ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renuka Swamy Murder Case) ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ವಿಚಾರವಾಗಿ (Actor Darshan) ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆ ಅಂದರೆ ದರ್ಶನ್‌ಗೆ ಅಲ್ಲಿ ವಿಶೇಷ ಸವಲತ್ತುಗಳನ್ನು ಕೊಡಲಾಗುತ್ತಿದ್ಯಾ? ದರ್ಶನ್ ಇರುವ ಜೈಲು ಕೋಣೆ ಹೇಗಿದೆ? ಅಲ್ಲಿ ಏನೆಲ್ಲಾ ವ್ಯವಸ್ಥೆಗಳಿವೆ? ನಟ, ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಕರ್ಯಗಳನ್ನು ನೀಡಲಾಗುತ್ತಿದ್ಯಾ ಅನ್ನೋ ಪ್ರಶ್ನೆಗಳಿವೆ.
ಈ ಎಲ್ಲ ಪ್ರಶ್ನೆಗಳಿಗೂ ಕೂಡ ಸಿದ್ಧಾರೂಢ ಅವರು ಉತ್ತರಿಸಿದ್ದಾರೆ. ದರ್ಶನ್‌ಗೆ VIP ಸೆಲ್ ಇದೆ ಆದರೆ ಯಾರಿಗೂ ಭೇಟಿಗೆ ಅವಕಾಶವಿಲ್ಲ. ಆ ಸೆಲ್‌ನಲ್ಲಿ ಟಿವಿ ಇದೆ, ಮ್ಯಾನ್ಯುಲ್ ಪ್ರಕಾರವೇ ಅದನ್ನು ಕೊಟ್ಟಿದ್ದಾರೆ. ಹಾಗೇನೆ ರೂಮಿನ ಮುಂದೆ ಸ್ವಲ್ಪ ಜಾಗವಿದೆ, ಅಲ್ಲಿ ವಾಕ್ ಮಾಡಬಹುದು. ದರ್ಶನ್‌ಗೆ ಒಂದು ಕಂಬಳಿ, ಜಮ್ಕಾನ, ಸೊಳ್ಳೆ ಪರದೆ, ವೈಟ್ ಬೆಡ್ ಶೀಟ್ ಕೊಟ್ಟಿದ್ದಾರೆ. 20 ಲೀಟರ್ ನೀರಿನ ಕ್ಯಾನ್ ಹಾಗೂ ಅಟ್ಯಾಚ್ ಬಾತರೂಂ ಇದೆ. ಜೈಲಿನ ಮ್ಯಾನ್ಯುಲ್‌ನಲ್ಲಿ ಏನಿದ್ಯೋ ಅದನ್ನು ಮಾತ್ರ ದರ್ಶನ್‌ಗೆ ನೀಡಿದ್ದಾರೆ ಅಂತ ಜೈಲಿನಲ್ಲಿ ದರ್ಶನ್‌ನ ದರ್ಶನ ಮಾಡಿದ ಸಿದ್ಧಾರೂಢ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್
ಸಾಮಾನ್ಯವಾಗಿ ಕೈದಿಗಳ ರೊಟೀನ್ ಬೆಳಗ್ಗೆ 7 ಗಂಟೆ ಆನ್‌ಲಾಕ್ ಆಗುತ್ತದೆ. ಕಾಫಿ-ಟೀ, ತಿಂಡಿ ಕೊಡುತ್ತಾರೆ. ನಂತರ ಪುಸ್ತಕ ಓದಬಹುದು, ಟಿವಿ ನೋಡಬಹುದು, ಇಲ್ಲದಿದ್ದರೆ ನಿದ್ದೆ ಮಾಡ್ಬಹುದು ಎಂದರು.
ವಿವೇಕನಂದ, ರಾಮಕೃಷ್ಣ ಪರಮಹಂಸರ ಪುಸ್ತಕಗಳ ಓದು
ಕೊಲೆ ಪ್ರಕರಣದ ಆರೋಪಿಯಾಗಿ ಜೈಲುಹಕ್ಕಿಯಾಗಿರುವ ದರ್ಶನ್ ಯೋಗಿಯ ಆತ್ಮಕತೆ, ವಿವೇಕನಂದರು, ರಾಮಕೃಷ್ಣ ಪರಮಹಂಸರ ಪುಸ್ತಕಗಳು, ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದೋಕೆ ಆರಂಭಿಸಿದ್ದಾರೆ. ಜತೆಗೆ ಇಸ್ಕಾನ್‌ನ ಭಗವದ್ಗೀತೆಯನ್ನು ಕೂಡ ದರ್ಶನ್ ತಮ್ಮ ಕೊಠಡಿಯಲ್ಲಿ ಇಟ್ಟುಕ್ಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ