Site icon Vistara News

Kamal Haasan: ಇಂದೇ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ ಕಮಲ್ ಹಾಸನ್ ನಟನೆಯ ʻಇಂಡಿಯನ್’ ಸಿನಿಮಾ?

Kamal Haasan Indian cinema release OTT today

ಬೆಂಗಳೂರು: “ಇಂಡಿಯನ್ 2,” ಎಸ್. ಶಂಕರ್ ನಿರ್ದೇಶನದ ಸಿನಿಮಾ. ನಟ ಕಮಲ್ ಹಾಸನ್ ಅವರ ಇತ್ತೀಚಿನ ಚಿತ್ರ, ಇಂಡಿಯನ್‌ 2 (Indian 2 box office) ಅಂತಿಮವಾಗಿ ಶುಕ್ರವಾರ (ಜು. 12) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ‘ಇಂಡಿಯನ್ 2’ ಸಿನಿಮಾ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಸಿನಿಮಾ ಹುಸಿ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ.  ಇಂಡಿಯನ್ 2ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೀಗ ‘ಇಂಡಿಯನ್’-2ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್ ಸೂಪರ್ ಎನ್ನುತ್ತಿದ್ದಾರೆ. ‘ಇಂಡಿಯನ್’ ಸಿನಿಮಾ ನೋಡದವರು ನೋಡಲು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ ಎಂದು ವರದಿಯಾಗಿದೆ.

ಕೆಲವರು ಇನ್ನು 10 ಬಾರಿ ‘ಇಂಡಿಯನ್’ ನೋಡಬಹುದು. ಸೀಕ್ವೆಲ್ ನೋಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ‘ಇಂಡಿಯನ್’ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಜುಲೈ 14ರಿಂದ ಅಂದರೆ ಇಂದು ರಾತ್ರಿಯಿಂದಲೇ ‘ಇಂಡಿಯನ್’ ಸಿನಿಮಾ ರಿಲೀಸ್ ಆಗಲಿದೆ. ರೀ ಮಾಸ್ಟರ್ಸ್‌ 4K ವರ್ಷನ್‌ ನೋಡಲು ಸಿಗಲಿದೆ ಎಂದು ವರದಿಯಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ‘ಇಂಡಿಯನ್-2’ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಆಗಸ್ಟ್ 15ಕ್ಕೆ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. “ಇಂಡಿಯನ್ 2” ನ ಸಮಗ್ರ ಪಾತ್ರವರ್ಗವು ಆಕರ್ಷಕವಾಗಿದೆ.

ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಜನುಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್!

ಇಂಡಿಯನ್ 2 ಬಿಡುಗಡೆಯಾದ ಮೊದಲ ದಿನದಲ್ಲಿ ಭಾರತದಾದ್ಯಂತ 26 ಕೋಟಿ ರೂ. ಗಳಿಸಿದೆ. ಅದರಲ್ಲಿ 17 ಕೋಟಿ ರೂ. ತಮಿಳು ಆವೃತ್ತಿಯಿಂದ ಬಂದಿದೆ. 1.1 ಕೋಟಿ ರೂ. ಹಿಂದಿ ಆವೃತ್ತಿಯಿಂದ ಮತ್ತು 7.9 ಕೋಟಿ ರೂ. ತೆಲುಗು ಆವೃತ್ತಿಯಿಂದ ಬಂದಿದೆ.ಕೆಲವೊಮ್ಮೆ ಸಿನಿಮಾ ಉತ್ತಮವಾಗಿ ಇರದೇ ಇದ್ದರೂ ಹೀರೋಗಳ ಪಾತ್ರದಿಂದ ಸಿನಿಮಾ ಇಷ್ಟ ಆಗುತ್ತದೆ. ಆದರೆ, ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್ ವಿವಿಧ ಗೆಟಪ್​ನಲ್ಲಿ ಬರೋದಷ್ಟೇ ಹೊರತು ಮತ್ತಿನ್ನೇನೂ ಇಲ್ಲ ಎಂದು ಫ್ಯಾನ್ಸ್ ಮಾತನಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮತ್ತು ಮನೀಶಾ ಕೊಯಿರಾಲಾ ಕೂಡ ನಟಿಸಿದ್ದಾರೆ.

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.

Exit mobile version