ಬೆಂಗಳೂರು: ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸುವ ಕುರಿತು ಮಾಡಿದ ಭಾಷಣಕ್ಕಾಗಿ (Actor Dhanush) ಟೀಕೆಗೊಳಗಾದ ನಂತರ ಧನುಷ್ ತಮ್ಮ ಮೊದಲ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕನ ಮಗನಾಗಿದ್ದರೂ ತನ್ನನ್ನು ತಾನು ಹೊರಗಿನವನೆಂದು ಬಿಂಬಿಸಿಕೊಂಡಿದ್ದಕ್ಕಾಗಿ ನಟ ಟೀಕೆಗೆ ಗುರಿಯಾದರು. ಇದೀಗ ನಟ ಈ ಬಗ್ಗೆ ಏನೂ ವ್ಯಕ್ತಪಡಿಸಿದೇ ಇದ್ದರೂ ತಮ್ಮ ಜನ್ಮದಿನ ಹಾಗೂ ʻರಾಯನ್ʼ ಸಿನಿಮಾಗೆ ನೀಡಿದ ಪ್ರೀತಿಗಾಗಿ ಧನ್ಯವಾದಗಳನ್ನು ಸೂಚಿಸಿದರು. ನಟನ ಹುಟ್ಟುಹಬ್ಬದ ಸಮಯದಲ್ಲೇ ಚಿತ್ರ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ.
ನಟ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ “ಪ್ರೇಕ್ಷಕರು, ಚಲನಚಿತ್ರ ಬಂಧುಗಳು, ಸ್ನೇಹಿತರು, ಮಾಧ್ಯಮಗಳು ಮತ್ತು ನನ್ನ ಆಧಾರ ಸ್ತಂಭಗಳಿಗೆ ಧನ್ಯವಾದಗಳು . ನನ್ನ ಅಭಿಮಾನಿಗಳು ಆಶೀರ್ವಾದಳನ್ನು ಧಾರೆಯೆರೆದರು. ನನ್ನ ಹುಟ್ಟುಹಬ್ಬದ ಉಡುಗೊರೆಯಾಗಿದೆ, ”ಎಂದು ಅವರು ಬರೆದಿದ್ದಾರೆ.
ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.
ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಕೂಡ ಇದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇದು ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ A ಸರ್ಟಿಫಿಕೇಟ್ ಪಡೆದುಕೊಂಡಿದೆ.
ಧನುಷ್ (Actor Dhanush) ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ ಭಾರತದಲ್ಲಿ 50 ಕೋಟಿ ರೂ, ಕಲೆಕ್ಷನ್ ಮಾಡಿದೆ.ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಸಿನಿಮಾ ಭರ್ಜರಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: Actor Dhanush: ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್ ಮಾಡಿದ ಧನುಷ್ ನಟನೆಯ ʻ50ʼನೇ ಸಿನಿಮಾ!
ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.