ಬೆಂಗಳೂರು: ದರ್ಶನ್ (Actor Darshan) ಪ್ರಕರಣದಲ್ಲಿ ಸರ್ಕಾರದ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ದರ್ಶನ್ ಬಚಾವ್ ಮಾಡಲು ಪ್ಲಾನ್ ಮಾಡಿತ್ತಾ ಸರ್ಕಾರ..? ಆರ್ ಆಶೋಕ್ ಸರ್ಕಾರಕ್ಕೆ ಆ ಚಾಲೆಂಜ್ ಹಾಕಿದ್ದು ಯಾಕೆ..? ಹೀರೋ ಆಗಿ ಇಲ್ಲ ವಿಲನ್ ಅಂತ ಒಪ್ಪಿಕೊಳ್ಳಿ ಎಂದಿದ್ದು ಯಾಕೆ? ಈ ಎಲ್ಲ ವಿಚಾರಗಳ ಬಗ್ಗೆ ವಿಸ್ತಾರ ಜತೆ ಆರ್ ಅಶೋಕ್ ಮಾತನಾಡಿದ್ದು ಹೀಗೆ.
ಸರ್ಕಾರದ ನಡೆ ಅನುಮಾನ!
ದರ್ಶನ್ ಪ್ರಕರಣ ಕುರಿತು ಆರ್ ಅಶೋಕ್ ಮಾತನಾಡಿ ʻʻದರ್ಶನ್ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಕೇಸ್‌ನಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದರ್ಶನ್ ಮೇಲೆ ಕೊಲೆ ಆರೋಪ ಬಂದಿರುವುದು. ದರ್ಶನ್ ಕೇಸ್‌ನಲ್ಲಿ ಒತ್ತಡ ಹಾಕಿದವರ ಹೆಸರುಗಳನ್ನ ಬಹಿರಂಗ ಪಡಿಸಬೇಕು. ಮುಖ್ಯಮಂತ್ರಿಗಳು ಹಾಗೂ ಪರಮೇಶ್ವರ್ ಅವರಿಗೆ ಒತ್ತಡ ಹಾಕಿದ್ದು ಯಾರು ಅಂತ ಹೇಳಬೇಕು. ಇಂತಹ ಮಿನಿಸ್ಟರ್ ಬಂದಿದ್ರು.. ಇಂತಹ ಶಾಸಕ ಬಂದಿದ್ರು ಅಂತ ಹೇಳಲಿ. ಇದು ಹೇಳಿದ್ರೆ ಯುಆರ್ ಬಿಕಮ್ ದ ʻಹೀರೋʼ. ಇಲ್ಲ ಅಂದ್ರೆ ನೀವು ವಿಲನ್ ಆಗ್ತೀರಿ. ಪೊಲೀಸ್ ಠಾಣೆ ಮುಚ್ಚಿದ್ದು ಯಾಕೆ? ಸಾರ್ವಜನಿಕರ ಓಡಾಟಕ್ಕೆ ತೊಂದರೆ ಹಾಕಿದ್ದು ಯಾರು? ಇದರಿಂದ ತನಿಖೆ ಬಗ್ಗೆ ಅನುಮಾನ ಬರ್ತಿದೆ. ದರ್ಶನ್ ಕೇಸ್‌ನಲ್ಲಿ ಒತ್ತಡ ಹಾಕಿದವರ ಹೆಸರುಗಳನ್ನ ಬಹಿರಂಗ ಪಡಿಸಬೇಕು ಎಂಬುದೇ ನನ್ನ ಒತ್ತಾಯʼʼಎಂದು ಖಡಕ್ ಆಗಿಯೇ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ಕನ್ನಡ ಚಿತ್ರರಂಗದ ಗೌರವ ಮೂರು ಕಾಸಿಗೆ ಹರಾಜು ಹಾಕಿದಅ
ʻʻಕನ್ನಡ ಚಿತ್ರರಂಗದಲ್ಲಿ ದರ್ಶನ್ ಒಬ್ಬ ಖಳನಟ. ಕನ್ನಡ ಚಿತ್ರರಂಗದ ಗೌರವ ಮೂರು ಕಾಸಿಗೆ ಹರಾಜು ಹಾಕಿದ. ಬಡ ವ್ಯಕ್ತಿ ಮೇಲೆ ಪೌರುಷ ತೋರಿಸಿದ ವ್ಯಕ್ತಿ ಹೇಗೆ ನಾಯಕ ಆಗ್ತಾನೆ..? ಹೀರೋ ಅಂದ್ರೆ ರಾಜಕುಮಾರ್, ವಿಷ್ಣುವರ್ಧನ್, ಅಪ್ಪು.. ಆದರೆ ದರ್ಶನ್ ಹೀರೋ ಅಲ್ಲ ವಿಲನ್.! ಪುನಿತ್ ಜತೆ ನನಗೆ ನೇರ ಒಡನಾಟ ಇತ್ತು. ರಾಜಕುಮಾರ್ ಅವರನ್ನ ಹತ್ತಿರದಿಂದ ನೋಡಿದ್ದೇನೆ. ಅವರ ನಯ ವಿನಯ ಹಾಗೂ ಅಭಿಮಾನಿಗಳನ್ನ ದೇವರು ಅಂತ ಕರೆಯುತ್ತಿದ್ರು. ಇದೀಗ ದರ್ಶನ್ ಅಂತವರಿಂದ ಕನ್ನಡ ಚಿತ್ರರಂಗದ ಗೌರವ ಹೊರಟು ಹೋಯಿತು. ಇದು ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಆಗಿದೆ. ಅಮಾನವೀಯವಾಗಿ ಕೊಂದಿದ್ದಾರೆ. ಸಣಕಲು ವ್ಯಕ್ತಿ ಮೇಲೆ ಹದಿನಾಲ್ಕು ಜನ ಹಲ್ಲೆ ಮಾಡಿದ್ದಾರೆ ಪೊಲೀಸರಿಗೆ ಹೇಳಿದ್ರೆ ಅವರೇ ವಿಚಾರಿಸಿಕೊಳ್ಳುತ್ತಿದ್ರು. ಅದು ಬಿಟ್ಟು ಇವರು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ. ಇದು ಮನುಷ್ಯರು ಮಾಡುವ ಕೃತ್ಯ ಅಲ್ಲ -ಹೇಡಿಗಳ ಕೃತ್ಯ. ಒಬ್ಬನ ಮೇಲೆ ಪೌರುಷ ತೋರಿಸಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರೆ. ತಮ್ಮ ಜೀವನ ಅವರೇ ಹಾಳು ಮಾಡಿಕೊಂಡಿದ್ದಾರೆ. ಹೀರೋ ಆಗಿ ಅವರ ನಡವಳಿಕೆ ಸಂಶಯ ಬರುವ ರೀತಿಯಲ್ಲಿ ನಡೆದುಕೊಂಡಿದ್ದಾರೆʼʼಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್ (Darshan Arrested) ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿದ್ದು, ಇಂದು (ಜೂನ್ 22) ಪೊಲೀಸರು ಮೂರನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಇಲ್ಲಿ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ.
ನಟ ದರ್ಶನ್ ಜತೆಗೆ ವಿನಯ್, ಪ್ರದೋಶ್ ಮತ್ತು ಧನರಾಜ್ ಕಸ್ಟಡಿ ಅಂತ್ಯವಾಗುತ್ತಿದ್ದು, ಪೊಲೀಸರು ಸಂಜೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಈಗಾಗಲೇ 12 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದಿರುವ ದರ್ಶನ್ ಮತ್ತು ಇನ್ನಿತರ ಆರೋಪಿಗಳಿಗೆ ಕೋರ್ಟ್ ಬಹುತೇಕ ನ್ಯಾಯಾಂಗ ಬಂಧನದ ಆದೇಶ ನೀಡುವ ಸಾಧ್ಯತೆ ಇದೆ.