Site icon Vistara News

Pawan Kalyan: ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಮೂರನೇ ಪತ್ನಿ ಪಡೆದ ಪದವಿ ಯಾವುದು?

Pawan Kalyan Go To Singapore Anna Lezhneva graduation ceremony

ಬೆಂಗಳೂರು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೊನಿಡೆಲಾ (Pawan Kalyan) ಅವರು ಇತ್ತೀಚೆಗೆ ಸಿಂಗಾಪುರಕ್ಕೆ ತೆರಳಿರುವ ಫೋಟೊಗಳು ವೈರಲ್‌ ಆಗಿತ್ತು. ಇದಾದ ಬಳಿಕ ಸಾಕಷ್ಡು ವದಂತಿಗಳು ಹಬ್ಬಿದ್ದವು. ಆದರೆ, ಪವನ್ ಅವರು ತಮ್ಮ ಪತ್ನಿ ಅನ್ನಾ ಲೆಜ್ನೇವಾ (Anna Lezhneva) ಅವರ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು ಎಂಬುದು ಈಗ ಬಹಿರಂಗವಾಗಿದೆ.

ಅನ್ನಾ ಇತ್ತೀಚೆಗೆ ಸಿಂಗಾಪುರ್ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ (Anna Lezhneva graduation) ಪಡೆದರು. ಹೀಗಾಗಿ, ಪವನ್ ಮತ್ತು ಅನ್ನಾ ಲೆಜ್ನೇವಾ ಇಬ್ಬರೂ ಪದವಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದರು. ಸಿಂಗಾಪುರಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿದ್ದಾಗ ದಿಢೀರ್ ಭೇಟಿಯ ಹಿಂದಿನ ಕಾರಣವೇನೆಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ಕೊನೆಗೂ ಅವರ ಭೇಟಿಯ ಹಿಂದಿನ ಕಾರಣ ಬಯಲಾಗಿದೆ. ಅನ್ನಾ ಲೆಜ್ನೇವಾ ಅವರ ಪದವಿ ಪ್ರದಾನ ಸಮಾರಂಭದಲ್ಲಿ ಗಂಡ ಹೆಂಡತಿ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್‌ ಆಗುತ್ತಿದೆ.

ಪವನ್ ಕಳೆದ ಕೆಲವು ದಿನಗಳಿಂದ ವಾರಾಹಿ ದೀಕ್ಷೆಯಲ್ಲಿದ್ದರು. ಅವರು ತಮ್ಮ ದೀಕ್ಷಾ ಸಮಯದಲ್ಲಿ ಸಾಂಪ್ರದಾಯಿಕ ದೀಕ್ಷಾ ಉಡುಗೆಯಲ್ಲಿದ್ದರು. ಈಗ, ದೀಕ್ಷಾ ಪೂರ್ಣಗೊಂಡಂತೆ, ಪವನ್ ಸಿಂಗಾಪುರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Pawan Kalyan: ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

ಲೋಕಸಭಾ ಚುನಾವಣೆ-2024ರಲ್ಲಿ (Loksabha election-2024) ಆಂಧ್ರಪ್ರದೇಶದಲ್ಲಿ (andrapradesh) ಭರ್ಜರಿ ಗೆಲುವು ಸಾಧಿಸಿ ಮನೆಗೆ ಬಂದ ತೆಲುಗು ನಟ (Telugu actor), ರಾಜಕಾರಣಿ (politician) ಪವನ್ ಕಲ್ಯಾಣ್ (Pawan Kalyan) ಅವರನ್ನು ಪತ್ನಿ (wife) ಅನ್ನಾ ಲೆಜ್ನೆವಾ (Anna Lezhneva) ಆರತಿ ಮಾಡಿ, ತಿಲಕವಿಟ್ಟು ಸ್ವಾಗತಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿತ್ತು.

ಅನ್ನಾ ಲೆಜ್ನೆವಾ ಯಾರು?

ರಷ್ಯಾದ ರೂಪದರ್ಶಿ ಮತ್ತು ನಟಿಯಾಗಿರುವ ಅನ್ನಾ ಲೆಜ್ನೆವಾ ಅವರು 2011ರ ತೀನ್ ಮಾ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ಪವನ್ ಅವರನ್ನು ಭೇಟಿಯಾಗಿದ್ದರು. ಶೀಘ್ರದಲ್ಲೇ ಅವರು ಪ್ರೀತಿಸುವುದಾಗಿ ಪ್ರಕಟಿಸಿ 2013ರ ಸೆಪ್ಟೆಂಬರ್ 30ರಂದು ಮದುವೆಯಾದರು. ಇದಕ್ಕೂ ಮೊದಲು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ.

ಪವನ್ ಕಲ್ಯಾಣ್ ಅವರ ಹಿಂದಿನ ಮದುವೆಗಳು

ʼಗಬ್ಬರ್ ಸಿಂಗ್ʼ ಪವನ್ ಮೊದಲ ಬಾರಿಗೆ 1997ರಲ್ಲಿ 19 ವರ್ಷದ ಹುಡುಗಿ ನಂದಿನಿಯನ್ನು ವಿವಾಹವಾದರು. 2001ರಲ್ಲಿ ಪವನ್ ನಟಿ ರೇಣು ದೇಸಾಯಿ ಅವರೊಂದಿಗೆ ವಾಸ ಮಾಡಲು ತೊಡಗಿದರು. ಅವರಿಬ್ಬರಿಗೆ ಗಂಡು ಮಗುವಾಗಿತ್ತು. ಪವನ್ ತನ್ನ ಮೊದಲ ಹೆಂಡತಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡದ ಕಾರಣ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಯಿತು. ಅನಂತರ ನ್ಯಾಯಾಲಯವು 2008ರಲ್ಲಿ ಅವರಿಗೆ ವಿಚ್ಛೇದನವನ್ನು ನೀಡಿತು. ಅವರ ಎರಡನೇ ಮದುವೆಯು 2009ರಲ್ಲಿ ನಡೆಯಿತು. ಬಳಿಕ ಪವನ್ ಮತ್ತು ರೇಣು ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ದುರದೃಷ್ಟವಶಾತ್ ಇವರಿಬ್ಬರ ವೈವಾಹಿಕ ಜೀವನ 2012 ರಲ್ಲಿ ವಿಚ್ಛೇದನದ ಮೂಲಕ ಕೊನೆಯಾಯಿತು.

ವಿಚ್ಛೇದನದ ವದಂತಿ

ಕಳೆದ ವರ್ಷ ಅನ್ನಾ ಮತ್ತು ಪವನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಇತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ತೆಲುಗು ತಾರೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅನ್ನಾ ಲೆಜ್ನೆವಾ ಹಾಜರಾಗದಿದ್ದಾಗ ಈ ಗುಲ್ಲು ಹಬ್ಬಿತ್ತು. ರಾಮ್ ಚರಣ್ ಮತ್ತು ಉಪಾಸನಾ ಅವರ ಮಗಳು ಕ್ಲಿನ್ ಕಾರಾ ಕೊನಿಡೆಲಾ ಅವರ ತೊಟ್ಟಿಲು ಸಮಾರಂಭವನ್ನು ಇವರು ತಪ್ಪಿಸಿಕೊಂಡರು. ಇದರಿಂದ ಅವರ ಪ್ರತ್ಯೇಕತೆಯ ವದಂತಿಗಳಿಗೆ ಉತ್ತೇಜನ ಸಿಕ್ಕಿತು. ಆದರೂ ಇತ್ತೀಚಿನ ವಿಡಿಯೋ ಗಳು ಈ ವದಂತಿಗಳನ್ನು ತಳ್ಳಿ ಹಾಕುವಂತೆ ಮಾಡಿದೆ.

Exit mobile version