Site icon Vistara News

ಯುವ ನಟಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ವಿಜಯ್‌ ಬಾಬು ಅರೆಸ್ಟ್

ತಿರುವನಂತಪುರಂ: ಯುವ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮಲಯಾಳಂ ಚಿತ್ರ ನಟ ವಿಜಯ್‌ ಬಾಬು ಅವರನ್ನು ಎರ್ನಾಕುಲಂ ಸೌತ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯ್‌ ಬಾಬು ಅವರು ನನ್ನ ದೇಹವನ್ನು ತಮ್ಮ ಸಂತೋಷಕ್ಕಾಗಿ ಒಂದು ಸಾಧನವಾಗಿ ಬಳಸಿದ್ದಾರೆ. ಬಲವಂತವಾಗಿ ನನ್ನನ್ನು ಬಳಸಿಕೊಂಡಿದ್ದರಾರೆ, ನನ್ನ ಇಚ್ಛೆಯ ವಿರುದ್ಧವಾಗಿ ಕಾರಿನಲ್ಲಿ ಮೌಖಿಕ ಸಂಭೋಗಕ್ಕೆ ಒತ್ತಾಯಿಸಿದ್ದಾರೆ. ಆಗ ನಾನು ಆಘಾತದ ಸ್ಥಿತಿಯಲ್ಲಿದ್ದೆ, ಮಾತನಾಡಲು ಅಥವಾ ಪ್ರತಿಕ್ರಿಯಿಸಲು ಅಸಮರ್ಥಳಾಗಿದ್ದೆ ಎಂದು ಯುವ ನಟಿಯೊಬ್ಬಳು ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಕೆಲವು ತಿಂಗಳ ಹಿಂದೆ ಹೇಳಿದ್ದರು. ಇದಕ್ಕೆ ಫೇಸ್‌ ಬುಕ್‌ ಲೈವ್‌ನಲ್ಲೇ ಪ್ರತಿಕ್ರಿಯೆ ನೀಡಿದ ವಿಜಯ್‌ ಬಾಬು ಇದು ಸುಳ್ಳು ಆರೋಪ ಎಂದಿದ್ದರು.

ಇದೆಲ್ಲ ನಡೆದಿದ್ದು ಏಪ್ರಿಲ್‌ನಲ್ಲಿ. ಈ ಆರೋಪ ಕೇಳಿ ಬಂದಾಗ ವಿಜಯ್‌ ಬಾಬು ದುಬೈಗೆ ತೆರಳಿದ್ದರು. ಇತ್ತ ಯುವತಿಯ ದೂರಿನಂತೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದಾಗ ವಿಜಯ್‌ ಬಾಬು ಬಂಧನ ಭೀತಿಯಿಂದ ಹೊರದೇಶಗಳಲ್ಲೇ ಉಳಿದರು. ದುಬೈಯಿಂದ ಬೇರೆ ದೇಶಕ್ಕೆ ಹಾರಿದ್ದರು. ಅಂತೂ ೩೯ ದಿನ ದೇಶದಿಂದ ದೂರವಿದ್ದ ನಟ ಕೊನೆಗೆ ಜೂನ್‌ 1 ರಂದು ಕೊಚ್ಚಿಗೆ ಮರಳಿದ್ದರು.

ಆಗ ಮತ್ತೆ ಪ್ರಕರಣ ಎದ್ದು ನಿಂತು ಬಂಧನವಾಗಬಹುದು ಎಂಬ ಭಯದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಜೂನ್‌ 22 ರಂದು ಕೇರಳ ಹೈಕೊರ್ಟ್‌ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ ನಿರೀಕ್ಷಣಾ ಜಾಮೀನು ನೀಡುವಾಗ ವಿಚಾರಣೆ ಪೂರ್ತಿಯಾಗುವವರೆಗೂ ಕೇರಳ ರಾಜ್ಯವನ್ನು ತೊರೆಯಬಾರದು ಎಂದು ಸೂಚಿಸಿತ್ತು.

ನಟ ವಿಜಯ್‌ ಬಾಬು

ಈ ನಡುವೆ ಭಾನುವಾರ ವಿಜಯ್‌ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರದಿಂದ ಜುಲೈ 3ರವರೆಗೆ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಅವರನ್ನು ಪ್ರಶ್ನಿಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ. ಇದರ ನಡುವೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ನಟ ವಿಜಯ್ ಗೆ ಬೆಂಬಲ ನೀಡಿದೆ, ವಿಚಾರಣೆಯ ಬಳಿಕ ಸತ್ಯವೇನೆಂಬುದು ಎಲ್ಲರಿಗೂ ತಿಳಿಯಬೇಕಿದೆ.

ಇದನ್ನೂ ಓದಿ: ಪತ್ನಿಯ ಸಹೋದರನಿಂದ ʼಲಗೋರಿʼ ಚಿತ್ರದ ನಟ ಸತೀಶ್ ಬರ್ಬರ ಹತ್ಯೆ

Exit mobile version