Dare devil Mustafa In OTT amazon Prime Dare devil Mustafa: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ʻಡೇರ್‌ಡೆವಿಲ್‌ ಮುಸ್ತಾಫಾ‌ʼ - Vistara News

ಒಟಿಟಿ

Dare devil Mustafa: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ʻಡೇರ್‌ಡೆವಿಲ್‌ ಮುಸ್ತಾಫಾ‌ʼ

Dare devil Mustafa: ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಕನ್ನಡಿಗರು ಬಿಗಿದಪ್ಪಿ ಕೊಂಡಾಡುತ್ತಿರುವ ಡೇರ್‌ಡೆವಿಲ್‌ ಮುಸ್ತಾಫಾ‌ ಅಮೋಘವಾಗಿ ಪ್ರದರ್ಶನ ಕಂಡಿತ್ತು.

VISTARANEWS.COM


on

Dare devil Mustafa In OTT amazon Prime
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕನ್ನಡದ ಪ್ರಮುಖ ಕತೆಗಾರರು, ಪರಿಸರ ಲೇಖಕರಲ್ಲಿ ಒಬ್ಬರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯ ಆಧರಿತ ಸಿನಿಮಾ ಡೇರ್‌ಡೆವಿಲ್‌ ಮುಸ್ತಫಾಗೆ ತೆರಿಗೆ ವಿನಾಯಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದ ಬೆನ್ನಲ್ಲೇ ಒಟಿಟಿಗೆ ಲಗ್ಗೆ ಇಟ್ಟಿದೆ ಸಿನಿಮಾ. ಡೇರ್‌ಡೆವಿಲ್‌ ಮುಸ್ತಾಫಾ‌ (Daredevil Mustafa) ಚಿತ್ರಮಂದಿರಗಳಲ್ಲಿ ಹವಾ ಜೋರಾಗಿತ್ತು. ಇದೀಗ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಕನ್ನಡಿಗರು ಬಿಗಿದಪ್ಪಿ ಕೊಂಡಾಡುತ್ತಿರುವ ಡೇರ್‌ಡೆವಿಲ್‌ ಮುಸ್ತಾಫಾ‌ ಅಮೋಘವಾಗಿ ಪ್ರದರ್ಶನ ಕಂಡಿತ್ತು. ಕಳೆದ ಆರೇಳು ತಿಂಗಳಿನಿಂದ ಥಿಯೇಟರ್‌ನಲ್ಲಿ ಯಾವ ಸಿನಿಮಾಗೂ‌ ಸಿಗದ ಮೆಚ್ಚುಗೆ ಮುಸ್ತಾಫಾನ ಪಾಲಾಗಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಸೆಂಟರ್‌ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿತ್ತು.

ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಡೇರ್‌ಡೆವಿಲ್‌ ಮುಸ್ತಾಫಾ‌ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ.

ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ಪ್ರಸ್ತುತಪಡಿಸಿದ್ದಾರೆ. ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ.

ಇದನ್ನೂ ಓದಿ: Dare devil Mustafa: ಡೇರ್‌ಡೆವಿಲ್‌ಗೆ ತೆರಿಗೆ ವಿನಾಯಿತಿ ನೀಡಿದ ಸಿಎಂ ಸಿದ್ದರಾಮಯ್ಯ: ಗೋಹತ್ಯೆ ನಿಷೇಧ ವಾಪಸ್‌ ಯಾಕೆ ಎಂದ ನೆಟ್ಟಿಗರು!

ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಒಟಿಟಿ

Shekhar Home:  ಪತ್ತೇದಾರಿ ಕಾದಂಬರಿ ಆಧಾರಿತ ಸಿರೀಸ್‌ನಲ್ಲಿ ಅಬ್ಬರಿಸಲಿದ್ದಾರೆ ಕೇ ಕೇ ಮೆನನ್; ಫಸ್ಟ್‌ ಲುಕ್‌ ಔಟ್!‌

Shekhar Home:  ಕೇ ಕೇ ಮೆನನ್ ಅವರು `ಶೇಖರ್ ಹೋಮ್‌’ ಮುಖ್ಯ ಪಾತ್ರಧಾರಿ. ಇದೀಗ ಈ ಸಿರೀಸ್‌ ಜಿಯೋ ಸಿನಿಮಾದಲ್ಲಿ ಪ್ರೀಮಿಯರ್ ಆಗಲಿದೆ. ʻಶೇಖರ್ ಹೋಮ್‌ʼ ಸಿರೀಸ್‌ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.

VISTARANEWS.COM


on

Shekhar Home Kay Kay Menon Shares First Look
Koo

ಬೆಂಗಳೂರು: ನಿರ್ದೇಶಕ ಶ್ರೀಜಿತ್ ಮುಖರ್ಜಿ ಅವರ ಮುಂಬರುವ ವೆಬ್ ಸಿರೀಸ್‌ ʻಶೇಖರ್ ಹೋಮ್‌ʼ (Shekhar Home)ಮೊದಲ ಲುಕ್‌ ಅನಾವರಣಗೊಂಡಿದೆ. ಶೇಖರ್ ಹೋಮ್ ಸಿರೀಸ್‌ ಪ್ರಸಿದ್ಧ ಬ್ರಿಟಿಷ್ ಕಾದಂಬರಿಕಾರ ಸರ್ ಆರ್ಥರ್ ಕಾನನ್ ಡೋಯ್ಲ್ ರಚಿಸಿದ ಕಾಲ್ಪನಿಕ ಪತ್ತೇದಾರಿ ಪಾತ್ರ ಷರ್ಲಾಕ್ ಹೋಮ್ಸ್‌ನ ಭಾರತೀಯ ರೂಪಾಂತರ ಎಂದು (British novelist Sir Arthur Conan Doyle) ಹೇಳಲಾಗಿದೆ. ಈ ಸರಣಿಯಲ್ಲಿ ರಸಿಕಾ ದುಗಲ್, ರಣವೀರ್ ಶೋರೆ ಮತ್ತು ಕೌಶಿಕ್ ಸೇನ್ ಜತೆಗೆ ಕೇ ಕೇ ಮೆನನ್ ನಟಿಸಿದ್ದಾರೆ. ಕೇ ಕೇ ಮೆನನ್ ಅವರು `ಶೇಖರ್ ಹೋಮ್‌’ ಮುಖ್ಯ ಪಾತ್ರಧಾರಿ. ಇದೀಗ ಈ ಸಿರೀಸ್‌ ಜಿಯೋ ಸಿನಿಮಾದಲ್ಲಿ ಪ್ರೀಮಿಯರ್ ಆಗಲಿದೆ. ʻಶೇಖರ್ ಹೋಮ್‌ʼ ಸಿರೀಸ್‌ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕೇ ಕೇ ಮೆನನ್ ಹೀಗೆ ಬರೆದಿದ್ದಾರೆ, “ ಎಲ್ಲಾ ರಹಸ್ಯಗಳನ್ನು ಪರಿಹರಿಸಬಲ್ಲ ಏಕೈಕ ವ್ಯಕ್ತಿ ಅವರು ಎಂದು ನೀವು ಅರಿತುಕೊಳ್ಳುತ್ತೀರಿ. ಶೇಖರ್ ಹೋಮ್‌ ಶೀಘ್ರದಲ್ಲೇ ಜಿಯೋ ಸಿನಿಮಾ ಪ್ರೀಮಿಯಮ್‌ನಲ್ಲಿ ಬರಲಿದೆ. ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಸಾಹಿತ್ಯ ಕೃತಿಗಳಿಂದ ಸ್ಫೂರ್ತಿ ಪಡೆದ ಕಾದಂಬರಿಯ ಮೂಲ ಕೃತಿಯಾಗಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

ಇದೀಗ ಕೇ ಕೇ ಮೆನನ್ ಫ್ಯಾನ್ಸ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕೇ ಕೇ ಈಸ್ ಬ್ಯಾಕ್ʼಎಂದು ಕಮೆಂಟ್‌ ಮಾಡಿದ್ದಾರೆ. ʻಅಂತಿಮವಾಗಿ ಹೊಸ ಯೋಜನೆʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಕಳೆದ ವರ್ಷ, ಶ್ರೀಜಿತ್ ಮುಖರ್ಜಿ ಅವರು ಪತ್ತೇದಾರಿ ಆಧಾರಿತ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುಳಿವು ನೀಡಿದ್ದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಬೆನೆಡಿಕ್ಟ್ ಕಂಬರ್ಬ್ಯಾಚ್ ಮತ್ತು ಮಾರ್ಟಿನ್ ಫ್ರೀಮನ್ ಒಳಗೊಂಡ ಪೋಸ್ಟರ್ನ ಮುಂದೆ ಪೋಸ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದರು. ಶೇಖರ್ ಹೋಮ್ ಕುರಿತು ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಹಂಚಿಕೊಳ್ಳಲಿದೆ.

Continue Reading

Latest

OTT Releases : ಈ ವಾರ ಥಿಯೇಟರ್ ಮತ್ತು ಒಟಿಟಿಯಲ್ಲಿ ಬಿಡುಗಡೆ ಆಗಲಿವೆ ಈ ಚಿತ್ರಗಳು; ಟ್ರೇಲರ್‌ ನೋಡಿ

OTT Releases: ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಚಿತ್ರಗಳು ರೊಮ್ಯಾಂಟಿಕ್ ಮತ್ತು ಥ್ರಿಲ್ಲರ್‌ಗಳಿಂದ ಹಿಡಿದು ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಭಯಾನಕ ಮತ್ತು ಆಕ್ಷನ್‌ವರೆಗೆ ಎಲ್ಲ ಕುತೂಹಲಕರ ಸಂಗತಿಗಳನ್ನೂ ಒಳಗೊಂಡಿವೆ. ಬ್ಯಾಡ್ ನ್ಯೂಸ್, ಟ್ವಿಸ್ಟರ್ಸ್, ಇಮ್ಮಾಕ್ಯುಲೇಟ್, ಆ್ಯಕ್ಸಿಡೆಂಟ್ ಆರ್ ಕಾನ್‌ಸ್ಪೈರ್ಸಿ: ಗೋಧ್ರಾ, ಮುಂತಾದ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಈ ಚಿತ್ರಗಳ ಕಿರು ಮಾಹಿತಿ ಮತ್ತು ವಿಡಿಯೊಗಳು ಇಲ್ಲಿವೆ.

VISTARANEWS.COM


on

OTT Releases
Koo


ಮುಂಬೈ : ಒಟಿಟಿ ತನ್ನ ಪ್ರೇಕ್ಷಕರಿಗಾಗಿ ಪ್ರತಿವಾರ ವಿಭಿನ್ನ ಬಗೆಯ ಚಿತ್ರಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಈ ವಾರ ಒಟಿಟಿಯಲ್ಲಿ (OTT Releases) ಬಿಡುಗಡೆಯಾಗಲಿರುವ ಚಿತ್ರಗಳು ರೊಮ್ಯಾಂಟಿಕ್ ಮತ್ತು ಥ್ರಿಲ್ಲರ್‌ಗಳಿಂದ ಹಿಡಿದು ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಭಯಾನಕ ಮತ್ತು ಆಕ್ಷನ್‌ವರೆಗೆ ಎಲ್ಲವನ್ನೂ ಒಳಗೊಂಡಿವೆ. ನೀವು ಚಿತ್ರಮಂದಿರಗಳಿಗೆ ಹೋಗಬಹುದು ಅಥವಾ ಮನೆಯಲ್ಲಿ ಆರಾಮವಾಗಿ ಕುಳಿತು ಈ ವಾರ ಕಳೆಯಬಹುದು. ಈ ವಾರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ವಿವರ ಇಲ್ಲಿದೆ.

ಈ ವಾರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು:

ಬ್ಯಾಡ್ ನ್ಯೂಸ್

ಆನಂದ್ ತಿವಾರಿ ಅವರ ʼಬ್ಯಾಡ್ ನ್ಯೂಸ್ʼ ಚಿತ್ರದಲ್ಲಿ ತೃಪ್ತಿ ದಿಮ್ರಿ, ವಿಕ್ಕಿ ಕೌಶಲ್ ಮತ್ತು ಅಮ್ಮಿ ಎರ್ಕ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಇಶಿತಾ ಮೊಯಿತ್ರಾ ಮತ್ತು ತರುಣ್ ದುಡೇಜಾ ಬರೆದಿರುವ ಈ ಚಿತ್ರವನ್ನು ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಆನಂದ್ ತಿವಾರಿ ನಿರ್ಮಿಸಿದ್ದಾರೆ. ಇದು ಕುತೂಹಲಕರ ಕತೆ ಹೊಂದಿದೆ.

ಟ್ವಿಸ್ಟರ್ಸ್

ಟ್ವಿಸ್ಟರ್ಸ್ 1996ರ ಅಪ್ರತಿಮ ಚಲನಚಿತ್ರ ʼಟ್ವಿಸ್ಟರ್‌ʼನ ಮುಂದುವರಿದ ಭಾಗವಾಗಿದೆ. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಲೀ ಐಸಾಕ್ ಚುಂಗ್ ನಿರ್ದೇಶನದ ಈ ಚಿತ್ರದಲ್ಲಿ ಡೈಸಿ ಎಡ್ಗರ್-ಜೋನ್ಸ್, ಗ್ಲೆನ್ ಪೊವೆಲ್ ಮತ್ತು ಆಂಥೋನಿ ರಾಮೋಸ್ ನಟಿಸಿದ್ದಾರೆ.

ಪ್ರಾಯೋಗಿಕ ಹವಾಮಾನ ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸುವ ಸಲುವಾಗಿ ಒಕ್ಲಹಾಮ್‌ನಲ್ಲಿ ಅಭೂತಪೂರ್ವ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿರುವ ವ್ಯಕ್ತಿಯ ಕಥೆಯನ್ನು ಈ ಚಿತ್ರವು ಹೇಳುತ್ತದೆ.

ಇಮ್ಮಾಕ್ಯುಲೇಟ್ (Immaculate)

ಮೈಕೆಲ್ ಮೋಹನ್ ಅವರ ಭಯಾನಕ ಚಿತ್ರದಲ್ಲಿ ಸಿಡ್ನಿ ಸ್ವೀನಿ, ಅಲ್ವಾರೊ ಮೊರ್ಟೆ ಮತ್ತು ಬೆನೆಡೆಟ್ಟಾ ಪೊರ್ಕರೋಲಿ ನಟಿಸಿದ್ದಾರೆ. ದೂರದ ಇಟಾಲಿಯನ್ ಕಾನ್ವೆಂಟ್‌ನಲ್ಲಿ ಡೆಟ್ರಾಯಿಟ್‌ನ ಸಿಸಿಲಿಯಾ ಎಂಬ ಸನ್ಯಾಸಿನಿ ಭಯಂಕರ ಅಗ್ನಿಪರೀಕ್ಷೆಯಲ್ಲಿ ಸಿಲುಕುತ್ತಾಳೆ.

ಅವಳು ಆಳವಾದ, ಭಯಾನಕ ರಹಸ್ಯಗಳನ್ನು ಕಂಡುಹಿಡಿಯಲು ಕಾನ್ವೆಂಟ್‌ಗೆ ಹೋಗುತ್ತಾಳೆ. ಪವಾಡವೆಂದು ಆಚರಿಸಲಾಗುವ ರಹಸ್ಯ ಗರ್ಭಧಾರಣೆ ಶೀಘ್ರದಲ್ಲೇ ಅವಳ ಜೀವನವನ್ನು ಮತ್ತೊಂದು ಸುಳಿಗೆ ಸಿಲುಕಿಸುತ್ತದೆ. ʼಪ್ಯಾರಾಸೈಟ್ʼ ಮತ್ತು ಟ್ರಯಂಗಲ್‌ ಆಫ್‌ ಸ್ಯಾಡ್‌ನೆಸ್‌ ಚಿತ್ರಗಳಿಗೆ ಹೆಸರುವಾಸಿಯಾದ ನಿಯಾನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸ್ಪೈ x ಫ್ಯಾಮಿಲಿ

ಟಕುಯಾ ಎಗುಚಿ (ಲಾಯ್ಡ್ ಫೋರ್ಗರ್), ಅಟ್ಸುಮಿ ತನೆಜಾಕಿ (ಅನ್ಯಾ) ಮತ್ತು ಸಾರಿ ಹಯಾಮಿ (ಯೋರ್) ಧ್ವನಿ ನೀಡಿರುವ ಈ ಜಪಾನಿನ ಅನಿಮೆಷನ್ ಚಿತ್ರ ಭರಪೂರ ಸಾಹಸಗಳಿಂದ ತುಂಬಿದೆ. ಮುಖ್ಯವಾಗಿ ಮಕ್ಕಳಿಗೆ ಖುಷಿ ಕೊಡುತ್ತದೆ.

ಒಬ್ಬ ಗೂಢಚಾರಿ, ಒಬ್ಬ ಕೊಲೆಗಾರ ಮತ್ತು ಟೆಲಿಪಥಿಕ್ ಮಗು ಇವರ ಸುತ್ತ ಕತೆ ಸುತ್ತುತ್ತದೆ. ಅನಿರೀಕ್ಷಿತ ತಿರುವುಗಳು ಈ ಚಿತ್ರದಲ್ಲಿವೆ..

ಟ್ರೆಷರ್(Treasure)

ಲೀನಾ ಡನ್ಹ್ಯಾಮ್ ಮತ್ತು ಸ್ಟೀಫನ್ ಫ್ರೈ ನಟಿಸಿರುವ ʼಟ್ರೆಷರ್ʼ 1990ರ ಪೋಲೆಂಡ್ ಹಿನ್ನೆಲೆಯನ್ನು ಆಧರಿಸಿದ ಹೃದಯಸ್ಪರ್ಶಿ ಮತ್ತು ದುರಂತದ ಹಿನ್ನೆಲೆಯ ಹಾಸ್ಯ ಚಿತ್ರವಾಗಿದೆ. ಇದು ಲಿಲಿ ಬ್ರೆಟ್ ಅವರ 1999ರ ಕಾದಂಬರಿ ಟೂ ಮ್ಯಾನ್ ಮೆನ್ ಅನ್ನು ಆಧರಿಸಿದೆ. ಜೂಲಿಯಾ ವಾನ್ ಹೈಂಜ್ ನಿರ್ದೇಶನದ ಈ ಚಿತ್ರವು ಅಮೇರಿಕದ ಸಂಗೀತ ಪತ್ರಕರ್ತೆ ರೂತ್ ಮತ್ತು ಹತ್ಯಾಕಾಂಡದಿಂದ ಬದುಕುಳಿದ ಅವಳ ತಂದೆ ಎಡೆಕ್ ಅವರ ಸುತ್ತ ಈ ಕತೆ ಇದೆ. ರೂತ್ ತನ್ನ ತಂದೆಯ ಬಾಲ್ಯದ ತಾಣಗಳಿಗೆ ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ತಮ್ಮ ಕುಟುಂಬದ ಸಾವಿನ ರಹಸ್ಯಗಳನ್ನು ಭೇದಿಸುವ ಭರದಲ್ಲಿ ದುಷ್ಕೃತ್ಯಗಳಲ್ಲಿ ತೊಡಗುತ್ತಾಳೆ.

ಆ್ಯಕ್ಸಿಡೆಂಟ್ ಆರ್ ಕಾನ್‌ಸ್ಪೈರ್ಸಿ: ಗೋಧ್ರಾ

ಗೋಧ್ರಾ ಭಾರತದ ಕರಾಳ ಘಟನೆಗಳಲ್ಲಿ ಒಂದಾಗಿದೆ. 2002ರ ಫೆಬ್ರವರಿಯಲ್ಲಿ ಗೋಧ್ರಾ ರೈಲು ಬೆಂಕಿ ದುರಂತದಲ್ಲಿ ಹಲವಾರು ಜನರು ಭೀಕರವಾಗಿ ಸಾಯುತ್ತಾರೆ. ಈ ಘಟನೆ ಗುಜರಾತಿನಾದ್ಯಂತ ವ್ಯಾಪಕವಾದ ಹಿಂದೂ-ಮುಸ್ಲಿಂ ಗಲಭೆಗಳಿಗೆ ಕಾರಣವಾಗಿತ್ತು. ಈ ಚಿತ್ರದ ಕತೆಯು ಈ ಘಟನೆಯ ಹಿನ್ನೆಲೆಯನ್ನು ಹೊಂದಿದೆ.

ಎಂ.ಕೆ.ಶಿವಾಕ್ಷ್ ನಿರ್ದೇಶನದ ಮತ್ತು ಬಿ.ಜೆ.ಪುರೋಹಿತ್ ನಿರ್ಮಾಣದ ರಣವೀರ್ ಶೋರೆ ಅಭಿನಯದ ಈ ಚಿತ್ರವು ನಾನಾವತಿ-ಮೆಹ್ತಾ ಆಯೋಗದ ತನಿಖೆಗೆ ಜೀವ ತುಂಬುತ್ತದೆ.

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು

ಆಡುಜೀವಿತಂ

ಇದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಆಡುಜೀವಿತಂ – ದಿ ಗೋಟ್‌ ಲೈಫ್ ಚಿತ್ರವನ್ನು ಬ್ಲೆಸ್ಸಿ ನಿರ್ದೇಶಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಲಾ ಪೌಲ್ ನಟಿಸಿದ್ದಾರೆ. ಇದು ಬೆನ್ಯಾಮಿನ್ ಅವರ ಕಾದಂಬರಿಯನ್ನು ಆಧರಿಸಿದೆ. ಈ ಮಲಯಾಳಂ ಚಿತ್ರವು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಅರಬ್ಬರಿಂದ ಮರುಭೂಮಿಯ ಹೊಲಗಳಲ್ಲಿ ಮೇಕೆ ಮೇಯಿಸುವವರಾಗಿ ಗುಲಾಮಗಿರಿಗೆ ತಳ್ಳಲ್ಪಟ್ಟ ಸಾವಿರಾರು ಭಾರತೀಯರಲ್ಲಿ ಒಬ್ಬರಾದ ಮಲಯಾಳಿ ವಲಸೆ ಕಾರ್ಮಿಕ ನಜೀಬ್ ಅವರ ನಿಜ ಜೀವನದ ಕಥೆಯನ್ನು ನಿರೂಪಿಸುತ್ತದೆ.

ಲೇಡಿ ಇನ್ ದಿ ಲೇಕ್

ಇದು ಆಪಲ್ ಟಿವಿ+ ನಲ್ಲಿ ಬಿಡುಗಡೆಯಾಗಲಿದೆ. ಲಾರಾ ಲಿಪ್ಮನ್ ಅವರ ನಟಾಲಿಯಾ ಪೋರ್ಟ್ ಮ್ಯಾನ್ ಲೇಡಿ ಇನ್ ದಿ ಲೇಕ್ ಕಾದಂಬರಿಯನ್ನು ಆಧರಿಸಿದೆ. 1960ರಲ್ಲಿ ಬಾಲ್ಟಿಮೋರ್‌ನಲ್ಲಿ ಚಿತ್ರೀಕರಿಸಲಾದ ಈ ಚಿತ್ರ ಯಹೂದಿ ಗೃಹಿಣಿಯೊಬ್ಬಳು ತನ್ನ ಜೀವನವನ್ನು ಮರುಶೋಧಿಸಿ ತನಿಖಾ ಪತ್ರಕರ್ತೆ ಆಗುವ ಕಥೆಯನ್ನು ಹೇಳುತ್ತದೆ.

1996ರಲ್ಲಿ ʼಥ್ಯಾಂಕ್ಸ್ ಗೀವಿಂಗ್ ಡೇʼಯಂದು ಯುವತಿಯೊಬ್ಬಳು ಕಣ್ಮರೆಯಾಗಿರುವುದರ ಘಟನೆಗಳ ಸರಣಿಯನ್ನು ಈ ಚಿತ್ರ ಬಿಚ್ಚಿಡುತ್ತದೆ.

ಇದನ್ನೂ ಓದಿ: ಪುಟ್ಟ ಮಗುವನ್ನು ಮುಂದೆ ಕೂರಿಸಿಕೊಂಡು ಬೈಕ್‌ ಸ್ಟಂಟ್‌! ಒದ್ದು ಒಳಗೆ ಹಾಕಿ ಅಂತಿದ್ದಾರೆ ನೆಟ್ಟಿಗರು

ಸ್ವೀಟ್ ಹೋಮ್ (ಸೀಸನ್ 3)

ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ದಕ್ಷಿಣ ಕೊರಿಯಾಕ್ಕೆ ಸಂಬಂಧಿಸಿದ ಈ ಸರಣಿಯ ಮೂರನೇ ಸೀಸನ್ ಮಾನವರು, ರಾಕ್ಷಸರು ಮತ್ತು ನವಮಾನವರ ನಡುವಿನ ಉದ್ವಿಗ್ನತೆಯನ್ನು ಬಿಂಬಿಸುತ್ತದೆ. ಇದು ರಾಕ್ಷಸ ವಿಕಸನಗಳಿಂದ ಪೀಡಿತವಾದ ಜಗತ್ತಿನಲ್ಲಿ ಬದುಕುಳಿಯಲು ಹೆಣಗಾಡುತ್ತಿರುವ ಚಾ ಹ್ಯುನ್-ಸು ಮತ್ತು ಅವನ ಸ್ನೇಹಿತರ ಭಯಾನಕ ಕಥೆಯನ್ನು ಹೇಳುತ್ತದೆ.

Continue Reading

ಮಾಲಿವುಡ್

Aadujeevitham Movie: ಬ್ಲಾಕ್‌ ಬಸ್ಟರ್‌ ಹಿಟ್‌ ʻಆಡು ಜೀವಿತಂʼ ಒಟಿಟಿ ರಿಲೀಸ್‌ ಡೇಟ್‌ ಔಟ್‌!

Aadujeevitham Movie: ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

VISTARANEWS.COM


on

Aadujeevitham Movie OTT release date out
Koo

ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ (Aadujeevitham box office) ಅಭಿನಯದ ‘ಆಡು ಜೀವಿತಂ’ (Aadujeevitham Box Office) ಮೊದಲ ದಿನವೇ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ (National award winning) ನಿರ್ದೇಶಕ ಬ್ಲೆಸ್ಸಿ (Director blessy) ಸಾರಥ್ಯದ ಪೃಥ್ವಿರಾಜ್ ಸುಕುಮಾರನ್‌ (Prithviraj Sukumaran) ಮತ್ತು ಅಮಲಾ ಪಾಲ್ (Amala Paul) ನಟನೆಯ ವಿಭಿನ್ನ ಮತ್ತು ಬಹು ನಿರೀಕ್ಷೆಯ ಚಿತ್ರ ಆಡು ಜೀವಿತಂ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ‘ಆಡುಜೀವಿತಂ’ ಸಿನಿಮಾ ಜುಲೈ 19ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತವಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಸಂಸ್ಥೆ ಈ ವಿಚಾರವನ್ನು ಹಂಚಿಕೊಂಡಿದೆ.

ನೈಜ ಘಟನೆಗಳನ್ನು ಆಧರಿಸಿ ಬರೆದ ಕಾದಂಬರಿಯನ್ನು ತೆರೆಗೆ ತಂದು ಚಿತ್ರತಂಡ ಸಕ್ಸಸ್ ಕಂಡಿತ್ತು. ಬ್ಲೆಸ್ಸಿ ನಿರ್ದೇಶನದ ಈ ಚಿತ್ರ ಆರು ದಿನಗಳಲ್ಲಿ ಭಾರತದಲ್ಲಿ ಸುಮಾರು 40.4 ಕೋಟಿ ರೂ. ಸಂಗ್ರಹಿಸಿತ್ತು. ಮೊದಲ ದಿನ, ʻಆಡುಜೀವಿತಂʼ ಭಾರತದಲ್ಲಿ ಒಟ್ಟು ಎಲ್ಲಾ ಭಾಷೆಗಳು ಸೇರಿದಂತೆ 7.6 ಕೋಟಿ ರೂ. ಸಂಗ್ರಹಿಸಿದರೆ, ಎರಡನೇ ದಿನ ದಿನ 6.25 ಕೋಟಿ ರೂ. ಮೂರನೇ ದಿನ 7.75 ಕೋಟಿ ರೂ. ನಾಲ್ಕು ಮತ್ತು ಐದನೇ ದಿನ 8.7 ಕೋಟಿ ರೂ. ಮತ್ತು ಆರನೇ ದಿನ 4. 5 ಕೋಟಿ ರೂ. ವ್ಯವಹಾರ ಮಾಡಿತ್ತು.

ಆಡು ಜೀವಿತಂʼ (Aadujeevitham Movie ) `ದಿ ಗೋಟ್ ಲೈಫ್’ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ ಕಥೆ ಆಧರಿಸಿದ ಚಿತ್ರವಾಗಿದೆ.

‘ಆಡು ಜೀವಿತಂʼ ಚಿತ್ರದ ಕಥೆ ವಲಸಿಗರ ಸಮಸ್ಯೆ ಸುತ್ತ ಸುತ್ತುತ್ತದೆ. ದುಡಿಮೆಗಾಗಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಪಟ್ಟಂತ ಕಷ್ಟಗಳು ಆತನ ಪಾಸ್‌ಪೋರ್ಟ್‌ ಕಸಿದು ಆತನಿಗೆ ಕೊಟ್ಟಂತಹ ಹಿಂಸೆಗಳು, ಆ ಬಿಸಿಲಿನ ಮರುಭೂಮಿಯಲ್ಲಿ ಆತ ಅನುಭವಿಸಿದ ಸಂಕಷ್ಟಗಳ ಕಥನವೇ ಈ ಆಡು ಜೀವಿತಂ.

ಇದನ್ನೂ ಓದಿ: Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

ಏನಿದೆ ಆಡುಜೀವಿತಂ ಸಿನಿಮಾ ಕಥೆ?

ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್‌ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಆಡು ಜೀವಿತಂ ಅಂದರೆ ಆಡಿನ ಬದುಕು ಅಂಥ ಅರ್ಥ. ಇಂಗ್ಲಿಷ್‌ನಲ್ಲಿ ಇದರ ಟೈಟಲ್‌ GOAT LIFE ಎಂದಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಮನೆಗೆ ಕಳುಹಿಸುವಷ್ಟು ಹಣ ಸಂಪಾದಿಸುವುದು ನಜೀಬ್ ಅವರ ಕನಸಾಗಿತ್ತು. ಆದರೆ, ಸೌದಿ ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಗುಲಾಮಗಿರಿಯ ಕೆಲಸಕ್ಕೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ಏನು ಬಂತು? ಅವನು ಕೊನೆಗೂ ತನ್ನನ್ನು ತಾನು ಹೇಗೆ ಬಂಧಮುಕ್ತಗೊಳಿಸಿಕೊಳ್ಳುತ್ತಾನೆ ಎನ್ನುವುದೊಂದು ದೊಡ್ಡ ಹೋರಾಟದ ಕಥೆ. ಅವನು ಸೆರೆಮನೆ ಸೇರಿ, ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸ ಈ ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ನಿರ್ದೇಶಕ ಬ್ಲೆಸ್ಸಿ ಅವರು ತುಂಬಾ ಅಧ್ಯಯನ ಮಾಡಿದ್ದಾರೆ. ಈ ಕಥೆ ಅವರನ್ನು ಕಳೆದ 15 ವರ್ಷಗಳಿಂದ ಕೊರೆಯುತ್ತಿತ್ತಂತೆ. ಅಂತೆಯೇ ಅವರ ಕನಸಿನಲ್ಲಿ ಬಂದ ಚಿತ್ರದಂತೆ ತಮ್ಮನ್ನು ಮಾರ್ಪಾಡು ಮಾಡಿಕೊಂಡು ಹೊಸ ವ್ಯಕ್ತಿಯ ರೂಪದಲ್ಲಿ ಹೊಸ ಲುಕ್‌ನಲ್ಲಿ ಬಂದಿದ್ದಾರೆ ನಟ ಪೃಥ್ವಿರಾಜ್ ಸುಕುಮಾರನ್.

Continue Reading

ಸಿನಿಮಾ

OTT releases: ಒಟಿಟಿಯಲ್ಲಿ ಈ ವಾರಾಂತ್ಯ ತೆರೆ ಕಾಣಲಿವೆ ಶೋಟೈಮ್, ಕಾಕುಡಾ, ಪಿಲ್‌, ವೈಕಿಂಗ್ಸ್ ವಲ್ಹಾಲಾ!

ಭಯಾನಕ, ಹಾಸ್ಯ, ಥ್ರಿಲ್ಲರ್‌, ಆಕ್ಷನ್‌.. ಹೀಗೆಸಾಕಷ್ಟು ನಿರೀಕ್ಷೆಯ ಹಲವಾರು ಸಿನಿಮಾಗಳು ಈ ವಾರದಲ್ಲಿ ಒಟಿಟಿ ತೆರೆ (OTT releases) ಮೇಲೆ ಬರಲಿದೆ. ಸೋನಾಕ್ಷಿ ಸಿನ್ಹಾ, ರಿತೇಶ್ ದೇಶ್ ಮುಖ್ ಅಭಿನಯದ ಕಾಕುಡ, ಇಮ್ರಾನ್ ಹಶ್ಮಿ, ಮೌನಿ ರಾಯ್ ಅಭಿನಯದ ಶೋ ಟೈಮ್- ಭಾಗ 2
ಸೇರಿದಂತೆ ನಾಲ್ಕು ಬಹು ನಿರೀಕ್ಷಿತ ಚಿತ್ರ ಮತ್ತು ಸರಣಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಮನೋರಂಜನೆ ಒದಗಿಸಲಿದೆ.

VISTARANEWS.COM


on

By

OTT releases
Koo

ಭಯಾನಕ, ಹಾಸ್ಯ, ಥ್ರಿಲ್ಲರ್‌, ಆಕ್ಷನ್‌.. ಹೀಗೆ ಈ ವಾರದಲ್ಲಿ ಸಾಕಷ್ಟು ನಿರೀಕ್ಷೆಯ ಹಲವಾರು ಸಿನಿಮಾಗಳು ಒಟಿಟಿಯ ತೆರೆ (OTT releases) ಮೇಲೆ ಬರಲಿವೆ. ಹಳೆಯ ಶೋಗಳ ಹೊಸ ಸೀಸನ್‌ಗಳಿಂದ ಹಿಡಿದು ಹೊಚ್ಚಹೊಸ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲಿವೆ. ಡಿಸ್ನಿಪ್ಲಸ್ ಹಾಟ್‌ಸ್ಟಾರ್ (disney plus hotstar), ಜಿಯೋ ಸಿನಿಮಾ (jio cinema) , ಝೀ 5 (zee 5), ನೆಟ್ ಫ್ಲಿಕ್ಸ್ ನಲ್ಲಿ (netflix) ತೆರೆ ಕಾಣುವ ಚಿತ್ರಗಳ ಸಂಪೂರ್ಣ ವಿವರ ಇಲ್ಲಿದೆ.

ಶೋ ಟೈಮ್- ಭಾಗ 2

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ತೆರೆ ಕಂಡಿರುವ ಈ ಸರಣಿಯಲ್ಲಿ ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಖನ್ನಾ ಪಾತ್ರಧಾರಿ ಇಮ್ರಾನ್ ಹಶ್ಮಿ ಅವರ ಮನೆ ಮೇಲೆ ನಡೆಯುವ ದಾಳಿಯಿಂದ ಅವರು ತೀವ್ರ ಹಿನ್ನಡೆಯನ್ನು ಎದುರಿಸಬೇಕಾಗುತ್ತದೆ. ಭವಿಷ್ಯದ ಅವರ ಯೋಜನೆಗಳು ಅಪಾಯಕ್ಕೆ ಸಿಲುಕಿಸುತ್ತದೆ. ಮೌನಿ ರಾಯ್, ಶ್ರಿಯಾ ಸರನ್ , ರಾಜೀವ್ ಖಂಡೇಲ್ವಾಲ್ ಅವರ ಸಂಬಂಧವು ಸವಾಲುಗಳನ್ನು ಎದುರಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.


ಪಿಲ್

ಜಿಯೋ ಸಿನಿಮಾದಲ್ಲಿ ತೆರೆ ಕಂಡಿರುವ ʼಪಿಲ್‌ʼನಲ್ಲಿ ರಿತೇಶ್ ದೇಶ್‌ಮುಖ್ ಅವರು ಡಾ ಪ್ರಕಾಶ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಫಾರ್ಮಾ ಕಂಪನಿಗಳು, ಮಧ್ಯವರ್ತಿಗಳು ಮತ್ತು ವೈದ್ಯರನ್ನು ಒಳಗೊಂಡಿರುವ ಭ್ರಷ್ಟ ಸಂಬಂಧವನ್ನು ಬಹಿರಂಗಪಡಿಸುತ್ತದೆ. ಸಾಮಾನ್ಯ ವ್ಯಕ್ತಿಯೇ ಇದನ್ನು ತಡೆಯುವ ಭಾರವನ್ನು ಹೊರುತ್ತಾನೆ ಮತ್ತು ಇದರಿಂದ ಅಸಾಧಾರಣ ಸವಾಲುಗಳನ್ನು ಎದುರಿಸುವ ಕಥೆ ಇದಾಗಿದೆ.


ಕಾಕುಡ

ಝೀ 5ನಲ್ಲಿ ಬಿಡುಗಡೆಯಾದ ʼಕಾಕುಡʼ ಉತ್ತರ ಪ್ರದೇಶದ ರಾಥೋಡಿಯಲ್ಲಿ ಚಿತ್ರೀಕರಣಗೊಂಡಿದೆ. ʼಮುಂಜ್ಯಾʼ ಅನಂತರ ಆದಿತ್ಯ ಸರ್ಪೋತದಾರ್ ನಟಿಸಿರುವ ಮತ್ತೊಂದು ಹಾರರ್ ಕಾಮಿಡಿ ಚಿತ್ರ ಇದಾಗಿದೆ. ಕಾಕುಡನ ಕೋಪದಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಪ್ರತಿ ದಿನ ಸಂಜೆ 7.15 ಕ್ಕೆ ಮನೆಯ ಹಿಂಬಾಗಿಲನ್ನು ತೆರೆಯಬೇಕು ಎಂದು ನಿರ್ದೇಶಿಸುವ ವಿಶಿಷ್ಟ ಆಚರಣೆಯನ್ನು ಚಿತ್ರವು ಪರಿಶೋಧಿಸುತ್ತದೆ. ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಿತೇಶ್ ದೇಶಮುಖ್ ಅವರ ವಿಕ್ಟರ್ ಪ್ರೇತ ಬೇಟೆಗಾರ ಪಾತ್ರ ಹಾಸ್ಯದ ಪದರವನ್ನು ಚಿತ್ರದಲ್ಲಿ ಸೇರಿಸಿದೆ.


ಇದನ್ನೂ ಓದಿ: Kung Fu Panda 4 OTT: ಪುಟಾಣಿಗಳ ಫೇವರಿಟ್‌ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!

ವೈಕಿಂಗ್ಸ್: ವಲ್ಹಲ್ಲಾ ಸರಣಿ- 3

ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿರುವ ಈ ಸರಣಿ ಏಳು ವರ್ಷಗಳ ಅನಂತರ ಬಂದಿದೆ. ಹೊಸ ಸವಾಲುಗಳು ಸಂಕಲ್ಪ ಮತ್ತು ಸ್ನೇಹವನ್ನು ಪರೀಕ್ಷಿಸುವ ಕಥೆಯನ್ನು ಇದು ಹೊಂದಿದೆ. ಫ್ರೆಡಿಸ್ ಎರಿಕ್ಸ್‌ಡೋಟರ್ ಪಾತ್ರದಲ್ಲಿ ನಾಯಕ ಪೇಗನ್ ಜೋಮ್ಸ್‌ಬೋರ್ಗ್‌, ಬ್ರಾಡ್ಲಿ ಫ್ರೀಗಾರ್ಡ್ ಕಿಂಗ್ ಕ್ಯಾನೂಟ್ ಆಗಿ, ಲಾರಾ ಬರ್ಲಿನ್ ರಾಣಿ ಎಮ್ಮಾ ಆಗಿ ಮತ್ತು ಡೇವಿಡ್ ಓಕ್ಸ್ ಅರ್ಲ್ ಗಾಡ್ವಿನ್ ಆಗಿ ಕಾಣಿಸಿಕೊಂಡಿದ್ದಾರೆ.


ಒಟ್ಟಿನಲ್ಲಿ ನಾಲ್ಕು ಬಹು ನಿರೀಕ್ಷಿತ ಚಿತ್ರ ಮತ್ತು ಸರಣಿಗಳು ಈ ವಾರ ಒಟಿಟಿಯಲ್ಲಿ ಭರ್ಜರಿ ಮನೋರಂಜನೆ ಒದಗಿಸಲಿವೆ.

Continue Reading
Advertisement
Aadhaar Update
ವಾಣಿಜ್ಯ8 mins ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ23 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ1 hour ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌