Site icon Vistara News

777 Charlie | ಸ್ಯಾಂಡಲ್‌ವುಡ್‌ನ ನೆಚ್ಚಿನ ‘ಸಿಂಬಾ’ ಇನ್ನಿಲ್ಲ..

ಬೆಂಗಳೂರು : ನಾಯಿ ಇಷ್ಟ ಪಡದವರು ಯಾರಿದ್ದಾರೆ ಹೇಳಿ..? ನಾಯಿ ಕುರಿತಾದಂತಹ ಅನೇಕ ಸಿನಿಮಾಗಳು ಈಗಾಗಲೇ ಬಂದು ಹೋಗಿದೆ. ಸ್ಯಾಂಡಲ್‌ವುಡನಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಂಡು ಬಂದ ನಾಯಿ ಅಂದರೆ ಅದುವೇ ಸಿಂಬಾ. ಸಿಂಬಾ ಇದೀಗ ಬಾರದ ಲೋಕಕ್ಕೆ ಹೋಗಿದೆ. ಹೌದು. ಬೆಂಗಳೂರು ಡೇಸ್‌ನಲ್ಲಿ ನಿತ್ಯಾ ಮೆನನ್‌ ಅವರು ಅಭಿನಯಿಸಿರುವ ನತಾಶಾ ಪಾತ್ರದ ಇಷ್ಟವಾದ ನಾಯಿಯಾಗಿತ್ತು ಸಿಂಬಾ. ಅಷ್ಟೇ ಅಲ್ಲದೇ ರಕ್ಷಿತ್‌ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ 777 ಚಾರ್ಲಿಯಲ್ಲಿಯೂ ಸಿಂಬಾ ಅಭಿನಯಿಸಿತ್ತು. ಆದರೆ ಈಗ ಸಿಂಬಾ ನೆನಪು ಮಾತ್ರ.

ಇದನ್ನೂ ಓದಿ | 777 Charlie | ರಕ್ಷಿತ್‌ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್‌ ಬಿಡುಗಡೆ

777 ಚಾರ್ಲಿ ಟ್ವೀಟರ್‌ ಪೇಜ್‌ ಮೂಲಕ ಸಿಂಬಾ ಸಾವಿನ ಕುರಿತು ಹಂಚಿಕೊಂಡಿದ್ದು, ಅನೇಕ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಕೂಡ ʼರೆಸ್ಟ್‌ ಇನ್‌ ಪೀಸ್‌ ಸಿಂಬಾʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. ಸಿಂಬಾ ವನ್ನು ಬಸವನಗುಡಿಯ ವರುಣ್‌ ಎಂಬಾತರು ಸಾಕುತ್ತಿದ್ದರು. ಸಿಂಬಾ ಹಲವಾರು ಚಿತ್ರಗಳಲ್ಲದೇ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿತ್ತು. ಬೆಂಗಳೂರು ಡೇಸ್‌, 777 ಚಾರ್ಲಿ, ಶಿವಾಜಿ ಸುರತ್ಕಲ್‌, ನಾನು ಮತ್ತು ಗುಂಡ, ಗುಲ್ಟೂ ಹಾಗೂ ವಾಜಿದ್‌ ಚಿತ್ರಗಳಲ್ಲಿ ಅಭಿನಯಿಸಿತ್ತು.

ಇದನ್ನೂ ಓದಿ | ಪ್ರೀತಿಯ ಶ್ವಾನದ ಜತೆಗೊಂದು ಹ್ಯಾಪಿ ಜರ್ನಿ ..!

Exit mobile version