ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಸೆಂಟ್ರಲ್ ಜೈಲಿಗೆ ಎತ್ತಂಗಡಿ ಆಗಿರೋ ಕೊಲೆ ಆರೋಪಿ ದರ್ಶನ್ (Actor Darshan) ಐದು ದಿನ ಕಳೆದಿದ್ದಾರೆ. ಜೈಲಿನಲ್ಲಿ ಕಳೆದ ಪ್ರತಿ ದಿನವನ್ನು ವರ್ಷದ ರೀತಿ ಕಳೀತಿದ್ದಾರೆ. ಅತ್ತ ಸ್ನೇಹಿತೆ ಪವಿತ್ರಾಗೌಡ ಜಾಮೀನು ಅರ್ಜಿ ವಜಾ ಆಗಿದ್ದರಿಂದ ಇತ್ತ ದರ್ಶನ್ ಜೈಲಿನಲ್ಲಿ ಟೆನ್ಶನ್‌ಗೆ ಒಳಗಾಗಿದ್ದಾರೆ.
ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವರ್ಗದ ಬಾಗಿಲನ್ನೇ ಧರೆಗೆ ಇಳಿಸಿದ್ದರು. ಮೋಜು – ಮಗಿಸಿ ಅಂತ ರಾಜಾರೋಷವಾಗಿ ಜೀವನ ಕಳೆದ್ದರು. ಆದರೆ ಕಳೆದ ನಾಲ್ಕು ರಾತ್ರಿ, ಐದು ಹಗಲು ಕಳೀದಿರೋ ದರ್ಶನ್ ಒಂದು ದಿನವನ್ನ ಒಂದು ವರ್ಷದ ರೀತಿ ಕಳೆದಿದ್ದಾರೆ. ಪ್ರತಿ ಕ್ಷಣ, ಪ್ರತಿ ದಿನ ಟೆನ್ಶನ್‌ನಲ್ಲೇ ಕಾಲ ಇದ್ದಾರೆ. ಅದ್ರಲ್ಲೂ ಮುಖ್ಯವಾಗಿ ಜೈಲಿಗೆ ಬಂದ ದಿನವೇ ಕೈಗೆ ಬಟ್ಟೆ ಧರಿಸಿಯೇ ಬಂದಿದ್ದರು. ಸೆಂಟ್ರಲ್ ಜೈಲ್ ನೂರಾರು ವರ್ಷದ ಹಳೆಯ ಜೈಲ್ ಆಗಿರುವುದರಿಂದ ಇಂಡಿಯನ್ ಶೌಚಾಲಯ ವ್ಯವಸ್ಥೆ ಇದ್ದು ನಟ ದರ್ಶನ್‌ಗೆ ಸ್ಪೈನಲ್ ಕಾರ್ಡ್ ಸಮಸ್ಯೆ ಇರೋದ್ರಿಂದ ಸರ್ಜಿಕಲ್ ಚೇರ್‌ಗೆ ಕುಟುಂಬಸ್ಥರ ಮೂಕಲ ಮನವಿ ಮಾಡಿದರು. ಮೆಲು ನೋಟಕ್ಕೆ ದರ್ಶನ್‌ಗೆ ಬೆನ್ನು ನೋವು ಇರೋದು ಬೆಳಕಿಗೆ ಬಂದಿದೆ. ಡಿಐಜಿ ಅನುಮತಿ ಮೇರೆಗೆ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ವೈದ್ಯರು, ಆರ್ಥೋಫೆಡಿಕ್ ಪರಿಶೀಲನೆ ಬಳಿಕ ದರ್ಶನ್‌ಗೆ ಸರ್ಜಿಕಲ್ ಚೇರ್ ನೀಡೋದಕ್ಕೆ ಬಹುತೇಕ ಜೈಲಾಧಿಕಾರಿಗಳು ಒಪ್ಪಿದ್ದು ಇಂದು ಸಂಜೆಯೇ ಸರ್ಜಿಕಲ್ ಚೇರ್ ನೀಡಲಾಗ್ತದೆ ಎಂದು ಹೇಳಿದ್ದಾರೆ.
ದರ್ಶನ್ ಸಾಮಾನ್ಯ ಖೈದಿ ಆಗಿದ್ದರೆ ಇಷ್ಟೊಂದು ತಲೆಕೆಡಸಿಕೊಳ್ಳಬೇಕಾದ ಅವಶ್ಯಕತೆ ಇರಲಿಲ್ಲ. ಕರಿಯನ ವಿರುದ್ಧ ಕೇಳಿ ಬಂದಿರೋ ಕೊಲೆ ಆರೋಪ ಹೈಪ್ರೋಫೈಲ್ ಕೇಸ್ ಆಗಿದ್ದರಿಂದ ದರ್ಶನ್ ಮೇಲೆ ಇಂಚಿಂಚು ನಿಗಾ ವಹಿಸಲಾಗಿದೆ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಲ್ಲಾದ ಲೋಪಗಳು ಸೆಂಟ್ರಲ್ ಜೈಲಿನಲ್ಲಿ ಆಗಬಾರದು ಅಂತ 10/10 ಅಡಿಯ ಹೈಸೆಕ್ಯೂರಿಟಿ ಕೋಣೆಯಲ್ಲಿ ದರ್ಶನ್‌ನನ್ನು ಇರಿಸಲಾಗಿದೆ. 15ನೇ ಸೆಲ್‌ನಲ್ಲಿರೋ ದರ್ಶನ್ ಅಕ್ಕ-ಪಕ್ಕದ ಸೆಲ್‌ನಲ್ಲಿ ಯಾವೊಬ್ಬ ಖೈದಿಯನ್ನ ಇರಿಸಲಾಗಿಲ್ಲ. ಅದ್ರಲ್ಲೂ ಒಬ್ಬ ಎಎಸ್ಐ, ಇಬ್ಬರು ಸಿಬ್ಬಂದಿ, ಮೂರು ಸಿಸಿ ಕ್ಯಾಮರಾ, ಕುಟುಂಬಸ್ಥರು ಬಂದು ಹೋಗುವ ಚಲನವಲನ ದೃಶ್ಯಾವಳಿಗಳನ್ನ ಪ್ರತ್ಯೇಕವಾಗಿಯೇ ಸಂಗ್ರಹಿಸಿಡಲಾಗುತ್ತಿದೆ. ದೃಶ್ಯಾವಳಿ ಸಂಗ್ರಹಣೆಗೆ ಅಂತಲೇ ಹೊಸ ಹಾರ್ಡ್ ಸಿಸ್ಕ್ ಖರೀದಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಾದಲ್ಲಾದ ಲೋಪ ಬಳ್ಳಾರಿ ಜೈಲಲ್ಲಿ ನಡೆಬಾರದು ಎಂದು ಬಹಳ ಜಾಗೃತಿ ವಹಿಸುತ್ತಾ ಇದ್ದಾರೆ. ಇದರ ಮಧ್ಯೆ ಜೈಲು ಊಟ ಕೊಡಲು ಹೋದ ಸಿಬ್ಬಂದಿಗರ ಇತರೇ ಖೈದಿಗಳಿಗು ದರ್ಶನ್ ಎಲ್ಲಿದ್ದಾರೆ? ದರ್ಶನ್ ಯಾವ ಸೆಲ್ ನಲ್ಲಿದ್ದಾರೆ? ದರ್ಶನ್ ರನ್ನ ಹೊರಗಡೆ ನೋಡೋದಕ್ಕೆ ಆಗಲ್ಲ. ಹೀಗಾಗಿ ದರ್ಶನ್ ಅವರನ್ನ ನೋಡೋದಕ್ಕೆ ಅವಕಾಶ ಮಾಡಿಕೊಡಿ ಅಂತ ದುಂಬಾಲು ಬಿದ್ದಿದ್ದಾರಂತೆ. ದರ್ಶನ್ ಸೆಂಟ್ರಲ್ ಜೈಲಿಗೆ ಬಂದಿದ್ದು ಸಿಬ್ಬಂದಿಗೆ ಒಂದ್ಕಡೆ ತಲೆನೋವಾದ್ರೆ ಇತರ ಖೈದಿಗಳ ಬೇಡಿಕೆ ಮತ್ತೊಂದು ತಲೆನೋವಾಗಿದೆ. ಇದ್ರ ಮಧ್ಯೆ ನನಗೆ ಬೇಲ್ ಸಿಕ್ರೆ, ಜೈಲು ಅಧಿಕಾರಿಗಳು ಅನುಮತಿ ಕೊಟ್ರೆ ಖಂಡಿತ ನಿಮ್ಮನ್ನ ಭೇಟಿ ಮಾಡ್ತಾರಂತೆ ಅಂತೇಳಿ ಅಂತ ಜೈಲು ಸಿಬ್ಬಂದಿಗೆ ದರ್ಶನ್ ಹೇಳಿದ್ದಾರಂತೆ.
ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಗ್ಯಾಂಗ್ ವಿರುದ್ಧ ಇನ್ನೆರಡು ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ!
ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ಬೇಕಾದವರು ಅವಶ್ಯಕ ಸಂದರ್ಭದಲ್ಲಿ ಭೇಟಿ ಮಾಡಿದ್ದರು. ದರ್ಶನ್ ಕೂಡಾ ತನಗಾದ ಸಂಕಷ್ಟವನ್ನು ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿ ರಕ್ತ ಸಂಬಂಧಿಕರ ಭೇಟಿಗೆ ಮಾತ್ರ ಅವಕಾಶ ಕೊಟ್ಟಿದ್ದರಿಂದ ತನ್ನ ನೋವನ್ನ ಯಾರ ಬಳಿ ಹೇಳಿಕೊಳ್ಳೋದಕ್ಕೆ ದರ್ಶನ್‌ಗೆ ಆಗುತ್ತಿಲ್ಲ. ಇದರ ಮಧ್ಯೆ ಬಂದಾಗಿನಿಂದಲೂ ಯಾರ ಬಳಿಯೂ ಮಾತನಾಡದ ದರ್ಶನ್ ಪತ್ನಿ ಬಂದು ಹೋದ ಬಳಿಕ ಎರಡೂ ದಿನವೂ ಬೆಳಗ್ಗೆ ವಾಕ್ ಮಾಡಿದ್ದಾರೆ. ಆದರೆ ಪತ್ನಿ ತಂದ ಬೇಕರಿ ಐಟೆಮ್ ಜೊತೆಜೆ ಜೈಲು ಊಟ ಮಾಡಿರುವ ದರ್ಶನ್ ಯಾರ ಬಳಿಯೂ ಮಾತಾಡದೇ ಬಹುತೇಕ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ.