ಬೆಂಗಳೂರು : ಮೇಘನ್ ರಾಜ್ ಮತ್ತೆ ಸಿನಿಮಾಗೆ ಬ್ಯಾಕ್ ಆಗಿದ್ದಾರೆ. ಇಂದಿನ ಜನರೇಷನ್ ಪೇರೆಂಟ್ಸ್ ಮತ್ತು ಮಕ್ಕಳ ಲೈಫ್ ಬಗ್ಗೆ ಹೇಳಳಿಕ್ಕೆ ಹೊರಟಿದ್ದಾರೆ ʼಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿʼ ತಂಡ. ಹೌದು ಶಿರ್ಷಿಕೆಯೇ ಗಮನಸೆಳೆಯೋ ಹಾಗೇ ಇದ್ದು, ಇನ್ನೂ ನಿರ್ಮಾಣ ಮಾಡ್ತಿರೋ ಹೊಸ ಸುದ್ದಿ ಕೇಳಿದ್ರೆ ನೀವು ಆಶ್ಚರ್ಯ ಪಡಲೇ ಬೇಕು. 80 ಪೋಷಕರು ತಂಡ ನಿರ್ಮಿಸಿರುವ ಈ ಸಿನಿಮಾ ಕಾಮಿಡಿ ಜೊತೆ ಸಿರಿಯಸ್ ಕಥಾ ಹಂದರ ಹೊಂದಿದೆ.
ಇದನ್ನೂ ಓದಿ :ʼದೇವರ ಪುತ್ರಿʼ ಬಾಲಿವುಡ್ ಎಂಟ್ರಿ?: ಸಾರಾ ತೆಂಡೂಲ್ಕರ್ ಸಿನಿಮಾ ಚರ್ಚೆ
ಈಗಿನ ಮಕ್ಕಳು ಮನೆಯಲ್ಲಿ ಇದ್ದಾಗ ಪೇರೆಂಟ್ಸ್ ಹೆಚ್ಚಾಗಿ ಮೊಬೈಲ್ ನಲ್ಲಿಯೇ ಇರ್ತಾರೆ. ಅದರಿಂದ ಮಕ್ಕಳ ಮೇಲೆ ಆಗೋ ಪರಿಣಾಮ ಕುರಿತು ಇದೆ. ಪ್ರಾರಂಭದಲ್ಲಿ 80 ಜನಕ್ಕೆ ಹೇಳಿದ್ದು, ಕಥೆ ಕೇಳಿ ಸ್ವತಃ ಅವರೇ ಪ್ರೊಡ್ಯೂಸ್ ಮಾಡಲು ಮುಂದಾಗಿರುವುದು ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಹೊಸ ಬೆಳವಣಿಗೆ ಎಂದು ನಿರ್ದೇಶಕ ಹೇಳುತ್ತಾರೆ. ಇದೀಗ ಚಿತ್ರ ಶುಕ್ರವಾರ ಚಿತ್ರಮಂದಿರಕ್ಕೆ ಬರುತ್ತಿದೆ.
ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸುಧಾ ಬರಗೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಮಂತ್ ನಾಗ್ ಸಂಗೀತ ಸಂಯೋಜಿಸಿದ್ದು, ರವೀಂದ್ರ ನಾಥ್ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ : Major : ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಸಿನಿಮಾ ಟ್ರೈಲರ್ ಔಟ್