Actor Dhanush: ಮನೆ ಬಗ್ಗೆ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬೆನ್ನಲ್ಲೇ ಹೊಸ ಪೋಸ್ಟ್‌ ಹಂಚಿಕೊಂಡ ನಟ ಧನುಷ್‌! - Vistara News

ಕಾಲಿವುಡ್

Actor Dhanush: ಮನೆ ಬಗ್ಗೆ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬೆನ್ನಲ್ಲೇ ಹೊಸ ಪೋಸ್ಟ್‌ ಹಂಚಿಕೊಂಡ ನಟ ಧನುಷ್‌!

Actor Dhanush: ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.

VISTARANEWS.COM


on

Actor Dhanush Shares FIRST Post After Speech
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪೋಯಸ್ ಗಾರ್ಡನ್‌ನಲ್ಲಿ ಮನೆ ಖರೀದಿಸುವ ಕುರಿತು ಮಾಡಿದ ಭಾಷಣಕ್ಕಾಗಿ (Actor Dhanush) ಟೀಕೆಗೊಳಗಾದ ನಂತರ ಧನುಷ್ ತಮ್ಮ ಮೊದಲ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕನ ಮಗನಾಗಿದ್ದರೂ ತನ್ನನ್ನು ತಾನು ಹೊರಗಿನವನೆಂದು ಬಿಂಬಿಸಿಕೊಂಡಿದ್ದಕ್ಕಾಗಿ ನಟ ಟೀಕೆಗೆ ಗುರಿಯಾದರು. ಇದೀಗ ನಟ ಈ ಬಗ್ಗೆ ಏನೂ ವ್ಯಕ್ತಪಡಿಸಿದೇ ಇದ್ದರೂ ತಮ್ಮ ಜನ್ಮದಿನ ಹಾಗೂ ʻರಾಯನ್‌ʼ ಸಿನಿಮಾಗೆ ನೀಡಿದ ಪ್ರೀತಿಗಾಗಿ ಧನ್ಯವಾದಗಳನ್ನು ಸೂಚಿಸಿದರು. ನಟನ ಹುಟ್ಟುಹಬ್ಬದ ಸಮಯದಲ್ಲೇ ಚಿತ್ರ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ.

ನಟ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ “ಪ್ರೇಕ್ಷಕರು, ಚಲನಚಿತ್ರ ಬಂಧುಗಳು, ಸ್ನೇಹಿತರು, ಮಾಧ್ಯಮಗಳು ಮತ್ತು ನನ್ನ ಆಧಾರ ಸ್ತಂಭಗಳಿಗೆ ಧನ್ಯವಾದಗಳು . ನನ್ನ ಅಭಿಮಾನಿಗಳು ಆಶೀರ್ವಾದಳನ್ನು ಧಾರೆಯೆರೆದರು. ನನ್ನ ಹುಟ್ಟುಹಬ್ಬದ ಉಡುಗೊರೆಯಾಗಿದೆ, ”ಎಂದು ಅವರು ಬರೆದಿದ್ದಾರೆ.

ಜುಲೈ 26 ರಂದು ರಾಯನ್ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ 75 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಚಿತ್ರವನ್ನು ನಿರ್ಮಿಸಿರುವ ಸನ್ ಪಿಕ್ಚರ್ಸ್ ಈ ಚಿತ್ರವನ್ನು ‘ಬ್ಲಾಕ್ ಬಸ್ಟರ್’ ಎಂದು ಘೋಷಿಸಿದೆ. ರಾಯನ್ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದಾರೆ. ಅವರು ನಾಯಕನಾಗಿ ನಟಿಸಿರುವ ಈ ಚಿತ್ರ ಧನುಷ್ ಅವರ 50 ನೇ ಚಿತ್ರವಾಗಿದೆ.

ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಕೂಡ ಇದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇದು ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ A ಸರ್ಟಿಫಿಕೇಟ್‌ ಪಡೆದುಕೊಂಡಿದೆ.

ಧನುಷ್ (Actor Dhanush) ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್‌ ಆಗಿ ಭಾರತದಲ್ಲಿ 50 ಕೋಟಿ ರೂ, ಕಲೆಕ್ಷನ್‌ ಮಾಡಿದೆ.ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಸಿನಿಮಾ ಭರ್ಜರಿ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್‌ ಆದ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: Actor Dhanush: ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್‌ ಮಾಡಿದ ಧನುಷ್‌ ನಟನೆಯ ʻ50ʼನೇ ಸಿನಿಮಾ!

ಸದ್ಯ ‘ಕುಬೇರ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸೂಟಿಂಗ್‌ ಮುಕ್ತಾಯವಾಗುವ ನಿರೀಕ್ಷೆಯಿದೆ. ‘ಕುಬೇರ’ ತ್ರಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಣವಾಗುತ್ತಿದೆ.ʻಕುಬೇರ’ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ, ಇದನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸ್ಯಾಂಡಲ್ ವುಡ್

Actor Upendra : ಕೂಲಿ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ತಲೈವಾ ಜತೆಗೆ ರಿಯಲ್ ಸ್ಟಾರ್; ಕಲೀಷ ಪಾತ್ರದಲ್ಲಿ ಮಿಂಚಲಿರುವ ಉಪೇಂದ್ರ

Actor Upendra : ಸೂಪರ್‌ ಸ್ಟಾರ್‌ ತಲೈವಾ ರಜಿನಿಕಾಂತ್‌ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ ಮಿಂಚಲಿದ್ದಾರೆ. ಕೂಲಿ ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

By

Real Star Upendra Acting with Superstar Rajinikanth Coolie Movie
Koo

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಸಿನಿಮಾ ಕೂಲಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯಿಸಲಿದ್ದಾರೆ. ಈ ಕುರಿತು ಉಪೇಂದ್ರ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ಕೂಲಿ ಸಿನಿಮಾವು ತಮಿಳು, ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರಲಿದೆ. ಲೋಕೇಶ್ ಕನಕರಾಜ್‌ ಡೈರೆಕ್ಷನ್‌ನಲ್ಲಿ ಕೂಲಿ ಸಿನಿಮಾ ಮೂಡಿಬರುತ್ತಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ತಲೈವಾ ರಜನಿಕಾಂತ್‌ ಅವರ 171ನೇ ಸಿನಿಮಾ ಕೂಲಿ ಆಗಿದೆ. ಜೈಲರ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸನ್ ಪಿಕ್ಚರ್ಸ್ ಕೂಲಿಯನ್ನು ನಿರ್ಮಿಸಲಿದೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ರಜನಿಕಾಂತ್‌ ಮತ್ತು ಲೋಕೇಶ್ ಕನಕರಾಜ್‌ ಕಾಂಬಿನೇಷನ್‌ನ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ಸೂಪರ್‌ ಸ್ಟಾರ್‌ ಉಪೇಂದ್ರ ನಟಿಸಲಿದ್ದಾರೆ.

ಈ ಕುರಿತು ಉಪೇಂದ್ರ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೂಲಿ ಸಿನಿಮಾದ ಪೋಸ್ಟರ್‌ ಹಾಕಿ ತಿಳಿಸಿದ್ದಾರೆ. ತಲೈವಾ ರಜಿನಿಕಾಂತ್‌ ನಟನೆಯ ಕೂಲಿ ಚಿತ್ರದಲ್ಲಿ ಉಪೇಂದ್ರ ಕಲೀಷ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

Real Star Upendra Acting with Superstar Rajinikanth Coolie Movie
Real Star Upendra Acting with Superstar Rajinikanth Coolie Movie

ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್‌ ಸ್ಟಾರ್‌ ರಜಿನಿ ಸರ್‌ ಜತೆಗೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಫೀಲಿಂಗ್‌‌ ಬ್ಲೆಸ್ಡ್ ಅಂತ ಲೋಕೇಶ್‌ ಕನಕರಾಜ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Continue Reading

ಸಿನಿಮಾ

Bijili Ramesh: ತಮಿಳು ಹಾಸ್ಯ ನಟ ಬಿಜಿಲಿ ರಮೇಶ್ ನಿಧನ

ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತಮಿಳು ಚಿತ್ರದ ಹಾಸ್ಯ ನಟ ಬಿಜಿಲಿ ರಮೇಶ್ (Bijili Ramesh) ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ವಾರಗಳಲ್ಲಿ ಅವರ ಸ್ಥಿತಿ ಹದಗೆಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಪತ್ರೆಯಿಂದ ಮನೆಗೆ ಮರಳಿದ್ದು, ಮನೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

VISTARANEWS.COM


on

By

Bijili Ramesh
Koo

ಚೆನ್ನೈ: ತಮಿಳು ನಟ (Tamil Actor) ಬಿಜಿಲಿ ರಮೇಶ್ (Bijili Ramesh) ಅವರು ದೀರ್ಘಕಾಲದ ಅನಾರೋಗ್ಯದಿಂದ ಆಗಸ್ಟ್ 26ರಂದು ರಾತ್ರಿ ಚೆನ್ನೈನಲ್ಲಿ (chennai) ನಿಧನರಾದರು. ಲಿವರ್ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ 46 ವಯಸ್ಸಾಗಿತ್ತು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.

ಬಿಜಿಲಿ ರಮೇಶ್ ಅವರು ಮಲಗಿದ್ದಾಗ ಹಠಾತ್ತನೆ ನಿಧನರಾದರು. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ವಾರಗಳಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಬಿಜಿಲಿ ರಮೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಚೆನ್ನೈನ ಎಂಜಿಆರ್ ನಗರದ ಬಳಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಜನಪ್ರಿಯ ಯೂಟ್ಯೂಬರ್‌ಗಳಾದ ವಿಜೆ ಸಿದ್ದು ಮತ್ತು ರಾಮ್ ನಿಶಾಂತ್ ಅವರನ್ನು ಒಳಗೊಂಡ ಹಾಸ್ಯ ವಿಡಿಯೋ ಅವರಿಗೆ ಜನಪ್ರಿಯತೆ ತಂದುಕೊಟ್ಟತ್ತು. ಇದು ಅಂತಿಮವಾಗಿ ಕೆಲವು ಚಿತ್ರಗಳಲ್ಲಿ ಅವರಿಗೆ ಪಾತ್ರಗಳನ್ನು ನೀಡಿತು.
ನಯನತಾರಾ ನಟಿಸಿದ ನೆಲ್ಸನ್ ದಿಲೀಪ್‌ಕುಮಾರ್ ಅವರ ಚೊಚ್ಚಲ ಚಿತ್ರ ಕೊಲಮಾವು ಕೋಕಿಲದ ಪ್ರಚಾರ ಗೀತೆ ‘ಕಬಿಸ್ಕಬಾ ಕೋಕೋ’ ಸಂಗೀತ ವಿಡಿಯೋದ ಮೂಲಕ ಬಿಜಿಲಿ ರಮೇಶ್ ಚಿತ್ರರಂಗಕ್ಕೆ ಪ್ರವೇಶಿಸಿದರು.

ಹಲವಾರು ಟಿವಿ ಶೋಗಳ ಜೊತೆಗೆ ಸಿವಪ್ಪು ಮಂಜಲ್ ಪಚೈ (2019), ಆದೈ (2019) ಮತ್ತು ಕಾತು ವಾಕುಲಾ, ಕಾದಲ್ (2022) ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದ ಅವರ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಅವರ ಕುಟುಂಬವು ಚಲನಚಿತ್ರ ಸಮುದಾಯದಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿತು. ಬಳಿಕ ಸಹೋದ್ಯೋಗಿಗಳಿಂದ ಹಣಕಾಸಿನ ನೆರವು ಪಡೆದಿದ್ದರು.

ಇದನ್ನೂ ಓದಿ: Mohanlal: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ

Bijili Ramesh
Bijili Ramesh

ಯೂಟ್ಯೂಬ್‌ನಲ್ಲಿ ಸಂದರ್ಶನವೊಂದರಲ್ಲಿ ಅವರು ತಮ್ಮ ಕಾಯಿಲೆಯ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೇ ಬಹಿರಂಗಪಡಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಯಾಗಿದ್ದ ಬಿಜಿಲಿ ರಮೇಶ್ ಅವರಿಗೆ ರಜನಿಕಾಂತ್ ಜತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲವಿತ್ತು. ಕೊನೆಗೂ ಅವರ ಈ ಕನಸು ನನಸಾಗಲೇ ಇಲ್ಲ.

ಕಾಯಿಲೆಯ ಬಗ್ಗೆ ಪತ್ನಿ ಹೇಳಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಜಿಲಿ ರಮೇಶ್ ಅವರ ಪತ್ನಿ, ಮದ್ಯಪಾನದಿಂದಾಗಿ ಅವರ ಲಿವರ್ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ತಿಂಗಳವರೆಗೆ ಚೆನ್ನಾಗಿಯೇ ಇದ್ದರು. ಮೊದಲು ಓಮಂದೂರಾರ್ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆಗ ಯಕೃತ್ತು ಮತ್ತು ಕಾಮಾಲೆ ಇರುವುದು ಪತ್ತೆಯಾಯಿತು. ಅನಂತರ ಅವರನ್ನು 10 ದಿನಗಳ ಕಾಲ ಚಿಕಿತ್ಸೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಜೀವವನ್ನು ಉಳಿಸಲು ವೈದ್ಯರಿಗೆ ಬೇಡಿಕೊಂಡೆವು. ಎಷ್ಟು ಸಾಧ್ಯವೋ ಅಷ್ಟು ನೋಡುತ್ತಿದ್ದೇವೆ. ದೇವರನ್ನು ಹೆಚ್ಚು ಪ್ರಾರ್ಥಿಸಿ. ಲಿವರ್ ಕಸಿ ಮಾಡಬೇಕು. ಇನ್ನೊಂದು ಲಿವರ್ ಸಿಕ್ಕರೂ ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಖಾಸಗಿಯಾಗಿ ಮಾಡಿದರೆ 60 ಲಕ್ಷ ರೂ. ವರೆಗೆ ಬಿಲ್ ಬರುತ್ತಿತ್ತು. ಆ ಮಟ್ಟಿಗೆ ನಮಗೆ ಯಾವುದೇ ಸೌಲಭ್ಯವಿಲ್ಲ. ಅವರಿಲ್ಲದೆ ಹೇಗೆ ಬದುಕಬೇಕು ಎಂಬುದು ಗೊತ್ತಾಗುತ್ತಿಲ್ಲ. ಮಗನನ್ನ ನಾನೇ ನೋಡಿಕೊಳ್ಳಬೇಕು ಎಂದಿದ್ದರು.

Continue Reading

ಕಾಲಿವುಡ್

Vettaiyan VS Kanguva: ರಜನಿಕಾಂತ್ ಹೊಸ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌; ʻಕಂಗುವʼ ಜತೆ ಕ್ಲ್ಯಾಶ್‌!

Vettaiyan VS Kanguva: ರಜನಿಕಾಂತ್ ಅಭಿನಯದ ಟಿಜೆ ಜ್ಞಾನವೇಲ್ ಅವರ ಕಾಪ್ ಡ್ರಾಮಾ `ವೆಟ್ಟೈಯಾನ್’ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಅದೇ ವಾರದಲ್ಲಿ ಅಕ್ಟೋಬರ್ 10 ರಂದು ಸೂರ್ಯ ಅಭಿನಯದ ಕಂಗುವ ರಿಲೀಸ್‌ ಆಗುತ್ತಿದೆ. ಈ ಎರಡೂ ಸಿನಿಮಾಗಳು ಕ್ಲಾಶ್‌ ಆಗೋದು ಪಕ್ಕಾ ಆದಂತಿದೆ.

VISTARANEWS.COM


on

Vettaiyan VS Kanguva Vettaiyan to clash with Suriya's Kanguva
Koo

ಬೆಂಗಳೂರು: ಎರಡು ತಮಿಳು ಚಿತ್ರಗಳು ದಸರಾಕ್ಕೆ ಮುನ್ನ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ ಎಂದು ಅಭಿಮಾನಿಗಳು (Vettaiyan VS Kanguva) ಊಹಿಸಿದ್ದಾರೆ. ಈಗ, ಲೈಕಾ ಪ್ರೊಡಕ್ಷನ್ಸ್, ರಜನಿಕಾಂತ್ ಅಭಿನಯದ ಟಿಜೆ ಜ್ಞಾನವೇಲ್ ಅವರ ಕಾಪ್ ಡ್ರಾಮಾ `ವೆಟ್ಟೈಯಾನ್‘ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಅದೇ ವಾರದಲ್ಲಿ ಅಕ್ಟೋಬರ್ 10 ರಂದು ಸೂರ್ಯ ಅಭಿನಯದ ಕಂಗುವ ರಿಲೀಸ್‌ ಆಗುತ್ತಿದೆ. ಈ ಎರಡೂ ಸಿನಿಮಾಗಳು ಕ್ಲಾಶ್‌ ಆಗೋದು ಪಕ್ಕಾ ಆದಂತಿದೆ.

ಲೈಕಾ ಪ್ರೊಡಕ್ಷನ್ಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ವೆಟ್ಟೈಯನ್ ಬಿಡುಗಡೆ ದಿನಾಂಕದ ಜೊತೆಗೆ ಪೊಲೀಸ್ ಸಮವಸ್ತ್ರದಲ್ಲಿ ಇರುವ ರಜನಿಕಾಂತ್ ಅವರ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ. “ಟಾರ್ಗೆಟ್ ಲಾಕ್ಡ್ ವೆಟ್ಟೈಯಾನ್ ಅಕ್ಟೋಬರ್ 10, 2024 ರಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬೇಟೆಯಾಡಲು ಸಿದ್ಧವಾಗಿದೆ! ಸೂಪರ್‌ಸ್ಟಾರ್ ಸೂಪರ್‌ಕಾಪ್ ಆಗಿ! ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ!” ಎಂದು ಬರೆದುಕೊಂಡಿದೆ.

ರಜನಿಕಾಂತ್ ಅವರ 170 ನೇ ಚಿತ್ರವಾಗಿರುವ ವೆಟ್ಟೈಯಾನ್, ಅಮಿತಾಭ್‌ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ರಜನಿಕಾಂತ್ ಮತ್ತು ಅಮಿತಾಭ್‌ ಅವರ 1991 ರ ಬಾಲಿವುಡ್ ಚಲನಚಿತ್ರ ʻಹಮ್ʼ ನಂತರ 33 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಒಂದಾಗಿದ್ದಾರೆ.

ಇದನ್ನೂ ಓದಿ: Vinay Rajkumar: ಪೆಪೆ ಟ್ರೈಲರ್ ಔಟ್‌; ವಿನಯ್‌ ರಾಜ್‌ಕುಮಾರ್ ಸಿನಿಮಾ ಹಿಟ್‌ ಗ್ಯಾರಂಟಿ ಅಂದ್ರು ಫ್ಯಾನ್ಸ್‌!

ಕಂಗುವ ಜತೆ ಕ್ಲ್ಯಾಶ್‌

ಸ್ಟುಡಿಯೋ ಗ್ರೀನ್ ನಿರ್ಮಿಸಿದ, ʻಕಂಗುವʼ 1,500 ವರ್ಷಗಳ ಹಿಂದಿನ ಕಥಾಹಂದರವನ್ನು ಒಳಗೊಂಡಿದೆ. ಬಾಬಿ ಡಿಯೋಲ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ತಾರಾಗಣದಲ್ಲಿ ದಿಶಾ ಪಟಾನಿ, ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ ಮತ್ತು ಆನಂದ ಕೂಡ ಇದ್ದಾರೆ.

ನಿರ್ಮಾಪಕರು ಇತ್ತೀಚೆಗೆ ಚಿತ್ರದ ಟ್ರೈಲರ್‌ ಅನಾವರಣಗೊಳಿಸಿದರು.ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಅಮೆಜಾನ್‌ ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ. ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.ಕಂಗುವ ಅಕ್ಟೋಬರ್ 10ರಂದು ಥಿಯೇಟರ್‌ಗಳಿಗೆ ಬರಲಿದೆ.

Continue Reading

ಕಾಲಿವುಡ್

70th National Film Awards : ರಾಷ್ಟ್ರ ಪ್ರಶಸ್ತಿ ಗೆದ್ದ ಬಳಿಕ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ಹೀಗೆ!

70th National Film Awards : ಇದೀಗ ನಟಿ ಪ್ರಶಸ್ತಿ ವಿಚಾರವಾಗಿ ಸಂತಸ ಹಂಚಿಕೊಂಡಿದ್ದಾರೆ. ʻʻಪ್ರಶಸ್ತಿಗಳನ್ನು ಘೋಷಿಸುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. ನಾನು ಅವಾರ್ಡ್ ಬರುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಈ ವಿಚಾರ ಖುಷಿ ತಂದಿದೆ’ ಎಂದು ಅವರು ಹೇಳಿದ್ದಾರೆ.

VISTARANEWS.COM


on

70th National Film Awards Nithya Menen REACTS For 1st Time
Koo

ಬೆಂಗಳೂರು: 2022 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ 70 ನೇ ವಾರ್ಷಿಕ ರಾಷ್ಟ್ರೀಯ ಚಲನಚಿತ್ರ (70th National Film Awards) ಪ್ರಶಸ್ತಿಗಳನ್ನು ಆಗಸ್ಟ್ 16 ರಂದು ಘೋಷಿಸಲಾಯಿತು. ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ, ನಿತ್ಯಾ ಮೆನೆನ್ ಮತ್ತು ಮಾನಸಿ ಪರೇಖ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ನಿತ್ಯಾ ತಿರುಚಿತ್ರಂಬಲಂ (ತಮಿಳು) ಚಿತ್ರಕ್ಕಾಗಿ ಗೆದ್ದರೆ, ಮಾನಸಿ ಕಚ್ ಎಕ್ಸ್‌ಪ್ರೆಸ್ (ಗುಜರಾತಿ) ಸಿನಿಮಾಗಾಗಿ ಪ್ರಶಸ್ತಿ ಪಡೆದರು.

ಇದೀಗ ನಟಿ ಪ್ರಶಸ್ತಿ ವಿಚಾರವಾಗಿ ಸಂತಸ ಹಂಚಿಕೊಂಡಿದ್ದಾರೆ. ʻʻಪ್ರಶಸ್ತಿಗಳನ್ನು ಘೋಷಿಸುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. ನಾನು ಅವಾರ್ಡ್ ಬರುತ್ತದೆ ಎಂದು ಊಹಿಸಿರಲಿಲ್ಲ. ನನಗೆ ಈ ವಿಚಾರ ಖುಷಿ ತಂದಿದೆ’ ಎಂದು ಅವರು ಹೇಳಿದ್ದಾರೆ.

‘ತಿರುಚಿತ್ರಂಬಲಂ’ ಚಿತ್ರದಿಂದ ನನಗೆ ಅವಾರ್ಡ್ ಸಿಕ್ಕಿದ್ದು ಹೆಮ್ಮೆ ತಂದಿದೆ. ಈ ಸಿನಿಮಾನ ಮಾಡುವಾಗ ಹಾಗೂ ನೋಡುವಾಗ ಖುಷಿ ಕೊಟ್ಟಿದೆ. ನಾನು ಪ್ರಶಸ್ತಿಗೆ ಅರ್ಹ’ ಎಂದಿದ್ದಾರೆ ಅವರು.

ಆಗಸ್ಟ್ 2022 ರಲ್ಲಿ ಹೊರಬಂದ ತಿರುಚಿತ್ರಂಬಲಂ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿ ಹೊರಹೊಮ್ಮಿತು. ನಟರಾದ ಮಾನಸಿ ಪರೇಖ್ ಮತ್ತು ಧನುಷ್ ಅವರಿಗೆ ಅಪಾರ ಪ್ರಶಂಸೆಯನ್ನು ಗಳಿಸಿತು. ಕೇವಲ 30 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿತು.ಪ್ರಕಾಶ್ ರಾಜ್ ಹಾಗೂ ಧನುಷ್ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಕಮಾಲ್ ಮಾಡಿದ್ದರು. ಅಪ್ಪ ಮಗನಾಗಿ ಪ್ರೇಕ್ಷಕರನ್ನು ರಂಜಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ನಿತ್ಯಾ ಮೆನನ್ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ.

ಇದನ್ನೂ ಓದಿ: Kundapura Kannada Habba: ನನ್ನ ಸಿನಿಮಾ ಕಥೆಗಳಿಗೆ ಊರು, ಯಕ್ಷಗಾನವೇ ಪ್ರೇರಣೆ; ರಿಷಬ್ ಶೆಟ್ಟಿ

70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024 ಶುಕ್ರವಾರ ಘೋಷಣೆಯಾಗಿದ್ದು (70th National Film Awards) ಮಲಯಾಳಂ ಚಿತ್ರ ‘ಆಟಂ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿtftu. ‘ಉಂಚೈ’ ಚಿತ್ರದ ನಿರ್ದೇಶನಕ್ಕಾಗಿ ಸೂರಜ್ ಬರ್ಜಾತ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1’, ‘ಕೆಜಿಎಫ್ 2’, ‘ಬ್ರಹ್ಮಾಸ್ತ್ರ ‘ಮತ್ತು ‘ಅಪರಾಜಿತೋ’ ಚಿತ್ರಗಳು ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದ ಇತರ ಚಿತ್ರಗಳಾಗಿವೆ.

1954 ರಲ್ಲಿ ಮೊದಲ ಬಾರಿಗೆ ನೀಡಲು ಅರಂಭಿಸಿದ ಈ ಪ್ರಶಸ್ತಿ 70ನೇ ಆವೃತ್ತಿ ಇದಾಗಿದೆ. ಆ ವರ್ಷಗಳಲ್ಲಿ, ವಿವಿಧ ಪ್ರಾದೇಶಿಕ ಭಾಷೆಗಳ ಅತ್ಯುತ್ತಮ ಚಲನಚಿತ್ರಗಳನ್ನು ಮಾತ್ರ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿತ್ತು. . ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ಮೊದಲ ಬಾರಿಗೆ 1967 ರಲ್ಲಿ ನೀಡಲಾಯಿತು. ‘ರಾತ್ ಔರ್ ದಿನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ನರ್ಗಿಸ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೊದಲ ನಟಿಯಾಗಿದ್ದಾರೆ. ಅದೇ ವರ್ಷ ‘ಆಂಟನಿ ಫೈರಿಂಗ್’ ಮತ್ತು ‘ಚಿರಿಯಾಖಾನಾ’ ಚಿತ್ರಗಳಿಗಾಗಿ ಉತ್ತಮ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು.

2023 ರಲ್ಲಿ, ಪುಷ್ಪಾ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರೆ, ‘ಗಂಗೂಬಾಯಿ ಕಾಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Continue Reading
Advertisement
Temporary additional coaches to be attached to 34 trains for Dasara 2024
ಬೆಂಗಳೂರು23 ನಿಮಿಷಗಳು ago

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ

Theft case
ಬೆಂಗಳೂರು41 ನಿಮಿಷಗಳು ago

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು

Also test the prasadam of the holy places of the state Pralhad Joshi urges state government
ಬೆಂಗಳೂರು3 ಗಂಟೆಗಳು ago

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ

Road Accident
ಬೆಂಗಳೂರು4 ಗಂಟೆಗಳು ago

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ!

Road Accident
ಕೋಲಾರ5 ಗಂಟೆಗಳು ago

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು

Good news for the children of yellow board drivers Do this to get a scholarship under Vidyanidhi
ಬೆಂಗಳೂರು ಟೆಕ್ ಸಮ್ಮಿಟ್5 ಗಂಟೆಗಳು ago

Students Scholarship : ಯೆಲ್ಲೋ ಬೋರ್ಡ್‌ ವಾಹನ ಚಾಲಕರ ಮಕ್ಕಳಿಗೆ ಗುಡ್‌ ನ್ಯೂಸ್‌; ವಿದ್ಯಾನಿಧಿಯಡಿ ಸ್ಕಾಲರ್‌ಶಿಪ್‌ ಪಡೆಯಲು ಹೀಗೆ ಮಾಡಿ

allegations of rape honeytrap Mla Munirathna arrested again by Kaggalipura police as soon as he came out of jail
ರಾಜಕೀಯ6 ಗಂಟೆಗಳು ago

MLA Muniratna: ಅತ್ಯಾಚಾರ, ಹನಿಟ್ರ್ಯಾಪ್‌ ಆರೋಪ; ಜೈಲಿನಿಂದ ಹೊರಬರುತ್ತಿದ್ದಂತೆ ಶಾಸಕ ಮುನಿರತ್ನ ಮತ್ತೆ ಅರೆಸ್ಟ್‌

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya : ಈ ರಾಶಿಯವರು ಇಂದು ದೊಡ್ಡ ಯೋಜನೆಯತ್ತ ಗಮನ ಹರಿಸುವಿರಿ

MCC Seat Retention, Opportunity to Cancel KEA Seat Deadline to Cancel Seats by 11 AM on September 20
ಬೆಂಗಳೂರು22 ಗಂಟೆಗಳು ago

KEA : ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ; ಸೀಟು ರದ್ದು ಪಡಿಸಿಕೊಳ್ಳಲು ನಾಳೆವರೆಗೂ ಗಡುವು

Innovative technologies have revolutionized patients with heart valve disorder
ಬೆಂಗಳೂರು22 ಗಂಟೆಗಳು ago

World Heart Day: ಹೃದಯ ಕವಾಟ ಅಸ್ವಸ್ಥತೆ ಹೊಂದಿರುವ ರೋಗಿಗಳ ಪಾಲಿಗೆ ನವೀನ ತಂತ್ರಜ್ಞಾನಗಳು ವರದಾನ

Kannada Serials
ಕಿರುತೆರೆ11 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್3 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ4 ವಾರಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 ತಿಂಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 ತಿಂಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 ತಿಂಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 ತಿಂಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 ತಿಂಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌