ಬೆಂಗಳೂರು: ʼಐಪಿಎಸ್ ರಾಗಿಣಿʼ ಎಂದೇ ಖ್ಯಾತಿ ಪಡೆದ ರಾಗಿಣಿ ದ್ವಿವೇದಿ ತಮ್ಮ ಹುಟ್ಟುಹಬ್ಬದ ದಿನದಂದು ಸಂತಸದ ಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಹೊಸ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈವರೆಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಗಿಣಿ ದ್ವಿವೇದಿ ಪ್ರಸ್ತುತ ಸಾರಿ (ಕರ್ಮ ರಿಟರ್ನ್ಸ್) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಾವು ಚಿತ್ರದ ಬಗ್ಗೆ ಮಾತನಾಡುವಾಗ ಅದನ್ನು ಹಾಸ್ಯ, ಮರ್ಡರ್ ಮಿಸ್ಟರಿ, ಪ್ರಣಯ ಅಥವಾ ಭಯಾನಕ ಎಂದು ಕರೆಯುತ್ತೇವೆ. ಆದರೆ ಈ ಚಿತ್ರ ಎಲ್ಲದರ ಸಮ್ಮಿಶ್ರವಾಗಿದೆ. ವಾಸ್ತವವಾಗಿ ಮುಂದಿನದಕ್ಕೆ ಮುನ್ನುಡಿಯಂತೆ ಇದು ಅಲೌಕಿಕತೆಯ ಕುರಿತಾದ ಚಿತ್ರವಾಗಿದೆ ಎನ್ನುತ್ತಾರೆ ರಾಗಿಣಿ.
ವಿದೇಶದಲ್ಲಿ ಅನಿಮೇಷನ್ ನಲ್ಲಿ ಪ್ರತಿಷ್ಠಿತ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕರು ಚಿತ್ರಕ್ಕೆ ಬೆಂಬಲ ನೀಡುತ್ತಿರುವುದರಿಂದ ಇಂಗ್ಲಿಷ್ ನಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಇದನ್ನೂ ಓದಿ |Love Birds: ಸ್ಯಾಂಡಲ್‌ವುಡ್ ರಿಯಲ್ ‘ಲವ್ ಬರ್ಡ್ಸ್’ ಮತ್ತೆ ಪ್ರೇಕ್ಷಕರ ಮುಂದೆ
‘ಇದು ತುಂಬಾ ಮುಖ್ಯವಾದ ವಿಷಯವಾಗಿದೆ. ಶೀರ್ಷಿಕೆಯೇ ಆಸಕ್ತಿದಾಯಕವಾಗಿದೆ. ವಾಸ್ತವವಾಗಿ ಕರ್ಮದ ಮೇಲಿನ ನನ್ನ ನಂಬಿಕೆ ನನ್ನನ್ನು ಈ ಚಿತ್ರಕ್ಕೆ ಸೆಳೆಯಿತು. sorry ಮತ್ತು ‘thank you’ ಪದಗಳು ತುಂಬಾ ಪವರ್ ಫುಲ್ ಮತ್ತು 90 ಪ್ರತಿಶತಕ್ಕಿಂತಲೂ ಹೆಚ್ಚು ಎಂದು ನಾನು ನಂಬುತ್ತೇನೆ. ಅವುಗಳನ್ನು ನಾವು easy ಆಗಿ ಬಳಸುತ್ತೇವೆ. ʼನೀವು ಬಿತ್ತಿದಂತೆ, ನೀವು ಕೊಯ್ಯುತ್ತೀರಿ’ ಎಂಬ ಪರಿಕಲ್ಪನೆ ನಾನು ಅಧ್ಯಾತ್ಮಿಕತೆಯ ಕಡೆಗೆ ತಿರುಗಿದಾಗ ಮತ್ತು ಭಗವದ್ಗೀತೆಯಂತಹ ಪುಸ್ತಕಗಳನ್ನು ಓದಿದಾಗ ನನ್ನ ಅರಿವಿಗೆ ಬಂತು ಎಂದು ರಾಗಿಣಿ ಹೇಳುತ್ತಾರೆ.
ಈ ಚಿತ್ರವನ್ನು ಬ್ರಹ್ಮ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅವರು, ʼʼ2000ನೇ ಇಸವಿಯಿಂದಲೂ ಅನಿಮೇಷನ್ ಹಾಗೂ ವಿಎಫ್‌ಎಕ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕುರಿತು ಕೆಲವರಿಗೆ ತರಗತಿ ಕೂಡ ನೀಡುತ್ತಿದ್ದೇನೆ. ಈ ಮುಂಚೆ ʼಸಿದ್ದಿ ಸೇರೆʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನಗೆ ಎರಡನೇ ಚಿತ್ರ. ಬಹು ಇಷ್ಟವವಾದ ಈ ಚಿತ್ರವನ್ನು ಕ್ರೈಂ ಥ್ರಿಲರ್ ಎನ್ನಬಹುದುʼʼ ಎಂದು ಮಾಹಿತಿ ಹಂಚಿಕೊಂಡರು.
ಕೆನಡಾ ನಿವಾಸಿ ನವೀನ್ ಕುಮಾರ್, ಜೈ ಕೃಪಾನಿ ಮತ್ತು ಜೇನ್ ಜಾರ್ಜ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಬೆಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುಂದಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಛಾಯಾಗ್ರಹಣವನ್ನು ರಾಜೀವ್ ಗಣೇಶನ್ ಮಾಡಿದ್ದಾರೆ.
ಇದನ್ನೂ ಓದಿ | Kushi Motion Poster: ಖುಷಿ ತರುತ್ತಿದೆ ʼಖುಷಿʼ ಚಿತ್ರದ ಮೋಷನ್ ಪೋಸ್ಟರ್