Site icon Vistara News

Bigg Boss Tamil 8: ಬಿಗ್‌ ಬಾಸ್‌ನಿಂದ ಕಮಲ್‌ ಹಾಸನ್‌ ಔಟ್‌ ಆದ ಬೆನ್ನಲ್ಲೇ ಈ ಸ್ಟಾರ್‌ ನಟ ಎಂಟ್ರಿ?

Bigg Boss Tamil 8 replaced Kamal Haasan for Bigg Boss.

ಬೆಂಗಳೂರು: ತಮಿಳು ಬಿಗ್‌ ಬಾಸ್‌ ಶೀಘ್ರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಆದರೆ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಕಮಲ್‌ ಹಾಸನ್‌ (Bigg Boss Tamil 8) ಮಾಡುತ್ತಿಲ್ಲ. ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊರಲು ಸಾಧ್ಯ ಇಲ್ಲ ಅಂದಿದ್ದಾರೆ. ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ. ಹೀಗೆ ಕಮಲ್ ಹಾಸನ್ ಆ ಮನೆಯಿಂದ ನಿರ್ಗಮಿಸಿದ ಬೆನ್ನಲ್ಲಿಯೇ, ಕಮಲ್ ಜಾಗವನ್ನು ಬಿಗ್ ಬಾಸ್ ನಲ್ಲಿ ತುಂಬುವ ಕಲಾವಿದ ಯಾರು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಇದೀಗ ಸ್ಟಾರ್‌ ಒಬ್ಬರ ಹೆಸರು ಸಖತ್‌ ವೈರಲ್‌ ಆಗುತ್ತಿದೆ.

ವಿಜಯ್ ಮತ್ತು ಅಜಿತ್ ಹೊರತು ಪಡಿಸಿದರೆ, ಬಿಗ್‌ ಬಾಸ್‌ ಕಾರ್ಯಕ್ರಮವನ್ನು ನೆರವೇರಿಸುವ ಶಕ್ತಿ ಇರುವುದು ರಜನಿಕಾಂತ್‌ ಅವರಿಗೆ ಮಾತ್ರ. ಇದೀಗ ಆದರೆ, ವಯಸ್ಸು ಸೇರಿ ಆರೋಗ್ಯದ ಸಮಸ್ಯೆಗಳು ಇದಕ್ಕೆ ಅಡ್ಡಗಾಲು ಆಗಿವೆ. ಈ ಕಾರಣಕ್ಕೆ ಬಿಗ್ ಬಾಸ್ ಉಸ್ತುವಾರಿಯನ್ನು, ವಿಜಯ್ ಸೇತುಪತಿ ಅವರ ಹೆಗಲಿಗೆ ವಹಿಸುವ ಕಸರತ್ತು ತಮಿಳುನಾಡಿನ ಕಿರುತೆರೆ ಲೋಕದಲ್ಲಿ ಶುರುವಾಗಿದೆ. ಇನ್ನೂ ವಿಜಯ್ ಸೇತುಪತಿ ಕೇವಲ ನಾಯಕನ ಪಾತ್ರಕ್ಕೆ ಸೀಮಿತವಾದವರಲ್ಲ. ಪಾತ್ರ ಯಾವುದೇ ಇದ್ದರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಹೊಂದಿರುವವರು. ಒಂದು ಅರ್ಥದಲ್ಲಿ ವರ್ಷ ಪೂರ್ತಿ ಬ್ಯುಸಿಯಾಗಿರುವವರು ವಿಜಯ್ ಸೇತುಪತಿ.

ಉಳಿದಂತೆ ವಿಜಯ್ ಸೇತುಪತಿ ಹೊರತು ಪಡಿಸಿದರೆ ಸಿಲಂಬರಸನ್ ಅಲಿಯಾಸ್ ಸಿಂಬು ಬಿಗ್ ಬಾಸ್ ನಿರೂಪಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಸಿಂಬು ಬಿಗ್ ಬಾಸ್ ಅಲ್ಟಿಮೇಟ್ ಓಟಿಟಿ ಸೀಸನ್ ನಿರೂಪಣೆ ಮಾಡಿದ ಕಾರಣದಿಂದ ಸಿಂಬು ಒಪ್ಪಿಕೊಂಡರು ಒಪ್ಪಿಕೊಳ್ಳಬಹುದು ಎಂದು ವರದಿಯಾಗಿದೆ.

ಇದನ್ನೂ ಓದಿ: Bigg Boss Tamil 8: ಬಿಗ್​ ಬಾಸ್​ ಸೀಸನ್ 8​ರ ಹೋಸ್ಟ್​ ನಾನಲ್ಲ ಎಂದ ಕಮಲ್‌ ಹಾಸನ್‌; ಕಾರಣ ಬಿಚ್ಚಿಟ್ಟ ನಟ!

ಹಮಲ್‌ ಹಾಸನ್‌ ಕೊಟ್ಟ ಕಾರಣವೇನು?

“ಆತ್ಮೀಯ ವೀಕ್ಷಕರೇ, ಭಾರವಾದ ಹೃದಯದಿಂದ, 7 ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಪ್ರಯಾಣದಿಂದ ನಾನು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಸಿನಿಮಾಗಳ ಕಮಿಟ್‌ಮೆಂಟ್‌ನಿಂದಾಗಿ ಬಿಗ್ ಬಾಸ್ ತಮಿಳಿನ ಮುಂಬರುವ ಸೀಸನ್‌ಗೆ ಹೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. .”
ನಿಮ್ಮ ಮನೆಗಳಲ್ಲಿ ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆ ಎರೆದಿದ್ದೀರಿ, ಅದಕ್ಕಾಗಿ ನಿಮಗೆ ನನ್ನ ಚಿರ ಕೃತಜ್ಞತೆ ಇದೆ. ಇಲ್ಲಿ ನಾನು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಸ್ಪರ್ಧಿಗಳಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಕೊನೆಯದಾಗಿ, ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಜೊತೆಗೆ ಈ ಉದ್ಯಮವನ್ನು ಒಂದು ದೊಡ್ಡ ಯಶಸ್ಸನ್ನು ಮಾಡುವಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಕಮಲ್ ಹಾಸನ್ ಅವರು 2007 ರಲ್ಲಿ ‘ಬಿಗ್ ಬಾಸ್ ತಮಿಳು’ ನಿರೂಪಣೆ ಮಾಡಿದರು.ನಟ ‘ಬಿಗ್ ಬಾಸ್ ತಮಿಳು’ ನ ಪ್ರತಿ ಸೀಸನ್ ಅನ್ನು ನಿರಂತರವಾಗಿ ಹೋಸ್ಟ್ ಮಾಡಿದ್ದಾರೆ. ‘ಬಿಗ್ ಬಾಸ್ ತಮಿಳು 8’ ಹೊಸ ಹೋಸ್ಟ್ ಯಾರೆಂದು ಇನ್ನೂ ಘೋಷಿಸಲಾಗಿಲ್ಲ.

ಕಳೆದ ಸೀಸನ್‌ನಲ್ಲಿ ವಿಶೇಷ ಎಂದರೆ ಅರ್ಚನಾ ರವಿಚಂದ್ರನ್ ಅವರು ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು. ಇದೀಗ ವೈಲ್ಡ್ ಕಾರ್ಡ್ ಮೂಲಕ ಬಂದು ಚಾಂಪಿಯನ್‌ ಆಗುವ ಮೂಲಕ ಅವರು ಅಪರೂಪದ ಸಾಧನೆ ಮಾಡಿದ್ದರು.  ಇನ್ನು ಡ್ಯಾನ್ಸರ್‌ ಮಾಯಾ ಕೃಷ್ಣನ್‌ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದರು. ಮತ್ತೋರ್ವ ವೈಲ್ಡ್ ಕಾರ್ಡ್ ಎಂಟ್ರಿ ದಿನೇಶ್ ಮೂರನೇ ರನ್ನರ್ ಅಪ್ ಆಗಿದ್ದರು.

Exit mobile version