ಬೆಂಗಳೂರು: ಜನಪ್ರಿಯ ನಟಿ ಶರಣ್ಯ ಪೊನ್ವನನ್ (Saranya Ponvannan) ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೀಗ ನಟಿಯ ವಿರುದ್ಧ ನೆರೆ ಮನೆಯ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಾರ್ಕಿಂಗ್ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ (Police Complaint Filed) ಎಂದು ವರದಿಯಾಗಿದೆ. ಮಾತ್ರವಲ್ಲ ಆರೋಪಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ನೆರೆ ಮನೆಯಾಕೆ ಶ್ರೀದೇವಿ ಪೊಲೀಸರಿಗೆ ನೀಡಿದ್ದಾರೆ.
ಶರಣ್ಯ ಪೊನ್ವನನ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಚೆನ್ನೈನ ವಿರುಗಂಬಾಕ್ಕಂನಲ್ಲಿ ( Virugambakkam in Chennai) ನಟಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಶರಣ್ಯ ಹಾಗೂ ಅವರ ನೆರೆ ಮನೆಯ ಶ್ರೀದೇವಿ ಎಂಬುವರ ಜತೆ ಆಗಾಗ ಪಾರ್ಕಿಂಗ್ ವಿಚಾರದಲ್ಲಿ ಜಗಳ ಆಗುತ್ತಲೇ ಇತ್ತಂತೆ. ಇದೀಗ ಜಗಳ ಮಿತಿ ಮೀರಿದ್ದು, ನಟಿ ಶರಣ್ಯ, ಶ್ರೀದೇವಿಯನ್ನು ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಾರೆಂದು ನೆರೆಮನೆಯವರು ಆರೋಪಿಸಿ ದೂರು ನೀಡಿದ್ದಾರೆ. ಮಾತ್ರವಲ್ಲ ಆರೋಪಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಶ್ರೀದೇವಿ ಪೊಲೀಸರಿಗೆ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಶರಣ್ಯ ಮೊದಲಿಂದನೂ ಜಗಳಗಂಟಿ, ಅವರು ಇರುವುದೇ ಹಾಗೇ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಶರಣ್ಯ ಅವರು ಸಿನಿಮಾದಲ್ಲಿ ಹೆಚ್ಚಾಗಿ ತಾಯಿ ಪಾತ್ರವನ್ನೇ ನಿಭಾಯಿಸಿದ್ದವರು. 1987ರಲ್ಲಿ ಮಣಿರತ್ನಂ ಅವರ ‘ನಾಯಗನ್’ (‘Nayakan’) ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು. ಕಮಲ್ ಹಾಸನ್ ಜತೆಗೆ ನಾಯಕಿಯಾಗಿ ನಟಿಸಿದ್ದರು. 1989ರ ಚಿತ್ರ ‘ನೀರಾಜನಂ’ (Neerajanam) ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅದೇ ವರ್ಷ ಮಲಯಾಳಂ ಸಿನಿಮಾ ‘ಅರ್ಥಂ’ (Artham) ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮಮ್ಮುಟ್ಟಿ ಜತೆ ತೆರೆ ಹಂಚಿಕೊಂಡರು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಸೈಬರ್ ಕ್ರೈಮ್ – ತಡೆಗಟ್ಟುವುದು ಹೇಗೆ?
Actress "Saranya Ponvannan"😲
— Tharani ᖇᵗк (@iam_Tharani) April 2, 2024
pic.twitter.com/GhPldKAZNy
ಶರಣ್ಯ, ಕನ್ನಡದಲ್ಲಿ ʻದಿ ವಿಲನ್ʼ ಚಿತ್ರದಲ್ಲಿಯೂ ನಟಿಸಿದ್ದರು. ದಿ ವಿಲನ್ ಚಿತ್ರಕ್ಕೂ ಮುನ್ನ ‘ಅಪ್ಪಾಜಿ’, ‘ಬಾಸ್’, ‘ಸಮಯಕ್ಕೊಂದು ಸುಳ್ಳು’, ‘ಪೊಲೀಸ್ ಕ್ವಾಟ್ರರ್ಸ್’, ‘ಯಕ್ಷ’, ‘ಚಾರುಲತಾ’ ಸಿನಿಮಾಗಳಿಗೂ ಕೂಡ ಶರಣ್ಯ ಬಣ್ಣ ಹಚ್ಚಿದ್ದರು. ಶರಣ್ಯ ಕೊನೆಯ ಬಾರಿಗೆ ‘ಕಂಜರಿಂಗ್ ಕಣ್ಣಪನ್’ (‘Conjuring Kannapan’) ಚಿತ್ರದಲ್ಲಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.