಚಿತ್ರಗಳಿಗೆ ಸಮಂತಾ ಸಹಿ ಹಾಕಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಅವರು ನಟನೆಗೆ ಬ್ರೇಕ್‌ ತೆಗೆದುಕೊಳ್ಳುತ್ತಿರುವುದು ಹೆಚ್ಚಿನ ಸುದ್ದಿ ಮಾಡಿದೆ. ʻದ ಫ್ಯಾಮಿಲಿ ಸೀಸನ್‌ 2ʼ ಎಂಬ ಅವರ ನಟನೆಯ ಹಿಂದಿ ವೆಬ್‌ ಸರಣಿ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದರೀಗ ಈ ಎಲ್ಲಾ ಪ್ರೊಜೆಕ್ಟ್‌ಗಳಿಂದ ಸಮಂತಾ ದೂರ ಉಳಿಯಲಿದ್ದು, ಇದರ ನಿರ್ಮಾಪಕರು ಮುಂದಿನ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!

ವಿಜಯ್‌ ದೇವರಕೊಂಡ ನಾಯಕರಾಗಿರುವ ʻಖುಷಿʼ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸುವತ್ತ ಸಮಂತಾ ಅವರೀಗ ಗಮನ ಹರಿಸಿದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಆಕೆ ವಿರಾಮಕ್ಕೆ ತೆರಳಲಿದ್ದಾರೆ. ಈ ಬಗ್ಗೆ ಚಿತ್ರತಂಡಕ್ಕೆ ಸಮಂತಾ ಈಗಾಗಲೇ ಮಾಹಿತಿ ನೀಡಿದ್ದಾರಂತೆ.

ಮೊದಲಿಗೆ ವಿಡಿ ೧೧ ಎಂಬ ಹೆಸರಿನಲ್ಲಿ ೨೦೨೨ರ ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧತೆ ನಡೆಸಿದ್ದ ʻಖುಷಿʼ ಸಿನಿಮಾದ ಬಿಡುಗಡೆ ಈಗ ಮುಂದಿನ ವರ್ಷಕ್ಕೆ ಹೋಗಿದೆ. “ಚಿತ್ರೀಕರಣ ಶೇ.೬೦ರಷ್ಟು ಭಾಗ ಮುಗಿದಿದೆ. ಈ ಡಿಸೆಂಬರ್‌ನಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆದಿತ್ತು. ಆದರೆ ಹಲವಾರು ಕಾರಣಗಳಿಂದ ಅದನ್ನು ೨೦೨೩ರ ಫೆಬ್ರವರಿಗೆ ಮುಂದೂಡಲಾಗಿದೆ” ಇತ್ತೀಚೆಗೆ ವಿಜಯ್‌ ದೇವರಕೊಂಡ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ | Samantha | ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ತೆರಳಿದ್ದಾರಂತೆ ಸಮಂತಾ!

Exit mobile version