Site icon Vistara News

Spandana Vijay Raghavendra : ಸ್ಪಂದನಾ ಜಿಮ್‌ ಸೇರಿದ್ದು ಬಾಡಿ ಬಿಲ್ಡ್‌ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!

Spandana at Gym

ಬೆಂಗಳೂರು: ಬ್ಯಾಂಕಾಕ್‌ ಪ್ರವಾಸದ (Bangkok tour) ವೇಳೆ ಹೃದಯಾಘಾತದಿಂದ (Sudden Heart attack) ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ (No Health Issues) ಇರಲಿಲ್ಲ. ಅವರು ಫಿಟ್‌ ಆಗಿದ್ದರು ಎಂದು ಅವರಿಗೆ ಕಳೆದ ಎರಡು ತಿಂಗಳಿನಿಂದ ವರ್ಕೌಟ್‌ ತರಬೇತಿ (Work Training) ನೀಡುತ್ತಿದ್ದ ಜಿಮ್ ಟ್ರೈನರ್ ನಿರಂಜನ್ (Gym Trainer Niranjan) ಅವರು ಹೇಳಿದ್ದಾರೆ.

ಸ್ಪಂದನಾ (Vijay Raghavendra wife) ಅವರು ಸಹಕಾರ ನಗರದಲ್ಲಿರುವ ದಿ ಫಿಟ್ ನೇಶನ್ ಜಿಮ್‌ಗೆ (The fit Nation Gym) ಸೇರಿದ್ದರು. ವಿಜಯ ರಾಘವೇಂದ್ರ (Vijay Raghavendra) ಅವರು ಕೂಡಾ ಅದೇ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದರು. ಸ್ಪಂದನಾ ಅವರು ಪ್ರತಿ ದಿನ ಒಂದು ಗಂಟೆ ಕಾಲ ವರ್ಕೌಟ್‌ ಮಾಡುತ್ತಿದ್ದರು. ಅವರ ಹೆಲ್ತ್‌ ಕಂಡಿಷನ್‌ ಪರ್ಫೆಕ್ಟ್‌ ಆಗಿತ್ತು ಎಂದು ನಿರಂಜನ್‌ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ದಿ ಫಿಟ್ ನೇಶನ್ ಜಿಮ್‌ ಒಳನೋಟ

ಸ್ಪಂದನಾ ಅವರು ವರ್ಕೌಟ್‌ ಮೂಲಕ ತಮ್ಮ ದೇಹತೂಕವನ್ನು 16 ಕೆಜಿ ಇಳಿಸಿಕೊಂಡಿದ್ದರು. ಇದಕ್ಕಾಗಿ ಕೆಲವು ಪೌಡರ್‌ಗಳನ್ನು ಕೂಡಾ ಬಳಸಿದ್ದರು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯಕ್ಕೆ ಇದು ಮಾರಕವಾಯಿತಾ ಎನ್ನುವ ಚರ್ಚೆಯ ನಡುವೆ ಜಿಮ್‌ ಟ್ರೇನರ್‌ ನಿರಂಜನ್‌ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

Gym Trainer Narasimha

ನಮ್ಮಲ್ಲಿಗೆ ಬಂದದ್ದು ಚರ್ಮ ಟೈಟ್‌ ಆಗಲೆಂದು

ಸ್ಪಂದನಾ ಅವರು 16 ಕೆಜಿ ತೂಕ ಇಳಿಸಿಕೊಂಡಿದ್ದು ನಿಜ. ಆದರೆ, ಅದು ನಮ್ಮ ಜಿಮ್‌ನಲ್ಲಿ ಅಲ್ಲ. ನಮ್ಮಲ್ಲಿಗೆ ಬಂದಾಗ ಅವರು ತೂಕ ಇಳಿಸಿಕೊಂಡಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ವಿಜಯ್‌ ರಾಘವೇಂದ್ರ ಅವರ ಜತೆಗೆ ಜಿಮ್‌ ಬಂದ ಅವರು ತೂಕ ಇಳಿಕೆಯಾಗಿದ್ದರಿಂದ ಚರ್ಮ ಜೋತುಬಿದ್ದಿದೆ. ಅದು ಟೈಟ್‌ ಆಗಲು ಏನಾದರೂ ಮಾಡಬಹುದಾ ಎಂದು ಕೇಳಿದ್ದರು.

ಲೋ ಬಿಪಿ ಇತ್ತು ಎಂದು ಮೊದಲೇ ಹೇಳಿದ್ದರು.

ಜಿಮ್‌ಗೆ ಬಂದಾಗಲೇ ಸ್ಪಂದನಾಗೆ ಲೋ ಬಿಪಿ ಸಮಸ್ಯೆ ಇದೆ ಎಂದು ವಿಜಯ ರಾಘವೇಂದ್ರ ಅವರು ತಿಳಿಸಿದ್ದರು. ಹೀಗಾಗಿ ಅದರಿಂದ ತೊಂದರೆ ಆಗದ ಹಾಗೆ ವರ್ಕೌಟ್‌ ಮಾಡಬಹುದೇ ಎಂದು ಕೇಳಿದ್ದರು. ಏಕಕಾಲಕ್ಕೆ 16 ಕೆಜಿ ಇಳಿಸಿಕೊಂಡಿದ್ದು, ಹೀಗೆ ಇಳಿಕೆಯಾಗಿದ್ದರಿಂದ ಚರ್ಮ ಜೋತು ಬಿದ್ದಿದ್ದನ್ನು ವಿವರಿಸಿದ್ದರು. ಆದರೆ, ಅವರು ಯಾವ ರೀತಿಯ ಡಯಟ್‌ ಮಾಡ್ತಾ ಇದ್ದರು ಎನ್ನುವುದು ನನಗೆ ಗೊತ್ತಿಲ್ಲ ಎಂದು ನಿರಂಜನ್‌ ವಿವರಿಸಿದ್ದಾರೆ.

ನಾವು ಅವರಿಗೆ ಯಾವುದೇ ಡಯಟ್‌ ಪ್ಲ್ಯಾನ್‌ ಕೊಟ್ಟಿರಲಿಲ್ಲ. ಬ್ಯಾಂಕಾಕ್‌ ಪ್ರವಾಸಕ್ಕೆ ಹೋಗಿ ಬಂದ ಬಳಿಕ ರೆಗ್ಯುಲರ್‌ ವರ್ಕೌಟ್‌ ಮತ್ತು ಡಯಟ್‌ ಚಾರ್ಟ್‌ ಕೊಡುವ ಪ್ಲ್ಯಾನ್‌ ಇತ್ತು ಎಂದು ನಿರಂಜನ್‌ ಹೇಳಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಇರಲಿಲ್ಲ. ಆದರೂ ಹೃದಯಾಘಾತ ಹೇಗಾಯಿತು ಎಂದು ಗೊತ್ತಾಗುತ್ತಿಲ್ಲ ಎಂದು ಜಿಮ್‌ ಟ್ರೇನರ್‌ ನಿರಂಜನ್‌ ಹೇಳಿದ್ದಾರೆ.

ಜಿಮ್‌ ಟ್ರೇನರ್‌ ನರಸಿಂಹ

ಇದನ್ನೂ ಓದಿ : Spandana Vijay Raghavendra : ಸ್ಪಂದನಾ ಪಾರ್ಥಿವ ಶರೀರ ರಾತ್ರಿ ಆಗಮನ, ನಾಳೆ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ

ವರ್ಕೌಟ್‌ನಿಂದ ಹೃದಯಾಘಾತ ಆಗಲ್ಲ ಎಂದ ಮಾಜಿ ಶಾಸಕ ರಾಜು ಗೌಡ

ಈ ನಡುವೆ, ಜಿಮ್‌ನಲ್ಲಿ ವರ್ಕೌಟ್‌ ಮಾಡುವುದರಿಂದ ಹೃದಯಾಘಾತ ಆಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ ಮಾಜಿ ಶಾಸಕ ರಾಜು ಗೌಡ. ರಾಜು ಗೌಡ ಅವರು ಸ್ಪಂದನಾ ಹೋಗುತ್ತಿದ್ದ ಸಹಕಾರ ನಗರದ ಜಿಮ್‌ಗೇ ಹೋಗುತ್ತಿದ್ದಾರೆ.

ʻʻಸ್ಪಂದನಾ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಶಾಕ್ ಆಗಿದೆ. ಮತ್ತೆ ಮತ್ತೆ ದೊಡ್ಡಮನೆಗೆ ಈ ತರ ಯಾಕೆ ಆಗ್ತಿದೆ? ದೇವರೇ ಬಲ್ಲʼʼ ಎಂದು ಹೇಳಿದರು ಕಾಗೆ.

ʻʻಮುರಳಿ ಮತ್ತು ವಿಜಯ್ ರಾಘವೇಂದ್ರ ಅವರೊಟ್ಟಿಗೆ ನನ್ನ ಒಡನಾಟ ಚೆನ್ನಾಗಿತ್ತು. ಅವರು ಇದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದರು ಅಂತ ಹೇಳಿದ್ದರು. ಪುನೀತ್ ಅವರೊಟ್ಟಿಗೆ ಕಳೆದ ಒಂಬತ್ತು ವರ್ಷಗಳಿಂದ ಒಂದೇ ಜಿಮ್ ನಲ್ಲಿ ನಾನು ವರ್ಕ್ ಔಟ್ ಮಾಡ್ತಿದ್ದೆ. ವರ್ಕ್ ಔಟ್ ನಿಂದ ಹೃದಯಾಘಾತ ಆಗಲ್ಲ. ಅದು ತಪ್ಪು ಪರಿಕಲ್ಪನೆʼʼ ಎಂದರು ರಾಜು ಕಾಗೆ.

Exit mobile version