Site icon Vistara News

Actress Kushboo: ಕೇರಳ ದೇಗುಲದಲ್ಲಿ ಖುಷ್ಬೂಗೆ ಪಾದ ಪೂಜೆ; ದೇವಿಯೇ ಇವರನ್ನು ಆರಿಸಿದ್ದಂತೆ!

Actress Kushboo vishnumaya temple

ಬೆಂಗಳೂರು: ಬಹುಭಾಷಾ ನಟಿ ಖುಷ್ಬೂ (Actress Kushboo) ಆಗಾಗ ವಿವಾದದ ಸುದ್ದಿಯಲ್ಲೇ ಮುನ್ನಲೆಗೆ ಬರುತ್ತಲೇ ಇರುತ್ತಾರೆ. ಖುಷ್ಬೂ ಸಿನಿಮಾದಿಂದ ದೂರ ಉಳಿದಿದ್ದು, ಇದೀಗ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲದೇ ನಟಿ ಧಾರ್ಮಿಕ ಕಾರ್ಯಗಳಲ್ಲಿಯೂ ಭಾಗಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕೇರಳದ ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಲ್ಲಿ ಖುಷ್ಬೂಗೆ ನಾರಿ ಪೂಜೆಯನ್ನು ಮಾಡಲಾಗಿದೆ. ಈ ಫೋಟೊಗಳನ್ನು ಖುಷ್ಬೂ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೊಗಳ ಜತೆ ನಟಿ ʻʻದೇವರಿಂದ ದೈವಿಕ ಆಶೀರ್ವಾದ! ತ್ರಿಶೂರ್‌ನ ವಿಷ್ಣುಮಯ ದೇವಸ್ಥಾನದಿಂದ ನಾರಿಪೂಜೆ ಮಾಡಲು ಆಹ್ವಾನಿಸಿದ್ದು ನಾನು ತುಂಬಾ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಆಯ್ಕೆಯಾದವರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ದೇವಿಯೇ ಭಕ್ತರನ್ನು ಆರಿಸುತ್ತಾಳೆ ಎಂದು ಅವರು ನಂಬುತ್ತಾರೆ. ನನಗೆ ಅಂತಹ ಗೌರವವನ್ನು ನೀಡಿ ಆಶೀರ್ವದಿಸಿದ ದೇವಸ್ಥಾನದವರಿಗೆ ನನ್ನ ಕೃತಜ್ಞತೆಗಳುʼʼಎಂದು ಬರೆದುಕೊಂಡಿದ್ದಾರೆ.

ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ನಾರಿ ಪೂಜೆಯನ್ನು ಮಾಡಲಾಗಿದೆ. ಇದು ದೇವಸ್ಥಾನ ನೀತಿ. ಈ ಬಾರಿ ಖುಷ್ಬೂ ಕಾಲು ತೊಳೆದು, ದೇವಿಗೆ ಪೂಜೆ ಸಲ್ಲಿಸುವಂತೆ ನಾರಿ ಪೂಜೆಯನ್ನು ಮಾಡಲಾಗಿದೆ. ಇದೀಗ ನಟಿಯ ಈ ಫೋಟೊಗಳಿಗೆ ನೆಟ್ಟಿಗರು ಮನಬಂದಂತೆ ಕಮೆಂಟ್‌ ಮಾಡಿದ್ದಾರೆ. ಒಬ್ಬರು ʻʻನಟಿ ಯಾವಾಗ ನಾಸ್ತಿಕತೆಯಿದ ಭಕ್ತಲಾದಳು? ತಾನು ನಾಸ್ತಿಕ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಬಿಜೆಪಿಗೆ ಬಂದ ಕೂಡಲೇ ಹಿಂದು ಆಗಿ ಬಿಟ್ಟರಾ?ಅದರಲ್ಲಿ ತಪ್ಪೇನಿಲ್ಲ. ಆದರೆ ಧಾರ್ಮಿಕ ನಂಬಿಕೆಯನ್ನು ಬದಲಾಯಿಸಲು ಆಕೆಗೆ ಕಾರಣವೇನು ಎಂಬ ಕುತೂಹಲ ಮಾತ್ರ ಇದೆ. ಆ ದೇವರೇ ಬಲ್ಲ. ಆದರೆ ಬಿಜೆಪಿ ಪಕ್ಷದ ಸದಸ್ಯ/ಸೆಲೆಬ್ರಿಟಿಯನ್ನು ಆಯ್ಕೆ ಮಾಡುವ ಈ ಪದ್ಧತಿ ಬೂಟಾಟಿಕೆಯ ಪರಮಾವಧಿಯಾಗಿದೆʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ʻʻರಾಜಕೀಯ ಜೀವನಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರು ಹೀಗೆ ಮಾಡಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Udupi Toilet Case : ಖುಷ್ಬೂ ದಾರಿ ತಪ್ಪಿಸಿದ್ರಾ ಆಸ್ಕರ್‌ ಸಂಬಂಧಿ? ; ಬಿಜೆಪಿ ಗಂಭೀರ ಆರೋಪ

ಏನಿದು ನಾರಿ ಪೂಜೆ

ಕೇರಳದಲ್ಲಿ ಹಲವು ಕಡೆ ಮಹಿಳೆಯರನ್ನು ದೇವಿಯೆಂದು ಪರಿಗಣಿಸಿ ಪೂಜೆ ಮಾಡುವ ಪದ್ಧತಿ ಇದೆ. ಇಲ್ಲಿನ ತ್ರಿಶ್ಶೂರ್‌ನಲ್ಲಿರುವ ವಿಷ್ಣುಮಯ ದೇವಸ್ಥಾನದಲ್ಲಿ ಕೂಡ ಇಂತಹದ್ದೇ ಒಂದು ನಂಬಿಕೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ರಣಧೀರ ಮೂಲಕ ಕನ್ನಡ ಜನತೆಗೆ ಪರಿಚಯವಾದ ಖುಷ್ಬೂ, ರವಿಚಂದ್ರನ್ ಜತೆಗೆ ʻಅಂಜದ ಗಂಡುʼ ಸಿನಿಮಾ ಮಾಡಿದ್ದರು. ಇದಾದ ಮೇಲೆ ʻಯುಗಪುರುಷʼ ಸಿನಿಮಾದಲ್ಲೂ ಖುಷ್ಬೂ ಇದ್ದರು. ʻಶಾಂತಿ ಕ್ರಾಂತಿʼ ಸಿನಿಮಾದಲ್ಲೂ ಖುಷ್ಬೂ ನಟಿಸಿದ್ದರು.

Exit mobile version