Site icon Vistara News

Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

daredevil mustafa book release

ಬೆಂಗಳೂರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧಾರಿತ ಸಿನಿಮಾ ʻಡೇರ್ ಡೆವಿಲ್ ಮುಸ್ತಾಫಾʼ (Daredevil Mustafa) . ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಚಿತ್ರ ಪ್ರೇಕ್ಷಕರ ಪ್ರೀತಿ ಪಡೆದಿತ್ತು. ಶಶಾಂಕ ಸೋಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ʻಡೇರ್ ಡೆವಿಲ್ ಮುಸ್ತಾಫಾʼ ಚಿತ್ರವೀಗ ಪುಸ್ತಕ ರೂಪ ಪಡೆದಿದೆ.

ʻಡೇರ್ ಡೆವಿಲ್ ಮುಸ್ತಾಫಾʼ ಸಿನಿಮಾಗೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಶಶಾಂಕ್ ಸೋಗಾಲ್ ಚಿತ್ರಕಥೆ ಹಾಗೂ ಆಯ್ದ ವಿಮರ್ಶೆಗಳನ್ನು ಪುಸ್ತಕ ರೂಪಕ್ಕೆ ಇಳಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಸುಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕಿ ಕಂ ನಟಿ ಸಿಂಧು ಎಸ್ ಮೂರ್ತಿ, ನಿರ್ದೇಶಕರಾದ ಅನೂಪ್ ಭಂಡಾರಿ, ನಿತಿನ್ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದನ್ನೂ ಓದಿ: Dare devil Mustafa: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ʻಡೇರ್‌ಡೆವಿಲ್‌ ಮುಸ್ತಾಫಾ‌ʼ

ಪುಸ್ತಕದ ವಿಶೇಷತೆಗಳೇನು?

ಕನ್ನಡದಲ್ಲಿ ಸಿನಿಮಾ ಕುರಿತ ಕೃತಿಗಳು ಕಡಿಮೆ. ಅದರಲ್ಲಿಯೂ ಕೆಲವೇ ಕೆಲವು ಚಿತ್ರಕಥೆಯ ಪುಸ್ತಕಗಳಿವೆ. ಆ ಸಾಲಿಗೀಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಈ ಪುಸ್ತಕದಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಹ ಸನ್ನಿವೇಶ. ಸಹಪಾಠಿಗಳ ನಡುವೆ ನಡೆಯುವ ಸಣ್ಣ ಪುಟ್ಟ ಜಗಳ, ಹಾಗು ಧರ್ಮಕ್ಕೂ ಮಿಗಿಲಾದದ್ದು ಫ್ರೆಂಡ್ ಶಿಪ್ ಎಂಬ ಸಾರಾಂಶವನ್ನು ಸಮಾಜಕ್ಕೆ ಸಾರುವಂತಹ ವಿಷಯದ ಜತೆಗೆ ಸಿನಿಮಾ ಆಸಕ್ತರಿಗೆ ಪಠ್ಯವಾಗಬಲ್ಲ ಪುಸ್ತಕ ಅಂದರು ತಪ್ಪಿಲ್ಲ. ಒಂದು ಸಣ್ಣ ಕಥೆ ಎತ್ತಿಕೊಂಡು ಸ್ಕ್ರೀನ್ ಪ್ಲೇ, ಕಥೆ ಡೈಲಾಗ್ ಬರೆದು ದೃಶ್ಯ ರೂಪಕ್ಕೆ ಹೇಗೆ ಇಳಿಸಲಾಯಿತು.? ಸಣ್ಣ ಕಥೆ ಚಿತ್ರ ಕಥೆ ಆಗಿದ್ದೇಗೆ? ಕಥೆ ಸಿನಿಮಾವಾಗಿದ್ದೇಗೆ ಎಂಬ ವಿಷಯಗಳು ಈ ಪುಸ್ತಕ ಓದಿದರೆ ತಿಳಿಯುತ್ತದೆ.

ಇದನ್ನೂ ದ ಓದಿ: List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

ಸಿನಿಮಾ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕಗಳ ಕೊರತೆ ಇದೆ.‌ಅದರಲ್ಲಿಯೂ ಇಂಗ್ಲೀಷ್ ಭಾಷೆಯಲ್ಲಿ ಕಥೆ ಬರೆದು ಸಿನಿಮಾ ಮಾಡುವವರು ಹೆಚ್ಚಿರುವಾಗ ಕನ್ನಡದಲ್ಲಿ ಸ್ಕ್ರೀಪ್ಟ್ ಬರೆದು ಸಿನಿಮಾ ಮಾಡಿದ್ದೇವೆ ಅನ್ನೋದನ್ನು ಡೇರ್ ಡೆವಿಲ್ ಮುಸ್ತಾಫಾ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡದ ಸದ್ಯದ ಸಿನಿಮಾರಂಗ ಇರುವ ಪರಿಸ್ಥಿತಿಯಲ್ಲಿ ಸಿನಿಮಾ ಸೂಕ್ಷ್ಮಗಳ ಬಗ್ಗೆ ಅರಿವು ಹುಟ್ಟಿಸಬಲ್ಲ ಇಂಥ ಕೃತಿಗಳ ಅಗತ್ಯ ಖಂಡಿತ ಇದೆ.

Exit mobile version